ಜ್ಞಾನಪೀಠ ವಿಜೇತರು
ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ , ಚಿತ್ರ ನಟ ಮತ್ತು ನಿರ್ದೇಶಕ. ಕನ್ನಡ, ಹಿಂದಿ, ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿನಯದಿಂದ ವಿಶಿಷ್ಠ ಮುದ್ರೆ ಒತ್ತಿರುವ ಇವರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ. ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಇವರು ಕೆಲವು ಬಾರಿ ತಮ್ಮ ನೇರ ನುಡಿಗಳ ಮೂಲಕ ಹಲವು ವಿವಾದಗಳಲ್ಲಿ ಸಿಲುಕಿದ್ದುಂಟು… 1938 ಮೇ 19 ರಂದು ಮಹಾರಾಷ್ಟ್ರದ […]
ಕಾವ್ಯಯಾನ
ಉರಿಪಾದವ ಊರಿನಿಂತ ಹೆಜ್ಜೆಗೆ ಎಸ್.ಕೆ.ಮಂಜುನಾಥ್ ಇಟ್ಟಿಗೆ ಕಲ್ಲು ಹೊತ್ತು ಕಟ್ಟಿದ ಯಾವ ಮಹಲು ನಮ್ಮದಲ್ಲ ನೆರಳನು ನೀಡುತ್ತಿಲ್ಲ ಕೈಬೀಸಿ ಕರೆದ ನಗರ ಕತ್ತು ಹಿಡಿದು ನೂಕಿತ್ತಲ್ಲ ಹಸಿವೆಂದು ಬಂದೆವು ಹಸಿವಿಗಾಗಿ ದುಡಿದೆವು ಮತ್ತೆ ಮತ್ತೆ ಹಸಿವ ಹೊಟ್ಟೆ ಬೆನ್ನ ಮೇಲೆ ಹೊರೆಯ ಕಟ್ಟೆ ಹಸಿವಿನಿಂದ ಅಳುವ ಮಗು ಬೀದಿಬದಿಯ ಅನ್ನದೊಡೆಯ ಕಾಣದಾದನು ಎಲ್ಲಿಗೋದನು ಕರೆತಂದು ಬಿಟ್ಟ ಯಾವ ಬಸ್ಸು ರೈಲು ಕಾಣುತ್ತಿಲ್ಲ ಈ ಹೆಜ್ಜೆಗೂ ಈ ದಾರಿಗೂ ನಂಟು ಇನ್ನು ಮುಗಿದಿಲ್ಲ ಹಸಿವ ಗಂಟುಮೂಟೆ ಕಟ್ಟಿಕೊಂಡು ತಲೆಯ […]
ಕಾವ್ಯಯಾನ
ಗಝಲ್ ವಿನಿ (ಬೆಂಗಳೂರು) ಮಾಮರದಲಿ ಕುಳಿತ ಕೋಗಿಲೆಯ ದನಿ ಮಧುರವಂತೆ ಗೆಳೆಯಾ ಭೃಂಗವದು ಗೂಯ್ ಎನುವ ಝೇಕಾರ ಸೆಳೆದಂತೆ ಗೆಳೆಯಾ ಭೋರೆನುವ ಜಲಪಾತದ ರಮಣೀಯ ದೃಶ್ಯವದು ಮನಮೋಹಕವಂತೆ ಕಾನನದ ರೌದ್ರ ಮೌನವದು ಎದೆನಡುಗಿಸಿದಂತೆ ಗೆಳೆಯಾ ಬೇಲೂರ ಹಳೇಬೀಡಿನ ಶಿಲ್ಪವದು ಶಿಲ್ಪಿಯ ಅದ್ಭುತ ಕೈಚಳಕವಂತೆ ಒಂದೊಂದು ಮದನಿಕೆಯರು ಸೌಂದರ್ಯದ ಪ್ರತೀಕದಂತೆ ಗೆಳೆಯಾ ಪ್ರಕೃತಿಯ ಮಡಿಲಲಿ ಮೈಮರೆತು ಸಂತಸವನು ಆಸ್ವಾದಿಸಿದಂತೆ ಹುಣ್ಣಿಮೆಯ ಪೂರ್ಣಚಂದಮನು ಸೊಗಸಾಗಿ ಕಣ್ಮನ ಸೆಳೆದಂತೆ ಗೆಳೆಯಾ ಸಪ್ತಸ್ವರಗಳ ನಾದದಲಿ ವಿಜಯಳು ದನಿಗೂಡಿಸಿದಂತೆ ಬಾಳ ಪಲ್ಲವಿಗೆ ನಿನ್ನೊಲವಿನ ಸಾಲುಗಳೆ […]
ಕವಿ-ಪರಿಚಯ
ಕಮಲಾದಾಸ್ ಶೀಲ ಮತ್ತು ಅಶ್ಲೀಲ ನಡುವಿನ ಗೋಡೆಯನ್ನು ಕೆಡುವಿದ ವಿವಾದಿತ ಮಲಯಾಳಂ ಮತ್ತು ಇಂಗ್ಲೀಷ್ ಲೇಖಕಿ ಕಮಲಾದಾಸ್..! ಕಮಲಾದಾಸ್ ರೆಂದರೆ ನಮ್ಮ ಕನ್ನಡದ ಲೇಖಕಿ ಕಮಲಾ ಹೆಮ್ಮಿಗೆಯವರಿಗೆ ಅದೆಂತದೋ ಪ್ರೀತಿ. ಈ ಲೇಖಕಿ ಕಮಲಾ ಹೆಮ್ಮಿಗೆಯವರ ಬಹುತೇಕ ಕೃತಿಗಳಲ್ಲಿ ಇದೇ ಕಮಲಾದಾಸ್ ರ ನೆರಳನ್ನು ಕಾಣಬಹುದು ಎಂಬ ಅಭಿಪ್ರಾಯ ನನ್ನದು. ಈ ಕಮಲಾ ಹೆಮ್ಮಿಗೆಯವರ ಪ್ರತಿ ಕೃತಿಗಳಲ್ಲೂ ನಾನು ಇದೇ ಕಮಲಾದಾಸ್ ರ ಛಾಪನ್ನು ಕಂಡಿದ್ದೇನೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗೆ ಹೇಳುತ್ತಲೇ ಈ ಕಮಲಾದಾಸ್ […]
ಕಾವ್ಯಯಾನ
ಹಾರು ಗರಿ ಬಿಚ್ಚಿ ಡಾ.ಗೋವಿಂದ ಹೆಗಡೆ ಏನಾದರೂ ಆಗಬೇಕು ಬಾಂಬಿನಂತಹ ಏನೋ ಒಂದು ಸ್ಫೋಟಿಸಿ ಹೊಗೆಯಲ್ಲಿ ಅಥವಾ ಅಗ್ನಿಗೋಲದಲ್ಲಿ ಮರೆಯಾಗಿ ಬೇಡ, ಚಾಚಿದ ಕಾಲಿಗೆ ಅಲ್ಲೆಲ್ಲೋ ಮರಳಲ್ಲಿ ಓಡುವ ಇರುವೆ ಕಚ್ಚಿ ‘ಹ್ಹಾ’ ಎಂದು ಏನಾದರೂ ನಡೆಯಲಿ ಇಲ್ಲಿ ಈ ನಿಷ್ಕ್ರಿಯತೆಯನ್ನು ಹೇಗೆ ಸಹಿಸುವುದು +++ ನಿಷ್ಕ್ರಿಯತೆ ನಿರಾಕರಣೆಯೇ ಅನುಭವವೇ ಆಭಾಸವೇ ಅಲ್ಲೆಲ್ಲೋ ಕೋಗಿಲೆ ಕೂಗಿದೆ ಹಕ್ಕಿ ಜೋಡಿ ಸಂಜೆ ಆಗಸವ ಸೀಳಿ ಹಾರಿವೆ ಎಲೆಯೊಂದು ಟಕ್ಕೆಂದು ತೊಟ್ಟು ಕಳಚಿದೆ ತುಸು ಆಲಿಸಿದರೆ ಕೊಂಬೆಯೊಳಗೆ ಹರಿವ ಜೀವರಸದ […]
ಪ್ರಬಂಧ
ಕರೊನ-ನೆಗಡಿ ಜ್ಯೋತಿ ಡಿ.ಬೊಮ್ಮಾ ಈಗ ಎಲ್ಲರೂ ಅಸ್ಪೃಶ್ಯರೆ ,ಒಬ್ಬರಿಂದ ಒಬ್ಬರು ದೂರ ಇರುವ ಅಸಹಾಯಕತೆ ತಂದೊಡ್ಡಿದ ಆ ಒಂದು ಚಿಕ್ಕ ವೈರಾಣುವಿಗೆ ಇಡೀ ಮನುಕುಲವೇ ಅಂಜಿ ನಡುಗುತ್ತಿದೆ. ಆಪ್ತವಾಗಬೇಕಿದ್ದ ಬಾಂಧವ್ಯಗಳು ಸಂಬಂಧಗಳು ಕರಗುತ್ತಿವೆ.ದೈಹಿಕ ಅಂತರ ಮನದಂತರವನ್ನು ದೂರಗೊಳಿಸುತ್ತಿದೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡಿಕೊಳ್ಳುತ್ತ ,ತಮ್ಮವರೊಡನೆಯೂ ಆಗಂತುಕರಂತೆ ಬದುಕುವಂತೆ ಮಾಡಿದ ಈ ಸಂದರ್ಭ ಯಾತಾನಾಮಯವಾಗಿದೆ. ಮನೆಯಲ್ಲಿ ಎಲ್ಲರೊಡನೆ ಬೆರೆತು ಊಟ ತಿಂಡಿ ಮಾಡುತಿದ್ದರೂ ಒಳಗೆಲ್ಲ ಎಕಾಂಗಿ ಭಾವ ,ಎನೋ ತಳಮಳ ಹೇಳಿಕೊಳ್ಳಲಾಗದ ಅಸಹಾಯಕತೆ ,ಹಿಂದೆಂದೂ ಕಾಡಿರದ ಅನಿಶ್ಚಿತತೆ ಮನ ಕೊರೆಯುವಂತೆ […]
ಕಾವ್ಯಯಾನ
ಕ್ವಾರಂಟೈನ್ ದಿನಗಳಿವು ಶಾಲಿನಿ ಆರ್. ಅಮ್ಮನ ಆ ಮೂರು ದಿನ ಕಾಗೆ ಮುಟ್ಟಿದೆ ಮುಟ್ಟ ಬೇಡ ಎಂದು ದೂರ ಕುಳಿತ ಮುಟ್ಟಿನ ಆ ದಿನ, ಇಂದು ನಾನೆ ಯಾರನ್ನು ಮುಟ್ಟಿಸಿಕೊಳದೆ ದೂರದಿ ನಿಂತು ದಿನ ದೂಡುತಿರು ಕ್ವಾರಂಟೈನ್ ದಿನ, ತರಕಾರಿ ಕೊಳ್ಳುವಾಗ ಮಾರುವವನಿಗಿಂತ ಮಾರು ದೂರ ನಿಂತು ಕೊಳ್ಳುವ ಕ್ವಾರಂಟೈನ್ ದಿನ, ದಿನಸಿ ಸಾಮಾನಿನ ಖರೀದಿಗೂ ಬಂದಿದೆ ಕೊಡುವ ಕೊಳ್ಳುವವನ ಮಧ್ಯೆ ಲಕ್ಣ್ಮಣರೇಖೆಯ ಕ್ವಾರಂಟೈನ್ ದಿನ ಪ್ರತಿಯೊಬ್ಬರ ಮಧ್ಯೆದಲ್ಲೂ ಸಿಲುಕಿ ನಲುಗುತಿದೆ ಮುಗಿಯಲಾರದೆ ನರಳುತಿದೆ ಕ್ವಾರಂಟೈನ್ ದಿನ, […]
ನಾನು ಓದಿದ ಪುಸ್ತಕ
ನಕ್ಷತ್ರ ಸೂಕ್ತ ಡಾಕ್ಟರ್ ಅನಸೂಯಾದೇವಿ ನಕ್ಷತ್ರ ಸೂಕ್ತ ಲೇಖಕಿ ಡಾಕ್ಟರ್ ಅನಸೂಯಾದೇವಿ ಪ್ರಕಾಶಕರು ಶ್ರೀ ಅನ್ನಪೂರ್ಣ ಪ್ರಕಾಶನ ಅಗ್ರಹಾರ ದಾಸರಹಳ್ಳಿ ಬೆಂಗಳೂರು ೫೦೦೦೭೯ ಮೊದಲ ಮುದ್ರಣ ೨೦೧೪ ಬೆಲೆ ರೂ.೧೫೦/ ಮೂರು ಪ್ರಬುದ್ಧ ಮುಖ್ಯಪಾತ್ರಗಳ ಸುತ್ತ ತಿರುಗುವ ಕಥೆ .ಅಡಿ ಟಿಪ್ಪಣಿ ಹೇಳುತ್ತದೆ “ನನಗೊಂದು ಮಗು ಬೇಕು” ನಾಯಕಿ ಮಾರ್ದವಿ ಸಂಗೀತಗಾರಳು ವಿದ್ಯಾವಂತೆ ಹಾಗೂ ಸೌಮ್ಯ ಸ್ವಭಾವದ ರೂಪಸಿ .ಅವಳ ಪ್ರತಿ ಮಧುಕರ ಕಾಲೇಜು ಉಪನ್ಯಾಸಕನಾಗಿದ್ದವನು ಹಾಗೂ ದೇವಾಲಯದ ಅರ್ಚಕ ಸಂಸ್ಕೃತ ವಿದ್ವಾಂಸ ಹಾಗೂ ಪಿ.ಎಚ್.ಡಿ. ಬರೆಯುತ್ತಿರುವ […]
ಕಾವ್ಯಯಾನ
ಮುಗಿಯದ ಹಾಡು ಎನ್.ಶೈಲಜಾ ಹಾಸನ ಇಡುವ ಹೆಜ್ಜೆ ಜೊತೆ ಜೊತೆಹೆಜ್ಜೆ ಕೂಡಿದ ಪಲುಕುಪರಿ ಪರಿಯ ಕುಲುಕುನಾನೆಂತು ಬಣ್ಣಿಸಲಿನೀ ಒಲಿದೆ,ನನ್ನ ಒಲಿಸಿದೆಬೆಸೆದಿದೆ ಬಂಧನಮನವೀಗ ಹೂ ನಂದನ ಒಲವ ಬಂಧನದಿ ಸುಖವಿದೆಸಿರಿಯಿದೆ,ಮಧುವಿದೆ,ಸವಿಯಿದೆನಡೆದ ಹಾದಿಯಲ್ಲಿಬಣ್ಣಗಳ ಚೆಲುವಿದೆ ಮೌನದ ಹಾಡಲಿನೂರು ಕವಿತೆಕಣ್ಣ ಬೆಳಕಲಿ ಪ್ರೇಮದಣತೆನೋಟದಂಚಿನಲಿಕೋರೈಸುವ ಮಿಂಚುನೋಟದಾಳದಲಿ ನಲ್ಮೆಯ ಜಲಪಾತತುಂಟ ನಗೆಯಲಿಸಾವಿರ ಪುಳಕ ಕನಸುಗಳ ಸಾಕಾರಎದೆಯ ಗೂಡಲಿನಿನ್ನೊಲುಮೆಯಹುಚ್ಚು ನದಿಯಲಿಕೊಚ್ಚಿ ಹೋದವಳುತೇಲಿ ತೇಲಿ ತೇಲುತಲಿಇರುವ ಹುಚ್ಚು ಖೋಡಿಮನಸ್ಸು ನನ್ನದು ಮುಟ್ಟಲಾಗದು,ತಟ್ಟಲಾಗದುಮೆಟ್ಟಲಾಗದುಮುಪ್ಪಾನು ಮುಪ್ಪಿಗೆಒಲುಮೆಯ ಮನಸಿಗೆಗೆಲುವಿನ ಸೊಗಸು ದಾಂಪತ್ಯ ಗೀತೆಗೆಅನುರಾಗದ ಪಲ್ಲವಿಶೃಂಗಾರದ ಅನುಪಲ್ಲವಿಮುಗಿಯದ ಹಾಡು ಇದು *******