ಒಂದು ಖಾಲಿ ಜಾಗ

ಅನುವಾದಿತ ಕವಿತೆ

ಕನ್ನಡ ಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ

ಇಂಗ್ಲೀಷಿಗೆ: ನಾಗರೇಖಾ ಗಾಂವಕರ್

An empty space

Each and every one might be owed an empty space.
at the backyard? or frontyard?
or else a room, inside the home
or may be at some unseen places
totally as being personal.

Everyone atleast once a while
definitely think about this empty space
what would be sown,
let it be a lady finger? or to spread over ivy gourd
or to grow paddy crop?
or else if it is quite spacious
to keep it for sale
by constructing a building?
as according to their capacity and neccessity

In an utter helplessness
this empty space won’t point out
that he is the owner,
all the time it moves on from hand to hand.
and this bussiness brisk in auction.

If it is a building,
can stay for long without breathing
time to.time all the sown, grown
often change under
the cycle of life, death, and rebirth

So as
how easily these empty spaces become vacant
as being filled.
Always stand swaying
on the scale of sale and purchase.

I, observing for long time
here is an invisible empty space
remained so long as itself,
only the exquisite perfume that
the shapeless wind carries
sauntering across.

A quiet sensation
seen, unseen and never be aquired
that is only filling
the space inside.
Still it is remained hollow and unoccupied

If you are eager then
Touch it with eyes wide open
Who knows..
that empty space might also be yours…

Translated into English-
-Nagarekha Gaonkar


ಒಂದು ಖಾಲಿ ಜಾಗ

ಎಲ್ಲರ ಬಳಿಯೂ ಎಲ್ಲರೊಳಗೂ
ಇರಬಹುದು ಒಂದೊಂದು ಖಾಲಿ ಜಾಗ.

ಹಿತ್ತಲಿನಲ್ಲಿಯೋ? ಮುಂದಣ ಆಂಗಳದಲ್ಲಿಯೋ?
ಒಳಕೋಣೆಯೊಳಗೋ? ಅಥವಾ ಯಾವುದೋ
ಅದೃಶ್ಯ ಎಡೆಯಲ್ಲಿ ತೀರಾ ಖಾಸಗಿಯಾಗಿ.

ಒಂದೊಮ್ಮೆ ಎಲ್ಲರೂ ಈ ಖಾಲಿ ಜಾಗದ
ಕುರಿತು ಯೋಚಿಸಿಯೇ ಇರುತ್ತಾರೆ.

ಬೆಂಡೆ ಬಿತ್ತುವುದಾ? ತೊಂಡೆ ಹಬ್ಬಿಸುವುದಾ?
ಭತ್ತ ಬೆಳೆಯುವುದಾ?
ತುಸು ಹೆಚ್ಚೇ ಇದ್ದರೆ ಕಟ್ಟಡ ಕಟ್ಟಿಸಿ
ಬಿಕರಿಗಿಡುವುದಾ?
ಅವರವರ ಅನುಕೂಲಕ್ಕೆ ತಕ್ಕ ಹಾಗೆ
ಅಗತ್ಯಕ್ಕೆ ತಕ್ಕ ಹಾಗೆ.

ಇವರೇ ವಾರಸುದಾರರು ಅಂತ
ಬೆಟ್ಟು ಮಾಡಿ ತೋರಿಸಲಾಗದ ಅಸಹಾಯಕತೆಯಲ್ಲಿ
ಖಾಲಿ ಜಾಗವೊಂದು ಅವರಿವರ ಕೈಗೂಸಾಗುತ್ತಲೇ
ಸಾಗುತ್ತದೆ.
ವ್ಯಾಪಾರ _ ವಹಿವಾಟು ಭರದಲ್ಲಿ ಕುದುರುತ್ತದೆ.

ಕಟ್ಟಡವಾದರೆ ಉಸಿರಾಡದೆಯೂ
ಹಲವು ಕಾಲ ಹಾಗೇ ಉಳಿದುಕೊಂಡು ಬಿಡುತ್ತದೆ.
ಬಿತ್ತಿದ್ದು ಬೆಳೆದದ್ದು ಕಾಲಕಾಲಕ್ಕೆ
ಹುಟ್ಟಿ,ಸತ್ತು,ಮರುಹುಟ್ಟು ಪಡೆದು
ಬದಲಾಗುತ್ತಲೇ ಇರುತ್ತದೆ.

ಹಾಗೇ..
ಎಷ್ಟು ಸುಲಭದಲ್ಲಿ ಈ ಖಾಲಿ ಜಾಗಗಳು
ತುಂಬಿಕೊಳ್ಳುತ್ತಲೇ ಬರಿದಾಗುತ್ತವೆ.
ಕ್ರಯ_ ವಿಕ್ರಯಗಳ ತಕ್ಕಡಿಯೊಳಗೆ
ತೂಗಿಸಿಕೊಂಡೇ ನಿಲ್ಲುತ್ತವೆ.

ಬಹುಕಾಲದಿಂದ ನೋಡುತ್ತಲೇ ಇರುವೆ
ಇಲ್ಲೊಂದು ಅಗೋಚರ ಖಾಲಿ ಸ್ಥಳ
ಹಾಗೇ ಉಳಿದುಕೊಂಡು ಬಿಟ್ಟಿದೆ.
ನಿರಾಕಾರ ಗಾಳಿ ಹೊತ್ತು ತರುವ ಅಪರೂಪದ
ಪರಿಮಳವಷ್ಟೇ ಅಲ್ಲಿ ಸುಳಿದಾಡುತ್ತದೆ.

ಒಂದು ನಿಶ್ಯಬ್ಧ ಮಿಡುಕಾಟ
ಕಂಡದ್ದೂ ಕಾಣದ್ದೂ ಎಂದಿಗೂ ದೊರಕದ್ದು ಮಾತ್ರ
ಆ ಖಾಲಿಯೊಳಗೆ ತುಂಬಿಕೊಳ್ಳುತ್ತಲೇ ಇದೆ.
ಆದರೂ ಆ ಖಾಲಿ ಖಾಲಿಯಾಗಿಯೇ ಉಳಿದಿದೆ.

ಕುತೂಹಲವಿದ್ದರೆ,ಒಮ್ಮೆ ಮುಟ್ಟಿ
ಕಣ್ಬಿಟ್ಟು ನೋಡಿಕೊಳ್ಳಿ.
ಆ ಒಂದು ಖಾಲಿ ಜಾಗ ಬಹುಶಃ
ನಿಮ್ಮದೇ ಇರಬಹುದೇನೋ..?

********

  _ ಸ್ಮಿತಾ ಅಮೃತರಾಜ್.ಸಂಪಾಜೆ

10 thoughts on “ಒಂದು ಖಾಲಿ ಜಾಗ

  1. ಮೂಲ ಮತ್ತು ಅನುವಾದ ಎರಡೂ ತುಂಬಾ ಚೆನ್ನಾಗಿವೆ

  2. ಹೌದಲ್ವಾ?? ಎಂದು ಮತ್ತೆ ಮತ್ತೆ ಕೇಳುವಷ್ಟು.

  3. ಅದ್ಭುತವಾದ ಮೂಲ ಕವಿತೆ ಹಾಗೂ ಸಮರ್ಥವಾದ ಅನುವಾದ. ಸ್ಮಿತಾ ಮತ್ತು ನಾಗಪೇಖಾರಿಗೆ ಅಭಿನಂದನೆಗಳು…

  4. ಕವಿತೆ ಬಳಸಿಕೊಂಡ ಸಂಗಾತಿ ಪತ್ರಿಕೆಗೂ,ಸಮರ್ಥವಾಗಿ ಅನುವಾದಿಸಿದ ಗೆಳತಿ ನಾಗಾರೇಖಾಗೂ ಅನಂತ ವಂದನೆಗಳು.

  5. ಧನ್ಯವಾದ ಕವಿತೆ ಅನುವಾದ ಮೆಚ್ಚಿದ ಎಲ್ಲರಿಗೂ ಹಾಗೇ ಪ್ರಕಟಿಸಿದ ಸಂಗಾತ ಪತ್ರಿಕೆಗೂ ಚಂದದ ಕವಿತೆ ಕೊಟ್ಟ ಗೆಳತಿಗೂ.

  6. ನಮ್ಮೊಳಗಿನ ಖಾಲಿ ಜಾಗವೊಂದು ಅಜ್ಞಾತವಾಗಿದೆ ಎಂಬುದು ಅರಿವಿಗೆ ತಂದ ನಿಮ್ಮ ಕವಿತೆಗೆ ಧನ್ಯವಾದಗಳು

  7. ಬಯಲು ಬಯಲನೆ ಬಿತ್ತಿ
    ಬಯಲು ಬಯಲನೆ ಬೆಳೆದು
    ಬಯಲು ಬಯಲನೇ ಉಂಡು
    ಬಯಲು ಬಯಲಾಗಿತ್ತು ನೋಡಾ….ಎಂಬ ವಚನ ನೆನಪಾಯಿತು. ‌ಕನ್ನಡದಲ್ಲಿ ಬಂದ ಉತ್ತಮ ಕವಿತೆ ಇದು. ಓದಿದಷ್ಟು ಅರ್ಥವ್ಯಾಪ್ತಿ ಹಿಗ್ಗುವುದು ಈ‌ ಕವಿತೆಯ ವಿಶೇಷ. ‌ಒಂದು ಖಾಲಿ‌ ಜಾಗದ ಒಳನೋಟ ನಮ್ಮ ಹೆಣ್ಮಕ್ಕಳ ಬದುಕಿನ ಒಳನೋಟ ದಂತಿದೆ.‌ವಚನ ಚಚಳುವಳಿಯ ಅರ್ಥ ಮತ್ತು ಆಶಯ ತಮಗರಿವಿಲ್ಲದಂತೆ ಮಹಿಳೆಯನ್ನು ಪ್ರಭಾವಿಸುವ ಪರಿ ಇದೆ ಇರಬೇಕು…
    ಸ್ಮಿತಕ್ಕ ಹಾಗೂ ನಾಗರೇಖಾ ಇಬ್ಬರೂ ಅಭಿನಂದನಾರ್ಹರು…
    ಹಾಗೂ ಸಂಗಾತಿಗೂ ಥ್ಯಾಂಕ್ಸ

Leave a Reply

Back To Top