Month: April 2020

ಕಾವ್ಯಯಾನ

ಬಿಡಿಸಲಾಗದ ಒಗಟು ಅನ್ನಪೂರ್ಣ.ಡೇರೇದ ಹಿರಿಹಿರಿ ಹಿಗ್ಗಿ ಕುಣಿದುˌ ಕುಪ್ಪಳಿಸಿ ಕನಸುಗಳೊಡಗೂಡಿ ನಲಿವಾಗ ನಸುಕ ಮುಸಕಲ್ಲಿ ಕಾಂತನೊಡನೆ ರೆಕ್ಕೆ ಬಡಿಯುತಲಿ ರೆಂಬೆ ರೆಂಬೆ ಜಿಗಿದು ನಲಿಯುತಲಿದೆ ಅದಾವುದೋ ಮಾರ್ಜಾಲ ಬಲಿಯ ಬೀಸಿತಲಿ ಒಂದೊಂದು ಕನಸು ಬಿಸಿಲಿಗೆ ಕರಗಿದ ಇಬ್ಬನಿಯಾಗಿದೆ. ಹೆಣ್ಣಬಾಳ ಕಣ್ಣೀರು ಮಣ್ಣ ಮಸಣದೊಳು ಸೇರಿ ˌಕಂಡ ಕನಸು ಒಡಲ ಕಳಚಿತು ಮೌಡ್ಯದ ನಡುವೆ ಮಡುಗಟ್ಟಿದ ಅವಳ ಬದುಕು ˌಜಾತಿ ಧರ್ಮದ ಭೂತಗನ್ನಡಿಗೆ ಹೆದರಿ ಮೂಲೆ ಗುಂಪಾಗಿದೆ. *********

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಸ್ವಾರ್ಥ ಲಾಲಸೆಗಳೇ ತುಂಬಿ ತುಳುಕಾಡುತ್ತಿದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ಅಸಮಾನತೆಯ ಗೋಡೆಗಳು ಮತ್ತೆ ಎದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ನೀ ತೋರಿದ ಆದರ್ಶದ ಹಾದಿಯ ಪಾಲಿಸುವವರೆಷ್ಟು ನಮ್ಮ ನಡುವೆ ? ಭ್ರಷ್ಟಾಚಾರದ ಕಬಂಧಬಾಹುಗಳಲಿ ಜೀವ ನರಳಿದರೂ ಬಾಳು ಸಾಗುತ್ತಲೇ ಇದೆ ಬಾಪೂ ನೀ ಸಾರಿದ ತತ್ವಗಳು ನಿಸ್ಸತ್ವಗೊಂಡು ಮೂಲೆಗುಂಪಾಗಿ ಕಳೆದುಹೋಗಿವೆ ಜಾತಿ ವೈಷಮ್ಯದಲಿ ನಿಷ್ಪಾಪಿಗಳು ನಲುಗಿದರೂ ಬಾಳು ಸಾಗುತ್ತಲೇ ಇದೆ ಬಾಪೂ ಕಾಮಪಿಪಾಸುಗಳೆದುರು ನಡುರಾತ್ರಿ ಒಂಟಿ ಹೆಣ್ಣು ನಿರ್ಭಯದಿ ನಡೆವುದೆಂತು ? […]

ಗೊಂಬೆಯೇ ಏನು ನಿನ್ನ ಮಹಿಮೆಯೇ?

ಗೊಂಬೆಯೇ ಏನು ನಿನ್ನ ಮಹಿಮೆಯೇ? ನಾಗರೇಖಾ ಗಾಂವಕರ್ ಗೊಂಬೆಯೇ ಏನು ನಿನ್ನ ಮಹಿಮೆಯೇ? ಆಕೆ ಮುದ್ದು ಮುದ್ದಾದ ಗೊಂಬೆ. ಎಂಥ ಚೆಂದ ಅಂದ. ಅದೆಂತಹ ನುಣುಪು.. ಒನಪು.. ನವಿರು ಹೊಂಬಣ್ಣದ ಮೈಗಂಪು. ಗೊಂಬೆ ಬಂಗಾರದ ಗೊಂಬೆ. ಹೀಗೆ ಹೇಳುವುದು ಸುಂದರವಾದ ಹುಡುಗಿಗೆ ಮಾತ್ರ ಎಂಬುದು ನನಗೆ ಸುಮಾರು ಏಳೆಂಟು ವರ್ಷಗಳಾದಾಗ ಅರಿವಾಗತೊಡಗಿತ್ತು. ಆದರೆ ನನ್ನ ಒಂದೇ ದುಃಖ ನನಗ್ಯಾರೂ ಹಾಗೇ ಕರೆಯುತ್ತಲೇ ಇಲ್ಲವಲ್ಲ ಎಂಬ ಕೊರಗು. ಹತ್ತು ಹಲವು ಬಾರಿ ನನ್ನ ಅಕ್ಕಂದಿರಿಗೆ ಆ ಪದವಿ ಸಿಕ್ಕಾಗಲೆಲ್ಲಾ […]

ಪ್ರಸ್ತುತ

ಮೊಬೈಲ್ ಡೆವಿಲ್ ಆದೀತು ಜೋಕೆ:– ವಿದ್ಯಾ ಶ್ರೀ ಬಿ. ಮೊಬೈಲ್ ಡೆವಿಲ್ ಆದೀತು ಜೋಕೆ. ಮಾನವ ಇಂದು ನಾಗರಿಕತೆಯ ಕಡೆ ಭರದಿಂದ ಸಾಗಿದ್ದಾನೆ. ಹಿಂದೆ ಅನಾಗರೀಕನಾಗಿದ್ದ ಅವನಲ್ಲಿ ಆದಿಮಾನವನಿದ್ದ. ಈಗ ನಾಗರಿಕನಾಗಿದ್ದಾನೆ, ಗ್ರಹದಿಂದ ಗ್ರಹಕ್ಕೆ ಹೋಗಿ ಬರುತ್ತಿದ್ದಾನೆ. ಸಮುದ್ರದ ಆಳವನ್ನು ಕೊರೆದಿದ್ದಾನೆ. ಭೂಮಿಯ ಒಡಲನ್ನು ಬರಿದು ಮಾಡಿದ್ದಾನೆ, ಕಾಂಕ್ರೀಟ್ ಜಂಗಲ್ ಸೃಷ್ಟಿಸಿದ್ದಾನೆ .ಕನಸಿನ ಕೂಸಾದ ಕಂಪ್ಯೂಟರ್ ನಿರ್ಮಿಸಿ ಬಿಡುತ್ತಿದ್ದಾನೆ. ಶಸ್ತ್ರಾಸ್ತ್ರ ಅಣ್ವಸ್ತ್ರದ ಜನಕನೂ ಆಗಿದ್ದಾನೆ. ರೋಬೋಟ್ ಮಾನವ ಕ್ಲೋನಿಂಗ್ ತಳಿಯ ಸೃಷ್ಟಿಕರ್ತನಾಗಿ ಹೀಗೇ ಅವನ ಮಹತ್ತರ ಸಾಧನೆಯನ್ನು […]

ಕಾವ್ಯಯಾನ

ದ್ವೇಷದ ರೋಗಾಣು ಲಕ್ಷ್ಮಿಕಾಂತಮಿರಜಕರಶಿಗ್ಗಾಂವ. ಕೊರೋನಾ ಕೂಡ ತಬ್ಬಿಬ್ಬು ದುರಿತ ಕಾಲದಲ್ಲೂ ಧರ್ಮದ ಅಮಲೇರಿಸುವ ಕಾರ್ಯ ಅವ್ಯಾಹತವಾಗಿ ಸಾಗಿರುವುದ ಕಂಡು ಮೆದುಳು ಮಾರಿಕೊಂಡವರ ತಲೆಯಲ್ಲಿ ಈ ದೇಶವೇಕೆ ಹೀಗಿದೆ? ಬೆಕ್ಕಿನ ನೆರಳು ತೋರಿಸಿ ಹೆಬ್ಬುಲಿ ನಿಂತಿದೆ ಮರೆಯಲ್ಲಿ ಅಂತ ಪರದೆಯಲ್ಲಿ ತೋರಿಸಿದರೆ ಕ್ಷಣಾರ್ಧದಲ್ಲಿ ಎಲ್ಲ ಕಡೆ ಹೆಬ್ಬುಲಿಯದೇ ಮಾತು! ಮಾತು!ಮಾತು ಅಯ್ಯಯ್ಯಪ್ಪ ಎಂದಿರಬಹುದು ಕೊರೋನಾ ಪ್ರಾಣ ಹಿಂಡಲೂ ಬಂದ ಅಗೋಚರ ವೈರಾಣು ಕೂಡ ಅಸಹ್ಯ ಪಡುವಷ್ಟು ನಮ್ಮ ತಲೆಯಲ್ಲಿ ಅಮೇಧ್ಯದ ಹೊಲಸು ವಾಸಿಯಾಗದ ದ್ವೇಷದ ವೈರಾಣೊಂದು ತಲತಲಾಂತರದಿಂದಲೇ ಇವರ […]

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಗದಗ ಎದೆಯ ಸಂದೂಕಿಗೆ ಅರಿವಳಿಕೆ ಮದ್ದು ಸುರಿದು ಹೋದಳು| ಉಸಿರಿನಿಂದ ಉಸಿರು ಕದ್ದು ಸಾವು ಬರೆದು ಹೋದಳು|| ಚಾಟಿ ಇಲ್ಲದೆ ಬುಗುರಿಯಂತೆ ತಿರುಗೋಣ ಎಂದವಳು| ಪ್ರೇಮಿಗಳ ಗೋರಿಗೆ ಬಣ್ಣ ಬಳಿದು ಹೋದಳು|| ಇರುಳ ದಾರಿ ತುಂಬ ಕಣ್ಣ ದೀಪ ಬೆಳಗುವೆ ಎಂದವಳು| ಕನಸುಗಳ ಗೋಣು ಮುರಿದು ನೆತ್ತರು ಕುಡಿದು ಹೋದಳು|| ಭಾವನೆಗಳ ನಾವೆಯ ನಾವಿಕ ಎಂದವಳು| ಪ್ರತಿ ಹೆಜ್ಜೆ ಹೆಜ್ಜೆಗೆ ಕಲ್ಪನೆಗಳ ಕೊಂದು ಹೋದಳು|| ‘ಸಾಚಿ’ ಅಧರಕೆ ಜೀವ ಸತ್ವ ತುಂಬೋಣ ಎಂದವಳು| […]

ಕಾವ್ಯಯಾನ

ಶೂನ್ಯ ಡಾ.ಪ್ರಸನ್ನ ಹೆಗಡೆ ಈ ಬದುಕು ಸುಂದರ ಶೂನ್ಯ ಕಂಡಿದ್ದೆಲ್ಲವೂ ಅನ್ಯ ಹಿಂದತಿಲ್ಲ ಇಂದು ನಾಳೆಗೆ ಕಾದಿದೆ ಬೇರೊಂದು ಅಂದಂತಿಂದು ನಾನಿಲ್ಲ ಇಂದಂತಿರುವವ ನಾನಲ್ಲ ಇದು ಇಂತೆಂದೆಂಬುವನಾರಣ್ಣ? ಆ ಅಣ್ಣನೂ ಕೊನೆಗೆ ಮಣ್ಣಣ್ಣಾ ಈ ಅಕ್ಷಿಯ ಕಕ್ಷಿಯು ಕಿರಿದು ಬಾಯ್ಬಿಡಬೇಡಾ ಬಿರಿದು ಈ ಕಾಲನ ಚಕ್ರವು ಹಿರಿದು ಅದನರಿಯಲು ಸಾವದು ಬಿಡದು ಹರಿಯುವ ಹೊಳೆಯೂ ಮಾಯಾವಿ ಗಗನವೇರಲಿದೆ ಹಬೆಯಾಗಿ ಓ! ತೇಲುವ ಮೋಡವು ಮೇಲಿಲ್ಲ ಅದು ನಾಳಿನ ಹೊಳೆಯು ಸುಳ್ಳಲ್ಲ ನನ್ನದು ಎನ್ನಲು ಏನಿಲ್ಲ ನಾ ಧೂಳನು […]

ಕಾವ್ಯಯಾನ

ಸಖ-ಸಖಿ ವಾಯ್.ಜೆ.ಮಹಿಬೂಬ ವಿಧ-ವಿಧಗಳಿಗೆ ವಿದಾಯ ಹೇಳಿ ಒಂದಾಗೋಣ ಬಾ ಸಖಿ ವಿಧಿ-ವಿಧಾನಗಳು ಬದಿಗಿಟ್ಟು ಪ್ರೀತಿ ಹಂಚೋಣ ಬಾ ಸಖ ನೂರಿದ್ದರೇನು-? ನಮ್ಮನ ನಾವು ಸಂತೈಸಲು ಸಾವೆಂದರೆ ಬೆರೆಸಿ ಸಂಸ್ಕಾರವ ಜಗ ಸಾರಿ,ಹೆತ್ತವರಾಗೋಣ ಬಾ ಸಖಿ ಅತ್ತವರುದಕೆ ಕೈ ತುತ್ತಿಟ್ಟು,ಬಿತ್ತಿ ಬರೋಣು ಬಾ ಸಾಂತ್ವನ ಮೆಟ್ಟಿ ನಿಂತು ರಟ್ಟೆಯರಳಿಸಿ,ಪೃಥ್ವಿ ಬೆಳೆಸೋಣ ಬಾ ಸಖ ಯಾತರದ ಜೀವ-? ಕಾವ ಕಳೆದ ದೇಹಕೆ ಹೆಸರು ನಿಲ್ಲದು ಆತ್ಮ ಸತ್ಯ ನಿತ್ಯ ಮೊಳೆಸುತ ಧರೆಯ ಸುತ್ತೋಣ ಬಾ ಸಖಿ ಆಝಾದ್’ಮೈಖಾನೆಯೂ ಹೊಕ್ಕು ಬರುವ […]

ಕಾವ್ಯಯಾನ

ನತದೃಷ್ಟ ಕವಿತಾ ಸಾರಂಗಮಠ ಪಂಜರದಿ ಹಕ್ಕಿಗಳ ಬಂಧಿಸಿದೆ ಆನೆಗಳ ಗರ್ವ ಅಡಗಿಸಿ ಮದ್ದಾನೆಯಾದೆ ಆನೆ ದಂತಗಳ ಕದ್ದೆ ಹುಲಿ,ಸಿಂಹಗಳ ಬೇಟೆಯಾಡಿದೆ ಓ ಮಾನವ ಗೃಹ ಬಂಧಿಯಾದೆ! ಸ್ವಚ್ಛಂದ ಹಾರಾಡುವ ಪಕ್ಷಿಗಳ ಪಂಜರದಿ ಬಂಧಿಸಿದೆ ಪಶು,ಕೀಟಗಳ ಭೇದವೆಣಿಸದೆ ಚಪ್ಪರಿಸಿದೆ ಉಭಯ ಜೀವಿ ಸಂಕುಲದ ನಾಶಕೆ ಮುಂದಾದೆ ಎಮ್ಮೆ,ಕಾಡು ಕೋಣ,ಚಿರತೆ,ಹುಲಿಗಳ ಚರ್ಮವನೆ ಹೊದ್ದೆ ಓ ಮಾನವ ನೀನೇ ಅವುಗಳಾದೆ! ಆತಂಕವಿಲ್ಲದೆ ಅಂತರಿಕ್ಷಕೆ ಹಾರಿದೆ ಸೂರ್ಯ ಚಂದ್ರರ ಮೀರಿಸಲು ಹೋದೆ ನಿಲುಕಿದ್ದರೆ ನೀಲನಭದೆ ವಾಸಿಸುತ್ತಿದ್ದೆ ಹಣದ ದಾಹಕೆ ಮೌಲ್ಯಗಳ ಮಾರಿಕೊಂಡೆ ಓ […]

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-5 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ. ‘ಅಮ್ಮಾ ನನ್ನ ಜೊತೆ ಆಟಾ ಆಡು ಬಾ ಎಂದು ನಾಲ್ಕು ವರ್ಷದ ಪುಟ್ಟ ಶಿಶಿರನ ಕರೆ ಕೂಗಾಟ ಚೀರಾಟವಾದರೂ ಆ ಅಮ್ಮನಿಗೆ ಅಡುಗೆ ಮನೆಯಲ್ಲಿ ಕೆಲಸ ಮುಗಿಯುವುದಿಲ್ಲ. ತೊಳೆದಷ್ಟೂ ಮುಗಿಯದ ಮುಸುರೆ ಪಾತ್ರೆಗಳು, ಬಟ್ಟೆಗಳು …ಬಿಡುವೆಲ್ಲಿದೆ?ಈಗಿನ್ನೂ ತಿಂಡಿ ತಿಂದಾಗಿದೆ ಆದರೆ ಮತ್ತೆ ಅಡುಗೆ ಮಾಡುವ ಸಮಯ ಬಂದೇ ಹೋಯ್ತು ಎನ್ನುವ ಟೆನ್ಶನ್ […]

Back To Top