ಅನುಭವ
ನಾಗರಾಜ ಮಸೂತಿ
ಇವತ್ತು ಬದುಕು ಬಹಳ ಕಠೋರ ಅನಿಸ್ತು. ನಾವೆಲ್ಲ ಮನೆ ಮುಂದಿನ ಗೇಟ್ ಕೂಡ ದಾಟದ ಹಾಗೆ ಮನೆಯಲ್ಲಿಯೇ ಕೂತಿವಿ. ಹಳ್ಳಿ ಹೆಣ್ಣು ಮಗಳು ಮೊಸರು ಮಾರ್ತಾ ಮನೆ ಬಾಗ್ಲಿಗೆ ಬಂದ್ಲು. ನಮವ್ವಗ ಒಂದು ಒಳ್ಳೆ ಅಭ್ಯಾಸ ಏನಂದ್ರ ಯಾರೇ ಬರ್ಲಿ ಕರದ ಕುಂಡರ್ಸಿ ನೀರ ಕೊಟ್ಟ ಮಾತಾಡ್ಸುದು. ವ್ಯಾಪಾರ ಎರಡನೆ ಮಾತು. ಇದು ನಮ್ಮ ಮನೆ ಮಂದಿಗೆ ಹಿರೆರಿಂದ ಬಂದ ಬಳುವಳಿ. ಇರ್ಲಿ ಹಾಂ ಮೊಸರ ಮಾರಕ ಬಂದಾಕಿ ಮಸರು ಕೊಟ್ಲ ರೊಕ್ಕಾನು ತಗೊಂಡು ಕಥೆ ಹೇಳಾಕ ಸುರು ಮಾಡಿದ್ಲ. ಬಾಗಲಕೋಟಿ ಹತ್ರ ಪಕ್ಕದ ಹಳ್ಳಿ ಆಕೆದು . ಕಾಯಿಪಲ್ಯ, ಮೊಸರ, ಹಾಲ ಮಾರೊರು ಎಂಟತ್ತ ಮಂದಿ ಸೇರಿ ಟಾಟಾ ಎಸಿ ಗಾಡಿ ಬಾಡಗಿ ಮಾತಡ್ಕೊಂದ ಬಂದಾರ. ಇಲ್ಲಿ ನವನಗರದಾಗ ಎಲ್ಲೀ ವ್ಯಾಪರಕ್ಕ ಬಿಡವಲ್ಲರು. ಕೊರೊನಾ ಬಂದೈತಿ ಅಂತ ಹೇಳಿ ಪೋಲಿಸರ ಮುಂಜ ಮುಂಜಾನೆ ಲಾಠಿ ಏಟ್ ಕೊಡಾಕ ಸುರು ಮಾಡ್ಯರಬೆ ಎವ್ವ, ಬುಟ್ಯಾಗಿನ ಕಾಯಿಪಲ್ಯ ಚೆಲ್ಲಾಕತ್ತಾರ, ಗಡಿಗ್ಯಾಗಿನ ಮಸೂರ ಚೆಲ್ಲಿದ್ರ. ಒಬ್ಬ ಗನಮಾಗ ಬಂದ ಕೇಳಿದ ಬೆಣ್ಣಿ ಇತ್ತಬೆ ಅರ್ಧ ಕಿಲೋ ಕೊಟ್ಟ್ಯಾ ಪೋಲಿಸ್ ಬಂದ್ರ ಹಂಗ ಓಡಿ ಹೋದನಬೇ. ರೊಕ್ಕಾನು ಕೊಡ್ಲಿಲ್ಲ, ಡಬ್ಬಿನ ಒಯ್ದಾಬೇ. ಎಡ್ನೂರು ಮುನ್ನೂರ ರೂಪಾಯಿಬೇ ಎವ್ವಾ, ಏನ್ ಮಾಡಬೇಕ ನೋಡ. ಅವ್ವಗ ತಡ್ಯಾಕಾಗಲಿಲ್ಲ ಬೈದ್ಲು ಮನಸು ಹಗರು ಮಾಡ್ಕೊಂಡಳು. ಮೊಸರ ಮಾರಾಕಿಗಿ ಸಮಾಧಾನ ಮಾಡಿದ್ಲ. ಎವ್ವ ಈ ಗಲಾಟ್ಯಾಗ ಯಾಕ್ ಬರ್ತಿ ಸುಮ್ಮನ ಮನ್ಯಾಗ್ ಇರ್ಬಾರ್ದ ಅಂದ್ಲ್. ಎಷ್ಟೇ ಆಗಲಿ ಹಳೆ ಮನುಷ್ಯಾರ ಒಬ್ಬರ ಕಷ್ಟ ತಮ್ಮ ಕಷ್ಟ ಅನ್ನುವಷ್ಟರ ಮಟ್ಟಿಗೆ ಅವರ ಪ್ರತಿಕ್ರಿಯೆ ಇರುತ್ತ. ಅಷ್ಟಕ್ಕ ಸುಮ್ಮನಾಗಲಾರದ ಮೊಸರ ಮಾರೊ ಹಳ್ಳಿ ಹೆಣ್ಣು ಮಗಳು ಒಳ್ಳೆಯದಷ್ಟ ಗೊತ್ತ , ಯಾರಾರ ಏನರ ಅಂದ್ರ ಜಗಳ ಮಾಡ್ತಾರ, ಆದರ ಕೆಟ್ಟದ ಬಯಸಾಂಗಿಲ್ಲ. ನಾವು ಮನ್ಯಾಗ ಕುಂತರ ಜನ ಎಲ್ಲಾ ಏನ್ ತಿನಬೇಕಬೇ ಎವ್ವ , ಬೆಳದಿದ್ನ ಕೆಡಿಸಿ ಏನ ಮಾಡುದೈತಿ ಅಲ್ಲನ ಬೇ? ಏನ ಒಂದೀಟು ತ್ರಾಸ್ ಆದಿತ್ತ ಬಂದ ಹೋಗಾಕ ಅಂದ ಬುಟ್ಟಿ ತೆಲಿ ಮ್ಯಾಲಿ ಹೊತ್ತ ಹೊಂಟ್ಲ. ಅವ್ವ ಹೌದು ನೀ ಕರೆಕ್ಟ್ ಅದಿಯವ, ಕಲ್ತವಕ ಬುದ್ಧಿ ಕಡಿಮೆ ಆಗ ಕತ್ತೈತಿ ಏನ್ ಮಾಡುದವ, ಹುಷಾರ್ ಹೋಗವ ಅಂತ ಹೇಳಿ ಕಳಿಸಿದ್ಲ.
ಬದುಕು ಕಠೋರ ನಮ್ಮಂತವರಿಗೆ,
ಏನು ಅರಿಯದ ಮುಗ್ಧರಿಗೆ ಅಷ್ಟೇ ಸರಳ.
*************
ಕೊನೆಯ ಎರಡು ಸಾಲುಗಳು