Day: December 10, 2020

ಎಲೆಗಳ ಬಲೆಯಲ್ಲಿ…

ಲಲಿತ ಪ್ರಬಂಧ ಎಲೆಗಳ ಬಲೆಯಲ್ಲಿ…                                                             ಟಿ.ಎಸ್.ಶ್ರವಣಕುಮಾರಿ ಈ ಹದಿಮೂರು ಎಲೆಗಳಿಗೊಂದು ವಿಶಿಷ್ಟ ಆಕರ್ಷಣೆಯಿದೆ, ಸೆಳೆತವಿದೆ. ಕೆಲವರು ರಮ್ಮಿ, ಬ್ರಿಡ್ಜ್‌, ಮೂರೆಲೆ ಎನ್ನುತ್ತಾ ಇಸ್ಪೀಟಿನ ಹಿಂದೆ ಬಿದ್ದರೆ, ಇನ್ನು ಕೆಲವರು ಸಾಲಿಟೇರ್‌, ಫ್ರೀಸೆಲ್‌ ಎನ್ನುತ್ತಾ ಕಂಪ್ಯೂಟರಿನಲ್ಲಿ ಅದೇ ಹದಿಮೂರು ಎಲೆಗಳಲ್ಲಿ ಅಡಗಿಕೊಂಡಿರುತ್ತಾರೆ. ʻಅಂದರ್‌ ಬಾಹರ್‌ ಅಂದರ್‌ ಬಾಹರ್‌ʼ ಎಂದು ಕೋರಸ್‌ನಲ್ಲಿ ಗುನುಗುತ್ತ ʻಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆʼ ಎಂದು ಹಾಡುತ್ತ ಜಾಕಿ ಚಲನಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ತನ್ನೆಲ್ಲಾ ಅಭಿಮಾನಿಗಳನ್ನೂ ವಶೀಕರಣ ಮಾಡಿಕೊಂಡಿದ್ದು […]

ಅಂಕಣ ಬರಹ ಅರಿತವರ ಮರೆತು ಸಾಗುವುದೆಂದರೆ … ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ  ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ […]

ಬೆಳೆಸಲಾಗದ ಮಕ್ಕಳು

ಅನುವಾದಿತ ಕಥೆ ಬೆಳೆಸಲಾಗದ ಮಕ್ಕಳು ತೆಲುಗು ಮೂಲ: ಸಿ.ಹೆಚ್.ವಿ. ಬೃಂದಾವನ ರಾವು ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಪಾರ್ವತಿ ಹೇಳಿದ ಮಾತು ಕೇಳಿ ಸೋಜಿಗ ಗೊಂಡ ಕ್ರಿಸ್ಟಫರ್. ಮುಖ ಕೆಂಪಾಯಿತು. ಒಂದೈದು ನಿಮಿಷ ಹಾಗೇ ಇದ್ದ. ಕ್ರಮೇಣ ಆವೇಶದಿಂದ ಆಲೋಚನೆಯೆಡೆಗೆ ಬಂದ. ಏನು ಹೇಳಬೇಕೋ ಅರ್ಥವಾಗಲಿಲ್ಲ ಅವನಿಗೆ. ಗಂಡನ ಮುಖವನ್ನ ಹಾಗೇ ನೋಡ್ತಾ ಇದ್ದಳು ಪಾರ್ವತಿ. ಗಂಡ ಹಾಗೆ ಆಶ್ಚರ್ಯಗೊಳ್ಳುವುದು ಅವಳಿಗೇನೂ ವಿಚಿತ್ರವೆನಿಸಲಿಲ್ಲ. ಡಾಕ್ಟರರು ತನ್ನ ಹತ್ತಿರ ಈ ವಿಷಯದ ಪ್ರಸ್ತಾವಿಸಿದಾಗ ತನಗೂ ಇಂಥ ಆಶ್ಚರ್ಯವೇ ಆಗಿತ್ತು. […]

ಗುಪ್ತಗಾಮಿನಿ

ಕವಿತೆ ಗುಪ್ತಗಾಮಿನಿ ಸಂಗಮೇಶ್ವರ ಶಿ.ಕುಲಕರ್ಣಿ ನಿನಗೆ ನಾನ್ಯಾರು?ಕೇಳದಿರು ಹೇಳದಿರುಅಲ್ಲಿ ಕಾಡುವ ಒಗಟುಎದುರಾಗದಿರಲಿನಿನಗೆ ನನಗೆ ಇಬ್ಬರಿಗೂ…. ನನಗೆ ನೀನ್ಯಾರು?ಹೇಳುವೆ ಸಾರಿ ಸಾರಿಆತ್ಮದಲಿ ಆರೂಢವಾಗಿರುವಅಗೋಚರ ಆಕೃತಿ!ಪ್ರತಿಕ್ಷಣದ ಸ್ಮೃತಿ!! ಅಲ್ಲಿ ನೀನು ಇಲ್ಲಿ ನಾನುಅನ್ನುವ ಅಂತರದ ಮಾತೆಲ್ಲಿಆಣೆ ಮಾಡುವೆ ಬೇಕಾದರೆ;ಅಂತರಂಗ ಆಕ್ರಮಿಸಿದಮೊದಲ ದೊರೆಸಾನಿ ನೀನಿಲ್ಲಿ! ಉಬ್ಬುತಗ್ಗಿನ ಚರ್ಮದ-ಹೊದಿಕೆಯ ಮೋಹದಲ್ಲಿಮರೆತುಹೋಗುವ ಪಿಂಡವಲ್ಲ;ಎಲ್ಲ ದಾಟಿ ಅನಂತ ಹುಡುಕುವಅದಮ್ಯ ಚೇತನ! ನನಗೊಂದು ನಿನಗೊಂದುಬೇರೆಯದೇ ಕೋಳ,ಕಳಚಿ ಕೈಬಿಡುವ ಕೈಕಟ್ಟು ಅಲ್ಲ ಬಿಡು.ಇದರ ಮಧ್ಯೆ ನಮ್ಮದುಸಾವಿನಾಚೆಗೂ ಸಾಗುವ ಬಂಧ! ಈ ಜೀವಕ್ಕೆ ಅರ್ಧಜೀವ ನೀನು! ****************************

ಮಾಗಿಯ ಪದ್ಯಗಳು

ಕವಿತೆ ಮಾಗಿಯ ಪದ್ಯಗಳು ಪ್ರೇಮಲೀಲಾ ಕಲ್ಕೆರೆ ಕೌದಿ ಕವುಚಿಕಂಬಳಿ ಹುಳುವಾದರೂಅಡಗಲೊಲ್ಲದ ಚಳಿ ಬೆಳಗಾಗ ಬರುವಚುರುಕು ಬಿಸಿಲಿನ ನೆನಪೇಬಿಸಿ ಹುಟ್ಟಿಸಬಲ್ಲದುಒಳಗೆ ಉರಿಮುಖದ ಸೂರ್ಯ, ನಿನ್ನ ಆಗಮನಅದೆಷ್ಟು ಬೆಚ್ಚಗೆಜಡ ಮಾಗಿಗೆ !! 2 ತುಂಟ ಸೂರ್ಯ,ಎಲ್ಲಿ ಅಡಗಿದ್ದೆ ನೀನು ?ಇಷ್ಟೊಂದು ತಡವೇಕೆಮನೆಗೆ ಬರಲು ?? ಗುಟ್ಟೇನಿದೆ ,ಆ ನಿಶೆಯ ಜೊತೆನಿನ್ನ ಚೆಲ್ಲಾಟಜಗಕೇ ಗೊತ್ತು! ತರವಲ್ಲ ಬಿಡು,ತರವಲ್ಲ ಬಿಡು, ಆ ಕಪ್ಪುನಿಶೆಯಲಿಏನುಂಟು ಚೆಲುವು?ಬಿತ್ತಿದ್ದ ಬೆಳೆಯುವಇಳೆಗೆ ಮಿಗಿಲು?? ******************************************

Back To Top