Month: July 2020

ಗಝಲ್ ಜುಗಲ್

ಗಝಲ್ ಜುಗಲ್ ಮೊಟ್ಟಮೊದಲಬಾರಿಗೆ ಗಝಲ್ ಕವಿಗಳವಿವರಣೆಗಳೊಂದಿಗೆ ಶ್ರೀದೇವಿ ಕೆರೆಮನೆ ಗಿರೀಶ್ ಜಕಾಪುರೆ ನನ್ನ ದನಿಗೆ ನಿನ್ನ ದನಿಯು (ಶ್ರೀದೇವಿ ಕೆರೆಮನೆ) ಜಗದ ಜೀವನಾಡಿಯಲ್ಲಿ ಅಮೃತದ ಕಳಶ ಜೊತೆಯಾದಂತೆ ನನ್ನ ದನಿಗೆ ನಿನ್ನ ದನಿಯುಜೀವ ಕರುಣೆಯ ಪೊರೆವ ಜಗನ್ಮಾತೆಯ ಸುದೀರ್ಘ ಉಸಿರಂತೆ ನನ್ನ ದನಿಗೆ ನಿನ್ನ ದನಿಯು ಸೆರಗಿನ ಮರೆಯಿಂದ ಇಣುಕಿದ ಕೂಸಿನ ಹವಳದ ತುಟಿಯ ಕಟವಾಯಿಯಲ್ಲಿದೆ ನೊರೆವಾಲುಹಾಲುಗಲ್ಲದ ಮುಗ್ಧ ಮುಖದ ಮಗುವಿನ ಕಿಲಕಿಲ ನಗುವಂತೆ ನನ್ನ ದನಿಗೆ ನಿನ್ನ ದನಿಯು ಕನಸುಗಳೇ ಇರದ ಬರಡು ಎದೆಯೊಳಗೆ ಮೊಳೆತಿದೆ […]

ನಿವೇದನೆ…

ಕವಿತೆ ಹರೀಶ ಕೋಳಗುಂದ ಹೌದು…ನನಗೆ ಗೊತ್ತುನೀ ನನ್ನ ಪಕ್ಕದಲ್ಲೇ ಕುಳಿತಿರುವೆಸುಳ್ಳು ಹೇಳುವುದಿಲ್ಲ ನಾನುಈ ಕಡುಗತ್ತಲಲ್ಲೂ ನಿನ್ನ ಮುಖತಿಳಿನೀರ ಬಾವಿಯಲ್ಲಿ ಬಿದ್ದಚಂದಿರನ ಬಿಂಬವೆಂದು ಎಡತಾಕುತ್ತಿದೆ ನನ್ನೆದೆಗೆನಿನ್ನುಸಿರ ಬಿಸಿನಿನ್ನೆದೆಬಡಿತದ ಸದ್ದುನೀ ತೊಟ್ಟ ಕೈ ಬಳೆಯ ಘಲುಗುಮುಡಿದ ಮಲ್ಲಿಗೆಯ ಘಮಲು ಹೊತ್ತು ಉರುಳುತ್ತಿದೆಅರಿವೇ ಇಲ್ಲಏನೋ ಹೇಳುವ ಬಯಕೆತುಟಿ ಎರಡಾಗಿಸುವ ಧೈರ್ಯ ಸಾಲದುಕೈ ನಡುಗುತ್ತಿವೆಮೈ ಬೆವರುತ್ತಿದೆಎದೆಯೊಳಗೆ ಅಸ್ಪಷ್ಟ ಆತಂಕ ನೆನಪಿರಬಹುದು ನಿನಗೆನಾ ನಿನ್ನ ಮೊದಮೊದಲು ಕಂಡಾಗನೀ ನನ್ನ ಕಂಡೂ ಕಾಣದಂತೆನೋಡಿಯೂ ನೋಡದಂತೆಕಣ್ಣು ಹಾಯಸಿದಷ್ಟೂದೂರ ಕಾಣುವ ಮರೀಚಿಕೆಯಂತೆಕಣ್ಣಿಗೆ ಬಿದ್ದುಕೈಗೆ ಸಿಗದ ಮಾಯಾಜಿಂಕೆಯಂತೆಮರೆಯಾದದ್ದು ಮತ್ತೆಲ್ಲೋ ನಿನ್ನ […]

ವಿಚಾರವೇನೆಂದರೆ…

ಅನುವಾದಿತ ಕವಿತೆ ಮೂಲ ಇಂಗ್ಲೀಷ್: ಹೆಲೆನ್ ಬ್ಯಾಸ್ ಕನ್ನಡಕ್ಕೆ: ಅಶ್ವಥ್ ಬದುಕ ಪ್ರೀತಿಸುವುದು,ಹಂಬಲವಿಲ್ಲವೆನಿಸಿದಾಗಲೂ,ಆಪ್ತವಿದ್ದೆಲ್ಲವೂ ಉರಿದು ಬೂದಿಯಾಗಿಕೈಗಂಟುವ ಧೂಳಿನಂತಾದರೂಆ ಬೂದಿಯ ಕೆಸರುಗಂಟಲಿಗಿಳಿದು ಬಿಗಿದಾಗಲೂಬದುಕ ಪ್ರೀತಿಸುವುದು. ಕೊರಗು ನಿನ್ನ ಬಳಿಯೇ ಕುಳಿತಿರುವಾಗಲೂಅದರ ಬೇಸಿಗೆಯುರಿ, ಗಾಳಿಯನು ನೀರಾಗಿಸಿ,ಒಲೆಮೇಲೆ ಕುದಿವಂತೆ ಬೊಬ್ಬುಳಿ ತರಿಸಿನಿನ್ನುಸಿರಿಗೆ ತಾಕಿಸಿದಾಗಲೂ,ಅದೇ ಕೊರಗು ನಿನ್ನದೇ ಮಾಂಸಖಂಡಗಳಂತೆಭಾರವೆನಿಸಿ, ಉಲ್ಪಣಗೊಂಡು,ಕೊರಗಿನದೇ ಸ್ಥೂಲಕಾಯವಾದಾಗಲೂದೇಹವಿದೆಲ್ಲವನು ಹೇಗಾದರೂ ಸಹಿಸೀತು? ಅದುಕೊಳ್ಳುತ್ತಲೇಮುದ್ದಾದ ನಗುವಿರದ, ನೀಲಗಣ್ಣುಗಳಿರದಆಡಂಬರವಿರದ ಸಾಮಾನ್ಯ ಮುಖದಂತೆಬದುಕನೊಮ್ಮೆ ಅಂಗೈಗಳ ನಡುವೆ ಹಿಡಿದುಹೇಳಿಬಿಡು ಖಚಿತ, ನಾನಿನ್ನ ಸ್ವಾಗತಿಸುತ್ತೇನೆನಾನಿನ್ನ ಪ್ರೀತಿಸುತ್ತೇನೆ, ಮತ್ತೊಮ್ಮೆ ಎಂದು. **************

ಹೆಣ್ಣುಮಕ್ಕಳ ಓದು

ಲಹರಿ ವಸುಂಧರಾ ಕದಲೂರು ಒಂದು ತಮಾಷೆಯ ಲಹರಿ…     ಹೆಣ್ಣು ಮಕ್ಕಳು ಓದು ಬರಹ ಕಲಿಯೋದು ಏಕೆ? ಅವರು ಯಾವ ಸಾಮ್ರಾಜ್ಯ ಕಟ್ಟಬೇಕು? ಯಾರನ್ನ ಉದ್ಧಾರ ಮಾಡಬೇಕು? ಇವೇ ಇಂತಹವೇ ನೂರು ಪ್ರಶ್ನೆಗಳು ಹುಟ್ಟಿಕೊಳ್ತವೆ.    ಇಂಥ ಪ್ರಶ್ನೆಗಳು ಈಗ ಹೆಚ್ಚು ಇರಲಾರದು ಬಿಡಿ. ಆದರೂ ಲೇಖನಿ ಹಿಡಿದರೂ, ಕೀಲಿಮಣೆ ಕುಟ್ಟಿದರೂ ಮುಸುರೆ ತಿಕ್ಕೋದು, ತೊಟ್ಟಿಲು ತೂಗೋದು ನಿಮಗೆ ತಪ್ಪಿದ್ದಲ್ಲ ಎಂದು ಕೊಂಕು ರಾಗ ಹಾಡುವವರಿಗೇನೂ ಕಮ್ಮಿಯಿಲ್ಲ.    ಅಲ್ಲಾ ಇವರೇ.., ನಮ್ಮ ಮನೆ ಪಾತ್ರೆ ಪರಡೆಗಳನ್ನು […]

ಬದುಕು ಕಠೋರ

ಅನುಭವ ನಾಗರಾಜ ಮಸೂತಿ ಇವತ್ತು ಬದುಕು ಬಹಳ ಕಠೋರ ಅನಿಸ್ತು. ನಾವೆಲ್ಲ ಮನೆ ಮುಂದಿನ ಗೇಟ್ ಕೂಡ ದಾಟದ ಹಾಗೆ ಮನೆಯಲ್ಲಿಯೇ ಕೂತಿವಿ. ಹಳ್ಳಿ ಹೆಣ್ಣು ಮಗಳು ಮೊಸರು ಮಾರ್ತಾ ಮನೆ ಬಾಗ್ಲಿಗೆ ಬಂದ್ಲು. ನಮವ್ವಗ ಒಂದು ಒಳ್ಳೆ ಅಭ್ಯಾಸ ಏನಂದ್ರ ಯಾರೇ ಬರ್ಲಿ ಕರದ ಕುಂಡರ್ಸಿ ನೀರ ಕೊಟ್ಟ ಮಾತಾಡ್ಸುದು. ವ್ಯಾಪಾರ ಎರಡನೆ ಮಾತು. ಇದು ನಮ್ಮ ಮನೆ ಮಂದಿಗೆ ಹಿರೆರಿಂದ ಬಂದ ಬಳುವಳಿ. ಇರ್ಲಿ ಹಾಂ ಮೊಸರ ಮಾರಕ ಬಂದಾಕಿ ಮಸರು ಕೊಟ್ಲ ರೊಕ್ಕಾನು […]

ನಾನು ನಾನೇ…..

ಲಹರಿ ರಾಧಿಕಾ ಕಾಮತ್ ಜೀವನ ಒಂದು ಚಲನಚಿತ್ರ… ನಮ್ಮದು ಅದರಲ್ಲಿ ಒಂದೊಂದು ಪಾತ್ರ… ಮೇಲಿರುವ ನಿರ್ದೇಶಕ ಹಿಡಿದಿರುವ ಸೂತ್ರ… ಕೊನೆಗೆ ಎಲ್ಲರೂ ಮರಳಬೇಕು ಅವನ ಹತ್ರ… ಈ ಜೀವನ ಎಂಬ ನಾಟಕ/ ಚಲನಚಿತ್ರದಲ್ಲಿ ನಾವು ಹುಟ್ಟಿನಿಂದ  ಹಲವಾರು ಪಾತ್ರಗಳನ್ನು ನಿಭಾಯಿಸುತ್ತಲೇ ಇರುತ್ತೇವೆ. ಅದು ನಮ್ಮ ಇಷ್ಟದ್ದಾಗಲಿ ಇಷ್ಟವಿಲ್ಲದ್ದಾಗಲಿ ನಾವು ನಿರ್ವಹಿಸಲೇ ಬೇಕು. ನಾನು ಹುಟ್ಟಿದಾಗ ಒಂದೇ ಬಾರಿಗೆ ಮಗಳು ,ಮೊಮ್ಮಗಳು ತಂಗಿ ಎಂಬ ಮೂರು ಪಾತ್ರಗಳನ್ನು ಒಟ್ಟಿಗೆ ನಿಭಾಯಿಸಿದ್ದೆ. ಮುಂದೆ ನಾಲ್ಕೈದು ವರ್ಷ ಕಳೆದಾಗ ಅಮ್ಮನ ಮಮತೆ […]

ಮೂಗುತಿ ಸುಂದರಿ

ಅನುವಾದಿತ ಕವಿತೆ ಕನ್ನಡ ಮೂಲ:ಸ್ಮಿತಾ ಅಮೃತರಾಜ್.ಸಂಪಾಜೆ. ಇಂಗ್ಲೀಷಿಗೆ: ಸಮತಾ ಆರ್ ಮೂಗುತಿ ಎಂದರೆಮೂಗು ಮುರಿಯುತ್ತಿದ್ದವಳುಪರಮಾಶ್ಚರ್ಯವೆಂಬಂತೆ ಇತ್ತೀಚೆಗೆಮೂಗು ಚುಚ್ಚಿಸಿಕೊಂಡಳು.ಕಣ್ಣರಳಿಸಿದ್ದಕ್ಕೆ, ಬದುಕು ಶುರುವಾಗುವುದೇನಡು ಹರಯದಲ್ಲಿ ಕಣೇ ಅಂತಹಗುರವಾಗಿ ನಕ್ಕಿದ್ದಳು. ಮೊನ್ನೆ ಮೊನ್ನೆ ನಡುರಾತ್ರಿಯಲ್ಲಿಫೋನಾಯಿಸಿ ಮೂಗು ವಿಪರೀತ ನೋವುತಡೆಯೋಕಾಗಲ್ವೇ ಅಂತ ಕಣ್ಣೀರಾಗಿದ್ದಕ್ಕೆ.. ಯಾಕೆ ತ್ರಾಸ ತೆಗೆದುಬಿಡು ಎಂದಿದ್ದೆಕಲೆ ಉಳಿಯಬಾರದಲ್ಲವಲ್ಲ ಕನಲಿದ್ದಳು. ಮೊನ್ನೆ ಬಸ್ಸಿನಲ್ಲಿ ಸಿಕ್ಕವಳುಮೂಗುತಿಯಲ್ಲಿ ಚೆಂದಕ್ಕೆ ಕಂಡಿದ್ದಳುನಾನೂ ಚುಚ್ಚಿಸಿಕೊಳ್ಳಲಾ…?ಮೂಗು ಸವರಿಕೊಂಡೆ. ಎದೆಯೊಳಗೊಂದು ಚುಚ್ಚುವ ನೋವಿದ್ದರೆಮೂಗು ಚುಚ್ಚಿಸಿಕೋ…ಎಂದಿನಂತೆ ನಕ್ಕಳು.ಈಗ ಮೂಗಿನ ಕಡೆಗೇ ನನ್ನ ಗಮನಸ್ವಗತಕ್ಕೆಂಬಂತೆ ನುಡಿದಳು. Nosepin of a beauty. “A […]

ನಡುಗಡ್ಡೆಯ ಹುಡುಗಿ

ಕವಿತೆ ಎಂ.ಜಿ .ತಿಲೋತ್ತಮೆ ನಾನು ಹರವಿನ ಜಲವ ಈಜಿ,ದಾಟಿಆ ದಡವ ಸೇರುವ ಬಯಕೆಕೋಟೆಯೊಳಗೊಂದು ಕೋಟೆಕಟ್ಟಿಕೊಂಡು ಕರೆದರೂ ನೀನು ಕೇಳುತ್ತಿಲ್ಲಸೇರಲಾಗುತ್ತಿಲ್ಲ… ದಿನಕ್ಕೆ ದೃಷ್ಟಿ ತಗುಲುವಅನಂತ ಕಣ್ಣು ,ಹುಚ್ಚು ಮನಸ್ಸುಗಳಲ್ಲಿನನ್ನದು ಒಂದುಅವಳ ಮೈಸಿರಿ,ಸೊಬುಗು ವರ್ಣನೆಗೆಸುತ್ತ ಹರಿಯುವ ಉದಕಕ್ಕೂ ಎಟಕದು ಈ ದಡಕ್ಕೂ ಆ ದಡಕ್ಕೂ ಅಂತರಅಳತೆಯಮಾಪನದಲ್ಲಿ ಅಗಮ್ಯಈ ಮನಕ್ಕೂ ಆ ಮನಕ್ಕೂ ಅಂತರವಿಲ್ಲಹಾಲಿನೊಳಗೆ ಸೇರಿಕೊಂಡ ಜೇನಂತೆಅಷ್ಟೇ ಹತ್ತಿರ ಇರಬಹುದು ಯಾವ ದಾರಿ ಹಿಡಿದು ಬರಲಿದಿನ ನಿತ್ಯ ಅರಳುವ ಪ್ರೀತಿಗೆಕಟ್ಟೆ ಕಟ್ಟಿದ್ದರೆ ಜೀವ ಹೇಗೆ ಉಳಿಯುವುದು ನೀನು ನಾನಾಗಿ ನಾನು ನೀನೇ […]

ಒಂದು ಖಾಲಿ ಜಾಗ

ಅನುವಾದಿತ ಕವಿತೆ ಕನ್ನಡ ಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ An empty space Each and every one might be owed an empty space.at the backyard? or frontyard?or else a room, inside the homeor may be at some unseen placestotally as being personal. Everyone atleast once a whiledefinitely think about this empty spacewhat would be sown,let it […]

ಅಪಾಯ ಎದುರಿಸುವ ಬಗೆ ಹೀಗೆ . ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕಥೆ ರಷ್ಯಾದ ಖ್ಯಾತ ಸಾಹಿತಿ ಲಿಯೋ ಟಾಲ್ ಸ್ಟಾಯ್ ಬರೆದದ್ದು. ಒಮ್ಮೆ ಇಬ್ಬರು ಗೆಳೆಯರು ಕಾಡಿನಲ್ಲಿ ಹೋಗುತ್ತಿದ್ದರು. ಕಾಡು ಪ್ರಾಣಿಗಳು ಪೊದೆಗಳ ಹಿಂದೆ ಅಡಗಿರಬಹುದೆಂಬ  ಭಯದಿಂದ ಇಬ್ಬರೂ ಕೈ ಕೈ ಹಿಡಿದು ಸಾಗುತ್ತಿದ್ದರು.  ಕಾಡಿನ ದಾರಿಯನು ಗೆಲುವಾಗಿ ಸಾಗಲು ಅತಿ ಪ್ರೀತಿಯಿಂದ ಅದು ಇದು ಹರಟುತ್ತ ಸಾಗುತ್ತಿದ್ದರು. ಒಮ್ಮೆಲೇ ಕರಡಿ ಕಾಣಿಸಿಕೊಂಡಿತು.ಕರಡಿ ಇನ್ನೂ ದೂರದಲ್ಲಿತ್ತು. ಹಾಗಾಗಿ ಹೇಗಾದರೂ ಅದರಿಂದ ಬಚಾವಾಗಬೇಕೆಂದು ಉಪಾಯ ಮಾಡಲು ಅವರಿಬ್ಬರಿಗೂ ಕೆಲ […]

Back To Top