ಮೂಗುತಿ ಸುಂದರಿ

ಅನುವಾದಿತ ಕವಿತೆ

ಕನ್ನಡ ಮೂಲ:ಸ್ಮಿತಾ ಅಮೃತರಾಜ್.ಸಂಪಾಜೆ.

ಇಂಗ್ಲೀಷಿಗೆ: ಸಮತಾ ಆರ್

ಮೂಗುತಿ ಎಂದರೆ
ಮೂಗು ಮುರಿಯುತ್ತಿದ್ದವಳು
ಪರಮಾಶ್ಚರ್ಯವೆಂಬಂತೆ ಇತ್ತೀಚೆಗೆ
ಮೂಗು ಚುಚ್ಚಿಸಿಕೊಂಡಳು.
ಕಣ್ಣರಳಿಸಿದ್ದಕ್ಕೆ, ಬದುಕು ಶುರುವಾಗುವುದೇ
ನಡು ಹರಯದಲ್ಲಿ ಕಣೇ ಅಂತ
ಹಗುರವಾಗಿ ನಕ್ಕಿದ್ದಳು.

ಮೊನ್ನೆ ಮೊನ್ನೆ ನಡುರಾತ್ರಿಯಲ್ಲಿ
ಫೋನಾಯಿಸಿ ಮೂಗು ವಿಪರೀತ ನೋವು
ತಡೆಯೋಕಾಗಲ್ವೇ ಅಂತ ಕಣ್ಣೀರಾಗಿದ್ದಕ್ಕೆ..

ಯಾಕೆ ತ್ರಾಸ ತೆಗೆದುಬಿಡು ಎಂದಿದ್ದೆ
ಕಲೆ ಉಳಿಯಬಾರದಲ್ಲವಲ್ಲ ಕನಲಿದ್ದಳು.

ಮೊನ್ನೆ ಬಸ್ಸಿನಲ್ಲಿ ಸಿಕ್ಕವಳು
ಮೂಗುತಿಯಲ್ಲಿ ಚೆಂದಕ್ಕೆ ಕಂಡಿದ್ದಳು
ನಾನೂ ಚುಚ್ಚಿಸಿಕೊಳ್ಳಲಾ…?
ಮೂಗು ಸವರಿಕೊಂಡೆ.

ಎದೆಯೊಳಗೊಂದು ಚುಚ್ಚುವ ನೋವಿದ್ದರೆ
ಮೂಗು ಚುಚ್ಚಿಸಿಕೋ…
ಎಂದಿನಂತೆ ನಕ್ಕಳು.
ಈಗ ಮೂಗಿನ ಕಡೆಗೇ ನನ್ನ ಗಮನ
ಸ್ವಗತಕ್ಕೆಂಬಂತೆ ನುಡಿದಳು.


Nosepin of a beauty.

“A nose pin ! Oh ! no,never”
She always used to sneer.
But amused all with one.

Question in my eyes,
And a reply came,
“Blossoms of mid life”
Said her smile.

At a midnight,
“This pain,who will bear?”
Her voice drenched in tears
Woke me up for an answer.

“Why to bear?take it out”
My yawn replied.
“Will the scar heal?”
She burst aloud.

Someday in a bus
Met the beauty shining her nose.
“Shall I too….”asked my nose
With the touching fingers.

” If your heart is aching,
With a pricking thorn,
Then get a nosepin”
As usual she said smiling.

“All that keeps me awake now
Is my nose pin”
Said she as a monologue.

**********************

16 thoughts on “ಮೂಗುತಿ ಸುಂದರಿ

  1. ಪ್ರಕಟಿಸಿದ ಸಂಗಾತಿ ಪತ್ರಿಕೆಗೂ ಅನುವಾದಿಸಿದ ಗೆಳತಿ ಸಮತಳಿಗೂ ವಂದನೆಗಳು

  2. ಸ್ಮಿತಾ…! ನಿಮ್ಮ ಕನ್ನಡದ ಪದ್ಯಗಳೆಲ್ಲಾ ಅನುವಾದಗೊಂಡು ಇತರೆ ಭಾಷೆಯವರನ್ನು ಮುಟ್ಟಲಿ… ಕವನ ಬಹಳ ಚೆಂದಿದೆ ಗೆಳತಿ. ಇಂದು ಎರಡೆರಡು ಕವನ ಓದಿಸಿದ ಪುಣ್ಯ ನಿಮಗೆ ..

  3. ಅಭಿನಂದನೆ, ಇಬ್ಬರಿಗೂ.ಆದರೆ ಕನ್ನಡವೇ ಹೆಚ್ಚು ಅರ್ಥಗರ್ಭಿತ ಅನಿಸಿತು.

  4. ಮೂಗು ತುಂಬ ಸಾಂಕೇತಿಕ ಅರ್ಥವುಳ್ಳ ಪದ. ಅದರ ವ್ಯಾಪ್ತಿ ಹಿರಿದು.

  5. ಧ್ವನಿಪೂರ್ಣ ಕವಿತೆ.‌ ನೋವು ನಲಿವಿನ ಲಿಂಕ್‌ಇದೆ. ಎರಡು ಹೆಣ್ಣು ಜೀವಗಳ‌ ನಡುವೆ ನಡೆವ ಮಾತುಕತೆ ಬದುಕು ಬವಣೆಯ ನಡುವಿನ ಬಿಂದುವಿನಂತೆ ಮೂಗುತಿ ಕತೆ ತೆರೆದುಕೊಳ್ಳುತ್ತದೆ…

    ಅನುವಾದ….ಕನ್ನಡವನ್ನು ಜಗತ್ತಿನ ಭಾಷೆಗೆ ದಾಟಿಸಿದೆ…

Leave a Reply

Back To Top