Day: July 31, 2020

ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ಶೀಲಾ ಭಂಡಾರ್ಕರ್ ನಾನು ಮೊದಲ ಕವಿತೆ ಬರೆದಾಗ ಅದು ಪದ್ಯವೋ ಗದ್ಯವೋ ನನಗೇ ತಿಳಿಯಲಿಲ್ಲ. ನಾನದನ್ನು ಕವಿತೆ ಅಂದುಕೊಂಡೆ ಅಷ್ಟೇ. ಬರೆಯಬೇಕೆಂದು ಬರೆದುದಲ್ಲ ಅದು ಕಾಳಿದಾಸನ ಬಾಯಿಯಿಂದ ಆಕಸ್ಮಿಕವಾಗಿ ನಿರರ್ಗಳವಾಗಿ ಶ್ಯಾಮಲಾ ದಂಡಕದ ಮಾಣಿಕ್ಯ ವೀಣಾ ಶ್ಲೋಕ ಹೊರಹೊಮ್ಮಿದಂತೆ ನನ್ನ ಮನಸ್ಸಿನೊಳಗೆ ಕೆಲವು ಸಾಲುಗಳು ಹಾಗೆ ಹಾಗೆಯೇ ಬರಲು ಶುರುವಾದವು. ಅಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೊಂದು ರಾತ್ರಿ. ಎಂದಿನಂತೆ ಅದೂ ಒಂದು ರಾತ್ರಿ. ಮಲಗಿದರೆ ನಿದ್ದೆ ಹತ್ತುತ್ತಿಲ್ಲ. ಏನೇನು ಮಾಡಿದರೂ ಪ್ರಯತ್ನ ಫಲಕಾರಿ […]

ಕನಸು

ಕವಿತೆ ಅರುಣಾ ರಾವ್ ಸ್ವಪ್ನದಲ್ಲಿ ಕಂಡೆ ಸುಂದರ ಲೋಕ ಮನೆಗಳು ಮಹಲು ಮಾಲು ಮಂದಿರ ರಸ್ತೆ ಸೇತುವೆ ಮಾರುಕಟ್ಟೆ ಜನ ನೋಡುತ ನಡೆದೆ ಬೀದಿಯ ಗುಂಟ ಸಿನಿಮಾ ನೋಡಲು ನೆರೆದ ತರುಣರು ವಸ್ತ್ರಭಂಡಾರದಿ ಸೀರೆ ಬಳೆಗಳು ಪುಸ್ತಕ ಭಾರವ ಬೆನ್ನಲ್ಲಿ ಹೊತ್ತು ನಗುತ ಸಾಗುವ ಪುಟ್ಟ ಮಕ್ಕಳು ಕಚೇರಿಗಳಿಗೆ ಸಾಗುವ ಜನರು ದೇಗುಲಗಳಲಿ ನೆರೆದ ಭಕ್ತರು ಮದುವೆ, ಮುಂಜಿ ಸಮಾರಂಭಗಳು ಚರ್ಚು ಮಸೀದಿ ಪ್ರಾರ್ಥನೆ ಮೊಳಗು ರಸ್ತೆಯಂಚಿನಲ್ಲಿ ವ್ಯಾಪಾರ ಜೋರು ಹೋಟೆಲುಗಳಲ್ಲಿ ತಿಂಡಿಗೆ ಸಾಲು ಎಲ್ಲರ ಮುಖದಲ್ಲಿ […]

ನಡುಮನೆಯ ಕತ್ತಲಲ್ಲಿ

ಕವಿತೆ ಅಬ್ಳಿ,ಹೆಗಡೆ         ನಾನು ಮತ್ತು ದೇವರು         ಇಬ್ಬರೇ ಕುಳಿತಿದ್ದೇವೆ         ನಡುಮನೆಯ ಕತ್ತಲಲ್ಲಿ.         ನನಗಿಷ್ಟ ಇಲ್ಲಿಯ ಕತ್ತಲು.         ಕಾರಣವಿಷ್ಟೇ…..         ಇಲ್ಲಿ ಬೆತ್ತಲಾದರೂ         ಗೊತ್ತಾಗುವದಿಲ್ಲ ಹೊರಗೆ.         ದಟ್ಟ ಕತ್ತಲು-         ಯಾವಾಗಲೂ ರಾತ್ರಿಯೆ.         ಇಲ್ಲಿ ಹಗಲಿನೆಚ್ಚರದಲ್ಲೂ         ಕನಸು ಕಾಣಬಹುದು.         ವಿಹರಿಸಬಹುದು-         ನೀಲಾಕಾಶದಲ್ಲಿ         ಚುಕ್ಕಿ,ಚಂದ್ರಮರೊಟ್ಟಿಗೆ.         ಇಲ್ಲಿ ಯಾವಾಗಲೋ         ಅಪರೂಪಕ್ಕೊಮ್ಮೆ         ತೆರೆದುಕೊಳ್ಳುವದೂ-         ಉಂಟು,ವರ್ಣಮಯ         ಹೊರ ಜಗತ್ತು.         […]

ಧಾರವಾಡದ ಹೇಮಾಮಾಲಿನಿ

ಸಣ್ಣ ಕಥೆ ಬಸವರಾಜ ಹೂಗಾರ ಆಕೆ ಒಡೆದ ಪ್ರತಿಮೆಯಂತಿದ್ದಳು. ಬಿದ್ದ ಪ್ರತಿಮೆಯ ಯಾವುದೇ ಚೂರಾದ ಸಂಗತಿಯನ್ನು ಎತ್ತಿಕೊಂಡರೂ ಅಲ್ಲಿಂದ ಬಿಂಬಗಳು ಕಾಣಿಸುತ್ತಿದ್ದವು . ಆಕೆ ಹೆಚ್ಚು ಪ್ರೇಮದ ಕುರಿತು ಮಾತನಾಡುತ್ತಿದ್ದಳು ಆಕೆಯ ಡ್ರೆಸ್ಸಿನದೇ ಒಂದು ವಿಚಿತ್ರ ಡಿಸೈನ್ .ಕಟ್ಟಿಕೊಂಡ ಬಣ್ಣದ ಬಟ್ಟೆಯ ತುಣುಕುಗಳು ,ಬೊಚ್ಚು ಬಾಯಿ ,ಅರ್ಧ ಗೌನೊ ,ಬಣ್ಣದ ಗಗ್ಗರಿಯನ್ನೊ ಉಟ್ಟುಕೊಂಡು ಬಗಲಿಗೆ ಜೋಳಿಗೆ ಏರಿಸಿ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾ ಕೆಲವು ಸಾರಿ ದಿವ್ಯ ಮೌನ ವಹಿಸುತ್ತಾ ಚಿಂದಿ ಆಯುತ್ತಿದ್ದರೆ, ಅದು ಧಾರವಾಡ ಗೊತ್ತಿದ್ದವರಾಗಿದ್ದರೆ‌  ಖಂಡಿತ  […]

ಜ್ವಾಲೆಗಳ ನಡುವೆ…ಹುಟ್ಟಿದ ಕಾವ್ಯ

ಮೊದಲ ಕವಿತೆಯ ರೋಮಾಂಚನ ನಾಗರಾಜ ಹರಪನಹಳ್ಳಿ ನಾನು ಸಾಹಿತ್ಯದ ವಿದ್ಯಾರ್ಥಿ. ಉಪನ್ಯಾಸಕ ಆಗಬೇಕೆಂದು ಕೊಂಡಿದ್ದೆ. ಆಗಿದ್ದು ಪತ್ರಕರ್ತ. ಬಿಡುವಿನ ಮಧ್ಯೆ ಸಾಹಿತ್ಯದ ಓದು, ಬರಹ ಇದ್ದೇ ಇದೆ. ನನ್ನ ಮೊದಲ ಕವಿತೆ ಪ್ರಕಟವಾದದ್ದು ದಾವಣಗೆರೆಯ ಹೊಯ್ಸಳ ಪತ್ರಿಕೆಯಲ್ಲಿ. ೧೯೯೨ ರ ಸಮಯ. ಕವಿತೆಯ ಶೀರ್ಷಿಕೆ “ಕಲೆಗಳು” ಅಂತ ನೆನಪು.‌ ಸಾಹಿತ್ಯ ಸಂಗಾತಿ ಆ ಕವಿತೆಯ ನೆನಪಿಸಿತು.‌ಹೊಯ್ಸಳದ ಪ್ರತಿ ಸಿಕ್ಕೀತೆಂದು ಹುಡುಕಾಡಿದೆ.‌ ಸಿಗಲಿಲ್ಲ.‌ ಕವಿತೆ ಬಂಧ ಗಟ್ಟಿಯಾಗಿರಲಿಲ್ಲ.‌ ಬಂಡಾಯ  ಶೈಲಿಯ ಕವಿತೆಯಾಗಿತ್ತು. ೧೯೯೧-೯೨ ಸಮಯದಲ್ಲಿ ಫ್ರೆಂಚ್ ಲೇಖಕರಾದ ಅಲ್ಬರ್ಟ  […]

ಇರುವುದನ್ನು ಕಾಣಲಾಗದೆ

ಕವಿತೆ ರಜಿಯಾ ಕೆ ಭಾವಿಕಟ್ಟಿ ನಿಮ್ಮಂತೆ ಇರಲಾಗದೆ ನನ್ನಂತೆ ನಾನುಇರಲಾಗದೆ.ಪರರ ಚಿಂತೆಗೆ ಚಡಪಡಿಸುತಿರೆಮನದ ದುಗುಢ ಇಮ್ಮಡಿಯಾಗುತಲಿ.ದಿನದೂಡುವಂತಾಗಿದೆ. ಇರುವುದನ್ನು ಇಲ್ಲದಂತೆ ಕಂಡು ಇಲ್ಲದನ್ನುಇರುವುದೆಂಬ ಭಾವದಲಿ ಬದುಕು ಬರುಡಾಗಲುಸಿದ್ಧಸ್ಥವಾಗುತಲಿ ದೂರವೇ ನಿಂತು ದಡ ಸೇರಲುಆತುರದ ದೋಣಿ ತವಕಿಸುತಿದೆ. ಜಗದೊಡಲಲಿ ತೆನೆ ಚಿಗುರಿದ ಕ್ಷಣದಲಿಉತ್ತವರು ಯಾರೋ ಬಿತ್ತವರೂ ಯಾರೋಉತ್ತಮರನು ಹುಡುಕುವ ಬರದಲಿ ಮಧ್ಯಸ್ಥಉಳಿದವನೇ ಉಳ್ಳವನಾಗುವ ಇದ್ದವ ಇಲ್ಲದವನಾದ . ಪರಮ ವೈರಿಯನು ಗುರುವೆಂದು ತಿಳಿದವಮುಂದಾದ ಅವಸಾನಕೆ ವಶವಾಗಿ ಮತಿ ಇನವನಾದಒಳಿತಿಗಾಗಿ ಹೊರಟು ಕೆಡಕುಗಳು ಬಲೆಗೆಅವನೇ ವರವಾದ ದುರಂತಗಳ ಸೆಲೆಗೆ ಬದುಕಾದ. ಸಿರಿಗಾಗಿ […]

ಲೋಕಶಾಹಿರ ಅಣ್ಣಾಭಾವು ಸಾಠೆ

“ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ“ “ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಹೀಗೆ ಹೇಳಿದ್ದು, ಯಾವ ವಿದೇಶಿ ವಿಚಾರವಂತನಲ್ಲ; ಮರಾಠಿ ಮೂಲ ಮಹಾನ್ ಸಾಹಿತಿ ಲೋಕಶಾಹಿರ ಅಣ್ಣಾಭಾವು ಸಾಠೆ. ದಮನಿತ, ಶೋಷಿತ, ಕಾರ್ಮಿಕ, ರೈತ ಈ ಎಲ್ಲ ವರ್ಗಗಳ ಧ್ವನಿಯಾಗಿ ಸಾಹಿತ್ಯ ರಚಿಸಿದ ಕ್ರಾಂತಿಪುತ್ರ. ಎರಡು ದಿನವೂ ಪೂರ್ಣ ಶಾಲೆಗೆ ಹೋಗದ ಇವರು ವಿಶ್ವಮಾನ್ಯ ಸಾಹಿತ್ಯವನ್ನು ಸ್ವ-ಅನುಭವದಿಂದಲೆ ರಚಿಸಿದರು. ಇವರ ಮಹಾನ್ ಸಾಹಿತ್ಯ ಇಂದು ಜಾಗತಿಕವಾಗಿ 27 ಭಾಷೆಗಳಲ್ಲಿ ಅನುವಾದಗೊಂಡಿದೆ. ಅಗಸ್ಟ 1 […]

ವಾರದ ಕವಿತೆ

ಕಿಟಕಿ -ಗೋಡೆ ವಾರದ ಕವಿತೆ(ಪ್ರತಿ ಶುಕ್ರವಾರ) ವಸುಂಧರಾ ಕದಲೂರು ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ ನಾನು ಮಾತ್ರ ತೆರೆಯುವುದಿಲ್ಲ. ಶತಮಾನಗಳಿಂದ […]

Back To Top