ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ದೊಡ್ಡವರ ಮನೆಯ ಸಣ್ಣ ಕತೆ

ಅನುಭವ ದೊಡ್ಡವರ ಮನೆಯ ಸಣ್ಣ ಕತೆ ವೀಣಾ ನಿರಂಜನ್ ಈ ದೊಡ್ಡವರ ಮನೆಯ ಕತೆಗಳು ಬಹಳ ಸ್ವಾರಸ್ಯಕರವಾಗಿರುತ್ತವೆ. ನಾನು ಇಲ್ಲಿ ಹೇಳ ಹೊರಟಿರುವುದು ಒಂದು ಸ್ಯಾಂಪಲ್ ಅಷ್ಟೇ. ಆ ದಿನ ಮನೆ ಮಂದಿಯೆಲ್ಲ ಸಡಗರದಿಂದ ಓಡಾಡುತ್ತಿದ್ದರು. ಮನೆಯ ಮಗನ ಹುಟ್ಟುಹಬ್ಬ ಎಂದರೆ ಕೇಳಬೇಕೆ. ಶೇಖರ್ ಬಾಬು ಬೆಳಿಗ್ಗೆಯೇ ಮಗನಿಗೆ ಇಂಪೋರ್ಟೆಡ್ ಶಾಂಪೂ, ಸೋಪು ಹಾಕಿ ಹಿತವಾಗಿ ಸ್ನಾನ ಮಾಡಿಸಿದರು. ಮಕ್ಕಳಿಬ್ಬರೂ ಸಂಭ್ರಮದಿಂದ ತಂದೆಗೆ ನೆರವಾದರು. ಶರಾವತಿ ಸಂಜೆ ಪಾರ್ಟಿಗೆ ಯಾರ್ಯಾರನ್ನು ಕರೆಯಬೇಕು, ಏನೇನು ಆರ್ಡರ್ ಮಾಡಬೇಕು ಅದೆಲ್ಲವನ್ನೂ ಸಿದ್ಧ ಮಾಡಿ ಕೊಳ್ಳುತ್ತಿದ್ದಳು. ನಡು ನಡುವೆ ಮಗನನ್ನು ಮಾತನಾಡಿಸುತ್ತ ಮಾತಲ್ಲೇ ಮುದ್ದುಗರೆಯುತ್ತಿದ್ದಳು. ಹಾಗೆಯೇ ತಿಂಡಿ ತಯಾರಿಸುತ್ತಿದ್ದ ಶರಾವತಿ ತರಕಾರಿ ಮಾರಲು ಬಂದವನೊಡನೆ ಐವತ್ತು ರೂಪಾಯಿಗೆ ಚೆನ್ನಾಗಿ ಚೌಕಾಶಿ ಮಾಡಿ ಕೊಂಡಳು. ಮಗನಿಗೆ ಸಾವಿರಾರು ರೂಪಾಯಿಗಳ ಇಂಪೋರ್ಟೆಡ್ ಫುಡ್ ನಿಂದ ಬ್ರೆಕ್ ಫಾಸ್ಟ್ ತಯಾರಿಸಿದಳು. ಅದು ಇಂಪೋರ್ಟೆಡ್ ಅಲ್ವಾ, ನೀಟಾಗಿ ಜಬರ್ದಸ್ತಾಗಿ ಪ್ಯಾಕ್ ಮಾಡಿದ ಫುಡ್. ಅದರಲ್ಲಿ ಚೌಕಾಶಿ ಇರುವುದಿಲ್ಲ. ಇದರ ಮಧ್ಯೆಯೇ ಕೆಲಸಕ್ಕೆ ಬಂದ ಹೊನ್ನಮ್ಮಳಿಗೆ ಮಹಡಿ ಮೇಲಿನ ರೂಂಗಳನ್ನು, ಬಾಲ್ಕನಿ, ಫೊರ್ಟಿಕೊ ಎಲ್ಲವನ್ನೂ ಗುಡಿಸಿ ಒರೆಸುವಂತೆ ನಿರ್ದೇಶಿಸಿದಳು. ಹಾಗೇ ವಾರಕ್ಕೆ ಒಂದೆರಡು ಸಲ ಮಾತ್ರ ಆ ಕೆಲಸವಾದ್ದರಿಂದ ಹೊನ್ನಮ್ಮನ ಸಂಬಳವನ್ನು ತುಸು ಎಳೆದಾಡಿ ಇಷ್ಟು ಅಂತ ಗೊತ್ತು ಮಾಡಿದಳು. ಸಂಜೆಯಾಗುತ್ತಿದ್ದಂತೆ ಬಂದವರಿಗೆಂದು ಆರ್ಡರ್ ಮಾಡಿದ ಅಗ್ಗದ ಕೇಕು, ಮನೆಗೆಂದು ಆರ್ಡರ್ ಮಾಡಿದ ಪೇಸ್ಟ್ರಿ ಎಲ್ಲವೂ ಬಂದವು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಡಗರದಿಂದ ಓಡಾಡುತ್ತಿದ್ದರು. ಅತಿಥಿಗಳು ಬಂದು ಸೇರಿದ ಮೇಲೆ ಭರ್ಜರಿ ಪಾರ್ಟಿ ನಡೆಯಿತು. ಬರ್ಥಡೇ ಬಾಯ್ ಜೊತೆಗೆ ಮನೆಯವರ, ಅತಿಥಿಗಳ ಫೋಟೋ ಶೂಟ್ ಆಯಿತು. ಎಲ್ಲರೂ ಡಿನ್ನರ್ ಗೆಂದು ಕುಳಿತಾಗ ಒಂದು ಅಹಿತಕರ ಘಟನೆ ನಡೆದು ಬಿಟ್ಟಿತು. ಮೇಲೆ ಓಪನ್ ಬಾಲ್ಕನಿಯಲ್ಲಿ ನಡೆಯುತ್ತಿದ್ದ ಡಿನ್ನರ್ ಗೆ ಎಲ್ಲಿಂದಲೋ ಮೂರು ಕೋತಿಗಳು ಪ್ರತ್ಯಕ್ಷವಾಗಿ ಕಿಸ್ ಕಿಸ್ ಎಂದು ಗುರುಗುಟ್ಟ ತೊಡಗಿದವು. ಶೇಖರ್ ಬಾಬು ಮಗನನ್ನು ಕೋತಿಗಳನ್ನು ಓಡಿಸಲು ಛೂ ಬಿಟ್ಟರು. ಕೋತಿಗಳು ಅವನನ್ನು ನೋಡಿ ಮತ್ತೊಮ್ಮೆ ಕಿಸ್ ಎಂದವು. ಅವನು ಹೆದರಿ ಶರಾವತಿಯ ಕಾಲ ಬುಡದಲ್ಲಿ ಸುತ್ತುತ್ತಾ ಕುಂಯ್ ಗೂಡ ತೊಡಗಿದ. ಶೇಖರ್ ಬಾಬು ಒಮ್ಮೆಲೇ ಕೋಪದಿಂದ ಗುಡುಗಿದರು, ” ಥೂ  ನೀನೆಂಥ ನಾಯಿಯೋ ಬೊಗಳೋ ಬೊಗಳು”. ಅತಿಥಿಗಳು ಉಕ್ಕಿ ಬರುವ ನಗೆಯನ್ನು ತಡೆಯುತ್ತ ಸಭ್ಯತೆ ಮೆರೆದರು. ಶರಾವತಿ ಕಣ್ಣಂಚಿನ ನೀರು ತುಳುಕುವುದನ್ನು ತಡೆದಳು! ************************************************************************

ದೊಡ್ಡವರ ಮನೆಯ ಸಣ್ಣ ಕತೆ Read Post »

ಕಾವ್ಯಯಾನ

ಜೀವನ ಪಯಣ (ಸುನೀತ ಕಾವ್ಯ)

ಸುನೀತ ಕಾವ್ಯ ಜೀವನ ಪಯಣ (ಸುನೀತ ಕಾವ್ಯ) ಸುನೀತ (ಐದು ಮಾತ್ರೆಯ ನಾಲ್ಕು ಗಣಗಳ ಹದಿನಾಲ್ಕು ಸಾಲುಗಳು) ಶುಭಲಕ್ಷ್ಮಿ ಆರ್ ನಾಯಕ ಸಾಗುತಿದೆ ಅನವರತ ಜೀವನ ರಥದ ಪಯಣಹಲವು ಮಧುರ ವಸಂತಗಳ ಹರೆಯವನು ದಾಟಿಕಾಲ ಗುರುವ ವೀಣೆಯ ತಂತಿಯ ಸದಾ ಮೀಟಿಸದ್ದುಗದ್ದಲದಿ ಮಾಡದೇ ಸಮಯದ ಹರಣ ಏಳು ಬೀಳುಗಳನು ಸಮ ದೂಗಿಸುವ ತಾಳ್ಮೆಯುಬದುಕಿನ ಸತ್ಯವನು ಅರಿತು ಅರುಹುವ ಛಲದಲ್ಲಿಸಾಗಿದೆ ಪಯಣವು ಗುರಿ ಸೇರೋ ತವಕದಲ್ಲಿಪಯಣದಲಿ ಬೇಕೆಮಗೆ ಎಂದಿಗೂ ಭರವಸೆಯು ಬಂದ ಸೋಲು ಗೆಲುವುಗಳ ಅನುನಯದಿ ಸವಿಯುತಮಾರ್ಗದ ಎಡರು ತೊಡರುಗಳ ಸಂಯಮದಿ ಸಹಿಸಿಆವರಿಪ ಹಮ್ಮು ಬಿಮ್ಮುಗಳ ವಿನಯದಿ ಅಳಿಸಿಹೊಂದಿಕೆ ಪ್ರೇಮ ಭಾವದ ಅರಿವಲಿ ಬೆರೆಯುತ ಜೀವನ ಪಥದೊಳು ಛಲ ವಿಶ್ವಾಸದಿ ನಡೆಯುವನೋವುಗಳ ಮರೆಯುತ್ತ ನೆಮ್ಮದಿಯನು ಪಡೆಯುವ **********************************************

ಜೀವನ ಪಯಣ (ಸುನೀತ ಕಾವ್ಯ) Read Post »

ಕಥಾಗುಚ್ಛ

ಸುಳಿಗಾಣ

ಸಣ್ಣ ಕತೆ. ಸುಳಿಗಾಣ ಶೋಭಾ ನಾಯ್ಕ .ಹಿರೇಕೈ ರಾತ್ರಿಯಿಡಿ ನಿದ್ದೆಯಿಲ್ಲದೆ ಕೆಂಡದುಂಡೆಯಾದ ಕಣ್ಣುಗಳನ್ನುಜ್ಜಿಕೊಂಡು ಹಾಸಿಗೆಯಿಂದೆದ್ದ ಮಾದೇವ ರೂಢಿಯಂತೆ ಕೊಟ್ಟಿಗೆಯ  ಕಡೆ ಕಣ್ಣು ಹಾಯಿಸಿದ.  ಉಕ್ಕಿ ಬಂದ ಸಿಟ್ಟು, ಅಳು ಎಲ್ಲವನ್ನೂ ನುಂಗಿಕೊಂಡು ” ಛೇ.. ”  ಎಂದು ಬಲಗಾಲನ್ನೆತ್ತಿ ದೊಪ್ಪೆಂದು  ನೆಲಕ್ಕೆ ಬಡಿದವನೆ, ಏನೋ ತೀರ್ಮಾನ ಮಾಡಿದವನಂತೆ ತಂಗಿಯನ್ನಾದರೂ  ‘ವಿದ್ಯಾಗಿರಿ’ ಹೈಸ್ಕೂಲ್ ಮೆಟ್ಟಿಲ ಹತ್ತಿಸಿಯೇ ತೀರಬೇಕೆಂದು, ತನಗೆ ಕಲಿಸಿದ ಮಾಸ್ತರರ ಮನೆಯತ್ತ ಹೋಗುತ್ತಿದ್ದಾಗ, ” ಈ ಮಾಸ್ತರರ ಮನೆಯಲ್ಲಿ ಎಲ್ಲರನ್ನೂ ಒಳ ಸೇರಿಸಿ ಬಿಡ್ತಾರಪ್ಪ. ನಮಗೆ ಕೊಡೋ ಲೋಟದಲ್ಲೇ .. ಅವರಿಗೂ ಚಾ ಕೊಡ್ತಾರೆ.  ಶೀ… ಹೇಸಿಗೆ.”ಎಂದು ಕಬ್ಬಿನ ಗದ್ದೆಯ  ರವದಿಯ ಸಂದಿಯಿಂದ ಕೇಳಿ ಬಂದ ಮಾತು ಗಾಯದ ಮೇಲೆಯೇ ಬರೆ ಎಳೆದಂತಾದರೂ  ಎದೆಗುಂದದ ಅವನ ಹೆಜ್ಜೆಗಳು ಮತ್ತೂ ಬಿರುಸಾದವು. ತಮ್ಮೂರ ಶಾಲೆಯಲ್ಲೇ ಏಳನೇ ತರಗತಿ ಮುಗಿಸಿ ಇನ್ನೇನು ಹೈಸ್ಕೂಲ್  ಹತ್ತಬೇಕಾದ ಅವನಿಗೆ , ಕುಡಿತದಿಂದ   ಸಾಲ ಮಾಡಿ ಮಾಡಿ ಸತ್ತ ಅಪ್ಪನ ಸಾವಿನಿಂದ ಆಘಾತವಾಯಿತು. ಇದ್ದ ತುಂಡು ಹೊಲ ಪಂಚಾಯ್ತಿ ಕಟ್ಟೆಯಲ್ಲಿ ಸಾಲ ಕೊಟ್ಟವರ ಪಾಲಾಯಿತು ಎರಡು ವರುಷಗಳವರೆಗೆ. ಓದುವ ಆಸೆ ಕೈಬಿಟ್ಟ ಹುಡುಗ  ಹತ್ತಾರು ಮನೆಯ ದನಗಾವಲಿಗೆ ನಿಂತು,  ಮನೆಯ ಚಿಕ್ಕ ಪುಟ್ಟ ಖರ್ಚು ನಿಭಾಯಿಸಿ  ಮನೆಯ ಪುಟ್ಟ ಯಜಮಾನನಾದಾಗ, ಅವ್ವಳ ದಿನ ನಿತ್ಯದ ಅಳು ನಿಂತದ್ದು ಗಮನಿಸಿದ ಹುಡುಗ ಹೇಗಾದರೂ ಮಾಡಿ ತನ್ನ ಹೊಲವನ್ನು ತಮ್ಮದಾಗಿಸಿಕೊಳ್ಳಬೇಕೆಂದುಕೊಂಡ. ಇದೇ ವೇಳೆಗೆ  ಇವನ ಸಾಲದೊಡೆಯ  ತನ್ನದೆರಡು ಹೋರಿ ಕರುಗಳನ್ನು  ಸಾಕಿಕೊಳ್ಳಲು ಅನುಮತಿ ಕೊಟ್ಟು ಬಿಟ್ಟಾಗ ಹುಡುಗನಿಗೆ ಸ್ವರ್ಗಕ್ಕಿನ್ನು ಒಂದು ಗೇಣೂ ಅಂತರವಿಲ್ಲ ಅನ್ನಿಸಿಬಿಟ್ಟಿತು. ದಿನವೂ ತಾನೇ ಮೇಯಿಸಿಕೊಂಡು ಬರುವ ಹೋರಿ ಕರುಗಳೀಗ ತನ್ನವೇ ಆಗುತ್ತಿವೆ.   ಸಂತೋಷಕ್ಕೆ ಪಾರವಿಲ್ಲದೆ ಹುಲ್ಲು,  ಸೊಪ್ಪು, ಸದೆ, ಅಕ್ಕಚ್ಚು, ನೀರು ಎಂದು ಮಕ್ಕಳಂತೆ ಪಾಲನೆ ಮಾಡಿದ. ರಾಮ , ಲಕ್ಷ್ಮಣರೆಂದೂ ಹೆಸರೂ ಇಟ್ಟು ಬಿಟ್ಟ. ಬಿಸಿನೀರಿನಿಂದ ಮೈ ತೊಳೆದು  ಕಿವಿ ಚಟ್ಟೆ, ಮೂಗ ಹೊಳ್ಳೆಯೊಳಗೆಲ್ಲ ಸೇರಿ ಬಿಡುವ  ಉಣುಗನ್ನೂ ಬಿಡದೆ ತೆಗೆದು ಆರೈಕೆ ಮಾಡಿದ.ಎರಡು ವರುಷದೊಳಗೆ   ನೋಡಿದವರ ಕಣ್ಣು ಬೀಳುವಂತೆ  ಬೆಳೆದು ನಿಂತ ಹೋರಿಗಳೀಗ ಎತ್ತುಗಳಾಗೋ ಕಾಲ.  ಸುಳಿಗಾಣ ಕಟ್ಟಿ, ತಿದ್ದಿ ಗದ್ದೆ ಹೂಳಲು ರಾಮ , ಲಕ್ಷ್ಮಣರು ಸಿದ್ಧವಾಗುತ್ತಿರುವ ಸುದ್ದಿ   ಸಾಲ ದೊಡೆಯನಿಗೆ ( ಹೋರಿಗಳೊಡೆಯನೂ )   ತಲುಪಿಯೇ ಬಿಟ್ಟಿತ್ತು. ಮರು ದಿನವೇ ಹೊಸದೆರಡು ಜೊತೆ ದಾಬದ ಕಣ್ಣಿಯೊಂದಿಗೆ ಬಂದ ಆತ  ರಾಮ ಲಕ್ಷ್ಮಣರ ಕತ್ತಿಗೆ ಬಿಗಿದು, ” ಮಾದ,  ನಮ್ಮನೆ ಕೊಟ್ಟಿಗೆ ಬೇರೆ ಮಾಡಾಯ್ತೋ.. ಜಾಗಕ್ಕೇನೂ ಬರ ಇಲ್ಲ ಈಗ.  ನಿನ್ ಲೆಕ್ಕಾಚಾರ ಮುಂದೆ ಮುಗಿಸಿದರಾತು, ಹ್ಯಾಗಾದರೂ ಸಗಣಿಗಿಗಣಿ ಬಳಸ್ಕಂಡಿಯಲ್ಲ ಇಷ್ಟು ದಿನ . ಹೈ.. ಹೈ.. ” ಎನ್ನುತ್ತಾ ಹೋರಿಗಳೆರಡನ್ನೂ ಎಳೆದುಕೊಂಡು ಹೊರಟೇ ಬಿಟ್ಟಾಗ , ಇತ್ತ ಮಾದೇವ ಎಚ್ಚರ ತಪ್ಪಿ ಬಿದ್ದ ಸುದ್ದಿ ಊರಲ್ಲೆಲ್ಲ ಹಬ್ಬಿ   ಎಲ್ಲರೂ  ‘ ಅಯ್ಯೋ’ ಅಂದಿದ್ದು ಬಿಟ್ಟರೆ  ಮತ್ತೇನೂ ಆಗಲೇ ಇಲ್ಲ . ಮನೆಯತ್ತ ಬರುತಿದ್ದ ಮಾದೇವನ ಕಂಡಾಗ  ಅವನ ಕತೆ ನೆನಪಿಸಿ ಕಣ್ಣಂಚು ಒದ್ದೆ ಮಾಡಿಕೊಂಡ ಮಾಸ್ತರರ ಹೆಂಡತಿ  ಚಹಕ್ಕಿಡಲು ಒಳಗೆ ಹೋದಳು. ***************************************************

ಸುಳಿಗಾಣ Read Post »

ಕಾವ್ಯಯಾನ

ನನ್ನ ಕವಿತೆ

ಕವಿತೆ ನನ್ನ ಕವಿತೆ ಲಕ್ಷ್ಮೀದೇವಿ ಪತ್ತಾರ ಹರುಕು ಬಟ್ಟೆಮುರುಕು ಮನೆಯಲಿಅರೆ ಹೊಟ್ಟೆ ಊಟದಲ್ಲೂಹೆತ್ತ ಮಕ್ಕಳು ಕಲಿತುಮನೆಗೆ ಆಸ್ತಿ ಆಗುವರೆಂಬಹೆತ್ತವರ ಹೊಟ್ಟೆ ತುಂಬಾ ಕನಸುನನ್ನ ಕವಿತೆ ಭೂಮಿ ಹರಗಿ ಹದಗೊಳಿಸಿಗಟ್ಟಿ ಬೀಜವ ಬಿತ್ತಿಮಳೆ ಬರುವುದೆಂಬ ಭರವಸೆ ಹೊತ್ತರೈತನ ನಿರೀಕ್ಷೆ ನನ್ನ ಕವಿತೆ ಕೆಲಸವಿಲ್ಲವೆಂದು ಕೊರಗದೆಸಿಕ್ಕ ಕೆಲಸವನ್ನ ಚೊಕ್ಕನಾಗಿ ಮಾಡಿ ಹೊಟ್ಟೆಗೆ ಹಿಟ್ಟು ಗಿಟ್ಟಿಸಿಕೊಳ್ಳುವ ಗಟ್ಟಿಗರ ಇಚ್ಛಾಶಕ್ತಿನನ್ನ ಕವಿತೆ ಬಾಳ ಪಥದ ಏರಿಳಿತಗಳನ್ನು ಎದುರಿಸಿ ಸಂಸಾರ ರಥವನ್ನು ಸುಗಮವಾಗಿ ದಡ ಸೇರಿಸುವ ಸ್ತ್ರೀ ರತ್ನ ನನ್ನ ಕವಿತೆ ಗಾಳಿ ಮಳೆ ಬಿಸಿಲು ಲೆಕ್ಕಿಸದೆಕಾಮನೆಗಳನ್ನು ಕಡಿಗಣಿಸಿವೈರಿಪಡೆಯ ನಿರ್ಣಾಮದ ಪಣ ತೊಟ್ಟಯೋಧನ ದೇಶಭಕ್ತಿ ನನ್ನ ಕವಿತೆ ಪ್ರಕೃತಿ ಪ್ರಕೋಪ, ವಿಕೋಪಗಳ ಎದುರಿಸಿರೋಗರುಜಿನಗಳ ನಿಯಂತ್ರಿಸಿಒಳ್ಳೆಯ ದಿನಗಳ ಆಶೆ,ಭರವಸೆಸಾಕಾರಗಳಿಸುವ ನಾಡಿನ ಸರ್ದಾರನನ್ನ ಕವಿತೆ *******************************

ನನ್ನ ಕವಿತೆ Read Post »

ಕಾವ್ಯಯಾನ

ಅಹಮ್ಮಿನ ಕೋಟೆ

ಕವಿತೆ ಅಹಮ್ಮಿನ ಕೋಟೆ ಚಂದ್ರಪ್ರಭ ಬಿ. ‘ಸೋತರೇ ಗೆಲುವು ಮಗಳೇ’ ಅವ್ವನ ಮೆಲು ನುಡಿ‘ಇಟ್ಟಾಂಗಿರಬೇಕ ಮಗಾ’ ಅಜ್ಜಿಯ ಚೆನ್ನುಡಿನಿನ್ನ ನಲ್ನುಡಿ ಎದುರು ಗಾಳಿಯೊಡನೆತೂರಿ ಹೋದುದು ಅರಿವಿಗೇ ಬರಲಿಲ್ಲಆಹಾ! ಏನದರ ಸೊಗಸು…ಖೋಡಿ ಮನಸ್ಸಿನ ಹತ್ತು ಹದಿನಾರು ಕನಸುಚಿತ್ತಾಕರ್ಷಕ ಸೆಳೆತ.. ಬಲು ಮತ್ತಿನ ಅಮಲು ಬಿಸಿಲೇರಿದಂತೆಲ್ಲ ನಿಚ್ಚಳ ಬೆಳಕುನಡು ಮಧ್ಯಾಹ್ನದ ನಿಗಿನಿಗಿ ಕೆಂಡಮಂಜು ಕರಗಿ ಒಳಹೊರಗೆಲ್ಲ ಕಡು ತಾಪಅಪಥ್ಯವಾಗುವ ಅವ್ವ ಅಜ್ಜಿಯ ಕಿವಿಮಾತುತುದಿ ಮೊದಲಿಲ್ಲದ ತಪ್ಪು ಒಪ್ಪುಗಳಗುಣಾಕಾರ ಭಾಗಾಕಾರ… ಮುಂಬರಿಯಲು ತವಕಿಸುವ ಹೃದಯನಿಂತೇ ಬಿಡುವ ಹಠಮಾರಿ ಹೆಜ್ಜೆಕ್ಷಮಿಸು ಗೆಳೆಯ, ನಿನ್ನಂತೆ ನಾನೂ ಬಂದಿಅಹಮ್ಮಿನ ಕೋಟೆಯಲಿ.. ****************************************

ಅಹಮ್ಮಿನ ಕೋಟೆ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ಹೂಗಳು ಬಣ್ಣದ ಲೋಕ :ಹೂಗಳು ಹಲವಾರು,ದೃಷ್ಟಿ ಹೀನತೆ. 2) ವಿರಹ ವಿರಹ ತಾಪ :ಮೂಡಣದ ದೊರೆಗೆ,ಭುವಿ ಪ್ರೀತಿಗೆ. 3) ಕವಿ ಕವಿ ತಾಕತ್ತು :ರವಿ ಇಲ್ಲೆಡೆ ಎಲ್ಲಾಕರಾಮತ್ತು. 4) ಭೂರಮೆ ಭೂರಮೆ ಕಳೆ:ಹಸಿರುಟ್ಟ ಬೆಡಗಿ,ಕೋಗಿಲೆ ಗಾನ. 5) ಮೌನ ಮೌನದ ಭಾರ :ಮಾತುಗಳ ಕದನ,ಮುಕ್ತಾಯ ಗೀತೆ. 6) ಅಮ್ಮ ದಾರಿ ದೀವಿಗೆ :ಅಮ್ಮನ ನಗೆ ರೂಪ,ಬಾಳು ಸಂಭ್ರಮ. 7) ನಲ್ಲ ಅನುದಿನವೂಅನವರತ ನಗು,ನಲ್ಲನ ಮೊಗ. 8) ಕಾಣಿಕೆ ಮುಗಿಲ ಮಾಲೆ :ಭುವಿಯ ಕೊರಳಿಗೆ,ರವಿ ಕಾಣಿಕೆ. 9) ಬೆಳದಿಂಗಳು ವಿರಹ ತಾಪ :ಬೆಳದಿಂಗಳ ರಾತ್ರಿ,ಚಂದ್ರ ಗ್ರಹಣ. 10) ಸ್ವಪ್ನ ಸ್ವಪ್ನ ರಾಣಿಗೆ :ಜಾಗರಣೆ ಬಹಳ,ನನಸಾಗಲು. ************************************

ಹಾಯ್ಕುಗಳು Read Post »

ಕಾವ್ಯಯಾನ

ಅನಾಮಿಕಾ

ಕವಿತೆ ಅನಾಮಿಕಾ ಮೋಹನ್ ಗೌಡ ಹೆಗ್ರೆ.‌ ಅವಳು ಮಲಗಿದ್ದಾಳೆಕಣ್ಣಿನಲ್ಲಿ ಕನಸಿನ ಹಸಿವ ತುಂಬಿಒಡಲಿನಲಿ ಮತ್ಯಾವುದೋ ಹಸಿವ ನುಂಗಿಅವಳ ದೇಹದೊಡನೆ ದುಡ್ಡು ಮಾತಾಡುವುದ ಕೇಳಿ… ಒಂದಾನೊಂದು ದಿನದಲ್ಲಿಅವಳು ಮಲಗಿರುವಾಗತೊಟ್ಟಿಲ ತೂಗಿದ ಕೈಗಳುಮಲಗಿದ ಮುದ್ದು ಮುಖಕ್ಕೆಮುತ್ತಿನ ಮಳೆಗೆರೆದ ಮನಸುಗಳುಹೊಸ ಬಟ್ಟೆಯ ಉಡಿಸಿ ಆನಂದಿಸಿದ ಕಣ್ಗಳುಅವಳಿಗೆ ನೆನಪಾಗುತಲೇ ಇಲ್ಲ… ವಿದ್ಯೆ ಬುದ್ದಿಗಳನ್ನು ಕಲ್ಲು ಕಟ್ಟಿ ಮುಳುಗಿಸಿದ್ದಾಳೆಕೆಲವೊಮ್ಮೆ ಇವಳೂ ಏಳದ ಹಾಗೇಮನಸು ಬಯಸದ ಶೃಂಗಾರಕೆ ನಿತ್ಯ ಅಣಿಯಾಗುತಾಳೆಎಲ್ಲೂ ಬೆವರದವರು ಇವಳಲ್ಲಿ ಬಂದು ಬೆವರುವಷ್ಟೂ ಕ್ರೂರತನವಸಹಿಸಿಕೊಂಡು ಅದೊಂದು ವೃತ್ತಿಯೇ ಎನಿಸುವಷ್ಟುಬಲಿತ ಮಾಂಸ ಖಂಡಗಳೇಉಬ್ಬು ತಗ್ಗುಗಳೇ ಅವಳ ಪದೋನ್ನತಿಸ್ವಯಂ ನಿವೃತ್ತಿ ಪಡೆದರೂಉಳಿತಾಯವಾಗಲಿ, ಪಿಂಚಣಿಯಾಗಲಿ ಅವಳ ಪಾಲಿಗಿಲ್ಲ…. ಅನುಕಂಪ, ಬಂಡಾಯ, ಭದ್ರತೆಎಲ್ಲವನ್ನೂ ಮರೆತಿದ್ದಾಳೆ ಅವಳುತನ್ನ ಮೈಯ ಒತ್ತೆಯಿಟ್ಟು ಎಷ್ಟೋ ಅತ್ಯಾಚಾರಗಳ ತಪ್ಪಿಸಿದಾಕೆಸಮಾಜದ ಯಾವುದೋ ಸರಪಳಿಯಅನ್ವರ್ಥಕ ದೇವತೆಯೇ ಅವಳುಗೊತ್ತಿಲ್ಲ ನನಗೆ ಇಂದಿಗೂ ಅವಳ ಹೆಸರೇನೆಂದು….. **************************************

ಅನಾಮಿಕಾ Read Post »

You cannot copy content of this page

Scroll to Top