ವಿಚಾರವೇನೆಂದರೆ…

ಅನುವಾದಿತ ಕವಿತೆ

ಮೂಲ ಇಂಗ್ಲೀಷ್: ಹೆಲೆನ್ ಬ್ಯಾಸ್

ಕನ್ನಡಕ್ಕೆ: ಅಶ್ವಥ್

ಬದುಕ ಪ್ರೀತಿಸುವುದು,
ಹಂಬಲವಿಲ್ಲವೆನಿಸಿದಾಗಲೂ,
ಆಪ್ತವಿದ್ದೆಲ್ಲವೂ ಉರಿದು ಬೂದಿಯಾಗಿ
ಕೈಗಂಟುವ ಧೂಳಿನಂತಾದರೂ
ಆ ಬೂದಿಯ ಕೆಸರು
ಗಂಟಲಿಗಿಳಿದು ಬಿಗಿದಾಗಲೂ
ಬದುಕ ಪ್ರೀತಿಸುವುದು.

rain drops

ಕೊರಗು ನಿನ್ನ ಬಳಿಯೇ ಕುಳಿತಿರುವಾಗಲೂ
ಅದರ ಬೇಸಿಗೆಯುರಿ, ಗಾಳಿಯನು ನೀರಾಗಿಸಿ,
ಒಲೆಮೇಲೆ ಕುದಿವಂತೆ ಬೊಬ್ಬುಳಿ ತರಿಸಿ
ನಿನ್ನುಸಿರಿಗೆ ತಾಕಿಸಿದಾಗಲೂ,
ಅದೇ ಕೊರಗು ನಿನ್ನದೇ ಮಾಂಸಖಂಡಗಳಂತೆ
ಭಾರವೆನಿಸಿ, ಉಲ್ಪಣಗೊಂಡು,
ಕೊರಗಿನದೇ ಸ್ಥೂಲಕಾಯವಾದಾಗಲೂ
ದೇಹವಿದೆಲ್ಲವನು ಹೇಗಾದರೂ ಸಹಿಸೀತು? ಅದುಕೊಳ್ಳುತ್ತಲೇ
ಮುದ್ದಾದ ನಗುವಿರದ, ನೀಲಗಣ್ಣುಗಳಿರದ
ಆಡಂಬರವಿರದ ಸಾಮಾನ್ಯ ಮುಖದಂತೆ
ಬದುಕನೊಮ್ಮೆ ಅಂಗೈಗಳ ನಡುವೆ ಹಿಡಿದು
ಹೇಳಿಬಿಡು ಖಚಿತ, ನಾನಿನ್ನ ಸ್ವಾಗತಿಸುತ್ತೇನೆ
ನಾನಿನ್ನ ಪ್ರೀತಿಸುತ್ತೇನೆ, ಮತ್ತೊಮ್ಮೆ ಎಂದು.

**************

Leave a Reply

Back To Top