ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ನಿಮ್ಮೊಂದಿಗೆ

ಪ್ರಿಯ ಬರಹಗಾರರಿಗೆ ಪ್ರಿಯರೆ ಆರಂಭದ ಅಡಚಣೆಗಳನ್ನು ದಾಟಿಸಂಗಾತಿ ಬ್ಲಾಗ್ ಐದನೆ ತಿಂಗಳನ್ನು ಪೂರೈಸುತ್ತಿದೆ.ಈ ನಿಟ್ಟಿನಲ್ಲಿ ಬರಹಗಾರರಿಗೆ ಕೆಲವು ಮಾತುಗಳನ್ನುಹೇಳಲೇ ಬೇಕಿದೆ.ಮೊದಲನೆಯದಾಗಿ ಇದುವರೆಗಿನ ನಿಮ್ಮಸಹಕಾರಕ್ಕೆ ದನ್ಯವಾದಗಳು. ಮುಂದೆಯೂತಮ್ಮ ಸಲಹೆ-ಸಹಕಾರಗಳು ಹೀಗೆ ಮುಂದುವರೆಯಲೆಂದು ಬಯಸುತ್ತೇನೆ ದಯಮಾಡಿ ನಿಮ್ಮಬರಹಗಳನ್ನುತಪ್ಪಿರದೆ ಟೈಪ್ ಮಾಡಿ ಕಳಿಸಿ,ಇನ್ನು ಬರಹಗಳಪಿಡಿಎಫ್ ಮತ್ತು ಪೋಟೊಪ್ರತಿಗಳನ್ನು ಕಳಿಸಬೇಡಿ. ಈಗಾಗಲೇ ಫೇಸ್ಬುಕ್ಕಿನಲ್ಲಿ ಹಾಕಿದಬರಹಗಳನ್ನು ಕಳಿಸದೆ,ನಿಮ್ಮಹೊಸ ಬರಹಗಳನ್ನು ಕಳಿಸಿ,ಆದಷ್ಟು ಗುಣ ಮಟ್ಟದ ಬರಹಗಳನ್ನು ಕಳಿಸಿಒಂದು ಬರಹಕ್ಕು ಮತ್ತೊಂದು ಬರಹಕ್ಕು ಕನಿಷ್ಠ  ಒಂದುವಾರ ಅಂತರವಿರಲಿ.ಬರಹದ ಗುಣಮಟ್ಟದ ಬಗ್ಗೆ ನೀವೇ ಮೌಲ್ಯಮಾಪನ ಮಾಡಿಕೊಂಡು  ಪ್ರಕಟಿಸಬಹುದಾದದ್ದು ಅನಿಸಿದರೆ ಮಾತ್ರ ಕಳಿಸಿ.ಇನ್ನು ಮುಂದೆ ಪತ್ರಿಕೆ ಅನಿವಾರ್ಯ ಸಂದರ್ಭದ ಹೊರತು ಪ್ರತಿ ಸೋಮವಾರ ಮತ್ತು ಶುಕ್ರವಾರ ಪ್ರಕಟವಾಗಲಿದೆನಿಮ್ಮಿಂದ ಮೌಲಿಖವಾದ ಜನಪರವಾದ ಬರಹಳನ್ನು ಇನ್ನು ಮುಂದೆ ನಿರೀಕ್ಷಿಸುತ್ತೇನೆ.ಈ ಮಾತುಗಳನ್ನು ಹೇಳಬೇಕಾಗಿಬಂದನನ್ನ ಅನಿವಾರ್ಯತೆ ನಿಮಗರ್ಥವಾಗಿದೆಯೆಂದು ನಂಬುತ್ತೇನೆ.ನಿಮ್ಮಸಹಕಾರವಿರಲಿ,ಸಂಪಾದಕ

ನಿಮ್ಮೊಂದಿಗೆ Read Post »

ಕಾವ್ಯಯಾನ

ಕಾವ್ಯಯಾನ

ಕಾಲದ ಕರೆ ಡಾ.ಪ್ರಸನ್ನ ಹೆಗಡೆ ಮನೆಯ ಒಳಗೇ ಉಳಿಯಬೇಕಾಗಿದೆ ನಮ್ಮನ್ನ ನಾವೇ ಉಳಿಸಿಕೊಳಬೇಕಾಗಿದೆ ನಮ್ಮ ನಂಬಿದವರ ನಾವೇ ರಕ್ಷಿಸಿಕೊಳಬೇಕಾಗಿದೆ ಒಳಗಿದ್ದುಕೊಂಡೇ ಸಮರ ಸಾರ ಬೇಕಾಗಿದೆ ಮುಖಗವಚ ಧರಿಸಬೇಕಾಗಿದೆ ವೈರಾಣುವ ದೂರವೇ ಇಡಬೇಕಾಗಿದೆ ನಡುನಡುವೆ ಅಂತರ ಕಾಪಾಡಿಕೊಂಡು ನಮ್ಮ ನಮ್ಮ ಅಂತಸ್ಥ ಮೆರೆಯಬೇಕಾಗಿದೆ ಕಾಲ್ಗಳ ಕಂಬವಾಗಿಸಿಕೊಂಡು ಇದ್ದಲ್ಲೇ ಇರಬೇಕಾಗಿದೆ ಮನಸ್ಸನ್ನು ಕಲ್ಲಾಗಿಸಿಕೊಂಡು ಯೋಚಿಸಬೇಕಾಗಿದೆ ಶಿರವನ್ನೇ ಹೊನ್ನಗಲಶವಾಗಿಸಿಕೊಂಡು ಆತ್ಮಜ್ಯೋತಿಯ ಬೆಳಗಬೇಕಾಗಿದೆ ಮನದಿ ಕುಣಿವ ಮಂಗಗಳ ಹಿಡಿದು ಉದ್ಯಾನವನ ಉಳಿಸಿಕೊಳಬೇಕಾಗಿದೆ ಉಳಿದಿದ್ದೆಲ್ಲವ ನಾಳೆಗೆ ಮುಂದೂಡಿ ಈ ದಿನವ ಹೇಗೋ ದೂಡಬೇಕಾಗಿದೆ ಹೊರಗೆ ಆಡುವ ಮಕ್ಕಳ ಕರೆದು ಬದುಕಿನಾಟವ ಕಲಿಸಬೇಕಾಗಿದೆ ಹಿಡಿ ಹಿಡಿದು ವ್ಯಯ ತೂಗಿಸಿ ನಾಳೆಗೂ ಉಳಿಸಿಕೊಳಬೇಕಾಗಿದೆ ಶುಭ್ರ ಹಸ್ತರಾಗಬೇಕಾಗಿದೆ ಶುದ್ಧ ಚಿತ್ತರಾಗಬೇಕಿದೆ ಶುಚಿತ್ವವೇ ದೈವತ್ವವೆಂಬ ಅಮರ ಸಂದೇಶ ಸಾರಬೇಕಾಗಿದೆ ಈ ಯುದ್ಧ ಗೆಲ್ಲಬೇಕಾಗಿದೆ ಈ ರಾಷ್ಟ್ರವ ಉಳಿಸಿಕೊಳ್ಳ ಬೇಕಾಗಿದೆ ಸಹಸ್ರ ಸವಾಲ್ಗಳಿಗೆ ಎದೆಯೊಡ್ಡಬೇಕಾಗಿದೆ ಅದಕಾಗಿ ನಾವೆಲ್ಲ ಸಜ್ಜಾಗಬೇಕಿದೆ ಮೂರನೇ ಕಣ್ಣ ತೆರೆಯಬೇಕಾಗಿದೆ ಕಾಣದ ಕ್ರಿಮಿಯ ಹುಡುಕಬೇಕಾಗಿದೆ ಲಕ್ಷಣ ರೇಖೆಯೊಳಗಿದ್ದುಕೊಂಡೇ ಶೂರ್ಪನಖಿಯ ಮೂಗ ಹಿಂಡಬೇಕಾಗಿದೆ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ ಅಭಿಮಾನದ ಎದೆಪುಟದಲಿ ಅನುಮಾನದ ಸಾಲುಗಳೇತಕೆ ಗೆಳೆಯಾ ಆತ್ಮಸಾಕ್ಷಿಯ ದೀಪದೆದುರಲಿ ಅಂಧಕಾರದ ಚಿಂತೆಗಳೇತಕೆ ಗೆಳೆಯಾ ಅಂಗೈಯ್ಯಲೇ ಮಾಣಿಕ್ಯವಿದ್ದರೂ ಅದರಾಕರ್ಷಿತರ ಗೊಡವೆಗಳೇತಕೆ ಒಡೆಯಾ ನಿನ್ನಂತರಂಗದೊಳು ನಾನು ಪಣತಿಯಾಗಿದ್ದರೂ ಭ್ರಮೆಗಳೇತಕೆ ಗೆಳೆಯಾ ಹದವರಿತು ಹೆಪ್ಪಾಗಿರುವ ಮೊಸರಿನಲಿ ಕಲ್ಲ ಹುಡುಕುವುದೇತಕೆ ಇನಿಯಾ ಒಳಗವಿತಿರುವ ಕಂಪಿನ ಘ್ರುತವಿದ್ದರೂ ನಾರುವ ಭಾವಗಳೇತಕೆ ಗೆಳೆಯಾ ನೋವುನಲಿವಲೂ ಜೊತೆಯಾಗಿ ಹಿಂಬಾಲಿಸುವ ನೆರಳ ಬಾಧಿಸುವುದೇತಕೆ ಹೃದಯಾ ನೆರಳಿಗೆ ನಿನ್ನ ಹೊರತು ಮತ್ಯಾವ ಆಸರೆ, ನಿನಗೆ ಭಯಗಳೇತಕೆ ಗೆಳೆಯಾ ದುಃಖಗಳ ಮನದ ಮರುಭೂಮಿಯಲಿ ಬಿಸಿಗಾಳಿಯಾಗಿ ಸುಳಿಯುವುದೇತಕೆ ಗೆಣೆಯಾ ಹಗಲುತೇಜದಿ ದಾಹವ ತಣಿಸಲು ಹವಣಿಸುತ್ತಿರುವ ಜೀವಕೆ ಮೃಗಜಲಗಳೇತಕೆ ಗೆಳೆಯಾ *****

ಕಾವ್ಯಯಾನ Read Post »

ಇತರೆ

ವಿಜ್ಞಾನ

ವಿಜ್ಞಾನದ ಕ್ಷಿತಿಜ, ಮನುಕುಲದ ಪ್ರಗತಿ ವಿಸ್ತರಿಸುವ ಮೈಕ್ರೊವೈಟಾ         ವಿಶೇಷವಾದ ಜ್ಞಾನವೇ ವಿಜ್ಞಾನ.  ಹೊಸ ಸಂಶೋಧನೆಗಳು, ಹೊಸ ಆವಿಷ್ಕಾರಗಳಿಗೆ  ಮೂಲ ಕಾರಣ, ಕನಸನ್ನು ಕಾಣುವ  ಮತ್ತು ಅದನ್ನು  ನನಸಾಗಿಸುವ  ತೀವ್ರ ತುಡಿತ ಜೊತೆಗೆ ನಿರಂತರ  ಪ್ರಯತ್ನ. ಹಕ್ಕಿಗಳಂತೆ ತಾನು ಆಕಾಶದಲ್ಲಿ  ವಿಹರಿಸಬೇಕೆಂಬ ಕನಸನ್ನು ಕಂಡು ನನಸಾಗಿಸಿದವರಿಂದಾಗಿ ಇಂದು ವಾಯುಯಾನ ಸಾಧ್ಯವಾಗಿದೆ. ಸ್ಥೂಲ  ಜಗತ್ತೇ ಸರ್ವಸ್ವ ಎಂದುಕೊಂಡಲ್ಲಿಂದ  ನ್ಯಾನೋ ತಂತ್ರಜ್ಞಾನದ ಬಳಕೆಯ  ದಿನಗಳು ಬಂದಿವೆ. ಇಡೀ ವಿಶ್ವವು  ತರಂಗರೂಪಿ ಅಸ್ತಿತ್ವವೆಂಬ ಅರಿವಿನಿಂದಾಗಿ, ವಿಜ್ಞಾನದ  ಮೂಲ ನಂಬಿಕೆಗಳೂ ಬದಲಾಗುತ್ತಿವೆ. ಪ್ರೋಟೋನ್, ಪಾಸಿಟ್ರಾನ್‍ಗಳಿಗಿಂತ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಾದ ಮೈಕ್ರೊವೈಟಾ ಕುರಿತಾದ  ಸಿದ್ಧಾಂತದಿಂದಾಗಿ ವೈಜ್ಞಾನಿಕ  ಕ್ಷೇತ್ರದಲ್ಲಿ  ಮಹತ್ತರ ಬದಲಾವಣೆಗಳಾಗಲಿವೆ.    ಮೈಕ್ರೊವೈಟಾ ಸಿದ್ಧಾಂತದ ಹಿನ್ನೆಲೆಯಲ್ಲಿ ಸಂಶೋಧನೆಗಳು ಪ್ರಾರಂಭವಾಗುತ್ತಿವೆ.  ಮೈಕ್ರೊವೈಟಾಗಳು ಸ್ಥೂಲ, ಸೂಕ್ಷ್ಮ ಮತ್ತು ಸೂಕ್ಷ್ಮಾತಿ ಸೂಕ್ಷ್ಮ ರೂಪದಲ್ಲಿರುವುದರಿಂದ   ಭೌತಿಕ  ಪ್ರಯೋಗಾಲಯಗಳಲ್ಲೇ ಈ ಸಂಶೋಧನೆಗಳು ಪೂರ್ಣಗೊಳ್ಳಲಾರವು. ಈ ಸೂಕ್ಷ್ಮ ಸ್ಥಿತಿಯನ್ನು ಗ್ರಹಿಸಲು ಅವರವರ  ಕ್ಷೇತ್ರಗಳಲ್ಲಿ  ಪರಿಣ ತಿ ಹೊಂದಿದ ವಿಜ್ಞಾನಿಗಳಿಗೆ ಅಗ್ರಬುದ್ಧಿಯನ್ನು  ಬೆಳೆಸಿಕೊಳ್ಳುವುದು ಅನಿವಾರ್ಯ.  ಸಂಶೋಧಕರ ಮನಸ್ಸು ವಿಸ್ತಾರ ಹೊಂದಿದಷ್ಟು, ಸೂಕ್ಷ್ಮವಾದಷ್ಟು  ಅವರ ಕಲ್ಪನಾ ಶಕ್ತಿ  ಮತ್ತು ಗ್ರಹಿಕಾ ಸಾಮಥ್ರ್ಯ ಹೆಚ್ಚಾಗುತ್ತದೆ. ಇದಕ್ಕಿರುವ  ಒಂದೇ ದಾರಿಯೆಂದರೆ ಮನಸ್ಸನ್ನು ಏಕಾಗ್ರಗೊಳಿಸಿ, ಅನಂತತೆಯಲ್ಲಿ  ಒಂದಾಗಿಸುವ  ಧ್ಯಾನ ಮಾಡುವುದು.     ಕೋಟಿಗಟ್ಟಲೆ ಮೈಕ್ರೊವೈಟಾಗಳಿಂದ  ಒಂದು ಎಲೆಕ್ಟ್ರಾನ್ ರೂಪುಗೊಳ್ಳುತ್ತದೆಂಬ  ಆಧಾರದಲ್ಲಿ ನಡೆಸುವ  ಸಂಶೋಧನೆಗಳಿಂದಾಗಿ ಇಂದಿನ ಭೌತಶಾಸ್ತ್ರದ  ಅರಿವು ಹಿಗ್ಗಲಿದೆ. ಅಣು  ಶಕ್ತಿಯನ್ನು ಬಳಸಿ ಹಾರಲಿರುವ  ರಾಕೆಟ್‍ಗಳು ಕೂಡಾ  ಸೌರಮಂಡಲದಾಚೆಗೆ  ಹೋಗಲಾಗಿಲ್ಲ.  ಸಂಶೋಧನೆಗಳಿಂದ  ಹೊಸ ಇಂಧನಗಳ  ಸೃಷ್ಟಿಯಾಗಲಿದೆ.  ಪೆಟ್ರೋಲ್ , ಡೀಸೆಲ್‍ಗಳಿಗೆ  ಪರ್ಯಾಯಗಳು,  ಕೃತಕ  ಪೆಟ್ರೋಲ್ ಸೃಷ್ಟಿಯಾಗಲಿವೆ.  ಸೌರಮಂಡಲದಾಚೆಗಿನ ನಕ್ಷತ್ರ, ಗ್ರಹಗಳಿಗೆ  ತಲ್ಪುವ  ಮಾನವನ ಕನಸು ನನಸಾಗುತ್ತದೆ.    ಶತಮಾನಗಳಿಂದಲೂ  ಉತ್ತರ ಕಂಡುಕೊಳ್ಳಲಾಗದ ಅದೆಷ್ಟೋ    ನಿಸರ್ಗದ   ವೈಚಿತ್ರ್ಯಗಳಿಗೆ ವಿವರಣೆ ಸಿಗಲಿದೆ.  ಉದಾಹರಣೆಗಾಗಿ ಪ್ರಪಂಚದ  ಎಲ್ಲಾ ಸಮುದ್ರಗಳೂ ಒಂದಕ್ಕೊಂದು ಬೆಸೆದುಕೊಂಡಿವೆ.   ಆದರೂ, ಅವುಗಳ ಉಷ್ಣತೆ,  ಕ್ಷಾರೀಯತೆಗಳಲ್ಲಿ  ವ್ಯತ್ಯಾಸವಿದೆ.   ಆದರೆ ಈ ಸಮುದ್ರಗಳ ನೀರನ್ನು ತಂದು ಒಂದೇ ಪಾತ್ರೆಯಲ್ಲಿ  ಬೆರೆಸಿದಾಗ ಅವು ಒಂದಾಗಿ  ಏಕವಾಗುತ್ತವೆ. ಇದಕ್ಕೆ  ಅವುಗಳಲ್ಲಿರಬಹುದಾದ ಮೈಕ್ರೊವೈಟಾಗಳ  ಸಂಖ್ಯೆ  ಅಥವಾ ಪ್ರಭೇದಗಳು ಕಾರಣವಿರಬಹುದೇ? ಬರ್ಮೋಡಾ ತ್ರಿಕೋನದ ರಹಸ್ಯ ಇತ್ಯಾದಿಯಾಗಿ ಎಷ್ಟೋ ನಿಗೂಢತೆಗಳ  ರಹಸ್ಯ ಬಯಲಾಗಲಿವೆ.        ಅಣು ವಿಕಿರಣ ಯಾಕಾಗುತ್ತದೆ? ಅದನ್ನು  ತಡೆಯಲು ಸಾಧ್ಯವೇ? ಅಥವಾ ಕಿರಣ ಹೊರಸೂಸದೇ ಹೀರಿಕೊಳ್ಳಲ್ಪಡುವಂತೆ (ಪರಾವರ್ತನ) ಮಾಡಬಹುದೇ ಎಂಬುದರ ಸಾಧ್ಯತೆಗಳಿಗೆ  ಮೈಕ್ರೊವೈಟಾ  ಸಂಶೋಧನೆಯೇ ಉತ್ತರ ನೀಡಬಲ್ಲದು.  ವಿದ್ಯುತ್  ಸಂಪರ್ಕಕ್ಕಾಗಿ ಎಲ್ಲೆಡೆ  ತಂತಿ  ಎಳೆಯುವ ಬದಲಿಗೆ  ಪರ್ಯಾಯ ವಿಧಾನಗಳ ಸಾಧ್ಯತೆಯನ್ನು  ಮೈಕ್ರೊವೈಟಾ ಅಧ್ಯಯನ ತೋರಿಸಿಕೊಡಲಿದೆ.    ರಸಾಯನಶಾಸ್ತ್ರದ  ಸೂತ್ರಗಳು ಇನ್ನಷ್ಟು ಉದ್ದವಾಗಲಿದೆ. ಉದಾಹರಣೆಗಾಗಿ  ಕೃಷಿಕರು ಬಳಸುವ  ತುತ್ತ ಅಥವಾ ಕಾಪರ್ ಸಲ್ಫೇಟ್ ಇದರ ಸಂಕೇತ ಅuSಔ4.  ಎಲ್ಲಾ ತಯಾರಕರು ಪೂರೈಸುವ  ತುತ್ತದ ಪರಿಣಾಮ ಮಾತ್ರ  ಒಂದೇ ರೀತಿಯಾಗಿರುವುದಿಲ್ಲ.  ಎಲ್ಲೊ ಒಂದೆಡೆ ಪರಿಣಾಮಕಾರಿಯಾದ   ತುತ್ತ, ಇನ್ನೊಂದೆಡೆ  ಪರಿಣಾಮ ಬೀರುವುದಿಲ್ಲ.  ಇದಕ್ಕೆ ಕಾರಣ ಅವುಗಳಲ್ಲಿರುವ  ಮೈಕ್ರೊವೈಟಾಗಳ  ಪ್ರಭೇದ ಮತ್ತು ಸಂಖ್ಯೆ.  ಇದರ ಅಧ್ಯಯನ ಸಾಧ್ಯವಾದಾಗ   ತುತ್ತದ ರಾಸಾಯನಿಕ  ಸೂತ್ರ  ಇನ್ನಷ್ಟು ಉದ್ದವಾಗಿ   ಅuSಔ4-ಒಂ 20 ಲಕ್ಷ ಎಂದಾಗಬಹುದು. ಅಂದರೆ ಈ ತುತ್ತದಲ್ಲಿ    ಂ ಪ್ರಭೇದದ 20 ಲಕ್ಷ ಮೈಕ್ರೊವೈಟಾಗಳು ಇವೆ ಎಂದು ಅರ್ಥ.  ಒಂದಕ್ಕಿಂತ ಹೆಚ್ಚು ಪ್ರಭೇದಗಳಿರುವಾಗ ಅದನ್ನು  ಕೂಡಾ  ನಮೂದಿಸಬೇಕಾಗುತ್ತದೆ. ಈ ಸಂಶೋಧನೆಗಳಿಂದಾಗಿ  ರಾಸಾಯನಿಕಗಳ ಬಳಕೆಯಲ್ಲಿ  ನಿಖರತೆ  ಬರುತ್ತದೆ.   ರಸಾಯನಶಾಸ್ತ್ರದಲ್ಲಾಗುವ  ಸಂಶೋಧನೆಗಳ ಪರಿಣಾಮ ಇತರ ಸಂಬಂಧಿತ  ಕ್ಷೇತ್ರಗಳಾದ ಔಷಧಗಳು  (ಮಾನವ, ಪಶು, ಗಿಡ- ಮರಗಳಿಗೆ), ರಾಸಾಯನಿಕ  ಗೊಬ್ಬರಗಳು, ಇಂಧನ ಮೂಲ ಮುಂತಾದವುಗಳಲ್ಲಿ ಮಹತ್ತರ  ಬದಲಾವಣೆಗಳಾಗಲಿವೆ.     ಇಂಗಾಲದ  ಕಣಗಳಿಂದಲೇ ಜೀವೋದ್ಭವವಾಗಿದೆಯೆಂಬ ನಂಬಿಕೆಯ  ಆಧಾರದಲ್ಲೇ ಜೀವಶಾಸ್ತ್ರದ  ಸಂಶೋಧನೆಗಳು ನಡೆದಿವೆ.  ಪ್ರತಿಯೊಂದು ಕಾರ್ಬನ್  ಕಣವೂ ಕೋಟ್ಯಾಂತರ ಮೈಕ್ರೊವೈಟಾಗಳಿಂದ  ರೂಪುಗೊಳ್ಳುತ್ತದೆ.  ಮೈಕ್ರೊವೈಟಮ್  ಎನ್ನುವ ಸೂಕ್ಷ್ಮಾತಿ ಸೂಕ್ಷ್ಮ ಜೀವ ಬೀಜವೇ ಪ್ರಥ್ವಿಯ ಮೇಲೆ ಜೀವೋದ್ಭವಕ್ಕೆ ಕಾರಣ ಎಂಬ ಸಿದ್ಧಾಂತದನ್ವಯ ನಡೆಯುವ ಸಂಶೋಧನೆಗಳ ಪರಿಣಾಮವಾಗಿ ಜೀವಶಾಸ್ತ್ರದ ಇಂದಿನ ಜ್ಞಾನದ  ವಿಸ್ತಾರ ಅಗಾಧವಾಗಲಿದೆ.   ಇಷ್ಟೊಂದು  ವಿಧದ  ಸಸ್ಯ ಮತ್ತು ಪ್ರಾಣ  ಪ್ರಭೇದಗಳು ಯಾಕಿವೆ? ಅವಕ್ಕೆ  ಕಾರಣಗಳೇನು? ಅವುಗಳ ನಡುವಿನ  ಸಂಬಂಧಗಳೇನು ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.  ವಂಶವಾಹಿನಿಯಾಗಿ ವ್ಯಕ್ತಿಯ ವಿಶಿಷ್ಟತೆಯನ್ನು  ನಿರ್ಧರಿಸುವ  ಆರ್‍ಎನ್‍ಎ, ಡಿಎನ್‍ಎಗಳು  ಹೇಗೆ  ರೂಪುಗೊಳ್ಳುತ್ತವೆ?ವಿವಿಧ ರೀತಿಯ  ರಕ್ತದ ಗುಂಪುಗಳಿರಲು ಕಾರಣವೇನು ಮುಂತಾದ  ರಹಸ್ಯಗಳು   ಬಯಲಾಗಲಿವೆ.       ಧಾನ್ಯ, ಹಣ್ಣು, ಹಂಪಲು, ತರಕಾರಿಗಳ  ವಂಶೀಯ ಗುಣಗಳನ್ನು ಗುರ್ತಿಸಿ,  ಅವುಗಳ  ಮೈಕ್ರೊವೈಟಾ ಸಂಖ್ಯೆ ಮತ್ತು ಸ್ವರೂಪವನ್ನು  ಬದಲಿಸುವುದರೊಂದಿಗೆ  ಪೌಷ್ಠಿಕಾಂಶಗಳ ಪ್ರಮಾಣವನ್ನು ನಿಗದಿಗೊಳಿಸಲು ಸಾಧ್ಯವಾಗಲಿದೆ ಹಾಗೂ  ಪೇರಲೆಯನ್ನು  ಮಾವಿನಹಣ್ಣನ್ನಾಗಿ  ಪರಿವರ್ತಿಸಲು ಸಾಧ್ಯವಾಗಲಿದೆ.         ಜೀವಶಾಸ್ತ್ರದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರಿಂದ ಆರೋಗ್ಯ ಕ್ಷೇತ್ರದ ಬಲ ವರ್ಧಿಸಲಿದೆ. ವಿವಿಧ ಔಷಧಿಗಳ ಪರಿಣಾಮದ ನಿಖರತೆಯನ್ನು, ಅದರಲ್ಲೂ ಹೋಮಿಯೋಪಥಿ ಚಿಕಿತ್ಸಾ ವಿಧಾನಕ್ಕೆ ಬಹಳಷ್ಟು ಹೊಸ ಆಯಾಮಗಳು ಸೇರ್ಪಡೆಯಾಗಲಿದೆ. ವಿಷ ಚಿಕಿತ್ಸಾ ವಿಧಾನವೆಂಬುದು ಪ್ರಾಚೀನ  ಭಾರತದಲ್ಲಿ  ಪ್ರಚಲಿತವಿದ್ದರೂ, ಕಾರಣಾಂತರಗಳಿಂದ ಹಿನ್ನೆಲೆಗೆ ಸರಿದಿದ್ದರಿಂದಾಗಿ, ಅದೇ ತತ್ವ ಆಧಾರಿತ ಹೋಮಿಯೋಪಥಿಯ ಮೂಲವನ್ನು ಪಾಶ್ಚಾತ್ಯ ದೇಶಗಳಿಗೆ  ತಪ್ಪಾಗಿ ನೀಡಲಾಗುತ್ತಿದೆ.    ಮೈಕ್ರೊವೈಟಾ ಸಂಶೋಧನೆಗಳು  ಇಡೀ ಜಗತ್ತಿನ  ಆರ್ಥಿಕ ಕ್ಷೇತ್ರದ ಮೇಲೆ  ಮಹತ್ತರ ಪರಿಣಾಮ  ಬೀರಲಿವೆÉ.  ಆಯಾತ, ನಿರ್ಯಾತವಾಗುವ  ವಸ್ತುಗಳು ಮತ್ತು  ಅವುಗಳ  ಸ್ವರೂಪ ಬದಲಾಗಲಿದೆ. ಉದಾಹರಣೆಗಾಗಿ ತೈಲಕ್ಕೆ  ಪರ್ಯಾಯ  ವಸ್ತುವನ್ನು ಸಿದ್ಧಪಡಿಸಿದಾಗ ತೈಲ ಉತ್ಪಾದಕ ರಾಷ್ಟ್ರಗಳ  ಮೇಲಿನ ಅವಲಂಬನೆ  ತಗ್ಗಲಿದೆ.   ಪೊಟ್ಯಾಶ್ ಮತ್ತು ರಂಜಕ ಒದಗಿಸುವ  ರಾಸಾಯನಿಕ  ಗೊಬ್ಬರಗಳ ತುಟಾಗ್ರತೆ  ಭಾರತವನ್ನು  ಕಾಡುತ್ತಿದ್ದು,  ಬೇರೆ  ದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಪೊಟ್ಯಾಶ್ ಪ್ರಮಾಣವನ್ನು  ಹೆಚ್ಚಿಸುವ  ಸಂಶೋಧನೆಗಳಿಂದಾಗಿ, ಸ್ಥಳೀಯವಾಗಿ ಲಭ್ಯವಿರುವ  ಸಂಪನ್ಮೂಲಗಳನ್ನೇ ಬಳಸಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಲಿದೆ.         ಸಂಪನ್ಮೂಗಳು ಎಂದರೆ ಇಂದಿನ ಸ್ಥಿತಿಯಲ್ಲಿ  ಭೌತಿಕ  ಸಂಪನ್ಮೂಲಗಳೆಂದು  ಅರ್ಥೈಸಲಾಗುತ್ತದೆ. ಮಾನವ  ಸಂಪನ್ಮೂಲದ  ಕುರಿತು  ಹೇಳುವಾಗ ಮಾನವನ  ಬುದ್ಧಿಶಕ್ತಿಯನ್ನು ಪರಿಗಣ ಸಲಾಗುತ್ತದೆ. ಇದರಾಚೆಗಿನ  ಸಂಪನ್ಮೂಲಗಳ  ಪರಿಚಯವನ್ನು ಮೈಕ್ರೊವೈಟಾ ಸಿದ್ಧಾಂತ ನೀಡಲಿದೆ.   ಭೌತಿಕ, ಅಭೌತಿಕ, ಮಾನಸಿಕ,  ಆಧ್ಯಾತ್ಮಿಕ ಸಂಪನ್ಮೂಲಗಳ  ಕಲ್ಪನೆ, ವೈಯಕ್ತಿಕ  ಮತ್ತು ಸಾಮೂಹಿಕ ಸ್ತರದಲ್ಲಿ  ಲಭ್ಯವಿರುವ  ಈ ಸಂಪನ್ಮೂಲಗಳನ್ನು  ಸಾಮೂಹಿಕ ಹಿತಕ್ಕಾಗಿ  ಬಳಸುವ  ವಿಧಾನಗಳು ರೂಪುಗೊಳ್ಳಲಿವೆ.         ಅತಿಸೂಕ್ಷ್ಮ ಅಸ್ತಿತ್ವದ ವಿಶ್ವದ  ಜೈವ  ಬೀಜ, ವಿಶ್ವ ಚೈತನ್ಯದ  ನಿಗೂಢ ಉತ್ಪತ್ತಿಯನ್ನು  ಮೈಕ್ರೊವೈಟಮ್  (ಬಹುವಚನದಲ್ಲಿ ಮೈಕ್ರೊವೈಟಾ)  ಎಂದು  ಪರಿಚಯಿಸಿದ  ದಾರ್ಶನಿಕ  ಶ್ರೀ ಪ್ರಭಾತರಂಜನ್  ಸರ್ಕಾರರು ನೀಡಿರುವ  ಆರ್ಥಿಕ ಸಿದ್ಧಾಂತವಾದ  ಪ್ರಗತಿಶೀಲ  ಉಪಯೋಗ ತತ್ವದಲ್ಲಿ  ( ಸಂಕ್ಷಿಪ್ತದಲ್ಲಿ ಪ್ರಉತ)  ಸಂಪನ್ಮೂಲಗಳ  ಗುರುತಿಸುವಿಕೆ ಮತ್ತು ಬಳಸುವಿಕೆಯ ವಿಧಾನವನ್ನು ಮೇಲಿನಂತೆ  ವಿವರಿಸಲಾಗಿದೆ.     ಮೈಕ್ರೊವೈಟಾಗಳ  ಪರಿಣಾಮವನ್ನು ಆಧರಿಸಿ ಅವುಗಳನ್ನು  ನಕಾರಾತ್ಮಕ, ಸಕಾರಾತ್ಮಕ ಹಾಗೂ ತಟಸ್ಥ ಎಂದು ವರ್ಗೀಕರಿಸಲಾಗುತ್ತದೆ. ಜಗತ್ತನ್ನು ಕಾಡುತ್ತಿರುವ  ಹಲವು ವಿಧದ  ವೈರಸ್‍ಗಳು ನÀಕಾರಾತ್ಮಕ ಸ್ಥೂಲ  ಮೈಕ್ರೊವೈಟಾಗಳು. ಇವುಗಳ ಕುರಿತಾದ ಹೆಚ್ಚಿನ  ತಿಳುವಳಿಕೆ ಹಾಗೂ ನಿಯಂತ್ರಣದ ವಿಧಾನಗಳ ಅಳವಡಿಕೆಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಔಷಧಿಗಳಿಂದ ನಕಾರಾತ್ಮಕ ಮೈಕ್ರೊವೈಟ್‍ಗಳನ್ನು  ಕೊಲ್ಲಲು ಸಾಧ್ಯವಿಲ್ಲ.  ಆದರೆ ಸಕಾರಾತ್ಮಕ ಮೈಕ್ರೊವೈಟಾಗಳ ಸಂಖ್ಯೆಯನ್ನು ಹೆಚ್ಚಿಸುವ  ಮೂಲಕ ಅವುಗಳ ನಿಯಂತ್ರಣ ಸಾಧ್ಯ.    ಆರ್ಥಿಕ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ  ಮೈಕ್ರೊವೈಟಾ ಕುರಿತಾಗಿ ನಡೆಯುವ  ಸಂಶೋಧನೆಗಳಿಂದಾಗಿ  ಇಡೀ ಮಾನವ ಸಮಾಜ  ಲಾಭ ಪಡೆಯಲಿದೆ.  ಇಂದಿನ ಪರಿಸ್ಥಿತಿಯಲ್ಲಿ ತನ್ನ ಭೌತಿಕ  ಅಸ್ತಿತ್ವವನ್ನು  ಕಾಪಾಡಿಕೊಳ್ಳುವುದೇ  ಮಾನವರಿಗೆ  ದೊಡ್ಡ ಸವಾಲಾಗಿದೆ.  ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳ ಪೂರೈಕೆಗಾಗಿ ಜೀವನವಿಡೀ ಸೆಣಸುವುದೇ ಹಲವರ ಪಾಡಾಗಿದೆ. ಅಂದರೆ,  ವ್ಯಕ್ತಿಯ  ಸಾಮಥ್ರ್ಯದ ಹೆಚ್ಚಿನ  ಭಾಗ ಜೀವನದ  ಕನಿಷ್ಠ ಅಗತ್ಯತೆಗಳ ಪೂರೈಕೆಗಾಗಿಯೇ ವ್ಯಯವಾಗುತ್ತಿದೆ.  ಮುಂದಿನ ದಿನಗಳಲ್ಲಿ  ಇಡೀ ಮಾನವ ಸಮಾಜಕ್ಕೆ ಈ ಸಮಸ್ಯೆಯಿಂದ  ಬಿಡುಗಡೆ  ಸಿಗಲಿದೆ.  ಜೀವನದ  ಬಹುಪಾಲು ಸಮಯವನ್ನು  ತನ್ನ ಅಸ್ತಿತ್ವದ  ರಕ್ಷಣೆಗಾಗಿಯೇ  ಕಳೆಯಬೇಕಾದ  ಪರಿಸ್ಥಿತಿ   ಬದಲಾಗಿ ಸಾಕಷ್ಟು ಬಿಡುವು ಸಿಗಲಿದೆ.    ದಿನಕ್ಕೆ  10 ರಿಂದ  12 ತಾಸು  ದುಡಿದರೂ ಬದುಕು ಕಟ್ಟಿಕೊಳ್ಳಲಾಗದ  ಸ್ಥಿತಿಯಲ್ಲಿ  ಬದುಕುತ್ತಿರುವ  ನಮಗೆ ದಿನಕ್ಕೆ  ಎರಡು ಗಂಟೆಗಿಂತ ಕಡಿಮೆ ದುಡಿದರೂ ಉತ್ತಮ ಬದುಕು ಸಿಗುತ್ತದೆನ್ನುವುದನ್ನು ಊಹಿಸಲೂ ಇಂದು   ಕಷ್ಟವಾಗುತ್ತದೆ.  ಅಂತಹ ದಿನಗಳು ಬಂದಾಗ  ಏನಾಗಬಹುದು? ಸಮಯದ ಬಳಕೆ ಹೇಗಾದೀತು ಎಂಬ ಪ್ರಶ್ನೆ ಸಹಜ.    ಮಾನವನ ಅಸ್ತಿತ್ವವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಎಂಬ ಮೂರು ಸ್ತರಗಳಲ್ಲಿದೆ. ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನವರ  ಬದುಕು ದೈಹಿಕ  ಅಸ್ತಿತ್ವದಾಚೆಗೆ  ಹೋಗುವುದಿಲ್ಲ. ಕೆಲವರು ತಮ್ಮ ಮಾನಸಿಕ  ಅಸ್ತಿತ್ವವನ್ನು  ಬೆಳೆಸಿಕೊಳ್ಳುತ್ತಾರೆ. ತೀರಾ ಕ್ವಚಿತ್ತಾಗಿ  ಕೆಲವರು  ಆಧ್ಯಾತ್ಮಿಕ  ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ.  ಮಾನವರ ಮಾನಸಿಕ   ಸಾಮಥ್ರ್ಯದ ಶೇಕಡಾ 10 ರಷ್ಟನ್ನು ಕೂಡ ಹೆಚ್ಚಿನವರು ಬಳಸುತ್ತಿಲ್ಲವೆಂದು ಹೇಳಲಾಗುತ್ತದೆ. ಅಂದರೆ   ಉಳಿದ  ಶೇಕಡಾ 90 ರಷ್ಟು  ಮಾನವನ ಮಾನಸಿಕ  ಸಾಮಥ್ರ್ಯ  ಬಳಕೆಯಾಗದೇ ವ್ಯರ್ಥವಾಗುತ್ತಿದೆ.   ಬದಲಾಗಲಿರುವ  ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲಿ ಮಾನವನ  ಮಾನಸಿಕ, ಆಧ್ಯಾತ್ಮಿಕ  ಪ್ರಗತಿಗೆ ಅನುಕೂಲಕರವಾದ ಸನ್ನಿವೇಶ ಸೃಷ್ಟಿಯಾಗಲಿದೆ. ಭೌತಿಕ  ಅಸ್ತಿತ್ವದ  ನಿರ್ವಹಣೆ ಸುಲಭವಾದಷ್ಟು ಹೆಚ್ಚುವರಿಯಾಗಿ ಸಿಗುವ  ಬಿಡುವಿನ ವೇಳೆಯನ್ನು  ಉನ್ನತ  ಉದ್ದೇಶಗಳಿಗೆ  ಬಳಸಿಕೊಳ್ಳುವುದನ್ನು ಪ್ರಕೃತಿ ಕಡ್ಡಾಯಗೊಳಿಸಲಿದೆ.  ಯಾಕೆಂದರೆ  ವಿಕಾಸ ಪಥದಲ್ಲಿ ಮಾನವನ ಸೃಷ್ಟಿಯಾಗಿಸುವುದೇ ವಿಕಾಸವನ್ನು ಮುಂದುವರಿಸುವ  ಉದ್ದೇಶದಿಂದ. ಅಪರಿಪೂರ್ಣತೆಯಿಂದ ಪರಿಪೂರ್ಣತೆಯೆಡೆಗಿನ  ಪಯಣವೇ  ಜೀವನವೆಂದು ಅನುಭಾವಿಗಳು ಹೇಳುತ್ತಾರೆ.  ಪರಿಪೂರ್ಣತೆಯನ್ನು ಸಾಧಿಸುವ  ದಾರಿಯಲ್ಲಿ  ಮಾನವ ಜೀವಿಯ  ಹಂತ  ಪ್ರಾಮುಖ್ಯವಾದದ್ದು. ಯಾಕೆಂದರೆ  ಸ್ವ ಪ್ರಯತ್ನದಿಂದ  ಪರಿಪೂರ್ಣತೆಯ  ದಾರಿಯಲ್ಲಿ  ಸಾಗುವ ಸಾಮಥ್ರ್ಯವನ್ನು  ಪ್ರಕೃತಿ ಮಾನವರಿಗೆ   ಮಾತ್ರ  ನೀಡಿದೆ.   ಸಕಾರಾತ್ಮಕ ಮೈಕ್ರೊವೈಟಾಗಳು ವಿಕಾಸದ ದಾರಿಯಲ್ಲಿ  ಚಲಿಸುವವರಿಗೆ  ಸಹಕಾರಿಯಾಗಲಿವೆÉ.  ಕೆಲವೇ ವ್ಯಕ್ತಿಗಳು ಆಧ್ಯಾತ್ಮದ  ( ವಿಕಾಸ) ಪಥದಲ್ಲಿ  ನಡೆದು ಗುರಿ ತಲುಪುವುದು ಪ್ರಕೃತಿಯ ಉದ್ದೇಶವಲ್ಲ. ಇಡೀ ಮಾನವ  ಕುಲ ಒಂದು ಸಮಾಜವಾಗಿ, ಒಗ್ಗಟ್ಟಿನಿಂದ  ವಿಕಾಸದ ಪಯಣ ಮುಂದುವರಿಸಲು ಪ್ರಕೃತಿ ಸದಾ ಸಹಾಯ ಮಾಡುತ್ತದೆ.     ಇದರ ಮೊದಲ ಹಂತವೆಂದರೆ, ಭೌತಿಕ  ಸ್ತರಕ್ಕೆ   ನೇರವಾಗಿ ಸಂಬಂಧಿಸಿದ  ಸಾಮಾಜಿಕ, ಆರ್ಥಿಕ ಕ್ಷೇತ್ರ, ಮಾನವನ ಸ್ವಾರ್ಥ-ಸಂಕುಚಿತತೆಗಳ ಆಧಾರದ ಮೇಲೆ ರೂಪುಗೊಂಡಿರುವ  ಇಂದಿನ  ಕ್ರೂರ ಬಂಡವಾಳವಾದ ನೀತಿಯ ಅಧಃಪತನ ಹಾಗೂ  ನಿರಾಕರಣೆ. ಒಂದು ಚಿಕ್ಕ ವೈರಾಣುವಿನ ಹೊಡೆತಕ್ಕೆ  ಇಡೀ ವಿಶ್ವದ ಆರ್ಥಿಕತೆ  ಏರುಪೇರಾಗಿದೆ.  ಹಲವು ದೇಶಗಳಲ್ಲಿ  ಆರ್ಥಿಕ ಹಿಂಜರಿತ ಪ್ರಾರಂಭವಾಗಿದ್ದು, ಭೀಕರ ಆರ್ಥಿಕ   ಕುಸಿತಕ್ಕೆ   ಕಾರಣವಾಗಲಿದೆ. ಯಾವ ದೇಶ ಆರ್ಥಿಕ ವಿಕೇಂದ್ರೀಕರಣ ನೀತಿ ಅರ್ಥಾತ್  ಜನಾಧಿಕಾರದ ವ್ಯವಸ್ಥೆಯನ್ನು  ಎಷ್ಟು ಬೇಗ  ಅಳವಡಿಸಿಕೊಳ್ಳುತ್ತದೋ ಅಷ್ಟು ಬೇಗ ಆರ್ಥಿಕ ಚೇತರಿಕೆ  ಕಾಣಲಿದೆ.   ಈ ಪೃಥ್ವಿ ಇರುವುದು ಕೇವಲ ಮಾನವರಿಗಾಗಿ ಮಾತ್ರವಲ್ಲ.  ಅವರಿಗಿಂತ ಮೊದಲಿನಿಂದಲೂ ಇಲ್ಲಿಯೇ ಇದ್ದ ಗಿಡ ಮರಗಳು, ಪಕ್ಷಿ, ಪ್ರಾಣ  ಸಂಕುಲಕ್ಕೂ ಅದು ಸೇರಿದೆ. ತನ್ನ ವೈಯಕ್ತಿಕ  ಹಾಗೂ ಸಾಮೂಹಿಕ ಬದುಕಿನ  ರೀತಿ- ನೀತಿಗಳನ್ನು, ಸಿದ್ಧಾಂತ – ಆಚರಣೆಗಳಲ್ಲಿ  ಪ್ರಕೃತಿ  ಪೂರಕ ನಿಲುವನ್ನು  ಅಳವಡಿಸಿಕೊಳ್ಳದಿದ್ದರೆ,  ನಿಸರ್ಗ ತನ್ನದೇ ರೀತಿಯಲ್ಲಿ  ಪಾಠ ಕಲಿಸುತ್ತದೆ.    ಸೃಷ್ಟಿಯ  ವೈಚಿತ್ರ್ಯವನ್ನು  ಅರಿಯಲು,  ಮನುಕುಲದ   ಉಳಿವಿಗಾಗಿ ಅದನ್ನು ಬಳಸಲು ಮೈಕ್ರೊವೈಟಾ ಸಿದ್ಧಾಂತ ಹೊಸ ಹೊಳಹುಗಳನ್ನು ನೀಡಿದೆ.  ಇದು ವಿಜ್ಞಾನದ ಇತಿಮಿತಿಗಳನ್ನು  ದಾಟಲು ಮಾತ್ರವಲ್ಲ, ಇಡೀ ಮಾನವ  ಸಮಾಜದ   ಪ್ರಗತಿಯ ವೇಗವನ್ನು  ಹೆಚ್ಚಿಸಲೂ ಸಹಕಾರಿ ಹಾಗೂ ಅನಿವಾರ್ಯ. (Microvita – ಕುರಿತಾದ ಹೆಚ್ಚಿನ ಮಾಹಿತಿ ಅಂತರ್ಜಾಲದಲ್ಲಿ ಲಭ್ಯ.) ******* ಗಣೇಶ್ ಭಟ್, ಶಿರಸಿ                  –

ವಿಜ್ಞಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ವೆಂಕಟೇಶ್ ಚಾ ಭವಿಷ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ ನಿಸರ್ಗವು ಹೊಸ ಬದುಕಿಗೆ ಸಾಕ್ಷಿಯಾಗಿದೆ ನಾವಿಬ್ಬರೂ ಜೊತೆಯಾದಾಗ|| ಬಾಹುಗಳ ಬಂಧನವು ಮತ್ತಷ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ ನಾವಿಬ್ಬರೂ ಜೊತೆಯಾದಾಗ|| ಹೆಜ್ಜೆಗಳು ಜೊತೆಯಾಗಿ ಲಜ್ಜೆಯಿಲ್ಲದೆ ಸುಂದರ ಪಯಣ ಬೆಳೆಸಿವೆ ಮುಂಗಾರು ಮಳೆಗೆ ದಾರಿಯು ಹಸನಾಗಿದೆ ನಾವಿಬ್ಬರೂ ಜೊತೆಯಾದಾಗ || ನಂಬಿಕೆಯ ಕೊಡೆಯೊಂದು ರಕ್ಷಣೆಯ ಹೊಣೆಯನ್ನು ಹೊತ್ತಿದೆ ಬಹುದಿನಗಳ ಕನಸು ಹಣ್ಣಾಗಿ ನನಸಾಗಿದೆ ನಾವಿಬ್ಬರೂ ಜೊತೆಯಾದಾಗ || ಅಗೋ,ಮುಂಬರುವ ದಿನಗಳ ತುಂಬಾ ನೆರಳು ಬೆಳಕಿನ ಚೆಂದದ ಆಟ ‘ಚಾಗಿ’ಯ ಕಲ್ಪನೆಯ ಬದುಕು ನಿಜವಾಗಿದೆ ನಾವಿಬ್ಬರು ಜೊತೆಯಾದಾಗ || ********

ಕಾವ್ಯಯಾನ Read Post »

ಇತರೆ

ಜಾನಪದ

ಗರ್ದಿ ಗಮ್ಮತ್ತು ಅಳಿದು ಹೋದ ಜಾನಪದ ಕಲೆ ನಮ್ಮ ಎಳೆಯ ಕಾಲದ ‘ಗರ್ದಿ ಗಮ್ಮತ್ತು’..! ವಿಧಾನಸೌಧ ನೋಡ… ಹೇಮಾ ಮಾಲಿನಿ ನೋಡ… ದುರ್ಗಪ್ಪನ; ‘ಗರ್ದಿ ಗಮ್ಮತ್ತು’ ನೋಡ..!! 1970 ಮತ್ತು 1980ರ ಆಸುಪಾಸಿನಲ್ಲಿ ಮನರಂಜನೆ ಎಂಬುದೇ ವಿರಳವಾಗಿತ್ತು. ಆಗ ಸಿನೆಮಾಗಳು ಹಾಗೂ ವರ್ಷಕ್ಕೊಮ್ಮೆ ಜರುಗುವ ಜಾತ್ರೆ, ಹಬ್ಬಹರಿದಿನಗಳು ಇವುಗಳೇ ಮನರಂಜನೆಯಾಗಿದ್ದವು… ಆ ಸಮಯದಲ್ಲಿ ಪ್ರತಿ ಜಾತ್ರೆಯಲ್ಲಿ ತಪ್ಪದೇ ಕಾಣುತ್ತಿದ್ದ ಒಂದು ವಿಶೇಷ ಅಂದರೆ ‘ಗರ್ದಿ ಗಮ್ಮತ್ತು’. ಮೊಬೈಲ್, ವಾಟ್ಸ್ ಅಪ್‌ನಲ್ಲಿ ಕಳೆದುಹೋದ ಇಂದಿನ ಬಹುತೇಕ ಮಕ್ಕಳಿಗೆ ‘ಗರ್ದಿ ಗಮ್ಮತ್ತು’ ಅಂದರೇನು ಎಂಬುದೇ ಗೊತ್ತಿಲ್ಲ. ಗರ್ದಿ ಗಮ್ಮತ್ತು ಎಂದರೆ, ಒಂದು ಡಬ್ಬಾದಂತಹ ಪೆಟ್ಟಿಗೆಯು ಫೋಟೊಗಳ ನೆಗಟಿವ್ ಗಳನ್ನು ಬಳಸಿಕಂಡು ಚಿಕ್ಕ ಕಿಂಡಿಯಿಂದ ಅಂದರೆ, ಒಂದೇ ಕಣ್ಣಿನಿಂದ ಇಣುಕಿ ನೋಡುವಷ್ಟು ಕಿಂಡಿಯಿಂದ 2 ರಿಂದ 3 ನಿಮಿಷಗಳ ಚಿತ್ರಗಳ ಸರಣಿಗಳನ್ನು ತೋರಿಸುವ ವೈವಿಧ್ಯಮಯ ಸಾಧನ… ಈ ಸಾಧನವನ್ನು ಹಿಡಿದುಕೊಂಡಿರುವ ವ್ಯಕ್ತಿಯು ಚಿಣ್ಣರಿಂದ ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ಪರಿ ವಿಶಿಷ್ಟ. ಏನಿದೆ ಆ ಚಿಕ್ಕ ಡಬ್ಬಾದಲ್ಲಿ ಎಂದು ಕಿಂಡಿಯಲ್ಲಿ ಕಣ್ಣು ಹಾಯಿಸಿದೊಡನೆಯೇ ಆ ವ್ಯಕ್ತಿ ಒಂದು ಕಾಲಿಂಗ್ ಬೆಲ್ ತರಹ ಚಿಕ್ಕ ಘಂಟೆಯನ್ನು ಬಾರಿಸುತ್ತ, “ವಿಧಾನ ಸೌಧ ನೋಡ… ಹೇಮಾ ಮಾಲಿನಿ ನೋಡ… ಅಮಿತಾಭ ಬಚ್ಚನ್ ನೋಡ… ರಾಜಕುಮಾರ ನೋಡ…” ಎಂದು ಹಾಡುತ್ತಿದ್ದನು. ಆ ಹಾಡಿಗೂ ಆ ಡಬ್ಬಾದಲ್ಲಿ ಬರುವ ಚಿತ್ರಗಳಿಗೂ ಸರಿಹೊಂದುವಂತಹ ಪಕ್ಕಾ ಟೈಮಿಂಗ್ ಪ್ರಕಾರ ಮನರಂಜಿಸುವ ಪರಿ ಎಲ್ಲರಿಗೂ ಆಪ್ತ ಮತ್ತು ಇಷ್ಟವಾಗಿರುತ್ತಿತ್ತು… ಜಾಗತೀಕರಣ, ತಂತ್ರಜ್ಞಾನ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ ಇಂದು ನಮಗೆಲ್ಲ ಹೊಸ ಜಗತ್ತನ್ನೇ ತೋರಿಸಿತು ನಿಜ. ಆದರೆ, ನಮ್ಮದೇ ಎನ್ನುವಂತಹ ನಮ್ಮಿಷ್ಟದ ಹಲವು ಪುರಾತನ ಸಾಂಪ್ರದಾಯಿಕ ಜಾನಪದ ವೈಶಿಷ್ಟ್ಯಗಳನ್ನು ರೂಢಿಗಳನ್ನು ಮತ್ತು ಮನರಂಜನಾ ವಿಧಾನಗಳನ್ನು ನಮಗರಿವಿಲ್ಲದೇ ದೂರ ಕರೆದುಕೊಂಡು ಹೋಯಿತು ಎನ್ನುವುದು ವಿಷಾದನೀಯ… ಅವುಗಳಲ್ಲಿ ‘ಗರ್ದಿ ಗಮ್ಮತ್ತು’ ಒಂದು. ಇಂದು 40ರ ವಯಸ್ಸಿನ ಮೇಲೆ ಇರುವ ಬಹುತೇಕ ಜನರು ‘ಗರ್ದಿ ಗಮ್ಮತ್ತ’ನ್ನು ತಮ್ಮೂರ ಜಾತ್ರೆಯಲ್ಲಿ ನೋಡಿಯೇ ನೋಡಿರುತ್ತಾರೆ. ಆದರೆ, ಇಂದಿನ ಕೆಲವು ಯುವಕರಿಗೆ ಹಾಗೂ ಹಲವು ಮಕ್ಕಳಿಗೆ ಇದರ ಬಗ್ಗೆ ಗೊತ್ತೇ ಇಲ್ಲದಂತಾಗಿದೆ… ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರತಿ ಜಾತ್ರೆಗಳಲ್ಲೂ ಕಂಡುಬರುತ್ತಿದ್ದ ‘ಗರ್ದಿ ಗಮ್ಮತ್ತು’ ಇಂದು ಮಾಯವಾಗಿದೆ. ಅಂಗೈನಲ್ಲಿರುವ ಮೊಬೈಲ್ ತೆಗೆದು ಆನ್‌ಲೈನ್‌ನಲ್ಲೇ ಬೇಕಾದ ಚಲನಚಿತ್ರಗಳನ್ನು ನೋಡುವ ಈಗಿನ ಜಮಾನಾದಲ್ಲಿ ‘ಗರ್ದಿಯ ಗಮ್ಮತ್ತು’ ಕಿಮ್ಮತ್ತಿಲ್ಲದೇ ಮೂಲೆಗುಂಪಾಗುತ್ತಿದೆ. ಡಬ್ಬಾ ಟಾಕೀಸ್‌ನಿಂದ ದಿನಕ್ಕೆ ಬೇಕಾದ ಕನಿಷ್ಠ ಗಳಿಕೇನೂ ಆಗಲ್ಲ ಎಂದು ಇದನ್ನು ಬಿಟ್ಟು ಬೇರೆ ಉದ್ಯೋಗ ಅರಸಿ ಹೋಗಿದ್ದಾರೆ. ಈ ಪೆಟ್ಟಿಗೆಗಳು ಎಷ್ಟೋ ಮನೆಗಳ ಮೂಲೆಯಲ್ಲಿ ಹಾಳಾಗುತ್ತಿವೆ ಹಾಗೂ ಇದರ ನೆನಪುಗಳ ಎಷ್ಟೋ ಮನಗಳ ಮೂಲೆಯಲ್ಲಿ ಹಳೆಯದನ್ನು ನೆನಯುತ್ತ ಮೆಲುಕು ಹಾಕುತ್ತ ಕುಳಿತಿವೆ… ‘ಗರ್ದಿ ಗಮ್ಮತ್ತ’ನ್ನು ಇಂದಿನ ಚಿಣ್ಣರಿಗೂ ಪರಿಚಯಿಸಬೇಕೆಂಬ ಇರಾದೆಯಿಂದ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದ ವೃದ್ಧರೊಬ್ಬರು ಇಂದಿಗೂ ಅದಮ್ಯ ಉತ್ಸಾಹದಿಂದ ಓಣಿ ಕೇರಿಗೆ ಭೇಟಿ ನೀಡುತ್ತಿದ್ದಾರೆ, :ಗರ್ದಿ ಗಮ್ಮತ್ತ’ನ್ನು ಪರಿಚಯಿಸುತ್ತಿದ್ದಾರೆ. ಅವರ ಹೆಸರು ದುರ್ಗಪ್ಪ ಅಂತ, ಇವರು ಕೊಪ್ಪಳದವರು. 65 ವರ್ಷದ ದುರ್ಗಪ್ಪ ಇಂದಿಗೂ ಹಳ್ಳಿ ಹಳ್ಳಿಗಳಿಗೆ ಹಾಗೂ ಪಟ್ಟಣಗಳಿಗೆ ತೆರಳಿ ‘ಗರ್ದಿ ಗಮ್ಮತ್ತ’ನ್ನು ಪರಿಚಯಿಸುತ್ತಿದ್ದಾರೆ. ಮೊದಲು ಗದಗ ಹತ್ತಿರದ ಅಬ್ಬಿಗೇರಿಯಲ್ಲಿ ವಾಸಿಸುತ್ತಿದ್ದ ಇವರು ಈಗ ರೋಣ ಪಟ್ಟಣದಲ್ಲಿ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಇಬ್ಬರೂ ರೋಣದಲ್ಲಿ ಪ್ಲಾಸ್ಟಿಕ್ ಅಂಗಡಿ ಇಟ್ಟುಕೊಂಡಿರುವುದರಿಂದ ಇವರು ವಾಸಸ್ಥಳ ಬದಲಾಯಿತು. ರೋಣ ಪಟ್ಟಣಕ್ಕೆ ಬಂದ ಮೇಲೆಯೂ ದುರ್ಗಪ್ಪ ಸುಮ್ಮನೇ ಕೂಡಲಿಲ್ಲ. ಇಲ್ಲಿಯೂ ಪ್ರತಿದಿನ ಬಿಸಿಲು, ಮಳೆ ಲೆಕ್ಕಿಸದೇ ‘ಗರ್ದಿ ಗಮ್ಮತ್ತು’ ಅನ್ನು ತೆಗೆದುಕೊಂಡು ಹಾಡುತ್ತ ಓಣಿ ಓಣಿ ಅಲೆಯುವ ದುರ್ಗಪ್ಪ ಅವರಿಗೆ ದಣಿವೆಂಬುದು ಗೊತ್ತಿಲ್ಲ. ಇವರು ಕಳೆದ 45 ವರ್ಷಗಳಿಂದಲೂ ‘ಗರ್ದಿ ಗಮ್ಮತ್ತ’ನ್ನು ಜಾತ್ರೆಗಳಲ್ಲಿ ಕೊಂಡೊಯ್ದು ಮಕ್ಕಳ ಮನ ತಣಿಸುತ್ತಲೇ ಇದ್ದಾರೆ. ಈಗಲೂ ಪ್ರತಿದಿನ ಬಸ್ಸಿನಲ್ಲಿ ಆಸುಪಾಸಿನ ಊರುಗಳಿಗೆ ಹೋಗಿ :ಗರ್ದಿ ಗಮ್ಮತ್ತ:ನ್ನು ಪರಿಚಯಿಸುತ್ತಿದ್ದಾರೆ. ದುರ್ಗಪ್ಪ ಅವರನ್ನು ನೋಡಿ ಕೆಲವರು ಸೆಲ್ಫಿ ಅಂತ ಕೇಳಿದ್ದೂ ಇದೆ, ತೆಗೆದುಕೊಳ್ಳಿ ಅಂತಾರೆ, ಆದರೆ ಮೊಬೈಲ್ ನೋಡಿ ಇವರು ನಗುವುದಿಲ್ಲ, ಯಾಕೆ ಅಂತೀರಾ, ಇದು ಇವರ ‘ಗಮ್ಮತ್ತು’… ದುರ್ಗಪ್ಪ ಕೊಪ್ಪಳ ‘ಪ್ರತಿಧ್ವನಿ’ ಪ್ರತಿನಿಧಿ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ– “ನಾನು 20 ವರ್ಷದವನಿದ್ದಾಗಲೇ ಸ್ವತಂತ್ರವಾಗಿ ‘ಗರ್ದಿ ಗಮ್ಮತ್ತು’ ತೋರಿಸಲು ಸಜ್ಜಾದೆ. ಆಗ ಒಂದು ಕುಟುಂಬದಲ್ಲಿ ಎರಡು ಅಥವಾ ಮೂರು ಪೆಟ್ಟಿಗೆಗಳು ಇರುತ್ತಿದ್ದವು. ನಾವು ಜಾತ್ರೆಗೆ ಹೋದರೆ ಸಾಕು, ಮಕ್ಕಳು ದುಂಬಾಲು ಬೀಳುತ್ತಿದ್ದರು. ಆಗ ಕೆಲವರು 5 ಪೈಸೆ ಅಥವಾ 10 ಪೈಸೆ ಕೊಡುತ್ತಿದ್ದರು. ಜಾತ್ರೆ ಇಲ್ಲದ ಸಮಯದಲ್ಲಿ ನಾವು ಓಣಿ ಕೇರಿಗಳಿಗೆ ಹಾಗೂ ಪಟ್ಟಣಗಳಿಗೆ ಹೋಗುತ್ತಿದ್ದೆವು. ಅಲ್ಲಿಯೂ ಕೆಲವು ಜನರು 5 ಪೈಸೆ ಕೊಡುತ್ತಿದ್ದರು. ಇಲ್ಲವಾದರೆ ಒಂದು ಲೋಟ ಜೋಳ ಅಥವಾ ಗೋದಿ ನೀಡುತ್ತಿದ್ದರು. ಆಗ ಅದೇ ನಮ್ಮ ಜೀವನ. ಈ ಪೆಟ್ಟಿಗೆಯು ನಮ್ಮ ಕುಟುಂಬದ ಹಸಿವು ನೀಗಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಈಗ ನಾವು ಮೊಬೈಲ್ ಬಂದೈತಿ ಅದು-ಇದು ಬಂದೈತಿ ಅಂತ, ನಮ್ಮನ್ನು ಸಾಕಿ ಸಲುಹಿದ ಈ ಕಲೆಯನ್ನು ಬಿಡಬಾರದು ಎಂದು ಪ್ರತಿದಿನ ಈ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇವತ್ತೂ ಈ ಪೆಟ್ಟಿಗೆ ನನಗೆ ದೇವರಿದ್ದಂತೆ. ಹಣವೇ ಮುಖ್ಯವಲ್ಲ ಇಲ್ಲಿ, ಮಕ್ಕಳು ಇದ ನೋಡಿ ಕೇಕೆ ಹೊಡಿಯುವುದನ್ನು ನೋಡಿದರೆ ನನ್ನ ಹೊಟ್ಟೆ ತುಂಬಿದಂತಾಗುತ್ತದೆ.”..! ಎಂದು ‘ಗರ್ದಿ ಗಮ್ಮತ್ತಿ’ನ ದುರ್ಗಪ್ಪ ತಮ್ಮ ಕಲೆಯ ವಾರಸುದಾರನಾಗಿ ಹೇಳಿಕೊಳ್ಳುತ್ತಾರೆ… ರೊಕ್ಕಾ ಬರೂದ ಕಷ್ಟ ಆದರೂ…– ಮೊಬೈಲ್ ಕ್ರಾಂತಿ ‘ಗರ್ದಿ ಗಮ್ಮತ್ತಿ’ನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದರೂ, ಅದರಲ್ಲೇ ಹೊಸತನದಿಂದ ಮಕ್ಕಳನ್ನು ನಗಸ್ತಿನಿ ಅಂತ ಮತ್ತೆ ಮಾತು ಶುರು ಹಚ್ಚಿಕೊಂಡರು ದುರ್ಗಪ್ಪ. “ಹೌದು ಸಾರ್, ಒಪ್ಪತಿನಿ, ಇಂದು ಮೊಬೈಲ್ ಎಲ್ಲಾ ಇವೆ. ಆದರೂ ನಾವು ಈಗ ಹೊಸದನ್ನೇನಾದರೂ ತೋರಿಸಬೇಕು, ಅದಕ್ಕಾಗಿ ಬಾಹುಬಲಿ, ರೋಬೋಟ್, ಅವತಾರ, ಕ್ರಿಶ್ ಹೀಗೆ ಹೊಸ ಹೊಸ ಹೀರೋಗಳ ಫೋಟೊಗಳನ್ನು ಸಂಗ್ರಹಿಸಿ ಡಬ್ಬಾ ಟಾಕೀಸ್‌ನಲ್ಲಿ ತೋರಿಸಿದಾಗ ಚಿಕ್ಕ ಮಕ್ಕಳು ಕೇಕೆ ಹೊಡೆಯುತ್ತ ನಕ್ಕು ನಲಿಯುತ್ತಾರೆ. ನಿಮಗೆಲ್ಲ ‘ಗರ್ದಿ ಗಮ್ಮತ್ತು’ ಹಳೆಯದು. ಆದರೆ ಈಗಿನ ಮಕ್ಕಳಿಗೆ ಇದು ಹೊಸದೇ ಅಲ್ಲವೇ. ಕೆಲವರಂತೂ ಮತ್ತೆ ಮತ್ತೆ ನೋಡಲು ಮುಗಿಬೀಳುತ್ತಾರೆ.”… ನಿಜ, ಇಂದಿನ ಮಕ್ಕಳಿಗೆ ಈ ಡಬ್ಬಾ ಟಾಕೀಸ್ ಹೊಸದು. ತಾವು ಚಿಕ್ಕಂದಿನಿಂದ ರೂಢಿಸಿಕೊಂಡ ಬಂದ ಈ ಪಾರಂಪರಿಕ ಮನರಂಜನಾ ವಿಧಾನವನ್ನು ಇಂದು ಹಲವರಿಗೆ ಮತ್ತೆ ಪರಿಚಯಿಸುತ್ತಿರುವ ದುರ್ಗಪ್ಪ, ಎಷ್ಟೋ ಜನರ ಮನದಲ್ಲಿ ಕಳೆದುಹೋದ ಪುಸ್ತಕಗಳ ಮರೆತ ಪುಟಗಳನ್ನು ಮತ್ತೇ ತಿರುವಿಹಾಕುವಂತೆ ಮಾಡಿ ಅವರ ಬಾಲ್ಯ ನೆನಪಿಸುತ್ತಿದ್ದಾರೆ… ಗದಗ ಜಿಲ್ಲೆಯ ರೋಣದ ಸಾಧು ಅಜ್ಜ ನಗರದ ಆರು ವಯಸ್ಸಿನ ಪುಠಾಣಿ ಪ್ರಶಾಂತ ಕುರಿ ಡಬ್ಬಾ ಟಾಕೀಸ್ ನೋಡಿ ಹೇಳಿದ್ದು ಹೀಗೆ– “ಆ ಅಜ್ಜನ ಹಾಡು, ಆ ಹಾಡಿಗೆ ತಕ್ಕ ಹಾಗೆಯೇ ಸಣ್ಣ ಟಾಕೀಸಿನಲ್ಲಿರುವ ಫೋಟೊಗಳು ಬರುತ್ತಿರುತ್ತವೆ. ಬಾಹುಬಲಿ ಶಿವಲಿಂಗವೆತ್ತಿ ಬರುತ್ತಿದ್ದ ಹಾಗೂ ಛೋಟಾ ಭೀಮನ ಚಿತ್ರ ಸೇರಿ ಎಲ್ಲ ಚೆನ್ನಾಗಿವೆ. ಇದೊಂಥರ ಮಜಾ. ಈ ಅಜ್ಜ ಮತ್ತೆ ಮತ್ತೆ ಬರಲಿ.”..! ದುರ್ಗಪ್ಪ ಅವರನ್ನು ಬಲ್ಲವರಾದ ಗದಗದ ಪರಮೇಶಪ್ಪ ಹಳ್ಳಿ ಹೇಳುವುದು ಹೀಗೆ– “ನಾವು ದುರ್ಗಪ್ಪ ಅವರನ್ನು ಕಳೆದ ಮೂವತ್ತು ವರ್ಷಗಳಿಂದ ನೋಡುತ್ತಿದ್ದೇವೆ. ಅವರು ಪ್ರತಿ ಜಾತ್ರೆಯಲ್ಲಿರುತ್ತಾರೆ. ಮುಂಜಾನೆಯಿಂದ ಸಂಜೆವರೆಗೂ ದಣಿಯದೇ ಹಾಡುತ್ತ ಮಕ್ಕಳನ್ನು ರಂಜಿಸುತ್ತಾರೆ. ಇಂಥವರನ್ನು ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಗುರುತಿಸಬೇಕು. 3-4 ನಿಮಿಷಗಳವರೆಗೆ ಇರುವ ಒಂದು ಡಬ್ಬಾ ಟಾಕೀಸ್ ನೋಡುವುದಕ್ಕೆ ಈಗ 5 ರೂಪಾಯಿಗಳು ಮಾತ್ರ. ಪ್ರತಿದಿನ 120-150ರವರೆಗೆ ದುಡಿಯುವ ದುರ್ಗಪ್ಪ, ಇಂದಿನ ತಲೆಮಾರಿನ ಜನರಿಗೆ ‘ಗರ್ದಿ ಗಮ್ಮತ್ತಿ’ನ ಪರಿಚಯ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ…” ಗರ್ದಿ ಗಮ್ಮತ್ತಿನಲ್ಲಿ ಮೊದಲೇನಿರುತ್ತಿದ್ದವು?– 70ರಿಂದ 80ರ ದಶಕ– 70 ಹಾಗೂ 80ರ ದಶಕದಲ್ಲಿ ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ರಾಜ್ ಕಪೂರ್, ದೇವಾನಂದ, ನೂತನ, ಶಮ್ಮಿ ಕಪೂರ್, ವಿಧಾನ ಸೌಧ, ತಾಜಮಹಲ್, ಇಂಡಿಯಾ ಗೇಟ್, ಗೇಟ್‌ವೇ ಆಫ್ ಇಂಡಿಯಾ ಇವೆಲ್ಲ ಫೋಟೊಗಳು ಚಿರಪರಿಚಿತವಾಗಿದ್ದವು..! 90ರ ದಶಕದ ನಂತರ– ಸಂಜಯ ದತ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರವೀನಾ ಟಂಡನ್, ಶಕ್ತಿಮಾನ್, ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು, ರಾಜೀವ್ ಗಾಂಧಿ ಮತ್ತು ಕಾರ್ಟೂನ್ ಹೀರೋಗಳಾದ ಮೋಗ್ಲಿ, ಹೀ-ಮ್ಯಾನ್, ಲಾಲ್‌ಬಾಗ್, ಕಬ್ಬನ್ ಪಾರ್ಕ್ ಇವೆಲ್ಲ ಸಾಮಾನ್ಯವಾಗಿರುತ್ತಿದ್ದವು..! 2010ರ ನಂತರ: 2010ರಲ್ಲಿ ‘ಗರ್ದಿ ಗಮ್ಮತ್ತು’ ಕಾಣೆಯಾದರೂ, 90ರ ದಶಕದ ಚಿತ್ರಗಳನ್ನಿಟ್ಟಕೊಂಡೇ ತೋರಿಸುತ್ತಿದ್ದ ದುರ್ಗಪ್ಪ, 2015ರ ನಂತರ ಹೊಸ ಚಿತ್ರಗಳನ್ನು ಸೇರಿಸತೊಡಗಿದರು. ಈ ಹೊಸ ಚಿತ್ರಗಳಲ್ಲಿ ಬಾಹುಬಲಿ, ಕಟ್ಟಪ್ಪ, ಬಲ್ಲಾಳದೇವ, ರೋಬೊ, ಅವತಾರ್, ಕ್ರಿಶ್, ಕೊಚ್ಚಾಡಿಯನ್, ಯಶ್, ದರ್ಶನ, ಪುನೀತ್ ರಾಜಕುಮಾರ, ಶಿವರಾಜಕುಮಾರ್, ಸುದೀಪ್ ಮತ್ತು ಕಾರ್ಟೂನ್ ತಾರೆಗಳಾದ ಛೋಟಾ ಭೀಮ್ ಹಾಗೂ ಬಾಲವೀರ್ ಸೇರ್ಪಡೆಯಾಗಿವೆ… ನಿಮಗೂ ನೆನಪುಂಟೇ?– ‘ಗರ್ದಿ ಗಮ್ಮತ್ತಿ’ನಿಂದ ಜೀವನ ನಡೆಸುತ್ತಿದ್ದ ಕೆಲವು ಸಮುದಾಯಗಳ ಜನರು ಇದೀಗ ಪರ ಊರುಗಳತ್ತ ಉದ್ಯೋಗ ಅರಸಿ ಹೋಗಿದ್ದಾರೆ. ಮೊದಲು ಮಳೆ-ಬೆಳೆ ಚೆನ್ನಾಗಿದ್ದ ಕಾರಣ, ರೈತಾಪಿ ಜನರು ಇವರಿಗೆ ಅಕ್ಕಿ, ಜೋಳ, ಗೋಧಿಯನ್ನು ಕೊಡುತ್ತಿದ್ದರು. ಈಗ ಬರ ತಾಂಡವವಾಡುತ್ತಿದೆ. ಇಲವೇ ಅತಿವೃಷ್ಟಿ ತಾಂಡವ ಆಡುತ್ತದೆ. ಆದ್ದರಿಂದ ಇವರೆಲ್ಲ ಇಂದು ತಮ್ಮ ಕುಲಕಸುಬುಗಳನ್ನು ಬಿಟ್ಟು ಹೊಸದನ್ನು ಹುಡುಕುತ್ತ ಬದುಕಲೆತ್ನಿಸುತ್ತಿದ್ದಾರೆ. ಇಂದಿನ ತಲೆಮಾರಿನ ಜನರು, ಅಂದರೆ ‘ಗರ್ದಿ ಗಮ್ಮತ್ತ’ನ್ನೇ ಕುಲಕಸುಬಾಗಿ ಜೀವನ ನಡೆಸುತ್ತಿದ್ದವರು ಇಂದು ಇದೇ ‘ಗರ್ದಿ ಗಮ್ಮತ್ತಿ’ನಿಂದ ಕೈ ತುಂಬಾ ಸಂಪಾದಿಸಲು ಆಗಲ್ಲ ಎಂಬ ಕಾರಣದಿಂದ ಹಂದಿ ಸಾಕಾಣಿಕೆ ಹಾಗೂ ಪ್ಲಾಸ್ಟಿಕ್ ಮಾರಾಟ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ಗದಗ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಈ ಜನರಲ್ಲಿ ಹಲವರು ಗುಳೆ ಹೋಗಿ, ಗೋವಾ, ಮಂಗಳೂರು ಹಾಗೂ ಸೊಲ್ಲಾಪುರಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ ಇದು ಕಡಿಮೆಯಾಗುತ್ತ ಇಂದು ಕಣ್ಮರೆಯಾಗುವಂತಹ ದುಸ್ಥಿತಿಗೆ ಬಂದಿದೆ ‘ಗರ್ದಿ ಗಮ್ಮತಿ’ಗೆ. ಇಂದಿನ ಚಿಣ್ಣರು ಇದರ ಬಗ್ಗೆ ತಿಳಿಯಲಿ ಎಂಬುದು ನಮ್ಮ ಆಶಯವಾಗಿದೆ..! *********************************** ಕೆ.ಶಿವು.ಲಕ್ಕಣ್ಣವರ

ಜಾನಪದ Read Post »

ಕಾವ್ಯಯಾನ

ಕಾವ್ಯಯಾನ

ಗೆರೆಗಳು ಎನ್.ಆರ್.ರೂಪಶ್ರೀ, ಬದುಕಿನ ಗೆರೆಗಳು ಒಂದೊಂದಾಗಿ ಮೂಡುತ್ತಲೇ ಹೋಗುತ್ತವೆ ಅಳಿಸಲಾಗದ ಗೆರೆಗಳು ಅಳಿಸಿದರೂ ಅಳಿಸಲಾಗದ ಗೆರೆಗಳು ಗೆರೆಗಳು ಗೆರೆಗಳಾಗಿಯೇ ಇರಬೇಕಾದ್ದು ಇರದೇ ಇರುವುದು ಗೆರೆಗಳ ನಡುನಡುವೆ ಚುಕ್ಕಿಚಿತ್ತಾರಗಳು ಜೀವನದ ಗೆರೆಗಳಲ್ಲಿ ಎಲ್ಲವೂ ಎಲ್ಲರದ್ದಾಗಿದ್ದರೂ ಯಾರದ್ದು ಯಾವುದು ಆಗಿರುವುದಿಲ್ಲ. ಗೆರೆಗಳೇ ಹಾಗೆ ಬದುಕಿನಲ್ಲಿ ಎಳೆಎಳೆಯಾಗಿ ಬಂದು ಎಳೆಯುತ್ತವೆ ಗೆರೆಗಳಿಲ್ಲದ ಬದುಕು ಬದುಕು ಅಲ್ಲ ಬದುಕಿನಲ್ಲಿ ಗೆರೆಗಳು ಇರಬೇಕೆಂದೇನಿಲ್ಲ ಬದುಕು ಬದುಕೇ ಗೆರೆಗಳು ಗೆರೆಗಳೇ ತಾನೇ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಂಧಿ ಎನಿಸಿಲ್ಲ ಬಂಧನದಲ್ಲಿ ಜಿ.ಲೋಕೇಶ್ ನಿನ್ನ ನೆನಪುಗಳಲ್ಲಿ ಬಂಧಿಯಾದ ನನಗೆ ಗೃಹ ಬಂಧನವು ಕಷ್ಟವೇನು ಅನಿಸುತ್ತಿಲ್ಲ ಏಳಿ, ಮಲಗಲು,.ನಾಲಿಗೆ ಎದೆಯ ಹೆಸರನ್ನು ಸಾರಿ ಸಾರಿ ಹೇಳುವಾಗ ಬಂಧನವು ಬಂಧಿ ಎನಿಸಿಲ್ಲ ಪ್ರತಿ ಮೂಲೆ ಮೂಲೆಯಲ್ಲಿ ನಿನ್ನೂರಿನ ನೆನಪುಗಳು ಜೊತೆಯಿರುವಾಗ ಬಂಧನವು ಬಂಧಿ ಎನಿಸಿಲ್ಲ ***** ಕೊಡಿಸಿದ ಅಷ್ಟು ವಸ್ತುಗಳು ಹೋದ ಪ್ರತಿ ಜಾಗಗಳಿಗೆ ಕರೆದೊಯ್ಯುತಿರುವಾಗ ಬಂಧನವು ಬಂಧಿ ಎನಿಸಿಲ್ಲ ಎಷ್ಟೋ ಭಾವಗಳನ್ನು ಪದಗಳಲ್ಲಿ ಕವಿತೆಯಾಗಲು ಪೋಣಿಸುತಿರುವಾಗ ಬಂಧನವು ಬಂಧಿ ಎನಿಸಿಲ್ಲ ****

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-3 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಅರಿವು ವಿಸ್ತರಿಸಲಿ.. ಮನೆ ಬಾಗಿಲು ದಾಟಬೇಡಿ.. ಮನೆಯೊಳಗೇ ಸುರಕ್ಷಿತವಾಗಿರಿ ಎಂದಕೂಡಲೇ ಮನಸ್ಸು ತರಾವರಿ ಚಿಂತಿಸುತ್ತದೆ. ಇಷ್ಟಪಟ್ಟು ಸಾಲ ತೆಗೆದು, ಕಷ್ಟಬಿದ್ದು ಕಟ್ಟಿಸಿದ ನಮ್ಮ ಮನೆಯೂ ನಮಗೆಸೆರೆಮನೆಯೆನಿಸುತ್ತದೆ. ಯಾಕೆ ಹೀಗೆ? ಯಾವುದು ಬೇಡ ಎಂದು ಹೇಳುತ್ತಾರೆಯೋ ಅದನ್ನು ಮೀರುವುದು ಸಾಹಸ… ಆದರೆ ಈಗ ಅದು ದುಃಸ್ಸಾಹಸ. ವಿವೇಚನೆ ಇಲ್ಲದ ನಡೆ. ಸುರಕ್ಷಿತತೆಯ ಪ್ರಶ್ನೆ ಎದ್ದಾಗ ಅದಕ್ಕೇ ನಮ್ಮ ಮೊದಲ ಆದ್ಯತೆ. ಮನೆ ಬಾಗಿಲು ದಾಟುವುದು ಹಾಗಿರಲಿ ನಮ್ಮ ಮುಖವನ್ನೇ ನಾವು ಬೇಕಾದಷ್ಟು ಸಲ ಮುಟ್ಟುವಂತಿಲ್ಲ! ಕೈ ತೊಳೆದು ಮುಖ ಮುಟ್ಟಬೇಕೋ, ಮುಖ ಮುಟ್ಟಿದ ನಂತರ ಕೈ ತೊಳೆಯಬೇಕೋ ಗೊಂದಲ! ಒಂದರ್ಥದಲ್ಲಿ ನಮಗೆ ನಾವೇ ಅಸ್ಪ್ರಶ್ಯರಾಗೋದು. ಇನ್ನು ರೋಗಿಗಳಾದರೆ ಅಥವಾ ಕ್ವಾರಂಟೇನ್ ಅನುಭವಿಸಿದರೆ ಸಮಾಜವೇ ( ವೈದ್ಯರು, ಆರೋಗ್ಯ ಇಲಾಖೆ ಹೊರತುಪಡಿಸಿ)ಒಂದು ಹಂತಕ್ಕೆ ಅಂತವರನ್ನು ದೂರವಿಡುತ್ತದೆ…ಇದನ್ನು ತಪ್ಪು ಎನ್ನುವಂತೆಯೂ ಇಲ್ಲ… ಬದುಕಿನಲ್ಲಿ ಇಂತವುಗಳನ್ನೆಲ್ಲ ಎದುರಿಸದ ಅನೇಕ ಜನರಿಗೆ ವ್ಯಥೆ, ನೋವು ಆಗಬಹುದು. ಆದರೆ ಇದು ಕೆಲ ದಿನಗಳು ಮಾತ್ರ ನೆನಪಿರಲಿ. ಆದರೆ ಇಡೀ ಬದುಕನ್ನು ಅಸ್ಪೃಶ್ಯತೆಯ ನೋವಿನಲ್ಲಿ ಕಳೆದ, ಅದರ ವಿರುದ್ಧ ಹೋರಾಡುವುದರಲ್ಲಿಯೇ ಬದುಕನ್ನು ಎದುರಿಸಿದ ಅಂಬೇಡ್ಕರ ಅವರ ಕಷ್ಟ ಎಷ್ಟಿರಬಹುದು? ಇಂದಿಗೂ ಎಷ್ಟೋ ಊರುಗಳಲ್ಲಿ ದಲಿತರನ್ನು ಅಸ್ಪೃಶ್ಯರೆಂಬಂತೆಯೇ ಕಾಣುವುದಿದೆ. ಕೊರೋನಾ ಸಂಕಷ್ಟ ನಮ್ಮ ಮಾನವೀಯತೆಯ ಅರಿವನ್ನು ವಿಸ್ತರಿಸುವಂತಾಗಲಿ. ಮನೆಯ ಬಾಗಿಲು ಮುಚ್ಚಿದರೂ ಮನದ ಬಾಗಿಲು ಎಂದೂ ಮುಚ್ಚದಿರಲಿ. ******* ಮುಂದುವರಿಯುವುದು…. ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

You cannot copy content of this page

Scroll to Top