ಕಾವ್ಯಯಾನ

ಸಖ-ಸಖಿ

two person holding hands while standing

ವಾಯ್.ಜೆ.ಮಹಿಬೂಬ

ವಿಧ-ವಿಧಗಳಿಗೆ ವಿದಾಯ ಹೇಳಿ ಒಂದಾಗೋಣ ಬಾ ಸಖಿ
ವಿಧಿ-ವಿಧಾನಗಳು ಬದಿಗಿಟ್ಟು ಪ್ರೀತಿ ಹಂಚೋಣ ಬಾ ಸಖ

ನೂರಿದ್ದರೇನು-? ನಮ್ಮನ ನಾವು ಸಂತೈಸಲು ಸಾವೆಂದರೆ
ಬೆರೆಸಿ ಸಂಸ್ಕಾರವ ಜಗ ಸಾರಿ,ಹೆತ್ತವರಾಗೋಣ ಬಾ ಸಖಿ

ಅತ್ತವರುದಕೆ ಕೈ ತುತ್ತಿಟ್ಟು,ಬಿತ್ತಿ ಬರೋಣು ಬಾ ಸಾಂತ್ವನ
ಮೆಟ್ಟಿ ನಿಂತು ರಟ್ಟೆಯರಳಿಸಿ,ಪೃಥ್ವಿ ಬೆಳೆಸೋಣ ಬಾ ಸಖ

ಯಾತರದ ಜೀವ-? ಕಾವ ಕಳೆದ ದೇಹಕೆ ಹೆಸರು ನಿಲ್ಲದು
ಆತ್ಮ ಸತ್ಯ ನಿತ್ಯ ಮೊಳೆಸುತ ಧರೆಯ ಸುತ್ತೋಣ ಬಾ ಸಖಿ

ಆಝಾದ್’ಮೈಖಾನೆಯೂ ಹೊಕ್ಕು ಬರುವ ಖಯಾಲಿ ಇದೆ
ಸಾಕಿಯಂತೆ ಮದುವಿಗೊಂದಿಷ್ಟು,ಸಾತ್ ನಿಲ್ಲೋಣ ಬಾ ಸಖಿ

Leave a Reply

Back To Top