Day: April 6, 2020

ಕಾವ್ಯಯಾನ

ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ!!! ಸರೋಜಾ ಶ್ರೀಕಾಂತ್ ಅಮಾತಿ ಇಬ್ಬನಿಯ ಹನಿಯೊಂದು ಲಜ್ಜೆ ಬಿಟ್ಟು ಗೆಜ್ಜೆನಾದದ ಹೆಜ್ಜೆ ಹೇಗಿಡಲೆಂತಂತೆ!? ಹರಸುತ ಮೋಡಗಳೆಲ್ಲ ಮತ್ತೇ ತುಸು ಕತ್ತಲವ ಹೊತ್ತು ತಂದು ಹಾರೈಸಿದವಂತೆ! ಹಬ್ಬಿದ ಮಬ್ಬನ್ನೇ ನೆವ ಮಾಡಿಕೊಂಡಿಬ್ಬನಿ ಗರಿಕೆಯ ತಬ್ಬಿಕ್ಕೊಂಡಿತಂತೆ! ಅರಸಿ ಬಂದ ಸವಿಗಾಳಿಯು ಸರಸವ ನೋಡಿ ಸುಮ್ಮನೆ ದೂರ ಸರಿಯಿತಂತೆ! ಸ್ಪರ್ಶದುಸಿರು ಹರ್ಷದರಸಿಗೆ ಹೊಸದಿರಿಸ ನೆಪದಿ ಹನಿಹನಿ ನೀರನೇ ಪೋಣಿಸಿ ಸೀರೆಯಾಗಿಸಿತಂತೆ! ನಾಚಿ ಇಬ್ಬನಿ ಮುತ್ತಿಗೆ ಹಾಕಿದೆ ಮುತ್ತೀನಿಂದಲೇ…. ಬಾಚಿ ಅಪ್ಪಿದ ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ….!!! ***********

ಕಾವ್ಯಯಾನ

ಅಗುಳಿಯಿಲ್ಲದ ಕದ ಶಶಿಕಲಾ ವೀ ಹುಡೇದ ಬೀಸುವ ಆಷಾಢ ಗಾಳಿ ಬೀದಿಬೀದಿಯಲಿ ಗಂಡು ನಾಯಿಗಳ ದಂಡ ನಡುವೆ ಒಂದೇ ಒಂದು ಹೆಣ್ಣುನಾಯಿ ಅವಕ್ಕೆ ನಾಚಿಕೆಯಿಲ್ಲ ಎಂದಿರಾ? ಇತ್ತಿತ್ತಲಾಗಿ ನಾಚುವ ಸರದಿ ನಿಮ್ಮದೇ ಯಾಕೆಂದರೆ ಅವುಗಳನೂ ಮೀರಿಸಿದ್ದೀರಿ ನೀವು? ಗದ್ದೆ ಕೆಸರು ಬಯಲು ಹೊಲ ಮನೆ ಗುಡಿಸಲು ಕೊನೆಗೆ ಬಸ್ಸು ರೈಲು ಹೊಟೇಲು ಲಿಫ್ಟು ಹಾಳು ಗೋದಾಮುಗಳು ಎಲ್ಲುಂಟು ಎಲ್ಲಿಲ್ಲ? ಅಪ್ಪನ ಕೂಸಿಗೆ ಮಗಳೇ ತಾಯಿ ಅಣ್ಣ ತಮ್ಮ ಗೆಳೆಯ ಹಳೆಯ ಮಾವ ಭಾವ ಮುದೀಯ ಸರೀಕ ಸಹೋದ್ಯೋಗಿ […]

ಕಾವ್ಯಯಾನ

ನಿಶೆಯನರಿಸಿ ಶಾಲಿನಿ ಆರ್. ನಿಶೆಯರಸಿ ನೇಸರ ಹೊಂಟ್ಯಾನ ನಿಶೆಯರಸಿ ಬಂದಾಳಾ ಸಂತೆಯೊಳಗೆ ಸದ್ದಿಲ್ಲದಂತೆ            ಬದುಕ ಅಡವಿಯಿದು            ಬೆತ್ತಲಾಗಿಹುದಿಲ್ಲಿಮನದ            ಭಾವಗಳು ಗುಟ್ಟುರಟ್ಟಾಗಿ            ಹರಿದಿಹುದಿಲ್ಲಿ ಈ ಹೊತ್ತು ಸರಸ ವಿರಸಗಳ ಸಮ ರಸ ಸಮ್ಮಿಳಿತದ ಭಾವ ಆ ಸುಖದ ನೋವ ಅನುಭವಿಸಿ ಅರಗಿಸಿ ಕನವರಿಸಿ ಮಾನಿನಿ ಸರಸಿ             ಅಂಚಿಲ್ಲದ ಸೆರಗಿಲ್ಲದ             ಸವಿನೆನಪ ಪಾಚಿಯ ಹೊದ್ದು             ಅಂಟಿಯು ಅಂಟದಿಹ ಬಾಳ             ಗದ್ದುಗೆಯಲಿ ನೆಮ್ಮದಿಯ  ನಿದಿರೆಗೆ ಮರುಳಾಗಿ ಮಲಗಿಹಳಿಲ್ಲಿ ಸುಖನಾಶಿನಿ… ******

ಕಾವ್ಯಯಾನ

ಬದುಕಿನ ಬಣ್ಣದಲ್ಲಿ ಅನಾಥ ಪ್ರೀತಿ ವೀಣಾ ರಮೇಶ್ ಪ್ರೀತಿ ಸಿಗದ ಒಂದಷ್ಟು ಮನಸುಗಳು ನಮ್ಮ ನಡುವೆ ಇವೆ ನೀವೇನು ಮಾಡಬೇಕಿಲ್ಲ ವಾತ್ಸಲ್ಯದ ಪ್ರೀತಿಗೆ ಬಣ್ಣ ತುಂಬಿದರೆ ಸಾಕು. ಆ ಮನಸ್ಸಿನೊಳಗೆ ಕನಸು ಕಟ್ಟಿದ ಬಣ್ಣ ಸುಂದರ ಬದುಕಿನ ಬಣ್ಣ ಯಾವ ಕಲ್ಮಶವು ಇಲ್ಲದ ತಿಳಿನೀರಿನ ಬಣ್ಣ. ಪ್ರೀತಿ ಸಿಗದ ,ಹೃದಯ ಭಾರವಾಗಿದೆ ,ಬಿಟ್ಟರೆ ಮನಸು ಹೂವಿನಷ್ಟು ಹಗುರ,ನೀವೇ ಎತ್ತಿ ನೋಡಿ ಅಷ್ಟೇನು ಭಾರವಿಲ್ಲ,ಎದೆಯೊಳಗೆ ನೋವು ತುಂಬಿದ ಭಾರ ವಷ್ಟೇ. | ಆ ಮನಸುಗಳಿಗೆ ನೀವೇ ರಂಗು ತುಂಬಿ […]

ಬದುಕು-ಬರಹ

ಅಮೃತಾ ಪ್ರೀತಮ್ ಜ್ಞಾನಪೀಠ ಪ್ರಶಸ್ತಿ ವಿಜೇತೆ, ಹೆಸರಾಂತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್..! ಅಮೃತಾ ಪ್ರೀತಮ್ ಹೆಸರಾಂತ ಪಂಜಾಬಿ ಲೇಖಕಿ, ಕವಯಿತ್ರಿ, ಕತೆಗಾರ್ತಿ, ಕಾದಂಬರಿಗಾರ್ತಿ. ಜ್ಞಾನಪೀಠ ಪ್ರಶಸ್ತಿ ವಿಜೇತೆ. ಅವಿಭಕ್ತ ಪಂಜಾಬಿನ ಲಾಹೋರಿನ ಬಳಿಯ ಗುಜರಾವಾಲೆಯಲ್ಲಿ 31ನೆಯ ಆಗಸ್ಟ್ 1919ರಂದು ಜನಿಸಿದರು. ಇವರ ತಂದೆ ಕರ್ತಾರಸಿಂಹ ‘ಹಿತಕಾರಿ’ ಸಹ ಅಂದಿನ ಪ್ರಸಿದ್ದ ಲೇಖಕರಲ್ಲೊಬ್ಬರು. ಪ್ರೀತಮ್ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ತಾಯಿ ರಾಜಕೌರ್ ಅವರನ್ನು ಕಳೆದುಕೊಂಡರು. ಅನಂತರ ತಂದೆಯ ಪೋಷಣೆಯಲ್ಲಿ ಬೆಳೆದು ಅವರ ಪ್ರೇರಣೆಯಿಂದಲೇ ಸಾಹಿತ್ಯ ರಚನೆಗೆ ತೊಡಗಿದವರು… […]

ಪುಸ್ತಕ ವಿಮರ್ಶೆ

ಮಾಯಾ ಕನ್ನಡಿ ಕಮಲಾ ಹೆಮ್ಮಿಗೆ ಕಮಲಾ ಹೆಮ್ಮಿಗೆಯವರ ‘ಹೊಸತಾದ ಸ್ತ್ರೀ‌ ಪ್ರಪಂಚ’ವೇ ಆಗಿದೆ ಈ‌ ‘ಮಾಯಾಕನ್ನಡಿ’ ಎಂಬ ಕಥೆಗಳ ಸಂಕಲನ..! ಸಾಹಿತ್ಯದ ವಿವಿಧ ಪ್ರಕಾರಗಳಿಗೆ ತಮನ್ನು ಒಡ್ಡಿಕೊಂಡಿರುವ ಲೇಖಕಿ ಕಮಲಾ ಹಮ್ಮಿಗೆಯವರು ಇದುವರೆಗೆ ಒಂಬತ್ತು ಅನುವಾದಿತ ಕೃತಿಗಳನ್ನು ಕೊಟ್ಟಿದ್ದಾರೆ. ನಾನಾ ಕಾರಣದಿಂದ ಕೇರಳದಲ್ಲಿ ನೆಲೆಸಿದ್ದರಿಂದ ಇವರು ಮಲೆಯಾಳೀ ಸ್ತ್ರೀ ಸಂಕಥನಗಳಿಗೆ ಕೈಹಚ್ಚಿದರು. ‘ಚಿರು ಕಥ’ ಎಂದು ಕರೆಸಿಕೊಳುವ ಸಣ್ಣ ಕಥೆಗಳ ಪ್ರಖರತೆ ಮನಗೊಂಡು ಅತ್ತಿ ಹಣ್ಣಿನಂಥ ಹೆಣ್ಣಿನ ಬದುಕನ್ನು — ಅಂದರೆ ಮೇಲೆ ಆಕರ್ಷಕವಾಗಿದ್ದು ಒಳಗೆ ಅರೆಕೊರೆಯಿದ್ದರೂ […]

ಕಾವ್ಯಯಾನ

ಮುಖ ಪುಸ್ತಕ ಗೌರಿ.ಚಂದ್ರಕೇಸರಿ ಮುಖ ಪುಸ್ತಕ ತೆರೆದರೆ ನಿತ್ಯ ಹತ್ತಾರು ರಿಕ್ವೆಸ್ಟುಗಳು ಕನ್ಫರ್ಮ್ ಮಾಡುವ ಎಂದರೆ ಮನಸು ಬುದ್ಧಿ ಹೇಳುತ್ತದೆ ಸ್ನೇಹದ ಅರಿಕೆ ಇಟ್ಟವರ ಕಥೆ ಹೇಳುತ್ತವೆ ಅವರ ಪೋಸ್ಟು ಲೈಕು, ಕಮೆಂಟುಗಳು ಅವೇ ಹಳಸಲು ಜೋಕುಗಳು ಫಾರ್ವರ್ಡ್ ಮೆಸೇಜುಗಳು ಯಾರೋ ಹೆಣೆದ ವಿಶ್ಶುಗಳು ಬೇಡವೆಂದರೂ ಬೆರಳು ತಾಗಿ ಬಿಡುತ್ತವೆ ಪುಟ್ಟ ನೀಲಿಯ ಬಾಕ್ಸಿಗೆ ಅಷ್ಟರಲ್ಲಿ ಬಂದು ಬೀಳುತ್ತದೆ ಒಂದು ‘ಹಾಯ್’ ನನ್ನ ಮೆಸೆಂಜರಿಗೆ ಇದು ಬೇಕಿತ್ತಾ ಎಂದು ಕೇಳುತ್ತದೆ ಮನಸು ಮೊಬೈಲ್ ಬೆಳಕು ಬೀರಿದಾಗಲೆಲ್ಲ ಗುಡ್ […]

ಕಾವ್ಯಯಾನ

ನಿಮ್ಮ ಸ್ಥಿತೀನೂ ಇದೇನಾ ಗಾಯತ್ರಿ ಆರ್. ಟ್ರಿಣ್….ಟ್ರಿಣ್….ಟ್ರಿಣ್… ರಿಂಗಣಿಸಿತು ಮನೆಯ ದೂರವಾಣಿ ಅತ್ತಲಿಂದ ಬಂತೊಂದು ಧನಿ ಕರ್ಕಶವಾಗಿ ಈ ಯುಗಾದಿಗೆ ರಜೆ ಇಲ್ಲ ನಾವು ಬರಲ್ಲ ಕಾಯಬೇಡಿ ನಮಗಾಗಿ ವಾರದಿಂದ ಮಗ, ಸೊಸೆ, ಮೊಮ್ಮಕ್ಕಳು ಬರುವರೆಂದು ಮಾಡಿದ ಸಿಹಿ ತಿಂಡಿಗಳೆಲ್ಲಾ ಅವಳ ನೋಡಿ ನಗುತ್ತಿತ್ತು ವ್ಯಂಗ್ಯವಾಗಿ. ಅಹ..ಹಾ ಅಹ…ಹಾ ಅಹ…ಹಾ. ಮನೆಯ ಮೂಲೆಯ ಪಲ್ಲಂಗದಲ್ಲಿ ಪವಡಿಸಿದ್ದ ಪತಿರಾಯ ಮಡದಿಯ ಹುಸಿನಗುವಿಂದ ಎಲ್ಲವನ್ನೂ ಅರಿತೆಂದ ನಿನ್ನ ಮನೆಕಾಯ ನನ್ನನ್ನೂ ಬಿಡದೆ, ನಿನಗೂ ಆಗದೆ, ಸಿಹಿ ಕರಿವಾಗ ನೋಡಿಲ್ಲಿ ಆದ […]

Back To Top