ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು

ಸರಿತಾ ಮಧು

ನಮ್ಮ ಮಕ್ಕಳು ಮಕ್ಕಳಲ್ಲ

Karnataka Gram Panchayat Election, 2020

ಚುನಾವಣೆಗಳೆಂದರೆ ಹಬ್ಬ
ಪ್ರಜಾಪ್ರಭುತ್ವದ್ದೂ , ಜನಗಳದ್ದೂ
ಪ್ರತಿವರ್ಷವೂ ಆಚರಣೆಯೇ
ಗ್ರಾಮ, ತಾಲ್ಲೂಕು, ಜಿಲ್ಲೆಗಳೂ
ಹೊರತಲ್ಲ

ಒಂದಾಗಿದ್ದ ಊರೊಳಗೆ ಜಾತಿಯ ತಂದಿಟ್ಟು
ಭಿನ್ನತೆಯ ಪ್ರತೀಕವಾದರು ನಮ್ಮವರು , ನಮ್ಮ ಜನಗಳು

ಹೆಂಡ ಹಣದ ಹೊಳೆಯಲಿ
ಮುಳುಗೆದ್ದರು , ಮೈಮರೆತರು
ಹಗಲು ಇರುಳುಗಳ ಲೆಕ್ಕಿಸದೆ
ನಮ್ಮವರು , ನಮ್ಮ ಜನಗಳು

ಆಮಿಷವೋ, ಮತ್ತೊಂದೋ
ಮತಗಳು ಬಿಕರಿ ಮಾಡಿಯೇ ಬಿಟ್ಟರು
ಚುನಾವಣಾ ಸಂತೆಯಲ್ಲಿ
ನಮ್ಮವರು, ನಮ್ಮ ಜನಗಳು

ಯಾವುದಕ್ಕಾಗಿ ಹೋರಾಟ
ಈ ಹಾರಾಟ, ಮಾರಾಟ
ತಮ್ಮತನವ ಅಡವಿಟ್ಟು ನಿಂತರಲ್ಲ
ನಮ್ಮವರು, ನಮ್ಮ ಜನಗಳು

ಮುಸುಕಿನೊಳಗಿನ ಗುದ್ದಾಟ
ನಗೆಯ ಮರೆಯಲ್ಲಿ ಹಗೆಯ
ಹೊಗೆಯಾಟ
ಮನದೊಳಗೆ ಮತ್ಸರದ ಅಗ್ನಿಪರ್ವತದ ಪ್ರತೀಕವಾದರು
ನಮ್ಮವರು, ನಮ್ಮ ಜನಗಳು

ಎಲ್ಲಿಂದ ಪಯಣವೋ ಮುಕ್ತಾಯವೂ ಅನೂಹ್ಯ
ಸಮೂಹದೊಳಗೆ ಗೆದ್ದವರು ಇಲ್ಲ ,ಸೋತವರೂ ಇಲ್ಲ
ಗೆದ್ದೆನೆಂದು ಬೀಗಿದವರಿಗೆ
ಸೋಲಿನ ಅರಿವಿಲ್ಲ
ಸೋಲು – ಗೆಲುವಿನ ಪಂದ್ಯದಲ್ಲಿ
ನರಳುವರು ನಮ್ಮವರು
ನಮ್ಮ ಜನಗಳು

*******************************

Leave a Reply

Back To Top