Day: April 22, 2020

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಕಾಲಚಕ್ರ ಅರೆಕ್ಷಣವೂ ವಿರಮಿಸದೇ ಉರುಳುತ್ತಲಿದೆ ನಲ್ಲೆ ನಮ್ಮ ಪ್ರೀತಿ ಅಡೆತಡೆಯಿಲ್ಲದೇ ಬೆಳೆಯುತ್ತಲಿದೆ ನಲ್ಲೆ ನಡೆದ ಹಾದಿಯಲಿ ಎದುರಾದ ಕಷ್ಟ ಕೋಟಲೆಗಳು ನೂರು ಗಂಗಾ಼ಳದ ಗಂಜಿಯಲ್ಲೇ ಮೃಷ್ಟಾನ್ನದ ಸವಿ ತುಂಬಿದೆ ನಲ್ಲೆ ನಿನ್ನೆ ಮೊನ್ನೆಯಂತೆ ನೆನಪಿನಲ್ಲಿದೆ ಸಪ್ತಪದಿ ತುಳಿದ ಘಳಿಗೆ ದಶಕಗಳ ಅನುರಾಗದಲಿ ಈ ಬಂಧ ಬಿಗಿಗೊಂಡಿದೆ ನಲ್ಲೆ ಹುಲ್ಲಿನ ಮನೆಯೇ ಅರಮನೆಯಾಗಿರೆ ಎಲ್ಲಿಹುದು ಕೊರತೆ ? ನಾನು ಬಡವ ನೀನು ಬಡವಿ ಒಲವೇ ಸಿರಿಯಾಗಿದೆ ನಲ್ಲೆ ಬಾಳಿನ ಸಂಧ್ಯಾಕಾಲವಿದು ನನಗೆ ನೀನು ನಿನಗೆ ನಾನು […]

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ನಾಲ್ಕನೆ ಅದ್ಯಾಯ ಕನ್ನಡಕ್ಕೆ ಗಜಲ್ ಬಂದ ರೀತಿ ಪ್ರಪಂಚದಲ್ಲಿ ಗಜಲ್ ಹುಟ್ಟಿದ ರೀತಿ, ಅದು ಬೆಳೆದು ಬಂದ ಬಗೆ ಮೊದಲಾದ ಸಂಗತಿಗಳ ನಂತರ ಈಗ ನಮ್ಮ ಕನ್ನಡ ಗಜಲಗಳಿಗೆ ಬರೋಣ ಕನ್ನಡದ ಜಾಯಮಾನ ಒಂದು ಮಟ್ಟಿಗೆ ಕಷ್ಟಕರವಾದ ಮತ್ತು ವಿದೇಶಿಯ ಪರ್ಷಿಯನ್, ಅರಬ್ಬೀ, ಉರ್ದು ಭಾಷೆಗೆ ಒಗ್ಗಿದ ಸಾಹಿತ್ಯ ಪ್ರಕಾರವಾದ […]

ಭೂಮಿ ದಿನ

ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ […]

ಪುಸ್ತಕ ವಿಮರ್ಶೆ

ಮೇಗರವಳ್ಳಿ ರಮೇಶ್ ಆಲ್ಖೆಮಿಸ್ಟ್ ಕಾದಂಬರಿ ಮೂಲ:ಪೌಲೋ ಕೋಎಲ್ಹೊ(ಅರ್ಜೆಂಟೈನಾ) ಕನ್ನಡಕ್ಕೆ: ಕಮಲ ಹೆಮ್ಮಿಗೆ ಶ್ರೀಮತಿ ಕಮಲ ಹೆಮ್ಮಿಗೆಯವರು ಅನುವಾದಿಸಿದ ಪೌಲೋ ಕೋಎಲ್ಹೊ ನ ಕಾದಂಬರಿ “ಆಲ್ಖೆಮಿಸ್ಟ್”– ಒಂದು ಒಳ ನೋಟ                                                                                                               ಅರ್ಜೆಂಟೈನಾದ ಕಾದಂಬರಿ ಕಾರ ಪೌಲೋ ಕೊಎಲ್ಹೊ ಸ್ಪಾನಿಶ್ ಭಾಷೆಯಲ್ಲಿ ಬರೆದ ಕಾದಂಬರಿ “ಆಲ್ಖೆಮಿಸ್ಟ್” ಒಂದು ವಿಶಿಷ್ಠ ಕಥಾ ಹಂದರವನ್ನು ಹೊಂದಿರುವ, ಓದುಗನಲ್ಲಿ ಹೊಸ ಸಂಚಲನವನ್ನು ಉಂಟುಮಾಡುವ ಕಾದಂಬರಿ. ಕನ್ನಡದ ಶ್ರೇಷ್ಠ ಕವಯಿತ್ರಿಯರಲ್ಲಿ ಒಬ್ಬರಾದ ಡಾ! ಕಮಲ ಹೆಮ್ಮಿಗೆಯವರು ಈ ಕಾದಂಬರಿಯನ್ನು ಅದರ ಮಲಯಾಳಂ […]

ಕಥಾಯಾನ

ಮಕ್ಕಳ ಕಥೆ ಗರುಡನ ಆದರ್ಶ ರಾಜ್ಯ ಮಲಿಕಜಾನ ಶೇಖ     ವಿಂದ್ಯ ಪರ್ವತಗಳ ಇಳಿಜಾರು ಭಾಗದಲ್ಲಿ ‘ಸುಂದರಬನ’ ಎಂಬ ಸುಂದರ ಕಾಡು. ಹಚ್ಚ ಹಸಿರಿನ ಸಿರಿ, ಸುತ್ತಲೂ ಪರ್ವತ ಶ್ರೇಣಿ. ಅಲ್ಲಲ್ಲಿ ನೀರಿನ ಹೊಂಡಗಳು, ಜುಳು ಜುಳು ಹರಿಯುವ ನದಿ ಇವೆಲ್ಲವುಗಳಲ್ಲಿ ಹಾರಾಡಿ, ನಲಿದು ನೆಮ್ಮದಿಯಿಂದ ಬದುಕುವ ಪಕ್ಷಿ ಸಂಕುಲ. ಪಕ್ಷಿಗಳೆಲ್ಲಾ ಹಾರಾಡಿಕೊಂಡು ಗೂಡು ಮಾಡಿಕೊಂಡು ಸಂತೋಷವಾಗಿದ್ದವು. ಕಾಲ ಕ್ರಮೇಣ ಅವುಗಳಲ್ಲಿ ಸ್ವಾರ್ಥ ಬೆಳೆದು, ತಂಡ ಕಟ್ಟಿಕೊಂಡು ಕಳ್ಳತನ, ಸುಲಿಗೆ, ಅನ್ಯಾಯ, ಅತ್ಯಾಚಾರದಲ್ಲಿ ನಿರತರಾದವು. ಅದರಲ್ಲಿ ನೆರೆಯ […]

ಪ್ರಸ್ತುತ

ಆತಂಕಗಳ ಸರಮಾಲೆ ರೇಷ್ಮಾ ಕಂದಕೂರ ಮಗು ಎಂಬುದು ದೈವಿಕ ಶಕ್ತಿ .ಮಗುವಿನಲ್ಲಿ ಅವ್ಯಕ್ತ ಭಯ ಭಾವನೆಗಳು ಆತಂಕ ಇದ್ದೇ ಇರುತ್ತದೆ . ಕೆಲವು ಪೋಷಕರಿಗೆ ಇದರ ಅರಿವು ಇರುತ್ತದೆ,ಕೆಲವರಿಗೆ ಇರುವುದಿಲ್ಲ,ಮಕ್ಕಳ ಆತಂಕಕ್ಕೆ ಕಾರಣಗಳೇನು? ಆ ಕಾರಣಗಳ ಮೂಲ ಏನು ಎಂಬುದು ತಿಳಿಯದೇ ಮಕ್ಕಳು ಹೆದರಿಕೊಳ್ಳುವರು ಏಕೆ ಹೀಗೇಕೆ ಎಂಬ ಪ್ರಶ್ನೆ ಕಾಡತೊಡಗುತ್ತದೆ.ಮಕ್ಕಳ ವರ್ತನೆ ಬದಲಾಗುವ ರೀತಿ ಕಂಡು ಒಳಗೊಳಗೆ ಕೊರಗುತ್ತಾರೆ.      ಇದರಿಂದ ಮಗು ಕೂಡ ತಂದೆ ತಾಯಿಯ ತಿರಸ್ಕಾರಕ್ಕೆ ಒಳಗಾಗುತ್ತದೆ. ನಾನು ಪರಿತ್ಯಕ್ತ  ಎಂಬ ಭಾವನೆ […]

ಕಾವ್ಯಯಾನ

ಕೆ.ಬಿ.ಸಿದ್ದಯ್ಯ ಹುಳಿಯಾರ್ ಷಬ್ಬೀರ್ ದಲಿತ ಕೇರಿಯ ಹುಡುಗ ಅಲ್ಲಮನ ಮಹಾಮನೆ ಹೊಕ್ಕು ದಲಿತರ ಅಕ್ಷರ ಲೋಕವನ್ನು ಅರಮನೆಯಾಗಿಸಿದ.. ದಲಿತ ಕಾವ್ಯೋದ್ಭದಲ್ಲಿ ಚಿಂತನೆಯ ಫಲ ಬೆರೆಸಿ ಮಸ , ಮಸೆದು ಹತಾರಗಳನ್ನು ಖಂಡಕಾವ್ಯವಾಗಿಸಿದವರು ಮೊನಚು ಮಾತು ಬಿಳಿಯ ಗಡ್ಡದೊಳ್ ಬೆರಳಾಟದ ಚೆಂದದೊಂದಿಗೆ ಅಂಬೇಡ್ಕರ್ ಕೂಗೇ ನಿಮ್ಮ ಕೂಗಾಗಿ ಗಾಂಧಿ ಬುದ್ಧನನ್ನು ನಿಮ್ಮೆರಡು ಕೈಗಳಲ್ಲಿ ತಬ್ಬಿ ಹಿಡಿದವರು .. ಭೌತಿಕ ಜಗತ್ತು ಆಧ್ಯಾತ್ಮದ ಮುಂದೆ ಸೋಲುವಂತೆ ಬಕಾಲ ಮುನಿಯಾಗಿ ಶಬ್ದಕ್ಕೆ ಶಬ್ದವೇ ನಾಚುವಂತೆ ಅದರಾಚೆಗೂ … ಗಲ್ಲೆಬಾನಿಯಲ್ಲೆ ಅದ್ದಿ ಅನಾತ್ಮ […]

ಚರ್ಚೆ

ಕನ್ನಡ ಸಂಸ್ಕೃತಿಯ ಕಡೆಗಣನೆ ಮಲ್ಲಿಕಾರ್ಜುನ ಕಡಕೋಳ ಹೊಸ ಸರ್ಕಾರಗಳು ರಚನೆಯಾಗುವಾಗ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ “ಮಂತ್ರಿಗಿರಿ” ಯಾರೂ ಬಯಸುವುದಿಲ್ಲ. ಇಲ್ಲವೇ ಅದಕ್ಕಾಗಿ ಪೈಪೋಟಿ ಇರುವುದೇ ಇಲ್ಲ. ಸಾಮಾನ್ಯವಾಗಿ ಪವರ್ಫುಲ್ ರಾಜಕಾರಣಿಗಳಿಗಂತೂ ಅದು ಬೇಡದ ಇಲಾಖೆಯೇ ಆಗಿರ್ತದೆ. ಇದುವರೆಗೂ ಯಾರೊಬ್ಬರೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಬೇಕೆಂದು ಬಯಸಿ, ಹಟ ಹಿಡಿದು ಮಂತ್ರಿಯಾದ ಉದಾಹರಣೆಗಳಿಲ್ಲ. ಹೀಗೆ ಬಹುಪಾಲು ಮಂದಿ ವೃತ್ತಿಪರ ರಾಜಕಾರಣಿಗಳಿಗೆ ಬೇಡವಾದ ಇಲಾಖೆ ಇದು. ಅಷ್ಟಕ್ಕೂ ಕಾಟಾಚಾರಕ್ಕೆ ಮಂತ್ರಿಯಾಗಿ ಬಂದವರಿಂದ ಇಲಾಖೆಗೆ ನ್ಯಾಯ ದೊರಕೀತಾದರೂ ಹೇಗೆ […]

ಪ್ರಸ್ತುತ

ಇದು  ಲಾಕ್ಡೌನ್ ಸಮಯ ರೇಶ್ಮಾ ಗುಳೇದಗುಡ್ಡಾಕರ್ ಕರೋನಾದ ತಲ್ಲಣ ದಿನದಿನಕ್ಕೂ ಅಗಾಧವಾಗಿ ವ್ಯಾಪಿಸುತ್ತಿದೆ .     ಲಾಕ್ ಡೌನ್ ನಿಂದ ಸೀಲ್ ಡೌನ್ಗೆ ನಾವು ಸಿದ್ದರಾಗುತ್ತಿದ್ದೇವೆ .  ಪ್ರಾಣಿಗಳು ಸ್ವಚ್ಚಂದವಾಗಿ ಸಂಚರಿಸುತ್ತಾ ತಮ್ಮ ಸ್ವಾತಂತ್ರ್ಯ ಅನುಭವಿಸುತ್ತಿವೆ. ಮತ್ತೊಂದೆಡೆ ಇಡೀ ದೇಶದಲ್ಲೇ ವಾಯುಮಾಲಿನ್ಯ ಗಣನೀಯವಾಗಿ ತಗ್ಗಿದೆ.!! ನಮ್ಮ ರಾಷ್ಟ್ರದ ರಾಜಧಾನಿ ದೆಹಲಿ ಒಂದು ಕಾಲದಲ್ಲಿ ಹವಾಮಾನ ವೈಪರೀತ್ಯದಿಂದ ತತ್ತರಿಸಿ ಹೋಗಿತ್ತು .ಈಗ ಅದು ಹಳೆ ಮಾತು ಬಿಡಿ . ಮಹಾನಗರಿಗಳು ಮೌನವಾಗಿವೆ.  ಸದಾ ಜನಜಂಗುಳಿಯಿಂದ ಕೂಡಿ ನಿಶ್ಯಬ್ದತೆಯನ್ನು ಮರೆತ ನಗರಿಗಳು […]

ಕಾವ್ಯಯಾನ

ನದಿ ದಡದಲಿ ನಡೆದಾಡಿದಂತೆ ಶೋಭಾ ನಾಯ್ಕ.ಹಿರೇಕೈ ಕಂಡ್ರಾಜಿ ಕವಿತೆ ಬರಿ ಅಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ! ಕಿರುಬೆರಳ ನೀ ಹಿಡಿದು ಕಣ್ಮುಂದೇ.. ಬಂದಂತೆ ನದಿ ದಡದ ಮೇಲೆಲ್ಲ ನಡೆದಾಡಿ ಹೋದಂತೆ ಹೋದಲ್ಲಿ ಬಂದಲ್ಲಿ ಹೂ ಅರಳಿ ನಕ್ಕಂತೆ ನಕ್ಷತ್ರವನೇ ಕಿತ್ತು ಕಣ್ಮುಂದೆ ಇಟ್ಟಂತೆ ಅಂಗೈ ಗೆರೆಗಳ ಮೇಲೆ ಕವನಗಳ ಬರೆದಂತೆ ನಯನಗಳು ಒಂದಾಗಿ ಪ್ರೇಮವನೇ ಉಂಡಂತೆ ಅರಬ್ಬಿಯ ಅಲೆಗಳಲಿ ಹೊರಳಾಡಿ ಮಿಂದಂತೆ ದೂರ ತೀರವ ದಾಟಿ ಹೊಸ ಲೋಕ ಕಂಡಂತೆ ಹಾಯಿ ದೋಣಿಯ […]

Back To Top