Day: July 1, 2020

ಪುಸ್ತಕ ಸಂಗಾತಿ

ದೃಷ್ಟಾಂತದ ಮೂಲಕ ನೀತಿಯ ಬೋಧನೆ. ಸೋಮೇಶ್ವರ ಶತಕ ಕೃತಿ : ಸೋಮೇಶ್ವರ ಶತಕಪುಲಿಗೆರೆ ಸೋಮನಾಥ.ಕನ್ನಡ ಸಾಹಿತ್ಯ ಪರಿಷತ್ತು.ಚಾಮರಾಜಪೇಟೆ.ಬೆಂ.ಮರು ಮುದ್ರಣ:೨೦೨೦.ಬೆಲೆ :೬೦. ಪುಸ್ತಕ ಪರಿಚಯ: ಕೃತಿ: *ಸೋಮೇಶ್ವರ ಶತಕಪುಲಿಗೆರೆಯಸೋಮನಾಥ ನಾವೆಲ್ಲಾ ಶಾಲೆಯಲ್ಲಿ ಕಲಿಯುವಾಗ ಕನ್ನಡ ಪಠ್ಯಪುಸ್ತಕದಲ್ಲಿ ‘ ಹರಹರಾ ಶ್ರೀಚೆನ್ನ ಸೋಮೇಶ್ವರ ‘ ಎಂದು ಕೊನೆಗೆ,ಮತ್ತೆ ಮತ್ತೆ ರಾಗವಾಗಿ ಹಾಡುವ ಪದ್ಯಗಳನ್ನು ಓದಿಯೇ ಇದ್ದೇವೆ.ಈಗಲೂ ಒಂದರಿಂದ ಹನ್ನೆರಡನೆ ತರಗತಿಯ ವರೆಗಿನ ಕನ್ನಡ ಪಠ್ಯದಲ್ಲಿ, ಎರಡು ಮೂರು ಪಠ್ಯಗಳಲ್ಲಾದರೂ ಈ ಬಗೆಯ ಪದ್ಯಗಳಿವೆ.ಇವು ಪುಲಿಗೆರೆ ಸೋಮೇಶ್ವರನ ಶತಕದಿಂದ ಆರಸಿ ಇಡುತ್ತಿದ್ದ […]

ಅಕ್ಷರದ ಬಂಡಾಯ ತಲ್ಲಣಗಳಿಗೆ ಪ್ರತಿಕ್ರಿಯೆ ಬೇಕಾದ ಅನಿವಾರ್ಯತೆಯಲ್ಲಿ ಬರೆಯಲು ಮನಸ್ಸು ಮಾಡಿದೆ’ ಡಾ.ರಾಮಕೃಷ್ಣ ಗುಂದಿ ಡಾ.ರಾಮಕೃಷ್ಣ ಗುಂದಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕತೆಗಾರರಲ್ಲಿ ಒಬ್ಬರು. ಅವಾರಿ ಅವರ ಪ್ರಸಿದ್ಧ ಕತೆ. ಅವರ ಮೊದಲ ಕಥಾ ಸಂಕಲನ ಅವಾರಿ ಹೆಸರಲ್ಲೇ ಪ್ರಕಟವಾಯಿತು. ಕಡಲ ಬೆಳಕಿನ ದಾರಿಯಲ್ಲಿ, ಸೀತೆದಂಡೆ ಹೂವೆ ಅವರ ಕಥಾ ಸಂಕನಲಗಳು. ಪ್ರಾಂಜಲ ಅವರು ವಿವಿಧ ಲೇಖಕರಿಗೆ ಬರೆದ ಮುನ್ನುಡಿಗಳ ಸಂಗ್ರಹ. ಆಗೇರರ ಬದುಕು ಮತ್ತು ಸಂಸ್ಕೃತಿ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ […]

ಕಾವ್ಯಯಾನ

ನೆನಪುಗಳಲ್ಲಿ ಅವಳು ಲಕ್ಷ್ಮೀ ಪಾಟೀಲ್ ಅವಳ ಏಕಾಂತ ತೆರೆಯುತ್ತದೆ ನಿತ್ಯ ಕೈ ಮುಟ್ಟಿಕೂದಲು ಹಿಡಿದರೆ ಎದುರು ಮರದ ಕೆಳಗೆಸಂಧ್ಯಾ ರಾಗದ ಸಂಜೆ ಅದೇ ಮರ ಕೈ ಮಾಡಿ ಕರೆಯುತ್ತದೆ ಕೂದಲ ಸಿಕ್ಕು ಬಿಡಿಸಿಕೊಳ್ಳಲುನೀಟಾಗಿ ನೆನಪುಗಳ ತಲೆ ಬಾಚಲುಏಕಾಂತಕ್ಕೆ ಜೊತೆ ಹುಡುಕಿ ಧ್ಯಾನಿಸಲು ಸಂಧ್ಯಾರಾಗದೆ ದುರು ತಾನು ಮತ್ತೊಂದು ಕವಿತೆಯಾಗಲು !ಬರೆಯದ ಭಾವ ಗಳೆಲ್ಲ ಸಿಕ್ಕುಗಳಂತೆ ಮುತ್ತುವವು ಧ್ಯಾನಸ್ಥಳಾಗುವಳಾಗ ಕವಿತೆಯ ಸುತ್ತ !ಎಷ್ಟೊಂದು ಕವಿತೆ ಬದುಕಿದೆನಲ್ಲ ಬರೆಯಲು ಬಂದಿದ್ದರೆಪೈಪೋಟಿಯಲ್ಲಿ ಕವಿತೆ ಗೆಲ್ಲಿಸಬಹುದಿತ್ತುಈ ಹೇನು ಹರಿದಾಡಿಸಿಕೊಳ್ಳುವ ಹಿಂಸೆಗೆಮುಕ್ತಿ ಸಿಗಬಹುದಿತ್ತು ಎಂದುಕೊಳ್ಳುವಳುಈ […]

ಕಾವ್ಯಯಾನ

ನಾನು ಕೆಟ್ಟವಳು ಶೀಲಾ ಭಂಡಾರ್ಕರ್ ನಿನ್ನ ಪ್ರೀತಿಯ ಪರಿಮಾಣದಲ್ಲಿಒಂದಿಷ್ಟು ಆಚೆ ಈಚೆಯಾದಾಗನಾನು ಕೆಟ್ಟವಳು. ನನ್ನನ್ನು ಬದಿಗೆ ತಳ್ಳಿಇನ್ಯಾರನ್ನೋ ತಲೆ ಮೇಲೆಕೂರಿಸಿಕೊಂಡಾಗ,ನಾನು ಕೆಟ್ಟವಳು. ಅತಿಯಾಗಿ ಸಿಟ್ಟು ಬಂದಾಗನಿನ್ನ ಚುಚ್ಚಿ ನೋಯಿಸಿಖುಷಿ ಪಡುವಾಗನಿಜವಾಗಲೂನಾನು ಕೆಟ್ಟವಳು. ಇಷ್ಟೇ.. ನಾನು ಕೆಟ್ಟವಳಾಗುವುದುಇವಿಷ್ಟೇ ಸಂದರ್ಭಗಳಲ್ಲಿ. ನಾನು ಕೆಟ್ಟವಳಾದಮರುಕ್ಷಣವೇಮನವರಿಕೆಯಾಗಿಮತ್ತೆ ನಿನ್ನೆಡೆಗೆ ಬಂದಾಗ, ನೀನು ಎಂದಿನಂತೆಮುದ್ದಿಸುವಿಯಲ್ಲ..!ಆಗ ಮಾತ್ರ..ನೀನೇ ಕೆಟ್ಟವನು. ************

ದಿಕ್ಸೂಚಿ

ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ ಜಯಶ್ರೀ.ಜೆ.ಅಬ್ಬಿಗೇರಿ ಮೊದಲೇ ಓದಿನ ಒತ್ತಡ. ಇದು ಸಾಲುವುದಿಲ್ಲ ಎಂಬಂತೆ ಬಹು ದಿನಗಳಿಂದ ಬೆನ್ನು ಬಿಡದಿರುವ ಕೆಲ ವೈಯುಕ್ತಿಕ ಸಮಸ್ಯೆಗಳು. ತಲೆ ತಿನ್ನುತ್ತಿವೆ. ಒಂದಿಷ್ಟು ಹೊತ್ತು ಎಲ್ಲೋ ಒಂದು ಕಡೆ ಹೋಗಿ ಮೌನವಾಗಿದ್ದು ಬರೋಣವೆಂದರೆ ನಿಮ್ಮ ಗೆಳೆಯ/ ಗೆಳತಿ ನಿಮಗೆ ಸಂಬಂಧವಿಲ್ಲದ ಯಾವುದೋ ವಿಷಯ ಹೇಳಿ ತಲೆ ತಿನ್ನುತ್ತಿದ್ದರೆ ಕೋಪ ನೆತ್ತಿಗೇರಿ ಬಿಡುತ್ತದೆ. ಖಂಡ ತುಂಡವಾಗಿ ಹೇಳಿ ಹೊರಗೆ ಅಟ್ಟಬೇಕೆನಿಸಿದರೂ ಹಾಗೆ ಮಾಡಲು ಸಾಧ್ಯವಿಲ್ಲವೆಂದು ಹೇಗೋ ಸಹಿಸಿಕೊಳ್ಳುತ್ತೀರಿ. ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ […]

Back To Top