ದ್ವೇಷದ ರೋಗಾಣು
ಲಕ್ಷ್ಮಿಕಾಂತಮಿರಜಕರಶಿಗ್ಗಾಂವ.
ಕೊರೋನಾ ಕೂಡ ತಬ್ಬಿಬ್ಬು
ದುರಿತ ಕಾಲದಲ್ಲೂ
ಧರ್ಮದ ಅಮಲೇರಿಸುವ ಕಾರ್ಯ
ಅವ್ಯಾಹತವಾಗಿ ಸಾಗಿರುವುದ ಕಂಡು
ಮೆದುಳು ಮಾರಿಕೊಂಡವರ ತಲೆಯಲ್ಲಿ
ಈ ದೇಶವೇಕೆ ಹೀಗಿದೆ?
ಬೆಕ್ಕಿನ ನೆರಳು ತೋರಿಸಿ ಹೆಬ್ಬುಲಿ ನಿಂತಿದೆ ಮರೆಯಲ್ಲಿ
ಅಂತ ಪರದೆಯಲ್ಲಿ ತೋರಿಸಿದರೆ
ಕ್ಷಣಾರ್ಧದಲ್ಲಿ ಎಲ್ಲ ಕಡೆ ಹೆಬ್ಬುಲಿಯದೇ
ಮಾತು! ಮಾತು!ಮಾತು
ಅಯ್ಯಯ್ಯಪ್ಪ ಎಂದಿರಬಹುದು ಕೊರೋನಾ
ಪ್ರಾಣ ಹಿಂಡಲೂ ಬಂದ ಅಗೋಚರ ವೈರಾಣು
ಕೂಡ ಅಸಹ್ಯ ಪಡುವಷ್ಟು
ನಮ್ಮ ತಲೆಯಲ್ಲಿ ಅಮೇಧ್ಯದ ಹೊಲಸು
ವಾಸಿಯಾಗದ ದ್ವೇಷದ ವೈರಾಣೊಂದು ತಲತಲಾಂತರದಿಂದಲೇ ಇವರ ಮನಸ್ಸಿನಲ್ಲಿ ಮನೆಮಾಡಿರುವುದು ಕಂಡು
ವೈರಾಣುಗೂ ಆಶ್ಚರ್ಯ
ಕಾಡುತಿರಬಹುದು ಅದಕೂ ಪಾಪಪ್ರಜ್ಞೆ
ಯಾಕಾದರೂ ಇಲ್ಲಿಗೆ ಬಂದೇನೋ?
ಪಾಪಿಗಳು ನನಗೂ ಧರ್ಮದ ಬಣ್ಣ ಬಳಿದರಲ್ಲಾ;
ಸಾವಿನ ಬಾಗಿಲಂಚಿನಲ್ಲಿ ನಿಂತಿದ್ದರೂ
ಮದ್ದು ಕಂಡು ಹಿಡಿದೆ ಹಿಡಿಯುತ್ತಾರೆ
ನನ್ನ ಕೊಲ್ಲಲೂ
ಒಂದಲ್ಲ ಒಂದು ದಿನ
ನನಗಂತೂ ಅಂತ್ಯವಿದೆ
ಇವರ ತಲೆಯೊಳಗಿನ ಮಾರಕ ವೈರಾಣುಗೆ
ಅಂತ್ಯ ಬರೆಯುವವರಾರು?ಯಾವಾಗ?
ಕೊರೋನಾ ಮನದಲ್ಲಿ ಕಾಡುವ ಪ್ರಶ್ನೆಗೆ
ಉತ್ತರ ನಮ್ಮ ದೇಶದಲ್ಲಿಲ್ಲ.
********
One thought on “ಕಾವ್ಯಯಾನ”