ಪಾರಿಜಾತ ಗಿಡ
ಲಲಿತ ಪ್ರಬಂಧ ಪಾರಿಜಾತ ಗಿಡ ವಿದ್ಯಾ ಶ್ರೀ ಎಸ್ ಅಡೂರ್. ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ ಒಂದು ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ. ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು […]
ನಿನಗಿಂತ ದೊಡ್ಡವರು…..
ಕವಿತೆ ನಿನಗಿಂತ ದೊಡ್ಡವರು….. ಯಮುನಾ.ಕಂಬಾರ ತುಟಿ ಬಿಚ್ಚದೇ ಬಾಯ್ಮುಚ್ಚಿಕೊಂಡುತೆಪ್ಪಗೆ ಮೌನದಲಿ,ಒಮ್ಮೆ ದುಃಖ ಒಮ್ಮೆ ಸುಖ ಅಟ್ಟಿಸಿಕೊಂಡುಕಾಲ ಹಾಕುವ ಕಾರಣಿಕಳೇ….!!. ಕ್ರೌರ್ಯ , ಕೋಪ ತಾಪಗಳಗರ್ಭದಲ್ಲಿ ಅಡಗಿ ಕುದಿಗೊಂಡರೂಮತ್ತೆ ಮತ್ತೆ ಅದೇ ಮೌನಅದೇ ಶಾಂತಿ ,ಅದೇ ಆ ಸುರಿಯುವ ಕಾಂತಿ !! ನಿನ್ನ ಸಹನೆಗೆ ತಾಳ್ಮೆಗೆಇಲ್ಲ – ಸಾಟಿಇತಿಹಾಸದ ಕತ್ತಲಲ್ಲಿ – ಕರಗಿವೆಸಾವಿರ ಸಾವಿರ ಮರೆಯದ ಮಾಣಿಕ್ಯದ ದೀಪ್ತಿ !! ಆಗಲೂ ಈಗಲೂ ಧುಮ್ಮಿಕ್ಕಿ ಪುಟಿಯುತಿವೆ – ಸಾಯದ ಅಮರ ಅಕ್ಷರಗಳು:” ದುರಾಸೆ ದುಃಖಕ್ಕೆ ಮೂಲಅಹಿಂಸೆ ಬದುಕಿನಸೂತ್ರಕಾಯಕವೇ ಕೈಲಾಸ […]
ಜಿ. ಪಿ. ರಾಜರತ್ನಂ ಜನ್ಮದಿನ
ಇಂದು ಕನ್ನಡದ ಧೀಮಂತ ಸಾಹಿತಿ ಪ್ರೊ.ಜಿ.ಪಿ.ರಾಜರತ್ನಂ ಅವರು ಜನಿಸಿದ ದಿನ ಬಾಲ್ಯ ‘ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ “ನಾಗಪಟ್ಟಣ”ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು […]
ರಾಮಕೃಷ್ಣ ಗುಂದಿ ಆತ್ಮಕತೆ–02 ಗುಂದಿ ಹಿತ್ತಲದಲ್ಲಿ ಕಡ್ಲೆ ಬೇಸಾಯ ಗಂಗಾವಳಿ ನದಿಯ ದಕ್ಷಿಣ ತೀರದಿಂದ ನದಿಯ ಶಾಖೆಯಾಗಿ ಚಿಕ್ಕ ಹಳ್ಳವೊಂದು ಅಗ್ಗರಗೋಣ ಗ್ರಾಮದ ಅಂಚಿನಿಂದ ಹೆಗ್ರೆ ಗ್ರಾಮದವರೆಗೆ ಹರಿದು ಅಗ್ರಗೋಣ ಮತ್ತು ನಾಡುಮಾಸ್ಕೇರಿ ಗ್ರಾಮಗಳ ನಡುವೆ ಗಡಿರೇಖೆಯೊಂದನ್ನು ನಿರ್ಮಿಸಿದೆ. ಹಳ್ಳದ ಇಕ್ಕೆಲದಲ್ಲೂ ವಿಸ್ತಾರವಾದ ಗದ್ದೆಬಯಲು ಹನೇಹಳ್ಳಿಯ ಅಂಚಿನವರೆಗೂ ವ್ಯಾಪಿಸಿದೆ. ಹಳ್ಳದ ಪೂರ್ವ ದಂಡೆಯ ಅಗ್ಗರಗೋಣ ಗ್ರಾಮ ವ್ಯಾಪ್ತಿಯ ಬಯಲಲ್ಲಿ ಒಂದು ಪುಟ್ಟ ದಿನ್ನೆಯಿದೆ. ಹಳ್ಳಕ್ಕೆ ಹತ್ತಿರವಾಗಿ ಎರಡು-ಮೂರು ಗುಂಟೆಯ ಅಳತೆಯಲ್ಲಿ ವಿಸ್ತರಿಸಿಕೊಂಡಿರುವ ಈ ಗುಂದವನ್ನು ಜನರು ವಾಡಿಕೆಯಲ್ಲಿ […]
ಬೆಳಗಬೇಕಾದರೆ..!
ಕವಿತೆ ಬೆಳಗಬೇಕಾದರೆ..! ಸುಮನಸ್ವಿನಿ. ಎಂ ನೋವ ನುಂಗಲು ಹಿಂಜರಿಯದೇಘರ್ಷಿಸಿಕೊಳ್ಳಬೇಕುಬೆಳಕ ಹೊತ್ತಿಸಬೇಕಾದರೆ… ಸುಟ್ಟುಕೊಳ್ಳುವ ಅಂಜಿಕೆಯಿಲ್ಲದೇನಿರ್ಭಯ ಗೀರಿಕೊಳ್ಳಬೇಕುಬೆಳಗಬೇಕಾದರೆ… ಕರಗಿಹೋಗಲು ಕಳವಳಗೊಳದೇಪ್ರಾಂಜಲ ದಹಿಸಬೇಕುಪ್ರಜ್ವಲಿಸಬೇಕಾದರೆ… ಬೂದಿಯಾಗಲು ಹೆದರದೇಹೊತ್ತಿ ಉರಿಯಬೇಕುಬೆಳಕಾಗಬೇಕಾದರೆ… ಮಾಯವಾಗೋ ಭಯವ ಮೀರಿನಿರಂತರ ಧಗಧಗಿಸಬೇಕುಶಾಶ್ವತ ಮಿನಗುತಿರಬೇಕಾದರೆ… ******************************************
ಅಂಕಣ ಬರಹ ರಂಗ ರಂಗೋಲಿ -೨ ‘ಸಿರಿ’ ತುಂಬಿದ ಬಾಲ್ಯ ಒಂದು ಭಾವನಾ ಲೋಕದ ಹೊಸಿಲಿನ ಒಳಗೆ ರಂಗು ರಂಗಾದ ಕಲ್ಪನಾಲೋಕ ಶೃಂಗಾರಗೊಂಡು ಕೂತಿತ್ತು. ಅಲ್ಲಿ ನಿತ್ಯ ನರ್ತನ ವಿಲಾಸ. ನನ್ನಲೊಳಗೆ ” ಸಿರಿ” ಎಂಬ ಪ್ರೀತಿ ಅರಳಿದ ಪ್ರಕ್ರಿಯೆಗೆ ಮೂಲ ಬಿತ್ತನೆಯಿದು. ಹಾಂ..ಸಿರಿ!. ಹೌದು..ಸ್ತ್ರೀ ಕುಲಕ್ಕೆ ಪ್ರತಿಭಟನೆಯ ದಾರಿಯನ್ನು ತೋರಿಸಿಕೊಟ್ಟ, ಪುರುಷ ಪ್ರಧಾನ ಸಮಾಜದ ವಿರುದ್ಧ ಬಂಡಾಯ ಸಾರಿದ ಹಳ್ಳಿಯ ಹೆಣ್ಣಿನ ಆತ್ಮವಿಶ್ವಾಸದ ಪ್ರತೀಕ. ಸ್ತ್ರೀತ್ವವನ್ನು ಅರಿವಿನ ನೆಲೆಯಲ್ಲಿ ಗ್ರಹಿಸಬೇಕಾದ ಒತ್ತಾಯವನ್ನು ತಿಳಿಸಿದ ಇಲ್ಲಿನ ಮಣ್ಣಿನಲ್ಲಿ […]