ನೆತ್ತರಿನ ಮಳೆ ಬಿದ್ದು….
ಅಲ್ಲಾಗಿರಿರಾಜ್ ಕನಕಗಿರಿ
ನೆತ್ತರಿನ ಮಳೆ ಬಿದ್ದು
ಮೈ ಮನಸು ಕೆಂಪಾದವೋ.
ಕಪ್ಪಾದ ಮೋಡದಲ್ಲಿ
ಕೆಂಪಾದ ಮಿಂಚೊಂದು ಹರಿದು.
ಊರು ಕೇರಿ ಕೆಂಪಾದವೋ.
ಬಿಸಿಲುಂಡ ನೆಲದಾಗ ನದಿಯೊಂದು
ಕೆಂಪಾಗಿ ಕಾಡು ಮೇಡು ಕೆಂಪಾದವೋ.
ಬರಗಾಲಕ್ಕೆ ಹುಟ್ಟಿದ ಕೂಸು
ಎದೆಯ ರಕುತ ಕುಡಿದು
ತೊಟ್ಟಿಲೊಳಗಿನ ಹಾಸಿಗೆ ಕೆಂಪಾದವೋ.
ದಿಲ್ಲಿ ಗಡಿಗಳಲ್ಲಿ
ಕೊರೆಯುವ ಚಳಿ ಬಿಸಿಯಾಗಿ
ರೈತರ ಹೊಲಗದ್ದೆಗಳು ಕೆಂಪಾದವೋ.
ಬಿಳಿ ಹಾಳೆಯ ಮೇಲೆ ಕವಿಯ
ಅಕ್ಷರದ ಸಾಲುಗಳು ಹಸಿದವರ
ದನಿ ಕೇಳಿ ಕೆಂಪಾದವೋ
ಎಲ್ಲ ಕೆಂಪಾದವೋ………
**********************************