ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕೊಡುವುದಾದರೂ ಯಾರಿಗೆ ?

ಚಿತ್ರ ಮತ್ತು ಕವಿತೆ : ವಿಜಯಶ್ರೀ ಹಾಲಾಡಿ. ಹೌದುಈ ಪ್ರೀತಿಯನ್ನುಮೊಗೆಮೊಗೆದುಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದಮುಖ –ಮುಖವಾಡಗಳು …ರಾತ್ರಿ -ಹಗಲುಗಳನ್ನುಗೆಜ್ಜೆಕಾಲಿನಲ್ಲಿ ನೋಯಿಸಲೆ …ಯಾತನೆಯನ್ನು ನುಂಗುತ್ತಿರುವೆಸಂಜೆಯ ಏಕಾಂತಗಳಲ್ಲಿಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆಮಂಡಿಯೂರಿದ್ದೇನೆಹಟಮಾರಿ ಕಡಲಾಗಿದ್ದೇನೆ..ತರ್ಕಕ್ಕೆ ನಿಲುಕದ ಗಳಿಗೆ-ಗಳಲ್ಲಿ ಒಂಟಿಹೂವಂತೆನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನುಮತ್ತೆ ಹುಟ್ಟಿಸಿಕೊಳ್ಳಲುಸಾಧ್ಯವಾಗುವುದಾದರೆಪ್ರೀತಿಯಿಂದ ಆರ್ತಳಾಗಿದ್ದೇನೆ.

ಕೊಡುವುದಾದರೂ ಯಾರಿಗೆ ? Read Post »

ಕಾವ್ಯಯಾನ

ನಾವೀಗ ಹೊರಟಿದ್ದೇವೆ

ಕವಿತೆ ಶೀಲಾ ಭಂಡಾರ್ಕರ್ ನಾವೀಗ ಹೊರಟಿದ್ದೇವೆಒಂದೊಮ್ಮೆ ನಮ್ಮದಾಗಿದ್ದನಮ್ಮ ಊರಿಗೆ. ಯಾರೊಬ್ಬರಾದರೂತಡೆಯುವವರಿಲ್ಲವೇ!! ನಮ್ಮನ್ನುಹೋಗಬೇಡಿರೆಂದು ಕೈ ಹಿಡಿದು.ಈ ಪಟ್ಟಣ ನಿಮ್ಮದೂ ಕೂಡ ಎಂದು. ಇಟ್ಟಿಗೆ ಮರಳು ಹೊತ್ತ ತೋಳುಗಳುಸುತ್ತಿಗೆ ಉಳಿ ಹಿಡಿದ ಕೈಗಳುಗಂಟು ಮೂಟೆಗಳನ್ನುಹೊತ್ತು ಕೊಂಡು ಹೊರಟಿವೆ,ಭಾರವಾದ ಮನಸ್ಸನ್ನುಎದೆಯೊಳಗೆ ಮುಚ್ಚಿಟ್ಟು. ಯಾರಿಗೂ ನೆನಪಾಗಲಿಲ್ಲವೇ..ತಮ್ಮ ಮನೆಗಳಿಗೆಗಾರೆ ಮೆತ್ತಿದ, ಬಣ್ಣ ಹಚ್ಚಿದಕೈಗಳ ಹಿಂದೆ ಒಂದು ಉಸಿರುಹೊತ್ತ ಜೀವವಿದೆ.ನಮಗಾಗಿ ದುಡಿದ ಚೇತನವಿದೆ.ಅನಿಸಲಿಲ್ಲವೇ ಒಮ್ಮೆಯೂ. ಕಾಲೆಳೆದು ನಡೆದಿದ್ದೇವೆ.ದೇಹಕ್ಕಿಂತ ಭಾರವಾದಉಸಿರನ್ನು ಹೊತ್ತುಕೊಂಡು.ಊರು ತಲುಪುವ ಆಸೆಯಿಂದ.ನಮ್ಮದೇನಾದರೂ ಜಾಗ,ಒಂದಾದರೂ ಕುರುಹು..ಅಲ್ಲಿಯಾದರೂ..ಉಳಿದಿರಬಹುದೆಂಬ ನಿರೀಕ್ಷೆಯಿಂದ. ಹೊರಟಿದ್ದೇವೆ ಒಂದೊಮ್ಮೆನಮ್ಮದಾಗಿದ್ದ ನಮ್ಮ ಊರಿಗೆ. *******************

ನಾವೀಗ ಹೊರಟಿದ್ದೇವೆ Read Post »

ಕಾವ್ಯಯಾನ

ಮಗಳು ಹುಟ್ಟಿದ್ದಾಳೆ

ಕವಿತೆ ನಿನ್ನೆ ಯಾವನೋ ಪಾಪಿ ತ್ರಿಪುರದಲ್ಲಿ ಹೆಣ್ಣು ಹುಟ್ಟಿದೆ ಅಂತ ತಾನು ಆತ್ಮಹತ್ಯೆ ಮಾಡಿಕೊಂಡನಂತೆ ಮತ್ತು ಅವನ ಮಡದಿ ಹೃದಯಾಘಾತವಾಗಿ ಸತ್ತಳು.ಅದಕ್ಕೆ ಇದನ್ನು ನಿಮಗೆ ಒಪ್ಪಿಸಬೇಕು ಅನಿಸಿತು. ಪ್ಯಾರಿಸುತ ಮಗಳು ಹುಟ್ಟಿದ್ದಾಳೆ…ಪದಗಳಿಗೆ ಸಿಗದ ದನಿಯೊಂದುಕಿವಿಗೆ ಬಿದ್ದು ನನ್ನ ಮನವು ಹಿಗ್ಗಿದೆಮುದ್ದು ಮುದ್ದು ಮುಖವ ಹೊತ್ತುಬೆಳಗು ಮುಂಜಾನೆ ಬೆಳಕು ಚಿಮ್ಮಿಸಿಬೆಚ್ಚನೆ ಹಾಸಿಗೆಯಲ್ಲಿ ಗೊಂಬೆಯಂತೆ ಮಲಗಿದ್ದಾಳೆಅವಳ ಮುಷ್ಟಿಯಲ್ಲಿ ಅನ್ನದ,ಆಯುಷ್ಯದ,ವಿದ್ಯಾರೇಖೆಗಳುಅಡ್ಡವಾಗಿ ನದಿಯು ಹರಿಯುವ ದಾರಿಯಂತೆಗುರುತು ಮಾಡಿಕೊಂಡಿವೆಬೆಳ್ಳಿ ಮುಖದಲ್ಲಿ ಹೊಮ್ಮುವ ಪ್ರಕಾಶತೆಗೆಸುತ್ತಲೂ ಎಲ್ಲರಿಗೂ ನಗುವು ಹಂಚಿ ಹೋಗಿದೆಅವಳು ಗೊಂಬೆ,ಹೆಮ್ಮರದ ಕೊಂಬೆ ಮಗಳು ಹುಟ್ಟಿದ್ದಾಳೆ….ನನಗೂ ನನ್ನವಳಿಗೂ ಅವಳೇ ಅಧಿನಾಯಕಿಯಿನ್ನುತಡವಾಗಿ ಬರಲಾರೆ,ಸುಳ್ಳೆಂದು ಹೇಳಲಾರೆಅವಳಿರುವ ಭಯಕ್ಕೀಗ ಬಲುಬೇಗ ನಾ ಬರುವೆಅಂಬೆಗಾಲು ಬಯಸಿದ ನಮ್ಮನೆ ಅಂಗಳವೀಗಸಂತೋಷ ತುಂಬಿಕೊಂಡಿದೆಮಿತಿಯು ನಿನಗಿಲ್ಲ ಮಗಳೇ,ಭೀತಿಯ ತರಿಸಲ್ಲಚುಕ್ಕಿ,ಬೆಳದಿಂಗಳು,ಚಂದ್ರರೆಲ್ಲರೂ ರಾತ್ರಿಯಲ್ಲಿ ನಿನ್ನ ಸ್ನೇಹಿತೆಯರುಕೈ ಮಾಡಿ ನೀ ಕರೆದರೆ ತಡಬಡಿಸಿ ಬರುವರುನಾ ನಿನ್ನ ಆನೆಯುನೀ ನನ್ನ ಅಂಬಾರಿನಿನ್ನ ಹೊತ್ತು ಮೆರೆಸುವೆನುನೀನಾಗು ಜಗವಾಳು ದೊರೆಸಾನಿ ************

ಮಗಳು ಹುಟ್ಟಿದ್ದಾಳೆ Read Post »

ಕಾವ್ಯಯಾನ

ಸಂಜೆಯಾಗುತಿದೆ

ಕವಿತೆ ಶಾಂತಲಾ ಮಧು ಸಂಜೆಯಾಗುತಿದೆಆರಾಗಲಿಲ್ಲ ಸಂಜೆಯಾಗುತಿದೆಬೆಳದಿಂಗಳಾಸೆ ಚಂದ್ರನಿಗೆಕಸ್ತೂರಿ ತಿಲಕವನಿಡುವೆನೆನುತಹಾಡಿ ಓಡಿದರೆ,ಸಂಜೆಯಾಗುತಿದೆ ಬೆಟ್ಟಗಳ ತುದಿ ಏರಿಮೋಡದಲಿ ಈಜಾಡಿ..ಹಕ್ಕಿ ಜೊತೆ ಚಿಲಿಪಿಲಿಮಾತಾಡ ಹವಣಿಸಲುಹಾರಿ ಹೋಯಿತು ಹಕ್ಕಿಸಂಜೆಯಾಗುತಿದೆ ಮೊಟ್ಟೆ ಮರಿಗಳ ಸಲಹಿರೆಕ್ಕೆ ಪುಕ್ಕಗಳು ಬಲಿತುಹಾರ ಬಯಸಲು ಮುನ್ನಸಂಜೆಯಾಗುತಿದೆ ಹುಲ್ಲು ಗರಿಕೆಯ ತಂದುಎಣಿಸಿ ಪೋಣಿಸಿ ಗೂಡು ಕಟ್ಟಿಮೆರೆಯುವ ತವಕಸಂಜೆಯಾಗುತಿದೆ ಚಲಿಸುತಿದೆ ಚಿತ್ರವದುಮನಃ ಪಟಲ ಕೆದಕುತಿದೆಕೆಂಪನೆಯ ಆಗಸದಿಮರೆಯಾಗುತಿಹನವನುಸಂಜೆಯಾಗುತಿದೆ *****

ಸಂಜೆಯಾಗುತಿದೆ Read Post »

ಅನುವಾದ

ಊರುಗೋಲು

ಅನುವಾದಿತ ಕವಿತೆ ಮೂಲ: ಬರ್ಟೋಲ್ಡ್ ಬ್ರೆಕ್ಟ್ ಕನ್ನಡಕ್ಕೆ: ವಿ.ಗಣೇಶ್ ಹತ್ತು ವರುಷಗಳ ಕಾಲ ಹೆಜ್ಜೆಯಿಡಲಾರದಲೆ ವೈದ್ಯನ ಸಲಹೆ ಪಡೆಯಲಂದು ನಾ ಬಂದೆ ‘ನಿಮಗೆ ಊರುಗೋಲೇಕೆ?’ ಎಂದವನು ಕೇಳಲು ನಾ ಹೆಳವ ಎನುತ ವಾದಿಸಿದೆನು. ಮುಗುಳು ನಗೆ ಸೂಸುತ ಆ ಹಿರಿಯ ವೈದ್ಯನು ‘ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು, ಊರುಗೋಲಿಂದಲೆ ನೀ ಹೆಳವನಾಗಿರುವೆ ತೆವಳುತ್ತ ತೆವಳುತ್ತ ನಡೆ ಮುಂದೆ’ ಎಂದ. ನನ್ನ ಪ್ರಿಯ ಸಾಧನವ ಕಸಿಯುತ್ತಲವನು ಸೈತಾನ ನೋಟವನು ಬೀರುತ್ತಲದರೆಡೆಗೆ ಆ ಪ್ರಿಯ ಸಾಧನವ ಮೆಟ್ಟಿ ತುಳಿಯುತಲಿ ಉರಿಯುತಿಹ ಬೆಂಕಿಗೆ ಎಸೆದು ಬಿಟ್ಟ ಪೂರ್ಣ ಗುಣಮುಖನಾಗಿ ನಡೆಯುತಿಹೆನಿಂದು ನಗುವಿನಿಂದಲೆ ನಾ ಗುಣವ ಪಡೆದಿರುವೆ ಕೆಲವೊಮ್ಮೆ ಕೋಲುಗಳ ನಾ ಕಂಡರೀಗಲೂ ಹೆಳವನಾ ರೀತಿಯಲೇ ನಡೆಯುತಿಹೆನು ************************************ Crutches By Burtlact Brect

ಊರುಗೋಲು Read Post »

ಕಥಾಗುಚ್ಛ

ಕಾದ್ರಿಯಾಕ ಮತ್ತು ನಾಡ ದೋಣಿ

ಕಿರು ಕಥೆ ಕೆ.ಎ. ಎಂ. ಅನ್ಸಾರಿ ಪಕ್ಕದ  ಮಸೀದಿಯ ಬಾಂಗು(ಅಜಾನ್) ಕೇಳಿದಾಗ ಎದ್ದೇಳುವ ಕಾದ್ರಿಯಾಕನ ದಿನಚರಿ ಮಗ್ರಿಬ್ (ಮುಸ್ಸಂಜೆ) ವರೆಗೂ ಮುಂದುವರಿಯುತ್ತಿತ್ತು. ಬೆಳಗ್ಗೆ ಎದ್ದಕೂಡಲೇ ದೋಣಿಯ ಹತ್ತಿರ ಹೋಗಿ ದೋಣಿಯ ಸುತ್ತ ಒಂದು ಪ್ರದಕ್ಷಿಣೆ ಹಾಕಿ ಅದರ ಪ್ರತಿ  ಭಾಗಕ್ಕೆ ಒಂದು ಚಿಕ್ಕ ಏಟು. ನಂತರ ದೋಣಿಯ ಒಳಗಡೆ  ಕುಳಿತುಕೊಳ್ಳುವ ಆಸನದ ಪರಿಶೀಲನೆ… ಎಲ್ಲೂ ಹಲಗೆ ಅಲುಗಾಡುತ್ತಿಲ್ಲ… ಎಂಬುದನ್ನು ಖಾತ್ರಿಪಡಿಸುವಿಕೆ. ನಂತರ ಕಂಗಿನ ಹಾಳೆಯಿಂದ ಮಾಡಿದ ಚಿಳ್ಳಿ (ನೀರೆತ್ತಲು ಮಾಡಿದ ದೇಸಿ ಪರಿಕರ)ಯಿಂದ ದೋಣಿಯೊಳಗಿನ ನೀರನ್ನು ಹೊರಚೆಲ್ಲುವುದು. ದೋಣಿಗೆ ಸುಮಾರು ಇಪ್ಪತ್ತು-ಮೂವತ್ತು ವರುಷದ ಚರಿತ್ರೆಯಿದೆ. ಅಷ್ಟೂ ಹಳೆಯದಾದ ಚಿಕ್ಕ ನಾಡ ದೋಣಿ. ಅಲ್ಲಲ್ಲಿ ತೂತಾಗಿದ್ದರೂ ಡಾಂಬರು ಹಾಕಿ ಪ್ಯಾಚ್ ವರ್ಕ್ ನಡೆಸಲು ಕಾದ್ರಿಯಾಕ ಮರೆಯುತ್ತಿರಲಿಲ್ಲ. ಹೊಳೆಯ ಆ ಬದಿಯಿಂದ ಕೂಯ್ ಎಂಬ ದನಿಯೊಂದು ಕೇಳಿದರೆ ಸಾಕು.. ಈ ದಡದಿಂದ ಕೂಯ್ ಕೂಯ್ ಎಂದು ಪ್ರತಿದ್ವನಿ ಕೊಟ್ಟು ಹುಟ್ಟು (ತುಡುವು) ಹಾಕುತ್ತಾ ಆ ದಡಕ್ಕೆ ಯಾತ್ರೆ. ಈ ದಡದಿಂದ ಆ ದಡಕ್ಕೆ ಮೈಲಿಯ ದೂರವೇನೂ ಇಲ್ಲ. ಐದು ನಿಮಿಷದ ದಾರಿ. ಅವರ ಭಾಷೆಯಲ್ಲಿ ಹೇಳುವುದಾದರೆ ಒಂದು ಬೀಡಿ ದೂರ. ಅಂದ್ರೆ ಹುಟ್ಟು ಹಾಕುವಾಗ ಬೀಡಿ ಹೊತ್ತಿಸಿ ಬಾಯಲಿಟ್ಟರೆ ನಾಲ್ಕು ಸಲ ಹೊಗೆ ಬಿಟ್ಟಾಗ ಆ ದಡದಲ್ಲಿ ಹಾಜರ್. ಎಲ್ಲರ ಹಾಗೆ ಕಾದ್ರಿಯಾಕನಿಗೂ ಒಂದು ಕನಸಿತ್ತು. ಒಂದು ಹೊಸ ದೋಣಿ ಖರೀದಿಸಬೇಕು. ಅದೇನೂ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ತನಗೇ ಗೊತ್ತಿತ್ತು. ಹೊಳೆದಾಟಲು ಊರವರು ಕೊಡುತ್ತಿದ್ದ  ಒಂದೋ ಎರಡೋ ರೂಪಾಯಿಗಳು ಸೇರಿದರೆ ಐವತ್ತೋ ನೂರೋ ಆಗುತ್ತಿತ್ತು ಅಷ್ಟೇ… ಅದರಿಂದ ಆತನ ದಿನದ ಖರ್ಚಿಗೇ ಸಾಕಾಗುತ್ತಿರಲಿಲ್ಲ. ಖಾದ್ರಿಯಾಕನಿಗೆ ವಯಸ್ಸಾಗುತ್ತಾ ಬಂತು. ಗಂಡು ಮಕ್ಕಳೆಲ್ಲಾ ಪೇಟೆಗೆ ಕೆಲಸಕ್ಕೆ ಹೋಗಲು ಶುರುಮಾಡಿದರು. ದೋಣಿಗೆ ಹುಟ್ಟು ಹಾಕಿ ಹಾಕಿ ಆತನ ರಟ್ಟೆ ಬಲವೂ ಕ್ಷೀಣಿಸುತ್ತಾ ಬಂದಿತ್ತು. ಈ ನಡುವೆ ಪೇಟೆಗೆ ಹೋಗಲು ಇನ್ನೊಂದು ಭಾಗದಿಂದ ಸೇತುವೆಯೂ ನಿರ್ಮಾಣವಾಯಿತು. ಅದರೊಂದಿಗೆ ಪ್ರತಿ ಮನೆಯಲ್ಲೂ ದ್ವಿಚಕ್ರ ವಾಹನದ ಆಗಮನವೂ ಆಯಿತು. ಸಾಧಾರಣ ಲುಂಗಿ, ಲಂಗ, ಸೀರೆಯುಡುತ್ತಿದ್ದ ಊರವರ ಜೀವನ ಶೈಲಿಯೂ ಬದಲಾಯಿತು. ಒಂದು ಕಯ್ಯಲ್ಲಿ ಚಪ್ಪಲಿಯನ್ನು ಇನ್ನೊಂದು ಕಯ್ಯಲ್ಲಿ ಲುಂಗಿಯನ್ನೋ ಲಂಗವನ್ನೂ ತುಸು ಮೇಲಕ್ಕೆತ್ತಿ ದೋಣಿಯೇರುವ ಜನರ ಜೀವನದಲ್ಲಿ ಬೂಟು, ಪೈಜಾಮ, ಪ್ಯಾಂಟುಗಳು ಬಂದಮೇಲೆ ನೀರಲ್ಲಿ/ಕೆಸರಿನಲ್ಲಿ ತುಸು ದೂರ ನಡೆಯಲು ಯಾತ್ರಿಕರಿಗೆ ಕಷ್ಟವಾಗತೊಡಗಿತು. ತುಸು ದೂರವಾದರೂ ವಾಹನಗಳಲ್ಲಿ ಸೇತುವೆ ದಾಟಿ ಹೋಗಲು ಜನರು ಉತ್ಸುಕರಾದಾಗ ಕಾದ್ರಿಯಕರ ಸಂಪಾದನೆಗೂ ಕತ್ತರಿ ಬಿತ್ತು. ಅಂಗಳದಲ್ಲಿ ದೋಣಿ ಅಂಗಾತ ಮಲಗಿತು. ಮನೆಯೊಳಗೆ ಕಾದ್ರಿಯಾಕಾನೂ. ಕೋವಿಡ್ 19 ಎನ್ನೋ ಮಹಾಮಾರಿ ಭಾರತಕ್ಕೆ ಲಗ್ಗೆಯಿಟ್ಟ ವಿಷಯ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದು ಮಾಧ್ಯಮಗಳಲ್ಲಿ ಕಾಣಿಸುತ್ತಿತ್ತು. ಎಲ್ಲರೂ ಭಯಭೀತರಾಗಿ ಮನೆಯಲ್ಲೇ ಕುಳಿತುಕೊಂಡಿರುವ ಸಮಯ. ಲಾಕ್ಡೌನ್ ಶುರುವಾಗಿದೆ… ಎಲ್ಲಾ ಕಡೆ ರಸ್ತೆಗಳು ಮುಚ್ಚಿವೆ… !! ಈ ಪರಿಸ್ಥಿತಿಯಲ್ಲಿ ರಾತ್ರಿ ಸುಮಾರು ಹನ್ನೆರಡು ಗಂಟೆಗಯ ಹೊತ್ತಲ್ಲಿ ಐದಾರು ಜನರ ಗುಂಪು ಕಾದ್ರಿಯಾಕನ ಮನೆಬಾಗಿಲು ತಟ್ಟತೊಡಗಿದರು. ಕಾದ್ರಿಯಾಕನಿಗೆ ಎದ್ದು ನಡೆಯಲಾಗುತ್ತಿಲ್ಲ. ಕಾಕನ ಮಡದಿ ಬಾಗಿಲು ತೆರೆದಾಗ ಅಲ್ಲಿ ಕಂಡದ್ದು ಶಂಕರ ಭಟ್ರ ಮಗ,  ತುಂಬು ಗರ್ಭಿಣಿ ಸೊಸೆ…. ನಾಲ್ಕೈದು ಊರ ಭಾಂಧವರು. ಗುಂಪಿನಿಂದ ಹೇಗಾದರೂ ಮಾಡಿ ಹೊಳೆದಾಟಿಸಿಕೊಡಬೇಕೆಂಬ ನಿವೇದನೆ. ಊರಲ್ಲಿ  ಯಾವೊಬ್ಬನೂ ಕರೆದರೆ ಬರುತ್ತಿಲ್ಲ. ಎಲ್ಲರಿಗೂ ಕೊರೊನಾದ ಭಯ. ಪೊಲೀಸರು ಯಾರನ್ನೂ ಪೇಟೆಗೆ ಬಿಡುತ್ತಿಲ್ಲ. ಆಸ್ಪತ್ರೆ ಸೇರಬೇಕಾದರೆ ಇನ್ನೊಂದು ರಾಜ್ಯದ ಗಡಿ ದಾಟಬೇಕು… ಎಲ್ಲಾ ಕಡೆ ಪೊಲೀಸರ ಸರ್ಪಗಾವಲು. ಆಂಬುಲೆನ್ಸ್ ಕೂಡಾ ರಾಜ್ಯದ ಗಡಿ ದಾಟಲು ಬಿಡುತ್ತಿಲ್ಲ. ಹೇಗಾದರೂ ಮಾಡಿ ಹೊಳೆ ದಾಟಿಸಿ ಕೊಡಬೇಕು… ಕಾದ್ರಿಯಾಕನಿಗೆ ಏನುಮಾಡಬೇಕೆಂದು ತೋಚಲಿಲ್ಲ. ದೋಣಿ ಹಳೆಯದಾಗಿದೆ. ಅಂಗಾತ ಮಲಗಿದೆ ಎಂದು ಹೇಳುವ ಹಾಗೆಯೂ ಇಲ್ಲ. ರಾತ್ರೋ ರಾತ್ರಿ ಎಲ್ಲರೂ ಸೇರಿ ದೋಣಿಯನ್ನು ಹೊಳೆಗಿಳಿಸಿದರು. ಕಾದ್ರಿಯಾಕನ ಗೈರು ಹಾಜರಿಯಲ್ಲಿ ಮಡದಿ ಪಾತುಮ್ಮ ಹುಟ್ಟು ಹಾಕಿ ಇನ್ನೊಂದು ದಡಸೇರಿಸಿ ವಾಪಸ್ ಬಂದಾಗ ಕಾದ್ರಿಯಾಕನ ಕಣ್ಣುಗಳು ತೇವಗೊಂಡಿತ್ತು.

ಕಾದ್ರಿಯಾಕ ಮತ್ತು ನಾಡ ದೋಣಿ Read Post »

You cannot copy content of this page

Scroll to Top