Day: April 18, 2020

ಪ್ರಸ್ತುತ

ಕೋರೋನದ ತಲ್ಲಣಗಳು ಎನ್ . ಶೈಲಜಾ ಹಾಸನ,   ಕೋರೋನದ ತಲ್ಲಣಗಳು ಸರಾಗವಾಗಿ ಹರಿಯುತ್ತಿದ್ದ ಬದುಕಿನ ಬಂಡಿ ಕನಸಿನಲ್ಲಿಯೂ ನೆನೆಸದಂತೆ ನಿಂತು ಬಿಟ್ಟಿತು.ಅದೇನಾಗಿ ಹೋಯಿತೋ,ಕಂಡರಿಯದ ವೈರಾಣವೊಂದು ಇಡಿ ಪ್ರಪಂಚವನ್ನೆ ತಲ್ಲಣಗೊಳಿಸಿಬಿಟ್ಟಿದೆ. ದೂರದ ಅದ್ಯಾವುದೋ ದೇಶದಲ್ಲಿ ಅದೆಷ್ಟೋ ಪ್ರಾಣಗಳನ್ನು ತೆಗೆಯುತ್ತಿದೆ , ಅದೆಷ್ಟೋ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ ಅಂತೆ ಅಂತ ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಾ ಅಯ್ಯೋ ಪಾಪ ಅಂತ ಕನಿಕರ ಪಡುತ್ತಿರುವಾಗಲೆ ದಿಢೀರನೆ ನಮ್ಮ ದೇಶಕ್ಕೂ ಆ ಕ್ಷುದ್ರ ವೈರಸ್ ಬಂದು ಅಪ್ಪಳಿಸಿದೆ ಅಂತ ಗೊತ್ತಾದಾಗ ದಿಗಿಲು […]

ಕಾವ್ಯಯಾನ

ಮಣ್ಣಲಿ ಅವಿತ ಜೀವ ಟಿ.ಪಿ. ಉಮೇಶ್ ಬದುಕ ಸಂಪಾದನೆಗೆ ಹೋದ ಜೀವ ಬರಲಿಲ್ಲ ಮರಳಿ ಬೀದಿಯಲಿ ಅಲೆದು ತಿರುವಿನಲಿ ಕಳೆದು ಕಛೇರಿ ಕರ್ಮಗಳ ಫೈಲುಗಳಲಿ ಹೊರಳಿ ದಿನಸಿ ತರಕಾರಿ ಹಣ್ಣಿನಂಗಡಿಯಲಿ ಉರುಳಿ ಲೈಬ್ರರಿ ಸಿನೆಮಾ ಪಾರ್ಕು ಪಾರ್ಟಿಗಳ ಸಂಧಿಸಿ ನೋವಿನ ಮನೆಗೆ ಪ್ರೀತಿಯ ತರಲೋದ ಜೀವ ಮತ್ತೆ ಮರಳಿ ಬರಲಿಲ್ಲ ಜೀವ ಬರುವಾಗ ವಿಷದ ಮಳೆ ಬಂತಂತೆ ದಾರಿ ಅಲ್ಲಲ್ಲೆ ಹುಗಿದು ಹೋಯ್ತಂತೆ ಗಿಡ ಮರ ಪಶು ಪಕ್ಷಿ ಎಲ್ಲ ಉದುರಿ ಕರಗಿದುವಂತೆ ಜೀವವೂ ನೀರು ಆಹಾರವಿರದೆ […]

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ ಭಾರತಾಂಬೆಯ ಮಡಿಲಲ್ಲಿ ತ್ರಿವರ್ಣಗುಡಿಯು ರಾರಾಜಿಸುತ್ತಿದೆ ವೀರ ತ್ರಿರಂಗವೂ ತನ್ನದೇ ವಿಶೇಷತೆಯ ತಿಳಿಸಿ ಹೇಳುತ್ತಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ ಗಡಿ ಚಾಚಿ ಹರಡಿದೆ ಅಡಿಯಿಂದ ಮುಡಿಯವರೆಗು ವಿವಿಧತೆಯಲಿ ಏಕತೆಯ ತೋರುತ್ತಿದೆ ವೀರ ದೀಪಾವಳಿ ಕ್ರಿಸ್ಮಸ್ ಮೊಹರಂ ರಂಜಾನ್ ಹಬ್ಬಗಳೆಲ್ಲವ ಆಚರಿಸುತ್ತಿದೆ ಜಾತಿ – ಮತ ಬೇಧವಿರದೆ ಸರ್ವಧರ್ಮ ಸಹಿಷ್ಣುತೆ ಭ್ರಾತೃತ್ವ ಸಾರುತ್ತಿದೆ ವೀರ ಶಿಲಾಶಾಸನ ವೀರಗಲ್ಲು ಮಾಸ್ತಿಗಲ್ಲುಗಳು ಎಲ್ಲೆಂದರಲ್ಲಿ ಕಾಣಿಸುತ್ತವೆ ಪ್ರತಿಯೊಂದರಲ್ಲೂ ಹರಿದ ಪ್ರೇಮ, ತ್ಯಾಗ ನೆತ್ತರಿನ ಕತೆಯನ್ನು ನೆನಪಿಸುತ್ತಿದೆ […]

ನೆನಪು

ದಾವಣಗೆರೆಯ ಕಪ್ಪು ಗುಲಾಬಿ ಮಲ್ಲಿಕಾರ್ಜುನ ಕಡಕೋಳ ಕಣ್ಮರೆಯಾದ ದಾವಣಗೆರೆಯ ಕಪ್ಪು ಗುಲಾಬಿ ಆ ಪುಟ್ಟ ಕಂದನಿಗೆ ಎರಡು ವರ್ಷವೂ ತುಂಬಿರಲಿಲ್ಲ. ಮೊಲೆಹಾಲು ಕುಡಿಯುವ ಆ ಹಸುಳೆಯ ತಂದೆ ಜೈಲು ಸೇರಬೇಕಾದ ದುಃಸ್ಥಿತಿ. ಅವರೇನು ಕಳ್ತನ, ದರೋಡೆ ಮಾಡಿ ಜೈಲು ಸೇರಿದ್ದಲ್ಲ. ಮಿಲ್ಲುಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡಿ ಕಾರಾಗೃಹ ಸೇರಬೇಕಾಯ್ತು. ದಿಟ್ಟ ಹೋರಾಟಕ್ಕೆ ಸಿಕ್ಕ ಕೆಟ್ಟ ಪ್ರತಿಫಲ ಎಂಬಂತೆ ಒಂದಲ್ಲ ಎರಡು ಬಾರಿ, ಒಟ್ಟು ಹದಿನಾಲ್ಕು ವರುಷ ಈ ತಂದೆ ಜೈಲು ಪಾಲಾದರು. ತಂದೆಯ […]

ಕಾವ್ಯಯಾನ

ನಿಝಾ಼ರ್ ಖಬ್ಬಾನಿ ಅವರ ಪ್ರೇಮ ಕವಿತೆಗಳು ೧) ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಅವರು ನನ್ನ ಕಣ್ಣುಗಳಲ್ಲಿ ಮೀಯುವ ನಿನ್ನ ಕಂಡರು ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಆದರೆ ನಾನು ಬರೆದ ಪದಗಳಲ್ಲಿ ನಿನ್ನನ್ನು ಕಂಡರು ಪ್ರೇಮದ ಪರಿಮಳವನ್ನು ಮುಚ್ಚಿಡಲಾಗದು ೨) ನಾನು ನನ್ನ ಪ್ರೇಮಿಯ ಹೆಸರನ್ನು ಗಾಳಿಯ ಮೇಲೆ ಬರೆದೆ ನಾನು ನನ್ನ ಪ್ರೇಮಿಯ ಹೆಸರನ್ನು ನೀರಿನ ಮೇಲೆ ಬರೆದೆ ಆದರೆ ಗಾಳಿ ಒಬ್ಬ ಕೆಟ್ಟ ಕೇಳುಗ ನೀರು ಹೆಸರನ್ನು ನೆನಪಿಡುವುದಿಲ್ಲ ೩) […]

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-4 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು ಎಂದಿಗೂ ತೆರೆಯದಿರಲಿ! ರಾತ್ರಿ ಮುಚ್ಚಿದ ಬಾಗಿಲನ್ನು ಬೆಳಂಬೆಳಿಗ್ಗೆ ತೆಗೆದು, ಕಸ ಗುಡಿಸಿ ಮನೆಯ ಮುಂದೆ ನೀರು ಚಿಮುಕಿಸಿ, ರಂಗೋಲಿ ಹಾಕುವುದೆಂದರೆ ನನಗೆ ಒಂದು ಬಗೆಯ ಸಂಭ್ರಮ. ಅಂಗಳದಲ್ಲಿ ಮೊಗ್ಗು ಬಿರಿದು ಹೂವಾಗುವ ಚೆಂದ, ಚಿಲಿಪಿಲಿ ಕೂಗುತ್ತ ಹಕ್ಕಿಗಳು ಹಾರಾಡುವ ಸಡಗರ, ಮೂಡಣ ರಂಗಾಗಿಸಿ ಬರುವ ನೇಸರನ ಅಂದ…ಎಲ್ಲವುಗಳ ಮೇಲೆ ಕಿರುನೋಟ ಬೀರುವ, ತಂಗಾಳಿಗೆ ಮೈಮನ […]

Back To Top