ಕಾರ್ಮಿಕ ದಿನದ ವಿಶೇಷ-ಕವಿತೆ
ಕವಿತೆ ಕಾರ್ಮಿಕರು ನಾವು ಡಾ.ಪ್ರಸನ್ನ ಹೆಗಡೆ ಕಾರ್ಮಿಕರು ನಾವು ಕಾರ್ಮಿಕರು ನಾವು ಯಂತ್ರದ ವೀಣೆಯ ತಂತಿಯ ಮೀಟುವ ವೈಣಿಕರು ನಾವು ಕಾರ್ಮಿಕರು ನಾವು ಆರ್ಥಿಕ ದೋಣಿಯ ಚಂದದಿ ನಡೆಸುವ ನಾವಿಕರು ನಾವು ಕಾರ್ಮಿಕರು ನಾವು ಒಡೆಯನ ಕನಸಿನ ಬೀಜವ ಬಿತ್ತುವ ಜೀವಿಗಳು ನಾವು ಕಾರ್ಮಿಕರು ನಾವು ಹಗಲಿರುಳೆನ್ನದೆ ನಿಲ್ಲದೆ ನಡೆಯುವ ಕಾಲನ ಕಾಲುಗಳು ನಾವು ಕಾರ್ಮಿಕರು ನಾವು ಮಳೆಬಿಸಿಲೆನ್ನದೆ ಕಾರಣ ಒಡ್ಡದೆ ದುಡಿಯುವ ಜನ ನಾವು ಕಾರ್ಮಿಕರು ನಾವು ಗಣಿಯೊಳಗಿಳಿದು ಕುಲುಮೆಯೊಳ್ಬೆಂದು ಹೊನ್ನಾಗುವ ಜನ ನಾವು ಕಾರ್ಮಿಕರು […]
ಕಾವ್ಯಯಾನ
ಸುರಿಮಳೆ ವೀಣಾ ರಮೇಶ್ ಧೋ ಎಂದಿದೆ ನಗುಮಳೆ ಮನಸಿನ ಸುಂದರ ನಗರಿಯಲಿ ನಿನ್ನ ನಸುನಗುವಿನ ಸಿಹಿ ಸಿಂಚನದ ಕಳೆ ಬಿಸಿಯೇರಿದ ವಿರಹದ ಕಾವಿಗೆ ಒಂದಷ್ಟು ತಂಪು ನೀಡಿದೆ,,ಎಡಬಿಡದೆ ಸುರಿವ ನಿನ್ನ ನಗುವಿನ ನರ್ತನದಲಿ ಮನದ ಇಳೆ ನನ್ನ ಮೈ ಮನಗಳು ಒದ್ದೆಯಾಗಿವೆ ತುಸು ಮೆಲ್ಲ ಬೀಸಿದೆ ನೆನಪಿನ ತಂಗಾಳಿ ಕತ್ತಲೆಯ ಮೌನವಷ್ಟೇ ಸೀಳಿದೆ ತಬ್ಬಿ ಈ ಸುಳಿಗಾಳಿ ಮತ್ತದೇ ಸಿಹಿ ಹನಿಗಳು ಆಳಕೆ ಸುರಿದಿದೆ, ನಾ ತೇಲಿ ಹೋಗುವಷ್ಟು ಹರ್ಷ ಧಾರೆಯಲಿ ನೆನೆಯದಂತೆ ಬಚ್ಚಿಟ್ಟು ಕೊಂಡಿರುವೆ ನೆನಪುಗಳು […]
ಕಾವ್ಯಯಾನ
ಸ್ವರ ಮಾಧುರ್ಯ ಬಿ ಅರುಣ್ ಕುಮಾರ್ ಹೃದಯ ವೀಣೆ ನಾದ ಅಲೆ ಅಲೆಯಾಗಿ ಮನ ಕಡಲಿಗೆ ತಾಕುತಿದೆ ನೋಡು ಒಳಗೆ ಒಮ್ಮೆ ಕಡಲತೀರ ತೆರೆ ತಾಕಲಾಟ ಭಾವಕೋಶ ಪತಂಗದಾಟ ಬಾನುಲಿ ದಿಗಂತ ಮುಟ್ಟಲು ಹಕ್ಕಿಗಳುಲಿಯುತ ಪುಟ ನೆಗೆತ ಪಂಚ ಇಂದ್ರಿಯ ನಿಗ್ರಹಿಸಿ ಒಂದೊಮ್ಮೆ ಕೇಳಿ ನೋಡು ಕರ್ಣಾನಂದ ಉಕ್ಕಿ ಹರಿದು ಆನಂದಬಾಷ್ಪ ಹೊಮ್ಮುವುದು ಒಲವಿನಾಲಿಂಗನ ಮಿಲನ ನಿಸರ್ಗ ಸ್ತನಪಾನ ಚೈತನ್ಯ ಏಳು ಸಾಗರಗಳ ಎಲ್ಲೆ ಮೀರಿ ಕೋಗಿಲೆ ಕಳಕಂಠ ಬೆರೆಸಿದೆ ನಾಕು ತಂತಿಯಲಿ ಹುಟ್ಟಿದ ಸಪ್ತ ಸ್ವರಗಳ […]
ಕಾವ್ಯಯಾನ
ಗಝಲ್ ತೇಜಾವತಿ ಹೆಚ್.ಡಿ. ಮೌನದ ಮಾತು ಅರ್ಥವಾಯಿತು ನಿನ್ನಿಂದ ಕಾಣದ ಕನಸು ಗೋಚರವಾಯಿತು ನಿನ್ನಿಂದ ಹದವಾದ ಭೂಮಿ ಬಂಜರಾಗಿತ್ತು ನೀನಿಲ್ಲದೆ ಉತ್ತುವ ಕಾರ್ಯ ಅರ್ಥವಾಯಿತು ನಿನ್ನಿಂದ ಪ್ರೀತಿ ಹೃದಯದಿಂದ ಒಸರುತ್ತಿತ್ತು ರಸಜೇನಾಗಿ ಸವಿಯ ಸವಿವುದು ಶುರುವಾಯಿತು ನಿನ್ನಿಂದ ನೆರಳೂ ಹಿಂಬಾಲಿಸಲು ಅದುರುತ್ತಿತ್ತು ನನ್ನನ್ನು ಕಣ್ಣಲ್ಲಿ ಬೆಳಕು ಒಮ್ಮೆಲೇ ಪ್ರಜ್ವಲಿಸಿತು ನಿನ್ನಿಂದ ಕಾಯಕ್ಕೂ ಆತ್ಮಕ್ಕೂ ಹೊಂದಿಕೆ ಇರಲಿಲ್ಲ ಎನ್ನಲ್ಲಿ ಮನದೊಳಗೆ ತೇಜಸ್ಸಿರುವುದು ತಿಳಿಯಿತು ನಿನ್ನಿಂದ *******
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-10 ಆತ್ಮಾವಲೋಕನಕ್ಕಿದು ಸಕಾಲ.. ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ದುಡಿಮೆ ನಿಂತರೂ ಕೃಷಿಕ್ಷೇತ್ರದಲ್ಲಿ ದುಡಿಮೆ ನಿಂತಿಲ್ಲ. ಅದನ್ನು ನಿಲ್ಲಿಸುವಂತಿರುವುದೂ ಇಲ್ಲ.ದಾಸ್ತಾನು ಮಾಡಬಹುದಾದ ಬೆಳೆ ಬೆಳೆಯುವ ರೈತರು ಈಗ ಅಷ್ಟಾಗಿ ಚಿಂತೆ ಮಾಡುತ್ತಿಲ್ಲ. ಈ ಬಿಡುವನ್ನು ಸ್ವಲ್ಪ ರಜೆಮೂಡಿನಲ್ಲಿ ಅನುಭವಿಸುತ್ತಿದ್ದಾರೆ. ತೋಟದ ಕೆಲಸವನ್ನು ನಿರ್ವ ಹಿಸುತ್ತಿದ್ದಾರೆ. ಆದರೆ ತರಕಾರಿ ಹೂವು, ಹಣ್ಣು ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಪಾವಧಿಯಲ್ಲಿ ಬರುವ ಬೆಳೆಗೆ ಬೇಸಿಗೆಯಲ್ಲಿ ಉತ್ತಮ ಧಾರಣೆ ದೊರೆಯುತ್ತಿತ್ತು ( ಜಾತ್ರೆ ,ತೇರು […]
ಕಾವ್ಯಯಾನ
ನನ್ನೂರಿನಲ್ಲಿ ಎಸ್.ಕಲಾಲ್ ನೀ ಬರಲೆಂದೆ ಮರುಭೂಮಿ ಹಸಿರಾಗಿದೆ ನನ್ನೂರಿನಲ್ಲಿ.. ನೀ ನೋಡಲೆಂದೆ ಕಲ್ಲು-ಕಗ್ಗಲ್ಲು ಶಿಲೆಯಾಗಿದೆ ನನ್ನೂರಿನಲ್ಲಿ. ಪಾಳು ಮಸಣದ ಮಲ್ಲಿಗೆಯರಳಿ ಪಾವನವಾಗಿದೆ ನಿನ್ನ ಮುಡಿ ಸೇರಲೆಂದೆ ನನ್ನೂರಿನಲ್ಲಿ.. ಇತಿಹಾಸದ ರಾಜ-ಮಹಾರಾಜರು ಮೆರೆದ ನೆಲ ನಿನ್ನ ಹೆಜ್ಜೆಗೆ ಕಾಯುತ್ತಿದೆ ನನ್ನೂರಿನಲ್ಲಿ.. ಆ ಆಗಸದ ಚಂದಿರನನ್ನು ಗಲ್ಲಿಗೆರಿಸಿದ್ದೇನೆ ನಿನ್ನ ಕದಿಯದಿರಲೆಂದು ನನ್ನೂರಿನಲ್ಲಿ.. ನನ್ನ ಸಾವಿರ ಕನಸಿನ ಹೆಬ್ಬಾಗಿಲು ನೆಟ್ಟಿದ್ದೇನೆ ಬಲಗಾಲಿಟ್ಟು ಬಂದುಬಿಡು ನನ್ನೂರಿನಲ್ಲಿ.. ನೀ ಬರುವ ಹಾದಿಯ ಕಾದು ಕಾದು ಬೀದಿಯಲ್ಲಿ ಹೆಣವಾಗಿವೆ ಮೈಲುಗಲ್ಲುಗಳು ನನ್ನೂರಿನಲ್ಲಿ.. ನಿನ್ನ ಗೆಜ್ಜೆಯ ನಾದವ […]
ಗಝಲ್ ಲೋಕ
ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಐದನೇ ಅದ್ಯಾಯ ಮನಸೂರೆಗೊಳ್ಳುವ ಗಜಲ್ ಗಜಲ್ ಗದ್ಯ ಮಿಶ್ರಿತ ಪದ್ಯವೇ ಗಜಲ್ ಗದ್ಯವೇ, ಪದ್ಯವೇ ಅಥವಾ ಗದ್ಯ ಮಿಶ್ರಿತ ಪದ್ಯವೇ ಎಂಬುದು ಇತ್ತೀಚಿನ ಕನ್ನಡ ಗಜಲಗಳನ್ನು ನೋಡಿದಾಗ ಸಾಕಷ್ಟು ಗೊಂದಲವಾಗುತ್ತದೆ. ಯಾಕೆಂದರೆ ಹೆಚ್ಚಿನ ಗಜಲಗಳು ಗದ್ಯ ಮಿಶ್ರಿತ ಪದ್ಯಗಳಾಗಿ ಕಂಡು ಬರುತ್ತವೆ. ಆದರೆ ಮೂಲತಃ ಗಜಲ್ ಎನ್ನುವುದು ಲಯಬದ್ಧವಾಗಿದ್ದೂ ಗೇಯತೆಯನ್ನು […]
ಕಾವ್ಯಯಾನ
ನಿಲ್ಲದ ಆಳಲು ಕವಿತಾ ಮಳಗಿ ಎನು ಮಾಡುವುದು.. ನಮ್ಮ್ದು ಬಾಳೆ ಹೀಗೇ ಹೇಗೆ ಸಾಧ್ಯ ನಿಮ್ಮಂತೆ ಇರಲೂ… ಬಿಸಿಲಿರಲಿ ಮಳೆಯಿರಲಿ ಅನುದಿನವು ಹೋರಾಟ ಬಾಳಿಗೆ ಅದುವೇ ಅಭ್ಯಾಸವು.. ಸುಖ ಇಲ್ಲ ಎನ್ನುವ ಮಾತು ನೋವಿನ ಸಂಗತಿ ಇದು ಸತ್ಯ ಎನು ಮಾಡಲು ಸಾಧ್ಯವಿಲ್ಲ…. ನೆಮ್ಮದಿ ಇಲ್ಲ ಕಟಿಬಿಟಿ ಜೀವನ ಕೊನೆ ಇಲ್ಲದ ಭವಣೆಗಳು ಹೇಳಲಿಲ್ಲ ಯಾರಿಗೂ….. ಧನಿಕ ನೀವೆಲ್ಲರೂ ಬದುಕಲ್ಲಿ ಶ್ರೀಮಂತ ನನ್ನ ರಾಜ್ಯದಲ್ಲಿ ನಾನು ನಾವಿಲ್ಲದೆ ಏನೂ ಇಲ್ಲ… ನಮ್ಮಿಂದ ಗುಡಿಗೋಪುರ ನಮ್ಮಿಂದ ಮನೆಮಠ.. ಆದ್ರೂ […]