ಪ್ರಸ್ತುತ

ಮೊಬೈಲ್ ಡೆವಿಲ್ ಆದೀತು ಜೋಕೆ:

The Best Smartphones for 2020 | Reviews by Wirecutter

ವಿದ್ಯಾ ಶ್ರೀ ಬಿ.

ಮೊಬೈಲ್ ಡೆವಿಲ್ ಆದೀತು ಜೋಕೆ.

ಮಾನವ ಇಂದು ನಾಗರಿಕತೆಯ ಕಡೆ ಭರದಿಂದ ಸಾಗಿದ್ದಾನೆ. ಹಿಂದೆ ಅನಾಗರೀಕನಾಗಿದ್ದ ಅವನಲ್ಲಿ ಆದಿಮಾನವನಿದ್ದ. ಈಗ ನಾಗರಿಕನಾಗಿದ್ದಾನೆ, ಗ್ರಹದಿಂದ ಗ್ರಹಕ್ಕೆ ಹೋಗಿ ಬರುತ್ತಿದ್ದಾನೆ. ಸಮುದ್ರದ ಆಳವನ್ನು ಕೊರೆದಿದ್ದಾನೆ. ಭೂಮಿಯ ಒಡಲನ್ನು ಬರಿದು ಮಾಡಿದ್ದಾನೆ, ಕಾಂಕ್ರೀಟ್ ಜಂಗಲ್ ಸೃಷ್ಟಿಸಿದ್ದಾನೆ .ಕನಸಿನ ಕೂಸಾದ ಕಂಪ್ಯೂಟರ್ ನಿರ್ಮಿಸಿ ಬಿಡುತ್ತಿದ್ದಾನೆ. ಶಸ್ತ್ರಾಸ್ತ್ರ ಅಣ್ವಸ್ತ್ರದ ಜನಕನೂ ಆಗಿದ್ದಾನೆ. ರೋಬೋಟ್ ಮಾನವ ಕ್ಲೋನಿಂಗ್ ತಳಿಯ ಸೃಷ್ಟಿಕರ್ತನಾಗಿ ಹೀಗೇ ಅವನ ಮಹತ್ತರ ಸಾಧನೆಯನ್ನು ಪಟ್ಟಿಮಾಡುತ್ತ ಹೋಗಬಹುದು ಇವೆಲ್ಲದರೊಂದಿಗೆ ಮೊಬೈಲ್ ಅವನ ಸಾಧನೆಗಳ ಕಿರೀಟದಲ್ಲಿ ವಜ್ರದ ಹರಳಿನಂತೆ ಒಪ್ಪುತ್ತಿದೆ.
ಐದು ಆರು ವರ್ಷಗಳ ಹಿಂದೆ ಸಂಪರ್ಕ ಅಷ್ಟೇನೂ ಸುಲಭವಾಗಿರಲಿಲ್ಲ ಸಂಪರ್ಕ ಇಂದು ಅತಿ ಸುಲಭ. ಫೋನ್ ಸಂಪರ್ಕಕ್ಕಾಗಿ ಗುಂಡಿ ತೋಡಬೇಕಾಗಿಲ್ಲ. ಕಂಬ ನಿಲ್ಲಿಸುವ ಅಗತ್ಯವಿಲ್ಲ ತಂತಿ ಎಳೆಯುವ ಪ್ರಮೇಯವಿಲ್ಲ. ಸೊಂಟದ ಮೇಲಿನ ಮಗುವಿನಂತೆ ಎತ್ತಿಕೊಂಡು ಹೋಗಲು ಭಾರವಿಲ್ಲ. ಮೈಸೂರು ಸ್ಯಾಂಡಲ್ ಸೋಪ್ಗಿಂತಲೂ ಚಿಕ್ಕದಾದ ಉಪಕರಣವನ್ನು ಜೇಬಿಗಿಳಿಸಿ ಕೊಂಡು ಎಲ್ಲಿಗೆ ಬೇಕಾದರೂ ಹೋಗಬಹುದು. ಪ್ರಯಾಣಿಸುತ್ತಾ ಮಾತನಾಡಬಹುದು ಎಲ್ಲೆಂದರಲ್ಲಿ ಯಾವಾಗ ಬೇಕಾದರೂ ಬಳಸಬಹುದು.

ಹತ್ತು ಇಪ್ಪತ್ತು ವರ್ಷಗಳ ಹಿಂದೆ ಯಾವುದಾದರೊಂದು ದೇವರ ನಾಮಸ್ಮರಣೆಯನ್ನು ಕೇಳುತ್ತಿದ್ದ ಕಿವಿಗಳನ್ನು ಮೊಬೈಲ್ ಫೋನ್ ಅಲಂಕರಿಸಿವೆ. ಮೊಬೈಲ್ ಇಲ್ಲದಿದ್ದರೆ ಜೀವನಕ್ಕೆ ಅರ್ಥ ಇಲ್ಲದಂತಾಗಿದೆ ಅದು ಅಪೂರ್ಣ ಬದುಕು ಎನಿಸಿದಂತಾಗಿದೆ. ಅಲ್ಲದೆ ಅತ್ಯಾಧುನಿಕ ಜಗತ್ತಿಗೆ ಅದು ತುಂಬಾ ಅವಶ್ಞಕ ಅದು ಇಲ್ಲದಿದ್ದರೆ ಬದುಕು ನಡೆಯುವುದೇ ಇಲ್ಲವೆಂಬ ಅನಿವಾರ್ಯತೆ ಬಂದಿದೆ ಸಂಬಂಧ ಪರಸ್ಪರ ಪ್ರೀತಿ ಪ್ರೇಮ ತುರ್ತು ಸಮಾಚಾರ ಒಳ್ಳೆಯದು-ಕೆಟ್ಟದ್ದು ಎಲ್ಲದಕ್ಕೂ ಅದು ಬಳಕೆ ಆಗುತ್ತಿದೆ. 10 ನಿಮಿಷ 20 ನಿಮಿಷ ಅರ್ಧಗಂಟೆ ಹೀಗೆ ಗಂಟೆಗಟ್ಟಲೆ ಹರಟುವುದು ಉಂಟು ಈ ಹಿಂದೆ ಮಧ್ಯ ಕುಡಿದವನನ್ನು ಅನಾಗರಿಕ ಎನ್ನುತ್ತಿದ್ದರು ಇಂದು ಮೊಬೈಲ್ ಫೋನ್. ಇಲ್ಲದವನನ್ನು ಹೀಗೆ ಭಾವಿಸಲಾಗುತ್ತಿದೆ ಮಗುವಿನಿಂದ ಹಿಡಿದು ಮುದುಕ ಮುದುಕಿಯರವರೆ ವರ್ತಮಾನದಿಂದ ಧಾರ್ಮಿಕತೆಯವರೆಗೂ ಅದರ ಬಳಕೆ.

ಮೊಬೈಲ್ ಫೋನಿನಿಂದ ಒಳ್ಳೆಯದನ್ನು ಮಾಡಬಹುದು ಅದರಂತೆ ಕೆಟ್ಟದ್ದನ್ನು ಸಹ ಮೊಬೈಲ್ ಫೋನಿನ ಅತೀವ ಸಂಭಾಷಣೆ ಕಿವಿಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಸದಾಕಾಲ ಏನೋ ಮುಳುಗುತ್ತಿರುವ ಅನುಭವವಾಗುತ್ತದೆ. ಮೊಬೈಲ್ ಫೋನ್ ತರುವ ಸಂದೇಶ ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮೊದಲೇ ಆಧುನಿಕ ಮಾನವ ಒತ್ತಡದ ಮಾನವ ಆಗಿದ್ದು. ಮೊಬೈಲ್ ಫೋನ್ ಮತ್ತಷ್ಟು ಅದನ್ನು ಹೆಚ್ಚಿಸುತ್ತದೆ, ಕೆಲವರು ಕರೆಗಳು ಬೇಡವೆಂದು ಬಂದ್ ಮಾಡಿಬಿಡುತ್ತಾರೆ ಅದೆಷ್ಟು ಕರೆಗಳು ಬಂದಿರುವುದು ಗಮನಕ್ಕೆ ಬಂದು ಏನು ಆ ಕಡೆಯಿಂದ ಸಂದೇಶವಿತ್ತು ಎಂದು ಬಂದ್ ಮಾಡಿದರೆ ಸಂಪರ್ಕ ಬೆಳೆಸಲು ಮುಂದಾಗುತ್ತಾರೆ. ಎಲ್ಲಿಂದಲೋ ಬರುವ ಫೋನ್ ಕರೆಯೊಂದು ಮನಸ್ಸನ್ನು ಕೆಡಿಸುವ ಸಂಭವವಿದೆ. ಪ್ರಶಾಂತವಾಗಿದ್ದ ಮನಸ್ಸು ಕೆಲ ನಿಮಿಷಗಳಲ್ಲಿ ಅಶಾಂತವಾಗಿ ಬಿಡುತ್ತದೆ. ಮನಸ್ಸಿನ ಅದುಮಿಟ್ಟ ಅದೆಷ್ಟು ಭಾವನೆಗಳನ್ನು ಮೊಬೈಲ್ ಫೋನ್ ಮೂಲಕ ಹೊರ ಹಾಕಬಹುದಾಗಿದೆ. ನಾವು ನೀವು ಸುಮ್ಮನಿರಬಹುದು ಆದರೆ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ಬಂದು ಮನಸ್ಸಿನ ಮೇಲೆ ಅಪ್ಪಳಿಸುತ್ತಲೇ ಹೋಗುತ್ತವೆ. ಒಬ್ಬನು ಎಷ್ಟೇ ಉತ್ತಮ ನಾ ಉತ್ತಮವಾಗಿರಬೇಕೆಂದರೆ ಬರುವ ಒಂದು ಕರೆ ಆತನನ್ನು ತಪ್ಪು ಹಾದಿಗೆ ಎಳೆಯಲು ಕಾರಣ ಆಗುತ್ತದೆ. ಮುಖ್ಯವಾಗಿ ಶಾಂತ ವಾತಾವರಣದಿಂದ ದೂರ ಉಳಿಯಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಶಾಂತಿ ಸಮಾಧಾನ ಸಹನೆಗೆ ಒಳಗಾಗುವುದು ದುಸ್ತರವಾಗಿರುವಾಗ ಮೊಬೈಲ್ ಫೋನು ಮತ್ತಷ್ಟು ಶಾಂತಿಯನ್ನು ಕಳೆಯುತ್ತದೆ ತನ್ನೆಲ್ಲ ಭಾವನೆಗಳನ್ನು ಅದರಿಂದ ವ್ಯಕ್ತಪಡಿಸಬಹುದಾದ ಒಂದು ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ. ಮತ್ತು ಶಾಂತಚಿತ್ತ ಇಲ್ಲವಾಗುತ್ತದೆ ಆದ್ದರಿಂದ ಅದು ಆಧುನಿಕ ಮಾನವನಿಗೆ ಗಂಟು ಬಿದ್ದ ಬೇತಾಳ. ಅದು ಮೊಬೈಲ್ ಅಲ್ಲ ಅನೇಕ ಸಾರಿ ಅದು ಡೆವಿಲ್ ಆಗಿ ಕಾಡುತ್ತದೆ.

*********

Leave a Reply

Back To Top