Day: April 23, 2020

ಕಾವ್ಯಯಾನ

ಗಝಲ್  ಶಿವರಾಜ್. ಡಿ ನಮ್ಮ ಅಪಮಾನ ಅವಮಾನಗಳು ಇನ್ನೂ ಸತ್ತಿಲ್ಲ ಅಸ್ಪೃಶ್ಯತೆ ಅನಾಚರ ಅಜ್ಞಾನಗಳು ಇನ್ನೂ ಸತ್ತಿಲ್ಲ ನಿಮ್ಮ ಕಾಲಿನ ಚಪ್ಪಲಿ ಹೊಲೆದವರು ನಾವು ಚಪ್ಪಲಿ ಮೆಟ್ಟು ಬೆನ್ನಿಗೆ ಹೊದ್ದ ದರ್ಪ ಇನ್ನೂ ಸತ್ತಿಲ್ಲ ಮೀಸಲಾತಿ ಸ್ವಾಭಿಮಾನ ವಿರೋಧಿಸಿದವರು ನೀವು ನಮ್ಮನ್ನು ತುಳಿದ ನಿಮ್ಮ ದುರಭಿಮಾನ ಇನ್ನೂ ಸತ್ತಿಲ್ಲ ನಿಮ್ಮ ಮನೆಯ ಹೊಲ ಗದ್ದೆ ಚಾಕರಿಗೆ ಬೇಕು ನಾವು ನಮ್ಮನ್ನು ಹೊರಗಿಟ್ಟವರ ಮಡಿವಂತಿಕೆ ಇನ್ನೂ ಸತ್ತಿಲ್ಲ ನಿಮ್ಮ ಮಲಮೂತ್ರಗಳ ಹೊಲಸು ಹೊತ್ತವರು ನಾವು ಶ್ವಪಚರೆಂದು ಜರಿದ ಕೊಳಕು […]

ಪುಸ್ತಕ ದಿನ

ಇವತ್ತು ಪುಸ್ತಕ ದಿನ ಶಿವಲೀಲಾ ಹುಣಸಗಿ “One Best Book is equal to Hundred Good Friends one Good Friend is equal to library”                            -APJ Abdul kalam. ಇಂದು ವಿಶ್ವ ಪುಸ್ತಕ ದಿನವಾಗಿ ಇಡೀ ವಿಶ್ವವ್ಯಾಪಿ ಪ್ರಜ್ಞಾವಂತ ಪುಸ್ತಕಪ್ರೇಮಿಗಳು ಆಚರಿಸುತ್ತಿರುವುದು. ಅನೇಕ ಗ್ರಂಥಾಲಯಗಳಲ್ಲಿ ಉಚಿತ ಪುಸ್ತಕ ನೀಡಿ  ಓದಲು ಮುಕ್ತ ಅವಕಾಶ ಕಲ್ಪಿಸುತ್ತಿರುವುದು.ಒಂದು ಓದಿನ ಪರಂಪರೆಗೆ ಹೊಸ ಅಧ್ಯಾಯ ತೆರೆದಂತೆ.ಯ್ಯಾರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವರೋ ಅವರಿಗೆ ಮಾತ್ರ ಓದಿನ […]

ಕಾವ್ಯಯಾನ

ಮಾಯಾ ಪೆಟ್ಟಿಗೆ ಮತ್ತು ಬಾಂಬರುಗಳು    ನೂರುಲ್ಲಾ ತ್ಯಾಮಗೊಂಡ್ಲು ಅದೊ ಮಾಯಾ ಪೆಟ್ಟಿಗೆಯಿಂದವತರಿಸಿ  ಧಗ್ಗನೆದ್ದು ಬಂದಿವೆ  ಗೋದಿ ಗಾವಿಲರು, ಕೋತಿಗಳು ಅಥವ ಕಿಲಬುಕಾರರು  ಅಂದು ಕುಂಪಣಿಯ ಛೇಲಗಳಂತಿವರು  ಇಂದು ಈ ಹೊತ್ತಿಗೆ  ಅಲ್ಲಾವುದ್ದೀನನ ಚಿರಾಗ್ ಬೆಳಕಲಿ  ವಿಸ್ಮಯ ಲೋಕಕಂಡಿದ್ದ ಬಾಲ್ಯದಿನಗಳೇ ಚೆಂದ  ಇಂದು ಈ ೨೪/7 ನ ಪೆಟ್ಟಿಗೆಯಿಂದ ಪೊಳ್ಳು ಅಥವ ಬೆಂಕಿ ಕೆಕ್ಕರಿಸುವ  ದಿನಗಳು ಲೋಕವನ್ನೇ ಸುಡುತಿದೆ  ಅದೊ ಅಲ್ಲಿ ರಂಜನೆ, ರಮ್ಯಕಾಮ, ವಿನೋದ ವೂ ಉಂಟಲ್ಲ ಎಂದವನಿಗೆ ದುರಿತ ಕಾಲದ ವಿವೇಚನೆವಿಲ್ಲವೆಂದು ಮೌನವಾದೆ  ಗಡಿಗಳು ದೇಶಕೋಶಗಳಲಿ  ವಿಷವೇ ವಾಹಿನಿಯಾಗಿ […]

ಕಾವ್ಯಯಾನ

ಮುಕ್ತಿ ದೊರಕೀತು! . ತೇಜಾವತಿ ಹೆಚ್.ಡಿ ಅಂತಹದೊಂದು ಅಂತರಂಗದ ಮಿಡಿತವ ನೀ ಅರಿತು ಗೌರವಿಸುವಿಯಾದರೆ ಬರಡಾದ ಬಂಜರಿನಲ್ಲೂ ಉಕ್ಕುವ ಚಿಲುಮೆಗಾಗಿ ಕಾತರಿಸಿದ ಅವನಿಯ, ಕಾರ್ಗತ್ತಲ ಕಾನನದಲ್ಲೂ ನೆರಳಾಗಿ ಬರುವ ಕಂದೀಲನ್ನು ತಾನು ನಿರಾಕರಿಸಲಾರದು ಯಾವ ಭಾವವೂ ಆಕರ್ಷಣೆಯೆಂದು ಹಗುರ ನುಡಿಯದೆ ಕಾಮವೇ ಐಹಿಕದ ಸುಖವೆಂದು ನೀ ತಿಳಿಯದೆ ಅದರಾಚೆಗಿನ ಪವಿತ್ರತೆಯನೊಪ್ಪಿಕೊಳ್ಳುವೆಯಾದರೆ ಶಾಪಗ್ರಸ್ತ ಜೀವಕ್ಕೆ ಮುಕ್ತಿ ದೊರೆತು ಗಂಗೆಯ ಜಲದಿ ಪಾಪಗಳೆಲ್ಲ ತೊಳೆಯಲಿ ಒಳಗಿರುವ ಮಾಣಿಕ್ಯ ಪ್ರಜ್ವಲಿಸಲಿ ಅರಿವಿಗೆ ತಾನು ಸ್ಫೂರ್ತಿಯಾಗಲಿ *******

ಕಾವ್ಯಯಾನ

ಒಂದಿಷ್ಟು ಹಾಯ್ಕುಗಳು ಮದ್ದೂರು ಮದುಸೂದನ 1 ದೂರದ ಬೆಟ್ಟ ನುಣ್ಣಗೆ ಹೆಣ್ಣು ಕೂಡ 2 ಗಾಳಿ ಬಿಟ್ಟ ಪುಗ್ಗೆ ಒಮ್ಮೊಮ್ಮೆ ಬದುಕು 3 ತುದಿ ಕಾಣದ ಮುಗಿಲು ನಮ್ಮ ನಿಲ್ಲದ ಲಾಲಸೆ 4 ಬರಿದಾಗುತ್ತಿರುವ ಜೀವಜಲ ನಮ್ಮ ಜ್ಞಾನ 5 ಎಲ್ಲಿಯೂ ಒಂದಾಗದ ರೈಲಿನ ಹಳಿ ಜಾತಿಯತೆ 6 ಸದಾ ಕಾಡುವ ಕೊರತೆ ಮಾನವೀಯತೆ *********

Back To Top