Day: July 5, 2020

ಅನುವಾದ ಸಂಗಾತಿ

.ಕಠೋರ ಕಣ್ಣುಗಳು ಮೂಲ:ವಿಲಿಯಂ ಬ್ಲೇಕ್ ವಿ.ಗಣೇಶ್ ಕರಾಳ ರಾತ್ರಿಯಲಂದು ಕಾನನದ ಗರ್ಭದಲಿ ಉರಿಯುತಿಹ ನಿನ್ನ ಆ ಕಣ್ಣುಗಳ ಕಂಡು ಗಡಗಡ ನಡುಗುತ್ತ ನಿನ್ನ ಎದುರಿಸಲಾಗದೆ ಬೆದರುತ್ತ ನಾ ತೆವಳಿದೆ ಅಡಗು ತಾಣಕೆ ಆ ಉರಿಗಣ್ಣುಗಳ ಕ್ರೌರ್ಯವನು ನೋಡುತ ಕಾರ್ಗತ್ತಲಲಿ ನಾನಂದು ಕಳೆದು ಹೋಗಿದ್ದೆ. ನಿನ್ನ ಆ ಕಠೋರ ಕಣ್ಣುಗಳ ಕೆತ್ತಿದವರಾರು? ನಿನ್ನ  ವಿವಿಧಾಂಗಗಳ ಸೃಷ್ಟಿಸಿದವರಾರು? ತಾರೆಗಳ ನಾಚಿಸುವ  ತಾರಾಮಂಡಳದ ಕಳೆಯ ಕುಲುಮೆಯನೆ ತುಂಬಿಹನೆ ನಿನ್ನ ಕಣ್ಣುಗಳಲಿ? ಈ ಪರಿಯ ಉರಿಯನ್ನು ಬಡಿಬಡಿದು ಕೆತ್ತಲು ಆ ಧೈರ್ಯವೆಂತಹದು? ಅ […]

ಕಾವ್ಯಯಾನ

ನೆಲ ಮುಗಿಲು ಫಾಲ್ಗುಣ ಗೌಡ ಅಚವೆ. ಗುಡ್ಡಗಳ ಮಲೆಯನ್ನು ತಬ್ಬಿ ಮಲಗಿದೆ ಬಾನುಮುಸುಕಿ ಮುದ್ದಾಡುತಿದೆ ಮಂಜು ತಾನು ಚಂದಿರನ ರಮಿಸುವ ಅಬ್ಬರದ ಕಡಲಂತೆಹಿಮ ಹೊದಿಕೆ ಹೊದೆಯುತಿದೆ ಇಳೆಯು ತಾನು ಸಂಗೀತದಾಲಾಪ ಅನುರಣಿಸುತಿದೆ ಇಲ್ಲಿಕಲೆಯ ಸಾಕ್ಷಾತ್ಕಾರ ಸಾಕಾರವಿಲ್ಲಿ ದಿಗಂತದಾಚೆಯೂ ವ್ಯಾಪಿಸಿದೆ ಅಗಸವುಅಲೆವ ನದಗಳನೇರಿ ತಾನು ಸೂರ್ಯನನು ಮರೆಸುತ್ತ ಏಕಾಂತವ ಸರಿಸಿಲೋಕಾಂತ ಸಾರಿತಿದೆ ಮರವು ತಾನು ಸಾಲು ಬೆಟ್ಟಗಳೆಲ್ಲ ನಿನ್ನಂತೆ ಕಾಣುತಿವೆಪ್ರಕೃತಿಯಂತಿಹ ನಿನ್ನ ತಬ್ಬಿ ಹಿಡಿದುಹೂಮಳೆಯ ದನಿಯಂತ ಹೂನಗೆಯು ನಿನ್ನದುಮಳೆಯುಂಟು ನಿನ್ನ ಹೆಸರಿನೊಳಗು! *******

ಕಾವ್ಯಯಾನ

ಬರೆಯುವ ನಿತ್ರಾಣದ ತಾಣ ನೂರುಲ್ಲಾ ತ್ಯಾಮಗೊಂಡ್ಲು ಬರೆಯುವುದೆಂದರೆ ಬಿಳಿಯಾದ ಪರ್ವತಗಳ ಮೇಲೆಹಾರುವ ಹಕ್ಕಿಗಳ ರುಜುವಲ್ಲಕೊರಳೆತ್ತಿ ಕೂಗುವ ಕೋಗಿಲೆಯ ರೆಕ್ಕೆ ಪುಕ್ಕಗಳೊಳಗಿನ ಹೇನಿನ ಕಡಿತದ ಕುರಿತು ದಾಖಲಿಸುವುದು ಪಾಡು ಹಾಡಾಗುವ ಮಣ್ಣು ಬೀಜ ಗರ್ಭದ ತಪ್ತತೆ ಆವಾಹಿಸುವುದುಹೂವು ಹಣ್ಣು ಪತ್ರ ಮಾಗಿ ಬಾಗಿ ಶಿಶಿರದಲಿ ನಡುಗಿ ಕೊರಗಿಕೊನೆಗೆ ಪತ್ಝಡ್ ನಲಿ ಉದುರುವಅದರ ಕೊನೆಯುಸಿರ ನಾದವನು ಎದೆಗಿಳಿಸುವುದು ಬರಿ ಬೆಳಗು ಬಣ್ಣಗಳ ಪದಗಳೇ ಬೇಕಿಲ್ಲಸೂರ್ಯ ಚಂದ್ರರ ಕವಿತೆಯ ಬನಿಗೆಕರುಳು ಕತ್ತರಿಸುವ ಕರಾಳ ಇರುಳ ಇಳೆಯಲಿನೆಲ-ನೊಸಲು ಪದಗಳ ನಿಟ್ಟುಸಿರುದುಮುಗುಡಬೇಕು ಕಸುಬುದಾರಿಕೆಯಲಿ ಜನಮನದ […]

ಪುಸ್ತಕ ಸಂಗಾತಿ

ದರ್ಪಣ ನನಗೆ ಸಾಮಾನ್ಯವಾಗಿ ಆತ್ಮಚರಿತ್ರೆ, ವೈಚಾರಿಕ ಲೇಖನ, ಚರ್ಚೆ ಇಂತಹವುಗಳನ್ನು ಓದುವುದೆಂದರೆನೇ ಬಲು ಇಷ್ಟ. ಕೆಲವೂಮ್ಮೆ ಕವಿತೆಗಳನ್ನು ಓದಿದರೂ ಅದನ್ನು ಒಂದೇ ಬಾರಿಗೆ ಓದಲಾರೆ. ಅಂದರೆ ಕವನ ಸಂಕಲನದಲ್ಲಿ ಇರುವ ಎಲ್ಲಾ ಕವಿತೆಗಳನ್ನು ಒಂದೇ ಉಸಿರಿಗೆ ಓದಲಾರೆ. ಇವನ್ನೆಲ್ಲ ಬಿಟ್ಟು ಕತೆಗಳ ವಿಷಯಕ್ಕೆ ಬಂದರೆ ನನಗೆ ಕಾದಂಬರಿಗಳಿಗಿಂತ ಸಣ್ಣ, ಸಣ್ಣ ಕತೆಗಳನ್ನು ಓದುವುದೆಂದರೆ ಬಹಳ ಇಷ್ಟ.ಅದ್ದರಿಂದ ನನ್ನಲ್ಲಿ ಬಹಳಷ್ಟು ಕಥಾಸಂಕಲನಗಳ ಸಂಗ್ರಹವೇ ಇದೆ. ಹಾಗೆ ಕಥಾಸಂಕಲನಗಳು ಇಷ್ಟವಾಗಲು ಕಾರಣ ಒಂದೇ ಓದಿನಲ್ಲಿ ನಾವು ನಮ್ಮನ್ನು ಭಿನ್ನ, ಭಿನ್ನ […]

ಕಾವ್ಯ ಕುರಿತು

ಕಬ್ಬಿಗರ ಅಬ್ಬಿ-೧ ಮಹಾದೇವ ಕಾನತ್ತಿಲ ಹ್ಞಾ, ಹೀಗೆ ಬನ್ನಿ!, ತೋಟದ ಮಧ್ಯೆ ನಡೆಯೋಣ, ನೋಡಿದಿರಾ, ಎಷ್ಟೊಂದು ಹೂವು ಹಣ್ಣುಗಳು,ಈ ತೋಟದಲ್ಲಿ!. ಅಲ್ನೋಡಿ, ಗುಡ್ಡದಿಂದ ಹರಿದು ಬರುವ ನೀರ ಧಾರೆ! ತೋಟದ ಬದಿಯಲ್ಲಿ ಎತ್ತರದ ಕಲ್ಲು ಬಂಡೆಯ ತುದಿಯಿಂದ ಜಾರಿ ಧಾರೆ ಧಾರೆಯಾಗಿ ಬೀಳುತ್ತಿದೆಯಲ್ಲ, ಅದೇ ಅಬ್ಬಿ! ಇದೇನು ಸಾಧಾರಣ ಅಬ್ಬಿ ಅಂದುಕೊಂಡಿರಾ! ಇದು ಕಬ್ಬಿಗರ ಅಬ್ಬಿ..ಈ ಅಬ್ಬಿಯ ಧಾರೆಗೆ ತಲೆ ಕೊಟ್ಟು, ಎದೆ ಬಿಚ್ಚಿ ನಿಂತು ನೋಡಿ!. ನೀವೂ ಕಾವ್ಯವಾಗುತ್ತೀರಿ, ಕಾವ್ಯ ನಿಮ್ಮಿಂದ ಹರಿಯುತ್ತೆ. ‌ನೀವು ಯಾವುದು, […]

Back To Top