Day: July 3, 2020

ಲಹರಿ

ಹಾಡುಗಳು ಹೀಗೆ…. ಜಿ.ಲೋಕೇಶ್ ಈ ಬದುಕಿನ ಒತ್ತಡಗಳನ್ನು ನಿಭಾಯಿಸುವವರು ತಾವು ಅದರಿಂದ ಮುಕ್ತರಾಗಲು ತಾವು ತಾವಾಗಿಯೇ ಇರಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಾರೆ.ಅದರಲ್ಲಿ ಸಂಗೀತವಂತು ಮನಸ್ಸಿಗೆ ಹಬ್ಬ ನೀಡುವ ಬೆಳಕು.ಹಾಡುಗಳನ್ನು ಗುನುಗುತ್ತಾ ಅವುಗಳೊಡನೆ ದಿನ ದೂಡುವ ಎಷ್ಟೋ ಮನಸ್ಸುಗಳಿವೆ. ಕೆಲವು ಹಾಡುಗಳಂತು ಎಷ್ಟು ಕಾಡುತ್ತವೆ ಅಂದರೆ ಬಹುಶಃ ಅವು ನಮ್ಮ ಬದುಕಿನುದ್ದಕ್ಕೂ ಜೊತೆಗೆ ಇದ್ದು ಬಿಡುತ್ತವೆ.ನಮ್ಮೊಂದಿಗೆ, ನಮ್ಮೊಡನೆ,ನಮ್ಮ ಜೀವನದ ಘಟನೆಗಳೊಡನೆ ತಳಕು ಹಾಕಿಕೊಂಡಿರುತ್ತವೆ.ಅದರಲ್ಲಿ ಪ್ರೇಮಿಗಳಿಗಂತು ಹಾಡುಗಳು ವರದಾನ. ಅಂತಹ ಪ್ರೇಮಿ ಹೀಗೆ ತನ್ನ ಜೀವನವನ್ನು ತನ್ನ ಪ್ರಿಯತಮೆಗಾಗಿ ಮೀಸಲಿಡಬಹುದು. […]

ಶಿಶು ಗೀತೆ

ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು […]

ಅನುವಾದ ಸಂಗಾತಿ

ಗುಟ್ಟು ಮೂಲ: ಶರತ್ ಚಂದ್ರ ಬರ್ (ಬೋಡೊ) ಕನ್ನಡಕ್ಕೆ: ನಾಗರಾಜ ಹರಪನಹಳ್ಳಿ ಯಾವ ಕಣ್ಣೀರಿನಲ್ಲಿಹೃದಯ ಮಿಡಿತದ ಸಂದೇಶವಿಲ್ಲವೋ ಯಾವ ಕಣ್ಣೀರಿನಲ್ಲಿಪವಿತ್ರವಾದ ಸತ್ಯವಿಲ್ಲವೋಯಾವ ಕಣ್ಣೀರಿನಲ್ಲಿಒಡೆದ ಹೃದಯದ ಸದ್ದು ಇಲ್ಲವೋಆ ಕಣ್ಣೀರು ಅಪ್ಪಟ ಕಣ್ಣೀರಲ್ಲ ಯಾವ ನಗುವಿನಲ್ಲಿ ಮೌಲ್ಯದ ಬೆಳಗು ಇಲ್ಲವೋಯಾವ ನಗುಕಲ್ಮಶದ ಪರದೆಯಲ್ಲಿ ಅಡಗಿದೆಯೋಅಂತಹ ನಗು ಸಂತಸದ ನಗುವಲ್ಲ ಯಾವ ಪ್ರೀತಿ ತನ್ನಷ್ಟಕ್ಕೆ ತಾನು ಅರಳುವುದಿಲ್ಲವೋಯಾವ ಪ್ರೀತಿಯಲ್ಲಿ ಬೆಸುಗೆಯ ಗುಣವಿಲ್ಲವೋಅಂತಹ ಪ್ರೀತಿಆದರಣೀಯ ಪ್ರೀತಿಯಲ್ಲ ಯಾವ ಕಾಣಿಕೆಯಲ್ಲಿಮರಳಿ ಪಡೆವ‌ ವ್ಯಾಮೋಹವಿದೆಯೋಯಾವ ಕಾಣಿಕೆಯಲ್ಲಿಪ್ರಶಂಸೆಯನ್ನು ಪಡೆವ‌ ಅಪೇಕ್ಷೆಯಿದೆಯೋಅಂತಹ ಕಾಣಿಕೆ ಕಾಣಿಕೆಯಲ್ಲ………………….. ನಾಗರಾಜ್ ಹರಪನಹಳ್ಳಿ

ಪುಸ್ತಕ ಸಂಗಾತಿ

ಬಣ್ಣದ ಜೋಳಿಗೆ ಬಣ್ಣದ ಜೋಳಿಗೆ ಸ್ನೇಹಾ ಪಬ್ಲಿಕೇಶನ್ಸ್ ಗಾಯಿತ್ರಿ ರಾಜ್ “”ಬಣ್ಣದ ಜೋಳಿಗೆ “” ಗಾಯತ್ರಿ ರಾಜ್ ಅವರ ಮೊದಲ ಕಥಾ ಸಂಕಲನ, ಚೊಚ್ಚಲ ಪುಸ್ತಕ,ಒಂದೇ ದಿನದಲ್ಲಿ ಬರೆಯಬಹುದುದಾದ ಅನಿಸಿಕೆಗೆ ಮೂರು ದಿನಾ ತಗೊಂಡೆ ಅಂದ್ರೆ ನಾನು ಬರೆಯೋದು “ಆರು ಹೆತ್ತೋಳಿಗೆ ಮೂರು ಹೆತ್ತೋಳು ಹದ ಹೇಳಿದಂತೆ”” ಆಗತ್ತೇನೋ ಅನ್ನಿಸಿ, ತಡ ಮಾಡಿದೆ, ನನ್ನ ತಿಳಿವಿನ ಮಟ್ಟಕ್ಕೆ, ಯಾವ ಅತಿಶಯೋಕ್ತಿ ಪೂರ್ವಗ್ರಹ ಇಲ್ಲದೇ ಬರೆದಿರುವೆ, ಗುಣಕ್ಕೆ ಮತ್ಸರ ಏಕೆ?? ಅಲ್ವಾ..ಪೂರ್ಣ ಪ್ರಮಾಣದಲ್ಲಿ ಬರಹಕ್ಕೆ ಕುಳಿತರೆ ಒಳ್ಳೇ ಸಾಹಿತಿ […]

ಪ್ರಬಂಧ

ಸ್ವಚ್ಛ ಭಾರತ ನಂದಿನಿ ಹೆದ್ದುರ್ಗ ಇದು ಸುಮಾರು ಮುವ್ವತ್ತು-ಮುವ್ವತ್ತೈದು ವರ್ಷಗಳ ಹಿಂದಿನ ಮಾತು.ಆಗೆಲ್ಲಾ ಹಳ್ಳಿಗೊಂದು ಪ್ರಾಥಮಿಕ ಶಾಲೆ ಇರುತ್ತಿದ್ದೇ ಹೆಚ್ಚು . ಇನ್ನೂ ಶೌಚಾಲಯ, ಬಿಸಿಯೂಟ ಕನಸಲ್ಲೂ ಯೋಚಿಸುವ ಹಾಗಿಲ್ಲ.ನಾವು ಮೂರೂ ಮಕ್ಕಳು ನಾಲ್ಕನೆ ತರಗತಿ ಮುಗಿದಾಗ ಹತ್ತು ಕಿಮಿ ಆಚೆ ಇರುವ ಸಣ್ಣ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಹೊಗುತ್ತಿದ್ದೇವೆ.ನಾವು ಮಾತ್ರವಲ್ಲ..ಪ್ರತಿ ಜಿಲ್ಲೆಯ ಸಣ್ಣಸಣ್ಣ ಹಳ್ಳಿಗಳಮಕ್ಕಳದ್ದೂ ಇದೇ ಪಾಡು.ಆಗೆಲ್ಲಾ ದಾರಿಯಲ್ಲಿ ಅವಸರವಾದರೆ ಗಂಡು ಹುಡುಗರನ್ನ ಕಾವಲಿಗೆ ನಿಲ್ಲಿಸಿ ನಾವು ಪಕ್ಕದ ಕಾಫಿ ತೋಟದಲ್ಲಿ ನೀರಾವರಿ ಮುಗಿಸಿ […]

ಕಾವ್ಯಯಾನ

ಗಝಲ್ ಎ ಎಸ್. ಮಕಾನದಾರ ತಲೆ ಬಾಗಿಲಿಗೆ ಕೈಹಚ್ಚಿ ಕಾಯುತಿರುವೆ ಪ್ಯಾರಿಭಾವರಸ ನೊರೆಹಾಲ ತುಂಬುತಿರುವೆ ಪ್ಯಾರಿ ಅಚ್ಚೇರು ಬಂಗಾರದಲಿ ಅಚ್ಚು ಒತ್ತುತ್ತಿರುವೆಸ್ನೇಹ ಅಚ್ಚುಮೆಚ್ಚೆಂದು ಸಾರುತಿರುವೆ ಪ್ಯಾರಿ ಹಾಯಿದೋಣಿಗೆ ನಾವಿಕನಾಗಿ ಸಾಗುತಿರುವೆಚೂರಾದ ಹೃದಯ ತೋರಣ ಕಟ್ಟಿರುವೆ ಪ್ಯಾರಿ ನದಿಗಳ ಜಾಡಿನೊಳಗೆ ಚಹರೆ ಕಾಣುತಿರುವೆವಿಶ್ವಪ್ರೇಮ ಬಾವುಟ ಹಾರಿಸುತ್ತಿರುವೆ ಪ್ಯಾರಿ ಅಂತರಂಗ ಜ್ಯೋತಿಗೆ ಧೋಖಾ ಮಾಡದಿರುಸಾಹೇಬ್ ಮಸ್ತಕಕ್ಕೆ ಇಳಿದು ಬರುವೆ ಪ್ಯಾರಿ **********

Back To Top