Day: July 6, 2020

ಕಾವ್ಯಯಾನ

ಮುಖವಾಡಗಳ ಕವಿತೆಗಳು  ಸುಜಾತಾ ರವೀಶ್ ಮುಖವಾಡ ಧರಿಸಿ ಧರಿಸಿ ಬೇಸರವೆನಿಸಿ ತೆಗೆಯಹೋದಳು ಒಂದು ದಿನ  ಎಳೆದರೂ ಇಲ್ಲ ತೊಳೆದರೂ ಇಲ್ಲ  ಚಾಕುವಿನಿಂದ ಕೆತ್ತಿದರೂ ಬರಲಿಲ್ಲ  ಕೊನೆಗೆ ಡಾಕ್ಟರ ಬಳಿ ಹೋದಾಗ ತೆಗೆಯಲಾಗದು ಜೀವಕಪಾಯ ಎಂದರು!  ಗತ್ಯಂತರವಿಲ್ಲ ಮಾಡುವುದೇನು?  ಸಾಯಲು ತೆಗೆದಿಡುವುದಾ ಬದುಕಲು ಹಾಕಿಕೊಳ್ಳುವುದಾ  ತೆಗೆದಿಟ್ಟು  ಸತ್ತು ಬದುಕುವುದಾಹಾಕಿಕೊಂಡು ಬದುಕಿ ಸಾಯುವುದಾನಿರ್ಧರಿಸಲಾಗುತ್ತಿಲ್ಲ ಅವಳಿಗೀಗ ಕಚೇರಿಯ ರಾಜಕಾರಣ ಕೆಲಸದ ಕಸಿವಿಸಿಚಿಟ್ಟೆನಿಸುವ ತಲೆನೋವು ಏನೋ ಒಂದು ಬೇಯಿಸಿಟ್ಟರೆ “ಥೂ..ಉಪ್ಪುಮಯ ಪಲ್ಯ ನನ್ನ ಬೇಗ ಮೇಲೆ ಕಳಿಸಿ ಬಿಡ್ತೀಯಾ “ ಕಟ್ಟಿಕೊಂಡಾಗಿನಿಂದ ಸುರಿಸಿದ ಕಣ್ಣೀರುಉಪ್ಪಾಗಿ ಕ್ಷಾರವಾಗಿದೆ ಇವಳ ಸ್ವಗತ ಮಾತಿಗೇನು ಕಮ್ಮಿ ಇಲ್ಲ ಖಾರಕ್ಕೆ ಮೆಣಸಿನ […]

ಕಾವ್ಯಯಾನ

ಗಝಲ್ ರತ್ನರಾಯ ಮಲ್ಲ ಮನಸು ಮರುಗುತಿದೆ ಗಾಲಿಬ್ಕನಸು ಬಳಲುತಿದೆ ಗಾಲಿಬ್ ಒಂಟಿತನವು ಮನೆ ಮಾಡಿದೆತನುವು ಸೊರಗುತಿದೆ ಗಾಲಿಬ್ ಖಿನ್ನತೆಯು ಗೂಡು ಕಟ್ಟಿದೆಹೃದಯ ನರಳುತಿದೆ ಗಾಲಿಬ್ ಬುದ್ಧಿ ಮಂಕಾಗಿದೆ ಇಂದುಮನವು ಎಡವುತಿದೆ ಗಾಲಿಬ್ ಇರುಳಲಿ ಕುಳಿತಿಹನು ‘ಮಲ್ಲಿ’ಬದುಕು ಕರಗುತಿದೆ ಗಾಲಿಬ್ ********

ಕಾವ್ಯಯಾನ

ಹೂಗನಸು ಬಾಲಕೃಷ್ಣ ದೇವನಮನೆ ಹಿತವಾದ ಹೂಗನಸಲಿಸಂಚಾರಿ ಮಧುರ ಭಾವದುಂಬಿತಿಳಿಯಾದ ಬಾನಲ್ಲಿ ರೆಕ್ಕೆ ಹರಡಿಇಳೆಗೆ ಚಂದ್ರನನೇ ಹೊತ್ತುತಂದಿದೆ ಕತ್ತಲೆ ಮೈಗೆ ಮುಸ್ಸಂಜೆಬಳಿದ ರಂಗು ಹಾಗೇ ಉಳಿದಿದೆತಬ್ಬಿಕೊಳುವ ತೆರೆಯ ಆಟದಂಡೆಯಲಿ ಇನ್ನೂ ಮುಂದುವರಿದಿದೆ… ಎಲೆಯುದುರಿದ ಶಿಶಿರಕೆತಂಗಾಳಿ ಬೀಸಿ ಚೈತ್ರ ಬಂದಿದೆಹೂ ದಳದ ಮೇಲೆಇಬ್ಬನಿ ಸಾಲು ಸಂತೆ ತೆರೆದಿದೆ ಚಿಗುರು ಮೊಗ್ಗಿನ ಮನಸುಪರಿಮಳದ ಪಯಣ ಹೊರಟಿದೆತುಂತುರು ಹನಿಗಳ ಹಿಂಡು ರೆಪ್ಪೆ ತೆರೆದುಹೂಗನಸಿಗೆ ಬೆಳಕು ಹರಿದಿದೆ **********

ಕಾವ್ಯಯಾನ

ಮಳೆಹಾಡು-2 ಆಶಾ ಜಗದೀಶ್ ಚಿಟಪಟ ಸದ್ದಿಗೆ ಸೋಲದ ಗುಂಡಿಗೆಇದೆಯೇ ಹೇಳು ಮಳೆ ಹನಿಯೇ… ಗೂಡಿನೊಳಗೆ ಬಚ್ಚಿಟ್ಟುಕೊಂಡಗುಬ್ಬಿ ಕಣ್ಣ ಬೆರಗು ನೀನುನೆಂದ ಗರಿಗಳ ಹರವಿ ಒಣಗಿಸಿಕೊಳ್ಳುವಾಗಕಾಡಿದ ಕಾಡುವ ನೆನಪು ನೀನುಶಂಕು ಹೊತ್ತ ಹುಳುವಿನಕೋಡು ನೀನು ಅಂಜಿಕೆ ನೀನುನಾಚಿಕೆ ನೀನು ಮೈಯ್ಯ ಪಸೆಯೂ ನೀನು ನೂರು ವರ್ಷವನ್ನೇ ಕ್ಷಣಿಕ ಎಂದುಕೊಳ್ಳುವನಮ್ಮೆದುರು ಮಳೆಗೆ ಹುಟ್ಟಿ ಸಾಯುವಹುಳುಗಳೆಷ್ಟೋ ಎಷ್ಟೊಂದು ಪಾಠಗಳಬಿಟ್ಟು ಹೋಗುತ್ತವೆ!ಮಳೆಯೇ.. ನಿನ್ನದೊಂದು ಸ್ಪರ್ಷಕ್ಕೆಬಲಿಯಾಗಲೇಂದೇ ಹುಟ್ಟು ಪಡೆಯುತ್ತವೆಮತ್ತೆ ಮತ್ತೆ ಹುಟ್ಟಿ ಸಾಯುತ್ತವೆ ನಾವು ಮಳೆಯೊಂದರ ಹನಿಯನ್ನೂಒಳಗಿಟ್ಟುಕೊಳ್ಳಲಾಗದೆ ಕುಡಿದುಹೊರ ಚೆಲ್ಲುತ್ತೇವೆ…ಆರದ ದಾಹವನ್ನು ಪೊರೆಯುತ್ತಾಮಳೆಯ ಕರೆಯುವ […]

ನಾವು ಪ್ರಜ್ವಲಿಸಬೇಕು’

 ‘ ವಸುಂಧರಾ ಕದಲೂರು ಸೂರ್ಯನನ್ನು ನಮ್ಮಿಂದ ಬಚ್ಚಿಟ್ಟಿದ್ದಾರೆ.ನಾವಂತೂ ಕತ್ತಲಲ್ಲಿ ಕೂರುವಜಾಯಮಾನದವರಲ್ಲ, ಹುಡುಕುತ್ತೇವೆಬೆಳಕಿನ ನಾನಾಮೂಲಗಳನ್ನುನಮ್ಮ ಹಾದಿಗಳಲಿ. ನಮಗೆ ಬೆಳಕು ಬೇಕಿದೆ. ಅವರು ಬಂದೂಕು ತೋರುತ್ತಾರೆಉಸಿರು ಬಿಡಬಾರದೆಂದು ನಮಗೆಭಯವೆಂಬುದು ನಿರ್ಧಾರಕವಲ್ಲ ಕಡೆಗೆನಿರ್ಣಾಯಕವೂ ಅಲ್ಲ. ನಮಗೆ ಉತ್ತರ ಬೇಕಿದೆ. ಹಸಿದ ಬದುಕಿಗೆ ಹಳಸಿದ ಮೇಲೋಗರವೇಮೃಷ್ಟಾನ್ನ ಎಂಬ ಆಸೆಹುಟ್ಟಿಸುವಕನ್ನಕೋರರು ನಮ್ಮ ಕನಸಿನ ತಿಜೋರಿಗೆಹುಡುಕಾಡುತ್ತಾರೆ ಸದಾ ಎಚ್ಚರಿರುವನಾವು ಮಲಗುವುದಿಲ್ಲ. ನಮಗೆ ಜಾಗೃತಿ ಬೇಕಿದೆ ನಿಡುಗಾಲದ ಮೌನಕ್ಕೆ ದನಿಯ ತುಂಬುತ್ತಾ, ಅನುಗಾಲದ ನೋವಿಗೆ ಮುಲಾಮು ಹಚ್ಚುತ್ತಾಸಂತೈಸುವ ನಮ್ಮದೇ ಕೈಗಳನ್ನು ನಾವೀಗಬಲಪಡಿಸಬೇಕಿದೆ, ನಮಗೆ ನಿಯತ್ತಿನ ಹೆಗಲು ಬೇಕಿದೆ. […]

Back To Top