Day: December 15, 2020

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ ೨೦೨೦ನೆಯ ಸಾಲಿನಿಂದ ಕೊಡಮಾಡುವ ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ೪೦ ವರ್ಷದೊಳಗಿನ ಕವಿಗಳಿಂದ ಕೃತಿಗಳನ್ನು ಆವ್ಹಾನಿಸಲಾಗಿದೆ.ಪ್ರಶಸ್ತಿಯು ೫ ಸಾವಿರ ನಗದು,ಸ್ಮರಣಿಕೆ ಒಳಗೊಂಡಿದೆ.ಆಸಕ್ತ ಕವಿಗಳು ೨೦೨೦ ನೆಯ ಸಾಲಿನಲ್ಲಿ ಪ್ರಕಟಗೊಂಡ ತಮ್ಮ ಸ್ವರಚಿತ ಮೂರು ಕವನ ಸಂಕಲನಗಳನ್ನು ಜನವರಿ ೧೫,೨೦೨೧ ರೊಳಗೆಸಂಚಾಲಕರು, ನಾಗಶ್ರೀ ಕಾವ್ಯಪ್ರಶಸ್ತಿ ಸಮಿತಿಸಿಂದಗಿ,ವಿಜಯಪುರ ಜಿಲ್ಲೆಈ ವಿಳಾಸಕ್ಕೆ ಪ್ರೊಫೆಷನಲ್ ಕೋರಿಯರ್ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ +918951375140,988065654 ಸಂಪರ್ಕಿಸುವಂತೆ ಕೋರಿದ್ದಾರೆ.

ಊದ್ಗಳಿ ಊದುತ್ತಾ.

ಪುಸ್ತಕ ಸಂಗಾತಿ ಊದ್ಗಳಿ ಊದುತ್ತಾ.   ಬದುಕಿನ ಜೀವಂತಿಕೆ ಇರುವುದು ಬದಲಾವಣೆಗಳಲ್ಲಿ. ಕಾಲದ ಜೊತೆ ಜೊತೆಗೆ ಹೆಜ್ಜೆ ಹಾಕಲೆ ಬೇಕು, ಇಲ್ಲದಿದ್ದರೆ ನಾವು ಹಿಂದುಳಿದು ಬಿಡುತ್ತವೆ, ಸ್ಮೃತಿ ಪಟಲದಿಂದ ಮರೆಯಾಗುತ್ತೇವೆ. ಹಳೆಯದು ಹೊಸದಕ್ಕೆ ಎಡೆಮಾಡಿಕೊಡುತ್ತದೆ. ಅತೃಪ್ತಿ ಬದುಕಿನಲ್ಲಿ ಹೊಸದನ್ನು ತರುತ್ತದೆ. ಇದು ಸಾರಸ್ವತ ಲೋಕಕ್ಕೂ ಅನ್ವಯಿಸುತ್ತದೆ. ಸಾಹಿತ್ಯದಲ್ಲೂ ಕಾಲಕಾಲಕ್ಕೆ ಬದಲಾವಣೆಗಳು ನಡೆಯುತ್ತಿರುತ್ತವೆ. ಆ ಪರಿಧಿಯಲ್ಲಿ ‘Those who create nothing now, destroy” ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು. ನಮ್ಮ ಕನ್ನಡ ವಾಙ್ಮಯ ಇತಿಹಾಸವನ್ನು ಗಮನಿಸಿದಾಗ ಚಂಪೂ, […]

ಜೀಕು ಜೋಕಾಲಿ

ಜೀಕು ಜೋಕಾಲಿ ಕೆ.ಸುನಂದಾ ಸಾಗುತಿರಲೀ ಪಯಣ ನಿಲ್ಲದೇ ಬಾಳಲಿಏಳು ಬೀಳುಗಳೆನಿತು ಬಂದರೂ ಬರಲಿಕಾರ್ಮೋಡ ಕರಗುತ ಸರಿಯಲೇಬೇಕುಹಸನಾದ ಹೊಂಬೆಳಕು ಸೂಸಲೇಬೇಕು ಬದುಕೊಂದು ಆಟ ಸವಿಯ ರಸದೂಟಆಸ್ವಾದಿಸುತ ನಡೆ ಸುಂದರದಾ ನೋಟದೇವನಿತ್ತ ಕಾಣಿಕೆ ಈ ಜಗದ ಚಲನೆಯುನಾವೆಲ್ಲರೂ ಅವನಾಟದ ಗೊಂಬೆಯು ಒಲವಿನ ಹಂದರದಿ ಜೀಕುತ ಜೋಕಾಲಿಏರಿಳಿಯುತ್ತ ಸಾಗು ನೀ ಸಮಭಾವದಲಿಸ್ಥಿರವಲ್ಲವೋ ಬಂಧನಗಳು ಭುವಿಯಲಿಇದ್ದರೂ ಇಲ್ಲದಂತೆ ಇರಬೇಕು ಜಗದಲಿ ಪ್ರೀತಿ ಪ್ರೇಮದ ಮನಸ್ಸುಗಳೆ ಆಲಯವುಅಂತರಾತ್ಮನೇ ಗರ್ಭಗುಡಿಯ ದೇವನುವರ್ಣಿಸಲಾಗದ ಪ್ರಕೃತಿಯ ಪೂಜಿಸುತ್ತನಡೆ ನೀ ಉಪಕಾರ ಸ್ಮರಣೆ ನೆನೆಯುತ್ತ **************************************

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಮನದ ದುಗುಡ ಕಳೆಯಲಿಕ್ಕೆ ಇರುವುದೊಂದು ಕಿಟಕಿ ಜಗದ ತಮವ ತೊಡೆಯಲಿಕ್ಕೆ ಇರುವುದೊಂದು ಕಿಟಕಿ – ಅರಿವ ಕುಡಿದು ಎದೆಯ ತೆರೆದು ಮೂಡಿತೊಂದು ಕನಸು ಬಯಲ ಹಕ್ಕಿ ಮೇಲೆ ಹಾರಲಿಕ್ಕೆ ಇರುವುದೊಂದು ಕಿಟಕಿ – ಏನೊಂದೂ ಇರದ ತಾಣದಿಂದ ತೇಲಿ ಬಂತೊಂದು ರಾಗ ರಾಗದೊಳಗೆ ರಾಗ ಮೂಡಲಿಕ್ಕೆ ಇರುವುದೊಂದು ಕಿಟಕಿ – ಸೂರ್ಯ ಚಂದ್ರ ತಾರೆ ಧೂಮಕೇತು ಮತ್ತದೇ ಕಾಲಚಕ್ರ ಜೀವಸೆಲೆಯ ಸುರುಳಿ ಮೂಡಲಿಕ್ಕೆ ಇರುವುದೊಂದು ಕಿಟಕಿ – ನೊಂದು ಬೆಂದು ದಹಿಸಿಕೊಂಡು ಅರಳಿತೊಂದು […]

ಒಲವಿನೋಲೆ..

ಒಲವಿನೋಲೆ.. ಜಯಶ್ರೀ.ಭ. ಭಂಡಾರಿ ಓ ಒಲವೇ ನೀ ಎಲ್ಲಿರುವೆ…. ನೀ ನನ್ನ ಹುಡುಕಿಕೊಂಡು ಬಂದು ಆಗಲೇ ೨ ವರ್ಷ ಕಳೆಯಿತು. ನೀ ಬಂದಾಗ ನನಗೆ ನಿನ್ನ ಮೇಲೆ ಅದ್ಯಾವ ಭಾವನೆ ಗಳೇ ಇರಲಿಲ್ಲ. ಈಗ ನಾನು ಈ ಭೂಮಂಡಲಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.  ಪ್ರತಿಕ್ಷಣ ನಿನ್ನ ಬಿಟ್ಟರೆ ಹರಿದಾಡುವ ಗಾಳಿಗೂ ಜಾಗವಿಲ್ಲ. ನನ್ನ ಬಾಳಿನ ಕಗ್ಗತ್ತಲು ಬೆಳಗಲು ನೀನೇ ಬೇಕು. ಅತಿಯಾದ ಪ್ರೀತಿಯಲ್ಲಿ ನನ್ನ ನಾ ಮರೆತಿಹೆ.ನೀನಿಲ್ಲದ ಹೊತ್ತು ನೆನೆಯಲು ಸಾಧ್ಯವಿಲ್ಲ. ನಿನ್ನಲ್ಲಿ ಒಂದು ಕೆಟ್ಟ ಹಾಬಿ ಇದೆ.ಡ್ಯೂಟಿಯಲಿ […]

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಅನುಭವ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಚಂದ್ರಮತಿ ಅದೊಂದು ಸಂಜೆ ! ಸಹಿಸಲಾರದ ವೇದನೆ ಆತಂಕ .ಬಲಹೀನ ತೋಳುಗಳು . ಏನಾಯ್ತು , ಹೇಗಾಯ್ತು ಮುಂದೆ ನಾನು  ಕೆಲಸ ಮಾಡೋದು ಹೇಗೆ  ಎಂದೆಲ್ಲ ಯೋಚಿಸ್ತಾ ಸಮಯ ವ್ಯರ್ಥಮಾಡಿ ಸಹಿಸಿಕೊಳ್ಳಲು ಅಸಾಧ್ಯ ವಾದಾಗ ಮೊರೆ ಹೋಗಿದ್ದು ಗೂಗಲ್ ಮಹಾಶಯನನ್ನು . ಅವನ ಸಲಹೆಯಂತೆ ಮನೆಯ ಸನಿಹದಲ್ಲೇ ಇರುವ ರೂಪೇಶ್ ಆರ್ಥೋಪೆಡಿಕ್ ಸೆಂಟರ್ಗೆ ಬೇಟಿ ಕೊಟ್ಟಾಗ ಅಲ್ಲಿಯ ಡಾ. ರೂಪೇಶ್ ಅವರು ಸರಳ ಮಾತು ಹಾಗೂ ಸೌಜನ್ಯತೆಯಿಂದ ಸರಿಯಾದ ಚಿಕಿತ್ಸೆ […]

Back To Top