ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. …..
ಕಥೆ ನಂದಿನಿ ವಿಶ್ವನಾಥ ಹೆದ್ದುರ್ಗ. “ನಾಡಿದ್ದು ಒಂದು ಇಂಟರವ್ಯೂ ಮಾಡೋಕಿದೆ.ಅವರ ಫೋನ್ ನಂಬರ್ ಜೊತೆಗೆ ಉಳಿದ ಡೀಟೈಲ್ಸ್ ಕಳಿಸ್ತಿನಿ.ಪ್ಲಾಂಟೇಷನ್ ನಲ್ಲಿ ಅವರು ಮಾಡಿರೋ ಸಾಧನೆಯ ಸಣ್ಣ ವಿವರವನ್ನೂ ಕಳಿಸ್ತೀನಿ.ಡೇಟ್ ನೆನಪಿರ್ಲಿ” ಅಂತ ಒಂದೇ ಉಸುರಿಗೆ ಹೇಳಬೇಕಾದ್ದನ್ನೆಲ್ಲಾ ಹೇಳಿ ಮುಗಿಸಿದ. ಅವನ ಸಮಯ ಅವನಿಗೆ ಬಹಳ ಮಹತ್ವದಂತೆ.ಹಾಗಂತ ಪದೇಪದೇ ಹೇಳ್ತಾನೆ ಇರ್ತಾನೆ. ಅದೂ ಇತ್ತೀಚಿಗೆ. ಅವನ ಜೊತೆಗೆ ಮಾತಾಡುವಾಗ ಸ್ವರ ಆದಷ್ಟೂ ಸಹಜವಾಗಿರೋದಿಕ್ಕೆ ಪ್ರಯತ್ನಿಸ್ತೀನಿ. ಅವನಿಗೆ ಕಾಲ್ ಮಾಡಿ ಆ ಕಡೆಯಿಂದ ಬರುವ ಮೊದಲ ಹಲೋಗೆ ಎದೆ ಮೂರು […]
ಬೊಗಸೆಯೊಡ್ಡುವ
ಕವಿತೆ ಗೋಪಾಲ ತ್ರಾಸಿ ಅಹೋರಾತ್ರಿಬಾನು ಭುವಿಯ ನಡುವೆ ಚಲನಶೀಲ ಶಿಖರದಂದದಿ ಉದ್ದಾನುದ್ದಕೆರಾಶಿರಾಶಿ ಮೋಡಗಳ ಜಂಬೂಸವಾರಿ,ಕಾರಿರುಳ ದಿಬ್ಬಣಕೆ,ಅಲ್ಲೊಂದು ಇಲ್ಲೊಂದುಅಂಜುತ್ತಂಜುತ್ತ ಇಣುಕುವಮಿಣುಕು ನಕ್ಷತ್ರಗಳು, ಸಾಕ್ಷಿ. ಮೈಭಾರವಿಳಿಸಿಕೊಳ್ಳಲೇನೊ, ತಾನೇತಾನು ಮೈತುಂಬ ಕನ್ನಕೊರೆದುನಸುಕಿನಿಂದಲೆ, ಧಸಧಸ ಸುರಿದುಕೊಂಡಮೋಡ;ರ್ರೊಯ್ಯನೆ ಹೊಯಿಲೆಬ್ಬಿಸುವ ಗಾಳಿಗೌಜು,ಧಡಾಂಧುಡೂಂ, ಛಟ್ ಛಟ್ ಛಟೀಲ್ಗುಡುಗು ಮಿಂಚಿನ ಜುಗಲ್ಬಂಧಿಏರುಮಧ್ಯಾಹ್ನವೇ ಸಂಜೆಗತ್ತಲ ಭ್ರಾಂತಿ;ಹೊರಗೆ. ಆಯಾಸದಿಂದ ಕಿಟಕಿಬಾಗಿಲು ಸಂದಿತೂರಿಸುಯ್ಯನೆ ಒಳಸುಳಿದುಅಪ್ಯಾಯಮಾನವಾಗಿ ಕಚಗುಳಿಯಿಡುವಒದ್ದೆಗಾಳಿಗರಿಗರಿಯಾಗಿ ಮೈಮನಸ್ಸು ಬೆಚ್ಚಗೆಗರಿಗೆದರಬೇಕಿತ್ತು ; ಒಳಗೆ. ಮಾಗಿಯ ಚುಮುಚುಮು ಚಳಿಯ ಜೊತೆ ಅನಾಯಾಸ ಬೆವರಿಳಿಸುವನಿರ್ಜೀವ ಜಡ ಜಂತುಭೂಮ್ಯಾಕಾಶ ಬಾಹು ಚಾಚಿಕೊಳ್ಳುತ್ತಲೆ, ಎಲ್ಲೋ ಕ್ಷಿತಿಜದಂಚಿಂದದಿಢೀರನೆ, ಹೊಸ್ತಿಲಲಿ ಹೊಂಚು ! […]
ಭರವಸೆಯ ಹೊರತು ಬೇರೇನೂ ಉಳಿದಿಲ್ಲ
ಲಹರಿ ವಸುಂಧರಾ ಕದಲೂರು ಖಾಲಿ ಮಂಕರಿ ಕವಚಿ ಹಾಕಿದಂತೆ ಎಲ್ಲಾ ಖಾಲಿಖಾಲಿಯಾದ ಭಾವ. ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುವಂತೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ… ಸದಾ ಗಿಜಿಗಿಜಿ ಗಜಿಬಿಜಿಯಲ್ಲಿ ಸುತ್ತಾಡುತ್ತಿದ್ದ ಮೈ ಮನಸ್ಸೆಲ್ಲಾ ಒಂದು ಕ್ಷಣಕ್ಕೆ ಥಟ್ ಎಂದು ಏಕಾಂತ ವಾಸಕ್ಕೆ ನಿರ್ಜನ ಕಾಡ ಮಧ್ಯದಲ್ಲಿ ವಿರಮಿಸಿದಂತೆ ಭಾಸವಾಯಿತು. ಆಹಾ..!! ಇದೇ ಬೇಕಾಗಿತ್ತು […]
ಗಜಲ್
ಗಜಲ್ ಸುಜಾತಾ ಲಕ್ಮನೆ ಇಲ್ಲಿ ಅಬ್ಬರದ ಬಿನ್ನಾಣ, ಮಾತಿನ ಸಂಚಲಿ ಮೌನ ಗೆಲ್ಲುವುದಿಲ್ಲಸಭ್ಯ ನಡೆಗೆಲ್ಲ ನ್ಯಾಯದ ತಕ್ಕಡಿಯಲಿ ಮಾನ್ಯತೆ ಸಿಗುವುದಿಲ್ಲ ತಾ ನಡೆವ ದಾರಿಯೆಲ್ಲವೂ ರಾಜಪಥವೆಂಬ ವಿಭ್ರಮೆ ತರವೇಯಾವ ಪಯಣವೂ ಕವಲೊಡೆಯದೇ ಗುರಿ ತಲುಪುವುದಿಲ್ಲ ಶಶಿ ಸೂಸುವ ಕಿರಣ ಪ್ರಭೆ ಇಳೆಯ ಕಣಕಣಕೂ ತಂಪನ್ನೆರಚದೇಒಳತೋಟಿಗಳ ತೂರಿದಂತೆ ಎದೆಯ ತೊಳಲಾಟ ತಗ್ಗುವುದಿಲ್ಲ ಅಂತರಂಗ ತೆರೆದಿಟ್ಟ ಭಾವಗಳು ಬೀದಿಗಳಲಿ ಬಿಕರಿಯಾಗುತ್ತವೆಸುಳ್ಳಿನ ಜಗದಲಿ ಸತ್ಯದ ಕದಪಿಗಿಟ್ಟ ಮಸಿ ಬಿಳಿಯಾಗುವುದಿಲ್ಲ ನೇರವಾಗಿ ನಿಂತಷ್ಟೂ ವಕ್ರರೇಖೆಯ ಬಣ್ಣ ಬೆನ್ನಿಗೆ ಮೆತ್ತುವರುಒಳದನಿಯ ಧಿಕ್ಕರಿಸಿ ನಡೆದಂತೆಲ್ಲ ಬಂಧ […]
ಕಬ್ಬಿಗರ ಅಬ್ಬಿ – ಸಂಚಿಕೆ ೩
ಶ್ರಾವಣ ಗೀತ ಮಹಾದೇವ ಕಾನತ್ತಿಲ ಸಂಕ್ರಮಣ! ಹೌದು, ಸಂಕ್ರಮಣ, ಒಂದು ಸ್ಥಿತಿಯಿಂದ ಇನ್ನೊಂದಕ್ಕೆ, ಮತ್ತೆ ಮತ್ತೊಂದಕ್ಕೆ!. ಅಂಗಳದಲ್ಲಿ ಲಂಗದಾವಣಿ ಹಾಕಿ ಕುಣಿದು ಹಾರುತ್ತಿದ್ದ ಹುಡುಗಿ, ಪುಷ್ಪವತಿಯಾಗಿ, ಗಾಂಭೀರ್ಯ ತುಂಬಿ, ಗಜಗಾಮಿನಿಯಾದಾಗ ಸಂಕ್ರಮಣ. ಒಂದು ಮುಂಜಾನೆ, ಕಪ್ಪುಹಸಿರು ಜಡ ಎಲೆಗಳ ಮಾಮರದಲ್ಲಿ, ನಸುಗೆಂಪು ತಳಿರು ಚಿಗುರೊಡೆದಾಗ ಮರಕ್ಕೆ ಸಂಕ್ರಮಣ. ನಲವತ್ತರ ನಸುಕಲ್ಲಿ, ಕಣ್ಣು ಮಬ್ಬಾಗಿ ನೆಟ್ಟ ನೇರ ನೋಟಕ್ಕೆ, ಚಾಳೀಸು ಬಂದಾಗ ಸಂಕ್ರಮಣ. ಅರುವತ್ತಕ್ಕೆ ವೃತ್ತಿಯಿಂದ ನಿವೃತ್ತಿ ಸಂಕ್ರಮಣ. ಹೆಚ್ಚೇನು! ಸೂರ್ಯೋದಯ,ಸೂರ್ಯಾಸ್ತಮಾನ ದಿನ ರಾತ್ರೆಗಳ ಅದಲು ಬದಲು ಸಂಕ್ರಮಣ!. […]
ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು
ಪುಸ್ತಕ ವಿಮರ್ಶೆ ನಾಗರಾಜಹರಪನಹಳ್ಳಿ ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ’ ಕೃತಿ ಹಾಗೂ ಇನ್ನೊಂದು ಸಾರ್ವಜನಿಕರ ಕವಿ ಎಂದೇ ಹೆಸರಾಗಿದ್ದ ಡಾ.ಸಿದ್ದಲಿಂಗಯ್ಯ ಅವರ `ನನ್ನ ಜನಗಳು ಮತ್ತು ಇತರೆ ಕವಿತೆಗಳು’. ಕನ್ನಡದಲ್ಲಿ ಬಹಳ ಮಹತ್ವದ ಎರಡು ಕೃತಿಗಳ ಹೆಸರು ಹೇಳಿ ಅಂತ ಯಾರಾದರೂ ನನ್ನ ಪ್ರಶ್ನಿಸಿದರೆ ನಾನು ಮೊದಲು ಹೇಳುವ ಕೃತಿಗಳ ಹೆಸರು `ಎದೆಗೆ ಬಿದ್ದ ಅಕ್ಷರ’, `ನನ್ನ ಜನಗಳು’ ಕವಿತಾ ಸಂಕಲನ. ಯಾಕೆ […]
ವರುಣರಾಗ
ಕವಿತೆ ಅರುಣ್ ಕೊಪ್ಪ ಹಸಿರು ಚಿಮ್ಮುವ ಬುವಿಯೊಳು….ವರುಣನ ಹನಿಗಳ ಸದ್ದು.!ಕವಿದ ಮೋಡಗಳು…ಎಲ್ಲೋ ಸೇರಿಹೋದವು…ಹನಿಯೊಂದೇ …..ಕೂಗುತ್ತಾಕ್ರಮಿಸುತ್ತಿದೆ….ಭೂ ಗರ್ಭವ!ಆಳ ಆಳವನು ಸೇರುವಾಸೆ….ಎಲ್ಲ ಕಡೆ ನರ್ತನ ಮಾಡುವಾಸೆ…ನಿನ್ನ ಹಾಡಿಗೆ ದ್ವನಿಗೂಡುವಹಿಂಡೇ ಈ ಪ್ರಪಂಚ!!ನೀ ಇದ್ದರೆ ಜೀವವೇ ಸಂಗೀತಮಯ…ಹಸಿರು…,ಹಸೀವು…,ಒಲವು ಎಲ್ಲ…..ನೀ ನರಿಯದಿಹ ಮಿಂಚು!!ಬಿರುಗಾಳಿ ಬೆನ್ನಟ್ಟಿ ಬಂದಾಗಆಗುವ ಭಯ!!ನೀ ಕಾಣದಾದಾಗ ಆಗುವ ವ್ಯಥೆ …..ಬಣ್ಣಿಸಲಾಗದಷ್ಟು ಭಾವಪೂರಿತ…ನೀ ಸುರಿವ ಸದ್ದೆ ಚಂದನೀ ಬೆರೆವ ಸಾಲು ಸಾಲುನೆರೆಗಳೇ ….ಪ್ರಾಕೃತಿಕ ಸೌಂದರ್ಯದ ಅಂತರಾಳ….ಆದರೆ ನಿನ್ನ ಆಳವ ಬಲ್ಲವರಾರಿಲ್ಲ….ಸಾಗರವೇ….??ನೀ ಮಳೆಯ ಮಗು,ನಗು,ಮಡದಿ,ಎಲ್ಲ ವೂ ನೀನೇ. ಎಲ್ಲ ನಿನ್ನ ಮಾಯೇ **************
ಬಂದಿಯಾಗಿಹ ರವಿ
ಕವಿತೆ ನೀ.ಶ್ರೀಶೈಲ ಹುಲ್ಲೂರು ಉದಯಿಸುವ ರವಿಯ ದಿನದೋಟಕೆಅಡ್ಡಿಯಾಗಿದೆ ಕುರಿಮೋಡ ಕರಿಸಾಲುಕುರಿಗಾರ ಪವನನೆದ್ದು ಬರುವನಕಹಿಂಡು ಕುರಿಗಳ ನಡುವೆ ರವಿ ಕಂಗಾಲು ಮಳೆಗಾಲದೀಗಿನೀ ಹಗಲ ಹೊತ್ತುಮೋಡಗಳದು ನಿಲದ ನಿತ್ಯ ರಂಪಾಟಕೆಂಪಾದವನಿಗದೇನೋ ಮಮಕಾರಮೋಡಗಳೊಂದಿಗವನದೂ ತುಂಟಾಟ ಶುಕಪಿಕಗಳ ಇನಿದನಿಯ ಗಾಢಮೌನಮಂಕಾದ ಮನಗಳಲಿ ಗೌಣ ಸೊಗಸುಅವನೆದ್ದರೆ ಬೆಳಗು ಏಳುವರು ಎಲ್ಲಹೊದಿಕೆಯಡಿಯಲೆ ಕಾಣುವರು ಕನಸು ಸುರಿವ ವರುಣನ ನಡುವೆ ನೆಲದ ಗಾನಝರಿ ತೊರೆ ನದಿಗಳಲಿ ರಭಸದೋಟತಡೆವರಾರಿಲ್ಲ ತಿಮಿರದಾಲಿಂಗನವಮೋಡಗಳಡಿಯೆ ರವಿಯ ಮಿಲನ ಕೂಟ ಕಡಲಿನೊಡಲಿಗದೇನೋ ಸಡಗರರವಿಯ ಚುಂಬನವು ಮರೆತ ಗೀತಅಮ್ಮನೊಡಲಲಿ ನದಿಗೆ ಧನ್ಯ ಭಾವಕಡಲ ಕುಡಿಗಳಲದೋ ನವ […]