Day: December 1, 2020

ಬಸ್ ಪಯಣ

ಬಸ್ ಪಯಣ ಬಸ್ ಪಯಣ ಎಂ. ಆರ್. ಅನಸೂಯ ನನಗೆ ಬಸ್ ಪ್ರಯಣ ಅಂದ್ರೆ ಇಷ್ಟವೇ ಆಗುತ್ತದೆ . ಅಲ್ಲಿ ನಮಗೆದುರಾಗುವ ವೈವಿಧ್ಯಮಯ ಪ್ರಸಂಗಗಳು ಬಹು ಸ್ವಾರಸ್ಯಕರವಾಗಿದ್ದು ಒಂಥರಾ ನಮ್ಮ ಲೋಕಾನುಭವ  ಹೆಚ್ಚಿಸುತ್ತವೆ.ಕಾರಣ ವಿವಿಧ ರೀತಿಯ ಜನರೊಡನಾಟ !  ಬಹುಶಃ ವೈವಿಧ್ಯತೆ ಕೊಡುವಷ್ಟು ಅನುಭವವನ್ನು ಬೇರೆ ಯಾವುದೂ ಕೊಡಲಾರದು. ಆದ್ದರಿಂದಲೆ ನಾವು ಅಂದ್ರೆ ಭಾರತೀಯರಿಗೆ ಸಿಗುವಷ್ಟು ಅನುಭವ ಇನ್ಯಾವ ದೇಶದ ಪ್ರಜೆಗಳಿಗೆ ಸಿಕ್ಕಲಾರದು. ಬಸ್ ಪಯಣವೆಂದರೆ ಒಂಥರ ಜನ ಧ್ವನಿಯೇ ಸರಿ. ಜನರ ನಾಡಿ ಮಿಡಿತ ! […]

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ನಾ ನಿನ್ನ ಎಷ್ಟು ಪ್ರೇಮಿಸುತ್ತಿರುವೆನೆಂದು ನನಗೆ ಸರಿ ಗೊತ್ತಿಲ್ಲನೀ ಇಲ್ಲದೇ ನಾ ಬದುಕಿರಲಾರೆನೆಂದಿಗೂ ಅನ್ನೋದು ಸುಳ್ಳಲ್ಲ ನಿನ್ನನ್ನು ಬೇರೆಯವರು ಒಲಿಸಿಯಾರೆಂದು ಸದಾ ಭಯವಿದೆ ಈ ಹೃದಯಕೆಬಹು ಕಷ್ಟದಿ ಮತ್ತೆ ಮತ್ತೆ ಸಮಾಧಾನಿಸುವೆ ಹಾಗೇನು ಆಗಲಿಕ್ಕಿಲ್ಲ ಏನೇನು ಕಾಳಜಿ ಮಾಡಿ ಸಂಭಾಳಿಸಿಕೊಳ್ಳುವೆ ಅಂತ ನಿನಗೇನು ಗೊತ್ತುಈ ಮನಸ್ಸು ತಕರಾರಿಲ್ಲದೆ ಒಳಗೆ ನೊಯ್ಯುತ್ತಿದೆ ನಿನಗೆ ಅರಿವಿಲ್ಲ ಬೇಡವೆ ಮುಗಿಸು ಈ ಕಣ್ಣುಮುಚ್ಚಾಲೆಯಾಟ ಕಳೆಯಲಿ ಮಧು ಬಟ್ಟಲಲ್ಲಿಎಷ್ಟು ಸಲ ಮನದ ಮಾತು ಹೇಳಿದರೂ ನಿನ್ನ ಮನದ ಹಾಡೇ […]

ಅರಿವೇ ಗುರು

ಕವಿತೆ ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. **************************************

ಅಂಕಣ ಬರಹ ಗಾನ್ ವಿತ್ ದ ವಿಂಡ್ ಗಾನ್ ವಿತ್ ದ ವಿಂಡ್ಮೂಲ ಇಂಗ್ಲಿಷ್ : ಮಾರ್ಗರೆಟ್ ಮಿಶೆಲ್ ಕನ್ನಡಕ್ಕೆ : ಶ್ಯಾಮಲಾ ಮಾಧವಪ್ರ : ಅಂಕಿತ ಪುಸ್ತಕಪ್ರಕಟನೆಯ ವರ್ಷ : ೨೦೦೪ : ಎಂದಿನಂತೆ ಶ್ಯಾಮಲಾ ಮಾಧವ ತಮ್ಮ ಅನುವಾದಕ್ಕಾಗಿ ಒಂದು ಕ್ಲಾಸಿಕ್  ಕಾದಂಬರಿಯನ್ನು ಎತ್ತಿಕೊಂಡಿದ್ದಾರೆ. ೧೮೬೧ರಲ್ಲಿ ಅಮೆರಿಕಾದಲ್ಲಿ ನಡೆದ ಅಂತರ್ಯುದ್ಧದ ಸಂದರ್ಭದ ಒಂದು ಕಥೆ ಇಲ್ಲಿದೆ. ಆದ್ದರಿಂದ ಕಥೆಯ ಜತೆಜತೆಗೇ ಯುದ್ಧದ ವರ್ಣನೆಯೂ, ಅದರಿಂದಾಗುವ ಅನಾಹುತಗಳ ವರ್ಣನೆಯೂ ಸಾಗುತ್ತದೆ. ದಕ್ಷಿಣ ಅಮೇರಿಕಾದ ಜಾರ್ಜಿಯಾದ ಟಾರಾ […]

Back To Top