ಗಝಲ್
ಗಝಲ್ ಶಶಿಕಾಂತೆ ನಿನ್ನನ್ನು ಎದೆಯಾಳದಿಂದ ಅನಂತವಾಗಿ ಪ್ರೀತಿಸುತಿರುವೆನುಆಣೆ ಇಡಲೇ,ನನ್ನೊಲವನ್ನೆಲ್ಲಾ ನಿನಗಾಗೇ ಮುಡಿಪಾಗಿಡುವೆನು. ಜೀವನವೆಂಬುದು ಮೂರು ದಿನದ ಸಂತೆಯಂತೆ ಚೆಲುವೆ.ಆ ಸಂತೆಯಲ್ಲಿ ನೀ ನೀಡಿದೆ ನನಗೆ ಯಾರೂ ನೀಡದ ಸ್ನೇಹವನು. ನೀನೀಗ ಹೃದಯ ವೀಣೆ ಮೀಟಿಯಾಗಿದೆ ದೂರ ಹೋಗದಿರು ಸಖಿ ತಾಳಿಕೊಳ್ಳಲಾರದು ನನ್ನೆದೆ ವಿರಹದ ಬೇಗೆಯನು. ಈ ಬಾಳು ಬರಡು ಬಂಜರುಭೂಮಿ ಆಗಿತ್ತು ನಿನ್ನಾಗಮದ ಮೊದಲು.ಪ್ರೇಮ ಸಿಂಚನದಿಂದ ಮನದಲಿ ನೀ ಮೂಡಿಸಿದೆ ಹೊಸ ಬಯಕೆಗಳನು ನಿನ್ನ ಹೆಸರೇ ನನ್ನುಸಿರಾಗಿದೆ ನಾವು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದಾಗದಿಂದ.ಬಾ ಜಾನು, ನನ್ನೆದೆಗೊರಗಿ ಮಲಗಿ […]
ಉತ್ತರ ಏನು?
ಕವಿತೆ ನಂದಿನಿ ಹೆದ್ದುರ್ಗ ಅವನೆನ್ನ ಅಗತ್ಯವಲ್ಲ.ಅನಿವಾರ್ಯವಲ್ಲಅಭೇದ್ಯವೂ ಅಲ್ಲ.ನಡುದಾರಿಯಲಿ ಸಿಕ್ಕ ದಾರಿಹೋಕ.ನನ್ನ ನೋಡಿ ಸಣ್ಣಗೆ ನಕ್ಕ. ಒಡ್ಡಿಕೊಂಡೆವು ಎಂದುಎರಡುಅಲುಗಿನ ನಡೆಗೆ ನಾವಿಬ್ಬರೂ.? ಅವನೀಗ ನನ್ನೆದೆಯ ರಾಗ.ಬೆವರ ಬೆಳಕು.ಹೆರಳ ಸಿಕ್ಕು.ಕಣ್ಣ ಚುಕ್ಕಿ.ಒಳಗಿನೊಳಗಿನ ಭಕ್ತಿ. ಅವನೆನ್ನ ಬಯಕೆ ಎನ್ನ ಬಳಲಿಕೆಮಳೆಗರೆವ ಮುಗಿಲುಆಳದ ದಿಗಿಲುಅವನೆನ್ನ ಬೇಕುಪದ್ಯದ ಪರಾಕು.ಅವನು…ಸಿಹಿಯಾದ ಕತ್ತಲುಹೂ ಹಿಡಿದ ಹಿತ್ತಿಲು.ಅವನೆನ್ನ ಸುಖ ನನ್ನ ಮೋಹದ ಸಖ ಜಗದ ಆ ಬದಿಯಲಿ ಅವನುಸಮೃದ್ಧ ಏಕಾಂತದಲಿ ನಾನುಹರಿದು ಅಲೆಗಳ ಬಣ್ಣಸುತ್ತೆಲ್ಲಾ ತಿಳಿಗೆಂಪು ಉದ್ಯಾನ.ಹೊರಳಿದರೆ ಹಗಲುಅವನೆದೆಯ ಮಗ್ಗುಲು ನನ್ನಇಂದು ನಾಳೆ ನಿನ್ನೆಗಳೆಲ್ಲಾಕಣ್ಣು ಕೂಡಿದಕ್ಷಣದ ಧ್ಯಾನದಲ್ಲಿ ಅದೇ […]
ನನ್ನೊಳಗಿನ ನೀನು.
ಕವಿತೆ ಶೀಲಾಭಂಡಾರ್ಕರ್ ಹುಡುಕುತ್ತೇನೆ ನಿನ್ನನ್ನು ಲೆಕ್ಕವಿಲ್ಲದನಕ್ಷತ್ರಗಳ ಮಿಣುಕು ಮಿಣುಕುನಾಟ್ಯದೊಳಗೆ.ಆತುರಗಾರ ಚಂದ್ರನೂನಿನ್ನ ನೆನಪಿಸುತ್ತಾನೆ..ಅವಸರದಿ ಅವಿತುಕೊಳ್ಳುವಾಗಮೋಡದ ಸೆರಗಿನೊಳಗೆ ಬೀಸಿ ಬರುವ ತಂಗಾಳಿಯೊಂದುಸದ್ದಿಲ್ಲದೆ ತುಟಿಗಳಿಗೆಮುತ್ತಾಗಿ ಬಿಸಿಯಾಗುವತುಂಟ ಸಮಯದಿನೀನೇ ಇರುವೆ ಆ ಇರುವಿನೊಳಗೆ. ಹಿತ್ತಲ ಮೂಲೆಯ ಗಿಡದಲ್ಲೀಗಅಬ್ಬಲಿಗೆಯ ಶ್ರಾಯ.ಹೂ ಅರಳುವ ಮೃದು ಮಧುರಪರಿಮಳವಾಗಿ ನೀನಿರುವೆ.ಗಂಧ ಸುಗಂಧದೊಳಗೆ. ಸಂಜೆಗಳಲಿ ಕೆಂಪಾಗಿಸೂರ್ಯ ಮುಳುಗುವಾಗಕಾಡುವ ನೆನಪಾಗುವೆ..ಅಂಗಳದಲ್ಲಿ ಆಟವಾಡುವಬುಲ್‍ಬುಲ್ ಜೋಡಿ ಹಕ್ಕಿಗಳಲಲ್ಲೆ ಸಲ್ಲಾಪಗಳ ಸದ್ದು ಗದ್ದಲದೊಳಗೆ. ನಿಶ್ಶಬ್ದವಾಗಿ ಪಿಸುನುಡಿಯೊಂದುಒಳಗಿನಿಂದ ಉಸುರಿದಾಗಯುಗಗಳಿಂದ ಹುಡುಕುತಿದ್ದನನ್ನನ್ನೇ ಎಲ್ಲೆಡೆ.. ಕಂಡುಕೊಂಡೆ.,ನಿನ್ನ ಕಂಡಾಗ ನನ್ನೊಳಗೆ. **************************
ಸ್ವಾತ್ಮಗತ
ಬಂಡಾಯ ಸಾಹಿತ್ಯದ ವಿವಿಧ ಮಜಲುಗಳು..! ಶಿವು ಲಕ್ಕಣ್ಣವರ ಬಂಡಾಯ ಸಾಹಿತ್ಯ ಆಧುನಿಕ ಕನ್ನಡ ಸಾಹಿತ್ಯದ ಈಚಿನ ಹಂತ… ನವೋದಯ, ಪ್ರಗತಿಶೀಲ, ನವ್ಯಗಳ ಅನಂತರದ ಸಾಹಿತ್ಯ ಚಳವಳಿ ಇದು. ಇದನ್ನು ನವೋತ್ತರ ಸಾಹಿತ್ಯವೆಂದೂ ಕರೆಯಲಾಗಿದೆ. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಕೇಳಿಬರುತ್ತಿರುವ, ಎಲ್ಲ ಪ್ರಗತಿಪರ ಹಾಗೂ ದಲಿತ ಬರಹಗಾರರಿಂದ ಸೃಷ್ಟಿಯಾದ ಮತ್ತು ಸೃಷ್ಟಿಗುತ್ತಿರುವ ಸಾಹಿತ್ಯವಿದು. ಬಂಡಾಯ ಸಾಹಿತ್ಯದ ಉಗಮ– 1970 ರ ದಶಕದಲ್ಲಿ ಅನೇಕ ಸಾಮಾಜಿಕ, ರಾಜಕೀಯ ಘಟನೆಗಳು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳನ್ನು ತಂದವು. ಬದುಕಿನಲ್ಲಿ […]
ಮಗುವಾಗಿಸುವ ಸುಂದರ ಹೂ ಮಾಲೆ
ಪುಟ್ಟಲಕ್ಷ್ಮಿ ಕಥೆಗಳುಲೇಖಕರು- ರಘುನಾಥ ಚ ಹಬೆಲೆ-೮೦/-ಪ್ರಕಾಶನ-ಅಂಕಿತ ಪುಸ್ತಕ ಚಿಕ್ಕ ಮಕ್ಕಳ ಲೋಕವೇ ಬೇರೆ ರೀತಿಯದ್ದು. ಕಂಡಿದ್ದೆಲ್ಲವೂ ಅಚ್ಚರಿಯ ವಿಷಯವೇ. ನಾನು ಮೂರನೇ ತರಗತಿಯಲ್ಲಿದ್ದಾಗ ನನ್ನ ಪಕ್ಕದ ಮನೆಯಲ್ಲಿ ದೀಪಾ ಕೊಡ್ಲೆಕೆರೆ ಎನ್ನುವ ನಾಲ್ಕನೆ ತರಗತಿಯ ಗೆಳತಿಯೊಬ್ಬಳಿದ್ದಳು. ಅವಳ ತಂದೆ ಅಲ್ಲೇ ಸಮೀಪದ ಮತ್ತೊಂದು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಅವರು ನಮ್ಮ ಹೆಸರಾಂತ ಕಥೆಗಾgರಾಗಿರುವ ಚಿಂತಾಮಣಿ ಕೊಡ್ಲೆಕೆರೆ ಹಾಗೂ ಮಹಾಬಲಮೂರ್ತಿ ಕೊಡ್ಲೆಕೆರೆಯವರ ಚಿಕ್ಕಪ್ಪ. ನಾನು ದೀಪಾ ಆಗಲೇ ಕವನ ಬರೆಯುತ್ತೇವೆಂದು ಏನೇನೋ ಬರೆಯುತ್ತಿದ್ದೆವು. ಆಗ ನಾವಿದ್ದ ಅಮ್ಮಿನಳ್ಳಿ ಎಂಬ […]
ಎರಡು ಕವಿತೆಗಳು
ಶೋಭಾ ನಾಯ್ಕ ಹಿರೇಕೈ ಅವರ ಎರಡು ಕವಿತೆಗಳು ಶೋಭಾ ನಾಯ್ಕ ಹಿರೇಕೈ ಕವಿತೆ – ೧…ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ […]
ಉತ್ತಮರ ಸಂಗ ಎನಗಿತ್ತು ಸಲಹೊ
ಸಂಬಂಧಗಳು ಹುಟ್ಟಿಕೊಳ್ಳುವುದು ಅಂಥ ವಿಶೇಷವಾದ ಸಂಗತಿಯೇನಲ್ಲ. ಹುಟ್ಟಿಕೊಂಡ ಸಂಬಂಧಗಳು ಎಲ್ಲಿಯವರೆಗೆ ಬಾಳುತ್ತವೆ, ನಮ್ಮ ಬದುಕಿನ ಚಲನೆಯಲ್ಲಿ ಅವುಗಳ ಮಹತ್ವವೇನು, ಅವು ಯಾವ ಬಗೆಯ ಹೊಸತನವನ್ನು ನಮ್ಮ ಯೋಚನೆಗಳಿಗೆ ಒದಗಿಸಬಲ್ಲವು ಎನ್ನುವ ಆಧಾರದ ಮೇಲೆ ಸಂಬಂಧಗಳ ಗುಣಮಟ್ಟದ ನಿರ್ಧಾರವಾಗುತ್ತದೆ. ಈ ಗುಣಮಟ್ಟದ ಮೌಲ್ಯಮಾಪನ ಯಾವುದೇ ರೂಪ, ಆಕಾರ ಅಥವಾ ಹೆಸರುಗಳ ಪ್ರಾಪಂಚಿಕ ಚೌಕಟ್ಟಿನೊಳಗೆ ನಡೆಯುವಂಥದ್ದಲ್ಲ. ತಲೆದಿಂಬಿನ ಪಕ್ಕದಲ್ಲಿ ನೆಮ್ಮದಿಯಿಂದ ನಿದ್ರಿಸಿರುವ ಮೊಬೈಲ್ ನಲ್ಲಿ ಪಾಪ್ ಅಪ್ ಆಗುವ ಗುಡ್ ಮಾರ್ನಿಂಗ್ ಮೆಸೇಜುಗಳಲ್ಲಿ ಹದಿನೈದು ವರ್ಷಗಳ ನಂತರ ಮತ್ತೆ ಜೊತೆಯಾದ […]