Day: December 25, 2020

ಮದರಂಗಿ (ಮೆಹೆಂದಿ)

ಮದರಂಗಿ (ಮೆಹೆಂದಿ) ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ. ಆಶಾ ಸಿದ್ದಲಿಂಗಯ್ಯ ಮದುವೆಯ ಸಂದರ್ಭದಲ್ಲಿ ಮದುಮಗ ಅಥವಾ ಮದುಮಗಳಿಗೆ ಕೈಗೆ ಹಚ್ಚುವ ಪ್ರಾಕೃತಿಕ ಬಣ್ಣ. ಎಂದರೆ ಇದೊಂದು ಎಲ್ಲರಿಗೂ ಇಷ್ಟವಾಗುವ ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ. ಮದರಂಗಿ ತಯಾರಿಕೆ ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ವಿಜ್ಞಾನ ಮುಂದುವರಿದ ಹಾಗೆ […]

ಚಂದಿರನ ಬೆಳದಿಂಗಳಲ್ಲಿ

ಭಾವಲಹರಿ… ಭಾವಲಹರಿ… ರಶ್ಮಿ.ಎಸ್. ಒಬ್ಬಂಟಿಯೆನಿಸಿದಾಗಲೆಲ್ಲ ಬಾಲ್ಕನಿಗೆ ಬಂದು ನಿಲ್ತೇನಿ. ಅದೆಷ್ಟು ದೂರದ ಗೊತ್ತಿಲ್ಲ.. ಅಷ್ಟೂ ದೂರದಿಂದ ನಕ್ಷತ್ರವೊಂದು ಮಿಣಮಿಣ ಅಂತ ಮಿಣುಕ್ತದ. ಕಣ್ಣುಪಿಳುಕಿಸಿ, ಕಣ್ಣಾಗ ನಗ್ತದ. ನನ್ನ ಮನಿ ಮುಂದಿನ ಬೇವಿನ ಮರದ ಎಲೆಗಳು ತಣ್ಣಗ ಗಾಳಿ ಸೂಸ್ತದ. ಅದರೊಳಗೊಂದು ಕಹಿಯ ಕಂಪೂ ಇರ್ತದ. ಇರುಳಿನ ತಂಪೂ ಇರ್ತದ. ಅಪಾರ್ಟ್‌ಮೆಂಟಿನಾಗ ಸಾಕಿದ್ದ ನಾಯಿ ಚೂರಿ ಬಂದು ಬೊಗಳ್ತದ. ‘ಚೂರಿ ಮಲಗೂದು ಬ್ಯಾಡೇನು.. ಅಂದ್ರ ಸಾಕು..’ ಪಾಪ ತನಗೆ ಅನ್ಕೊಂಡು ಸುಮ್ನಾಗಿ ಒಳಗ ಹೋಗ್ತದ. ಮತ್ತದೆ ರಾತ್ರಿ, ಮತ್ತದೆ […]

ಗಝಲ್

ಗಝಲ್ ನೂರುಲ್ಲಾ ತ್ಯಾಮಗೊಂಡ್ಲು ನಿನ್ನ ಶಹರಿನಲಿ ಬೆಳಕಿಗೆ ಕಾಲು ಮೂಡಿದಾಗ ನೀನಿದ್ದೆಆ ಬೃಂದಾವನದಲಿ ದುಂಬಿ ಮಕರಂದ ಹುಡುಕುವಾಗ ನೀನಿದ್ದೆ ಕಣ್ಣ ಕೊಂಬೆಯ ಮೇಲೆ ನಕ್ಷತ್ರ ಮಿನುಗುವ ಹೊತ್ತುಭರವಸೆಯ ಕಿರಣವೊಂದು ರೆಪ್ಪೆ ಮೇಲೆ ಹರಿದಾಗ ನೀನಿದ್ದೆ ಯಾವುದೊ ವಿಳಾಸವಿಲ್ಲದ ದಾರಿಯಲಿ ಕಾಲುಗಳು ಎಡವಿದವು ನಿಜಆದರೆ ನೀ ಹೊರಳಿ ಹೋಗಿದ್ದ ದಾರಿಯಲಿ ಅತ್ತರು ಘಮಿಸಿದಾಗ ನೀನಿದ್ದೆ ಯಾವುದದು ಮರೆಮಾಚುವ ವಚನ ಕಾಡಿತ್ತೊ ಅರಿಯೆಆದರೂ ನಿನ್ನ ಆ ಮರೆಮಾಚಿಕೆ ವಿಫಲವಾದಾಗ ನೀನಿದ್ದೆ ಗೊತ್ತು ನಿರೀಕ್ಷೆಗಳೆಲ್ಲ ಹುಸಿಯಾಗದು ಎಂದೂ ‘ಸಾಘರ್’ಕಾಡುವಿಕೆಗೂ ಒಂದು ಮಿತಿಯಿದೆ […]

ಅಂಕಣ ಬರಹ ರಂಗರಂಗೋಲಿ-5 ಪಾತ್ರೆ ತುಂಬಿದ ಇನ್ನೆರಡು ಪಾತ್ರಗಳು ಪೂರ್ಣ… ಪೂ..ರ್ಣ.. ಅವರು ಕರೆಯುತ್ತಿದ್ದಾರೆ!. ತೆಳ್ಳಗಿನ ಸ್ವರವದು. ಉದ್ದ ಜಗಲಿಯನ್ನು ಹಂಚಿಕೊಂಡ ಮೂರನೆಯ ಹೊಸ್ತಿಲಿನ ಕೊನೆಯ ಕೋಣೆಯದು. ಮುಸ್ಸಂಜೆ ಸಮಯ,  ಒಬ್ಬರೇ ಆ‌ ಮರದ ಕಿಟಕಿಯ ಬಳಿ ಕೂತು  ತಿನ್ನುತ್ತಿದ್ದದ್ದು ಒಂದು ಆಮ್ಲೇಟ್. ಅದೂ ಚಿಕ್ಕದು. ಅದಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿದ್ದರು.  ಆ ಸಮಯ ಮಾತ್ರ ಅವರು ನನ್ನ ಹೆಸರು ಕೂಗುತ್ತಿದ್ದರು. ಮನೆಯ ಹಿಂಬದಿಗೆ ಆ ಕಿಟಕಿಯ ಅರೆ ಕತ್ತಲಿಗೆ ನಾನು ಓಡುತ್ತಿದ್ದೆ. ಕಡ್ಡಿಯಂತಹ ಬಿಳೀ ಬೆರಳುಗಳು. […]

Back To Top