ಕಾವ್ಯಯಾನ
ಬದಲಾಗದ ಕ್ಷಣಗಳು… ಶಾಲಿನಿ ಆರ್. ಬದಲಾಗದ ಕ್ಷಣಗಳು, ನೀ’ ಬಂದು ಹೋದ ಘಳಿಗೆಗಳು, ಅದೇ ಚಳಿಗಾಳಿಯ ಇರುಳುಗಳು, ಚಂದ್ರಿಕೆಯ ಸುರಿವ ಬೆಳದಿಂಗಳು, ನಿನ್ನರಸುವ ಕಣ್ಣರೆಪ್ಪೆಗಳು, ಹ್ಞಾಂ, ಕಣ್ಣಂಚಿನಾ ಕೊನೆಯಲಿ ಕಂಡು ಕಾಣದ್ಹಾಂಗೆ ಜಿನುಗಿದ ಹನಿಗಳು, ಮತ್ತೇನಿಲ್ಲ,! ಮೌನದುಯ್ಯಾಲೆಯಲಿ ಬಿಗಿದ ಕೊರಳು, ಒಣನಗೆ , ದಾಹ! ಅಷ್ಟೇ, ಸಂಜೆಯ ಚಳಿಗಾಳಿಯಿರುಳಲಿ ನೀ ನಡೆದ ದಾರಿಯುದ್ದಕ್ಕೂ ಮಂಜುಮುಸುಕಿದ ಧೂಳ ಕಣಗಳು, ಮನದಾಳದಲ್ಲಿ ಅಲ್ಲ, ಮತ್ತೆ! ಯಾವುದು ಬದಲಾಗಿಲ್ಲ ನೀ ಬಂದು ಹೋದ ಘಳಿಗೆಗಳು, ಅದೇ ಚಳಿಯ ಇರುಳುಗಳು, ಚಂದ್ರಿಕೆಯ ಸುರಿವ […]
ಕಾವ್ಯಯಾನ
ಪ್ರೀತಿಯ ಗೆಳೆಯರೇ ಮೂಗಪ್ಪ ಗಾಳೇರ ಪ್ರೀತಿಯ ಗೆಳೆಯರೇ……. ನಿಮಗೊಂದು ಕತೆ ಹೇಳಬೇಕೆಂದಿರುವೆ ಎರೆಮಣ್ಣ ಕರಿ ಚೆಲುವು ಸುಳಿಗಾಳಿಯ ಅಲೆಮಾರಿಯ ನಡಿಗೆ ಬೈಕೊಂಡು ಹುರ್ಕೊಂಡು ಸರಿಯಾಗಿ ಕೇಳಿ ನಾ ಹೇಳುವ ಕಥೆಯಾ……..! ಪ್ರೀತಿಯ ಗೆಳೆಯರೇ……. ನಿಮಗೊಂದು ಪತ್ರ ಬರೆಯುವೆ ನಿಟ್ಟುಸಿರು ಬಿಡದೆ ಬಿಟ್ಟ ಕಣ್ಣುಗಳ ಮುಚ್ಚದೆ ಓದಿ ಅಲ್ಲಲ್ಲಿ ಹುಡುಕಿ ತಡಕಿ ಭಯಬಿದ್ದ ಮನಸ್ಸುಗಳನ್ನು ಪತ್ರದಲ್ಲಿ ಬಚ್ಚಿಟ್ಟಿರುವೆ……..! ಪ್ರೀತಿಯ ಗೆಳೆಯರೇ…… ನಿಮಗೊಂದು ಗುಟ್ಟು ಹೇಳಬೇಕೆಂದಿರುವೆ ಬಾರದ ದಿನಗಳಲ್ಲಿ ಕಳೆದ ಕಂಬನಿಯ ಕನಸುಗಳು ಚಿರತೆ ನಡಿಗೆ ಕದ್ದ ಪೂರ್ವಜರ ಉಸಿರು […]
ಪ್ರಬಂಧ
ಮಠದ ಆನೆ ರೇಶ್ಮಾ ಗುಳೇದಗುಡ್ಡಾಕರ್ ಆನೆ ಎಂದರೆ ಸಂಭ್ರಮ, ಸಡಗರ ದೈವೀಕತೆ ಆಶ್ಚರ್ಯ ಹತ್ತು ಹಲವು ಉದ್ಗಾರ. ಊರಿನಲ್ಲಿ ಕಂಡರೆ .ಅದೆ ಆನೆ ಅಚಾನಕ್ ಅಗಿ ನಾವು ಹೋಗುವ ದಾರಿಯಲ್ಲಿ ,ಕಾಡಿನಲ್ಲಿ ಊರ ಬಯಲಿನಲ್ಲಿ ಕಂಡರೆ !!!! ಹೃದಯ ವೇ ಬಾಯಿಗೆ ಬಂದಂತಾಗುತ್ತದೆ . ಅಲ್ಲವೇ ಅದನ್ನು ದೈರ್ಯ ವಾಗಿ ಸ್ವಾಗತಿಸುವರು ಸ್ವಲ್ಪ ಕಡಿಮೆಯೇ . ಆನೆ ಎಂದರೆ ನೆನಪಾಗುವದು ಅದರ ಗಾತ್ರ ಗತ್ತು ರಾಜಗಾಂಭಿರ್ಯ ನಡಿಗೆ ಅದರ ತೊಕದಷ್ಟೇ ಇರುವ ಸಂಮಯಮ .ಆನೆ ಒಂದು […]
ಕಾವ್ಯಯಾನ
ಅನ್ವೇಷಾ ರಶ್ಮಿ ಕಬ್ಬಗಾರ ಅನ್ವೇಷಾ ೧ ಮತ್ತೆ ಹೊಸದಾಗಿ ನಿನ್ನ ಪ್ರೀತಿಸ ಬೇಕೆಂದಿದ್ದೇನೆ ನೀ ನನ್ನ ಮಹತ್ವಾಕಾಂಕ್ಷೆಯೋ ಹಳೇ ಪ್ರೇಮಿಯೋ ಪತ್ತೆ ಮಾಡಬೇಕಿದೆ ೨ ಇಲ್ಲ ಮತ್ತೆ ಮತ್ತೆ ನಿನ್ನ ಕಾಯಿಸುವ ಇರಾದೆಯಿಲ್ಲ ಸೀದ ಇಳಿದು ಮನವೊಲಿದಲ್ಲಿ ಮಳೆ ಕರೆದು ಮೊಳೆವೆ ೩ ರಾಗ ರಂಜನೆ ಧ್ಯಾನ ಸಾಧನೆಗೆಲ್ಲ ವ್ಯವಧಾನವಿಲ್ಲೀಗ ಇದು ಕವಿ ಹುಟ್ಟುವ ಪದ ಪಾದ ನಾಭಿಯೊಳ್ ಮುಟ್ಟುವ ಖುಷಿ ಋಷಿ ಮೊಟ್ಟೆಯೊಡೆದುಟ್ಟುವ ಮುಂಜಾವು ಮತ್ತೀಗ ಗಾಳಿಗೆ ಬೆಂಕಿ ಎದುರಾದಂತೆ ಎದು […]
ಪುಸ್ತಕ
ಪ್ರಭುಲಿಂಗ ಲೀಲೆ ಚಾಮರಸ ಚಾಮರಸನ ಮಹಾಕಾವ್ಯ ‘ಪ್ರಭುಲಂಗಲೀಲೆ’ಯೂ..! ಚಾಮರಸನು ಕನ್ನಡದ ಪ್ರಸಿದ್ಧ ಕವಿ. ಇವರು ‘ಪ್ರಭುಲಿಂಗ ಲೀಲೆ’ಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯವಾಗಿದೆ. ಇವರು ಇಮ್ಮಡಿ ಪ್ರೌಢದೇವರಾಯನ ರಾಜಾಶ್ರಯದಲಿದ್ದವನು. ಅನ್ಯಮತ ಕೋಳಾಹಲ, ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವನಿಗೆ ಸಂದಿದ ಬಿರುದುಗಳು… ನಡುಗನ್ನಡದ ಶ್ರೇಷ್ಠ ಕಾವ್ಯ ಎಂದು ಪ್ರಸಿದ್ಧವಾಗಿರುವ ‘ಪ್ರಭುಲಿಂಗಲೀಲೆ’ಯ ಕರ್ತೃ ಈತ. ವೀರಶೈವ ಕವಿ. ವಿಜಯನಗರದ ಪ್ರೌಢ ದೇವರಾಯನ ಕಾಲದ ನೂರೊಂದು ವಿರಕ್ತರಲ್ಲಿ ಗಣನೆಯಾಗಿದ್ದಾನೆ. ವೀರಶೈವಾಚಾರ ಮಾರ್ಗಸಾರೋದ್ಧಾರ, ಅನ್ಯಮತ ಕೋಳಾಹಳ ಎಂಬ ಬಿರುದುಗಳನ್ನು ಪಡೆದಿದ್ದ […]
ಕಾವ್ಯಯಾನ
ಗಝಲ್ ರೇಮಾಸಂ ಡಾ.ರೇಣುಕಾತಾಯಿ.ಎಂ.ಸಂತಬಾ ಸುಳ್ಳು ಶಬ್ದಗಳ ಪೋಣಿಸಿ ಸರಮಾಲೆ ಹಾಕದಿರು ಗೆಳೆಯ/ ಪೊಳ್ಳು ಮಾತಿನಲಿ ಸಿಲುಕಿಸಿ ಬಲೆಯ ಬೀಸದಿರು ಗೆಳೆಯ// ಚಂದಿರ ನಕ್ಕಾನು ನಕ್ಷತ್ರಗಳನು ಪಿಡಿದು ಮುಡಿಸುವ ಪರಿಗೆ/ ವಾಸ್ತವಕ್ಕೆ ಮರಳು ಹಗಲುಗನಸು ಕಾಣದಿರು ಗೆಳೆಯ// ಎದೆಯ ಹೊಲದಲಿ ಪ್ರೀತಿ ಬಿತ್ತಲು ಬೇಕೆನು ಕಾಣಿಕೆ/ ಧನವೇ ಮನವನು ಗೆಲ್ಲುವದೆಂದು ತಿಳಿಯದಿರು ಗೆಳೆಯ// ವಾಸ್ತವಿಕತೆ ಕನ್ನಡಿಯನು ಗಮನಿಸಿ ನೋಡಲಾರೆಯೇನು/ ಪ್ರೇಮದಲಿ ಮಿಂದ ಕಣ್ಣ ದೃಷ್ಟಿ ಬದಲಿಸಿದಿರು ಗೆಳೆಯ// ಉಷೆಯಿಂದ ನಿಶೆಯವರೆಗೆ ನಿನ್ನ ನೆನೆಯುವಳು ನೆನಪಿಲ್ಲವೇ/ ಪರರ ನಶೆಯಲಿ ರೇಮಾಸಂನು […]
ನೆನಪು
ಜ್ಯೋತಿಬಾ ಫುಲೆಯವರ ಜಯಂತಿ “ಜ್ಯೋತಿ ಬೆಳಗೋಣ ಬನ್ನಿ” ಏಪ್ರೀಲ ತಿಂಗಳು ನಿಜಕ್ಕೂ ಭಾರತ ದೇಶಕ್ಕೆ ಎರಡು ತಾರೆ ನೀಡಿತು. ಒಬ್ಬರು ಮಹಾಮಾನವ ಬಾಬಾಸಾಹೇಬ ಅಂಬೇಡ್ಕರರು ಮತ್ತು ಇನ್ನೊಬ್ಬರು ಕ್ರಾಂತಿಜ್ಯೋತಿ ಮಹಾತ್ಮಾ ಜ್ಯೋತಿಭಾ ಫುಲೆ. ಜ್ಯೋತಿರಾವರು ಹುಟ್ಟಿದ್ದು ೧೧ ಏಪ್ರೀಲ ಮತ್ತು ಅಂಬೇಡ್ಕರರು ಹುಟ್ಟಿದ್ದು ೧೪ ಏಪ್ರೀಲ. ದಮನಿತ ಮತ್ತು ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿ, ಅಂಧಕಾರವನ್ನು ಹೋಗಲಾಡಿಸಿ, ದೇಶದ ಆಂತರಿಕ ಸ್ವಾತಂತ್ರö್ಯ ಮತ್ತು ಸಾತ್ವಿಕ ಸ್ವಾತಂತ್ರಕ್ಕೆ ಹೋರಾಡಿದ ಇರ್ವರೂ ತಾರೆಗೆ ಸಮಾನರು. ಅಂಬೇಡ್ಕರರಿಗೆ ಆದರ್ಶರಾದ ಜ್ಯೋತಿರಾವರು […]