Day: July 9, 2020

ಸುರಿಯುತಿಹ ಮೋಡಗಳು

ಡಾ. ಪ್ರತಿಭಾ ಸುರಿಯುತಿರೆಜಿಟಿ,ಜಿಟಿ ಮಳೆಹನಿಗಳುನೋಡಿರಿ ಹರಡಿದೆ ಘಮಸುತ್ತಮೂತ್ತಲೂ. ಅವಳು ಅದೇ ಭೂತಾಯಿನಿಂತಿಹಳು,ಹಸಿರು ಸೀರೆರವಿಕೆಯ ತೊಟ್ಟು. ಸುರಿಸುತಿಹೆ ಮೋಡಗಳುಮಳೆ ಹನಿಗಳು ಶುರುವಾಗಿದೆನೋಡಿ ಕಣ್ಣುಮುಚ್ಚಾಲೆ ಆಟ. ಸ್ವಲ್ಪವೇ, ಸ್ವಲ್ಪವೇಹಿಡಿದು ಬಿಟ್ಟು, ಹಿಡಿದು ಬಿಟ್ಟು ಎನ್ನವಂತೆ ಸುರಿಸುತಿಹೆ ಮೋಡಗಳುಮಳೆಹನಿಗಳ.ದಾರಿಯುಂಟಕೂ ತೊಡಕುಗಳು ಸುರಿಯುವಮಳೆ ಹನಿಗಳಿಗೆಗಾಳಿಯದು ನೋಡಿಬಂದಿತು ರಭಸವಾಗಿಕೊಂಡೊಯ್ಯಲು ಮೋಡಗಳ ಬೇರೆ ಜಾಗಕ್ಕೆ. *************************

ಮಳೆಹಾಡು-3

ಸಂಜೆಯ ಮುಹೂರ್ತ ಆಶಾ ಜಗದೀಶ್ ಅದೆಷ್ಟೋ ವರ್ಷಗಳ ಪೂರ್ವ ನಿಯೋಜಿತಘಟನೆಯಿದು ಎನಿಸುವಂತೆಸುರಿಯುತ್ತಿರುವ ಈ ಮಳೆಗೆಸಂಜೆಯ ಮುಹೂರ್ತ ರಾಗ, ರಂಗು ಮತ್ತು ದೀರ್ಘ ಕ್ಷಣಗಳಕಟು ಮೌನಕಣ್ಣೀರು ಸ್ಫುರಿಸುವಂತೆ ತಾಕುವತಣ್ಣ ಸಣ್ಣ ಸಣ್ಣ ಸಿಡಿ ಹನಿಗಳುಯಾವುದಕ್ಕೂ ಪ್ರತಿರೋಧ ಒಡ್ಡದರಸ್ತೆಗೆ ಇದೊಂದು ಜನ್ಮದ ಸುವಾಸನೆಯನ್ನುಬಿಗಿ ಹಿಡಿದು ಉಚ್ವಾಸಕ್ಕೆ ಎಳೆಸುವ ಆಸೆಮತ್ತಷ್ಟು ಕಠೋರವಾಗಿ ಎದೆ ಸೆಟೆಸಿಮಲಗುತ್ತದೆ… ಒಂಚೂರೂ ನಡುಗದ ಮಲ್ಲಿಗೆ ಬಳ್ಳಿಮಳೆಯ ಹೊಡೆತಕ್ಕೆ ನಲುಗಿದೆಮತ್ತೆ ಮತ್ತೆ ಸರಿ ಮಾಡಿ ಹಿಡಿದೆತ್ತಿತಂತಿಯಿಂದ ಬಂಧಿಸಿ ತರಸಿಗೇರುವಂತೆಮಾಡುವ ಒಡತಿ ನಡುಗುತ್ತಾ ಒಳಗಿದ್ದಾಳೆತಾನು ಕಟ್ಟಿದ ತಂತಿ ತುಂಡಾಗಿಬೀಳುತ್ತಿರುವ ಬಳ್ಳಿಯ […]

ಆರು ಮೂರು

ಡಾ.ಅಜಿತ್ ಹರೀಶಿ ಮೂಲ ಆಲಯದಿಂದ ಕೈಲಾಸ ಪಟದಾಟಲೆತ್ತ ಬೀರಿ ಅದರತ್ತ ನೋಟಬುಡದಲ್ಲಿ ಬಿಸಿಯಿಲ್ಲಮೇಲೇರಿದಂತೆ ಕಾವೇರಿ ಪರದಾಟ ಹಿಂದೆ ಮುಂದೆ, ನೂಕುನುಗ್ಗಲುಆರು ಬಿದ್ದರೆ ಇನ್ನೊಂದು ಬಾರಿಸಿಗುವುದು ಆಡಲುಮೊದಮೊದಲು ಸಣ್ಣ ಏಣಿಹಾವು, ಆತಂಕವಿಲ್ಲ ಕಳೆ ಕಟ್ಟಿದೆ ಕೊನೆಯಲ್ಲಿನುಣುಪಾದ ದಂತದ ದಾಳದಲ್ಲಿಮೂರು ಬಿದ್ದರೆ ಹಾವು ಕಚ್ಚಿನಿಶ್ಚಲವಾಗುವುದು ನಿಶ್ಚಿತ ನೆಲಕಚ್ಚಿಕೈಲಾಸ ಕಾಣಬಹುದು ಬಿದ್ದರೆ ಆರುಶಿವ ಪಾರ್ವತಿ ಕಾಣುತಿಹರು ಒಂದು ಐದು ಬೀಳುತಿಹುದು ನೆತ್ತದಲಿಅತ್ತ ಇತ್ತ ಎತ್ತ ಎಂತ ಮಾಡಿದರೂ ಕೈಲಾಸ ಪ್ರಾಪ್ತಿಯಿಲ್ಲಆಟ ಬಿಟ್ಟು ಏಳುವಂತಿಲ್ಲಆರಕ್ಕೇರದ ಮೂರಕ್ಕಿಳಿಯಿದ ಬದುಕಿನಂತೆ ಲತ್ತದಲಿ ಮೂಡಿತು ಮೂರರ ಮುಖವಂತೂಮತ್ತೆ […]

ಆಕೆ ಉಲ್ಲಾಸದಿ‌ ನಕ್ಕಳು

ನಾಗರಾಜ್ ಹರಪನಹಳ್ಳಿ -೧-ವಾರಬಿಟ್ಟು ಸುರಿದ ಮಳೆಗೆಉಲ್ಲಾಸದಿಂದ ನಕ್ಕಳು ಭೂತಾಯಿ ಕಂಪೌಂಡ್ ಕಟ್ಟೆ ಮೇಲೆ ಕುಳಿತಗುಬ್ಬಚ್ಚಿ ಹಿಂಡಿನ ಹರಟೆಜಗುಲಿ ಒಳಗಿನ ಹೆಂಗಸರ ನಾಚಿಸಿತು -೨-ಮಳೆ ಸುರಿದಾಯ್ತುಹನಿಯುಂಡ ಭೂಮಿನಿದ್ದೆ ಹೋಗಿದೆಮೈಮುರಿಯುತ್ತಿದೆ ನೆಲಪುಟಿದೇಳುತ್ತಿದೆ ಚಿಗುರುಪ್ರತಿ ಚಿಗುರಿನಲಿತೇಲಿ ಬಂದಿದೆನಿನ್ನದೇ ಬಿಂಬ -೩-ಹಗಲು ರಾತ್ರಿಯನ್ನದೇಮಳೆ ಸುರಿಯಿತುನಾನು ನೀನು ಮಾತಾಡಿಕೊಂಡಂತೆ ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿಮಾತಾಡುತ್ತಲೇ ನಾವುನಕ್ಕು ಅತ್ತಂತೆ ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ ಆಕೆನೂರು ಸಂಕಟ ನುಂಗಿಯೂ ನಕ್ಕಂತೆ ನಾನು -೪-ಮಾತಿಗೆ ಮಾತು ಬೆಸೆಯಿತು ,ಹೆಜ್ಜೆ […]

ಖಾಸಗಿರಣಮತ್ತು ಅಭಿವೃದ್ದಿ

ಗಣೇಶ್ ಭಟ್ ಶಿರಸಿ ಖಾಸಗೀಕರಣವೇ ಅಭಿವೃದ್ಧಿಯ ದಾರಿಯೆಂದು ತಪ್ಪಾಗಿ ನಂಬಿರುವ ಕೇಂದ್ರ ಸರ್ಕಾರವು, ಹಲವಾರು ರೇಲ್ವೇ ಮಾರ್ಗಗಳಲ್ಲಿ ಖಾಸಗಿಯವರಿಗೆ ಅವಕಾಶ ನೀಡಲು ಮುಂದಾಗಿದೆ.ಈ ನೀತಿಯ ಪ್ರಕಾರ ಖಾಸಗಿ ನಿರ್ವಹಣಾಕಾರರು ತಮ್ಮದೇ ಬಂಡವಾಳ ತೊಡಗಿಸಿ ಹೊಸ ಎಂಜಿನ್ ಮತ್ತು ಭೋಗಿಗಳನ್ನು ಖರೀಧಿಸಿ ನಿಗದಿತ ಮಾರ್ಗಗಳಲ್ಲಿ ರೈಲು ಓಡಿಸಬೇಕು. ಪ್ರಯಾಣ ದರವನ್ನು ನಿಗದಿ ಪಡಿಸುವ ಅಧಿಕಾರವನ್ನು ನಿರ್ವಹಣಕಾರರಿಗೇ ಬಿಡಲಾಗಿದೆ. ಅವರ ಒಟ್ಟೂ ಗಳಿಕೆಯಲ್ಲಿ ಶೇಖಡವಾರು ಪಾಲನ್ನು ರೇಲ್ವೆ ಇಲಾಖೆಗೆ ನೀಡಬೇಕಿದೆ.ಈ ವಿಧದ ಖಾಸಗೀಕರಣದಿಂದ ರೇಲ್ವೇ ಪ್ರಯಾಣ ದರದಲ್ಲಿ ಹೆಚ್ಚಳವಾಗುವದೆಂಬ ಜನಸಾಮಾನ್ಯರ […]

ವಾರದ ಕವಿತೆ

ಮುಕ್ತತೆಯ ಹಂಬಲ ಪೂರ್ಣಿಮಾ ಸುರೇಶ್ ಹೊರಟಿದ್ದೇನೆ ಎಂದಿನಂತೆಬರಿಗಾಲಿನಲ್ಲಿನಿನ್ನ ಪದತಳದ ಧೂಳು ತಾಕಿದವರಹುಡುಕಲಿಕ್ಕೆ ಕಣ್ಣಲ್ಲಿ ಮುಸುಕು ಹಾಕಿ ಕೂತಿರುವಮೃದು ಹೂವಿನಂತಹಮುದ್ದು ಮೊಲದಂತಹ ಸುಕೋಮಲಪ್ರೀತಿ ಗಂಧ ಹಿಡಿದು ತುಸುತುಸು ತೆರೆದ ಕದಗುಸುಗುಸು ಮಾತಿನಲಿಆಟವಾಡುತ್ತಿದೆಹದಬೆಂಕಿ ಹೊಗೆಯಧೂಪ ಪರಿಮಳಕೆ ಎಲ್ಲವೂ ಕಾದಷ್ಟುಬೇಯುವಷ್ಟುಘಮಘಮಿಸಿಸುಡುವಷ್ಟು ಬತ್ತಿ ಮಹಾಪೂಜೆ ಕಟ್ಟುಗಳ ಬಿಚ್ಚಿ ಕಡಮೆ ದಾಟಿಜಗಳವಾಡಬೇಕು ಅನಿಸುತ್ತದೆ ದೇವರಾದರೆ ಏನಂತೆ.. ಶಿಲೆಯೊಡಲಲ್ಲೇ ಬೆಂಕಿದೇವರಾಗಿಸಿದ ಮೊಗಗಳಲಿಮೌನ ಹೀರಿ ನಗು.. ಗರ್ಭಗುಡಿಯ ಹೊರಗೆಆವರಣದಲಿಭಕ್ತರ ಪ್ರಾರ್ಥನೆಯ ಕಂಬನಿಹೆಪ್ಪುಗಟ್ಟಿದೆ ಇದು ಶಬರಿತನ ಪಾದಗಳು ನಿಶ್ಯಕ್ತವಾಗಿದೆಮಹಾಶೂನ್ಯತೆ ಆವರಿಸಿದೆನನ್ನನು ಮಂಜಿನಂತಹ ಮರೆವಿಗೆಸರಿಸಿಬಿಡು ಬೆಂಕಿಯನ್ನು ಒಡಲುಗೊಂಡವನೇಮುಕ್ತಳಾಗಬೇಕು ನಿನ್ನಿಂದ.

Back To Top