ಕಾವ್ಯಯಾನ
ನೀರಿಗೇತಕೆ ಬಣ್ಣವಿಲ್ಲ? ಮಹಾಂತೇಶ ಮಾಗನೂರ ಅರೆ ಯಾರು ಹೇಳಿದರು ನೀರಿಗೆ ಬಣ್ಣವಿಲ್ಲವೆಂದು… ನೋಡಿಲ್ಲಿ ಕವಿತೆ ಸಾರಿ ಹೇಳುತಿದೆ ನೀರಿಗೂ ತರತರದ ಬಣ್ಣಗಳುಂಟು ಎಂದು ನೀರಿಗೇತಕೆ ಬಣ್ಣವಿಲ್ಲ? ಧುಮ್ಮಿಕ್ಕುವ ಜಲಪಾತದಿ ಹಾಲಿನಂತಹ ಬಿಳುಪು ಸೂರ್ಯಾಸ್ತದ ಸಮಯದಲ್ಲಿ ಸಾಗರದಿ ನಸುಗೆಂಪು ನೀರಿಗೇತಕೆ ಬಣ್ಣವಿಲ್ಲ? ಆಗಸದಿಂದ ನೋಡಿದೊಡೆ ನೀರೆಲ್ಲ ತಿಳಿನೀಲಿ ಕಾನನದಿ ಹರಿಯುವ ಜುಳು ಜುಳು ನೀರು ಪ್ರಕೃತಿಯ ಬಣ್ಣದಲಿ ನೀರಿಗೇತಕೆ ಬಣ್ಣವಿಲ್ಲ? ಬೆಟ್ಟಗಳಲಿ ಸುಳಿ ಸುಳಿದಾಡಿ ಹರಿಯುವುದು ಝರಿಯಾಗಿ,ಗಿಡ ಮರಗಳಿಗೆ ನೀಡುತ ಉಸಿರು ಕಾಣುವದು ಹಸಿರು ಹಸಿರು! ನೀರಿಗೇತಕೆ ಬಣ್ಣವಿಲ್ಲ? […]
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-9 ಸೇವಾನಿರತರ ಕೈ ಬಲಪಡಿಸಿ ‘ಧಿಡೀರ್ ಲಾಕ್ ಡೌನ್ ಕಾರ್ಮಿಕರ ಬದುಕನ್ನು ಮೂರಾಬಟ್ಟೆ ಮಾಡಿಬಿಟ್ಟಿತು’ ಎಂದು ಕೆಲವರು ಹಳಿಯುತ್ತಾ, ಮರುಗುತ್ತಾ ಕುಳಿತಿದ್ದಾರೆ. ಸರಕಾರ ಅವರಿಗೆ ಇದ್ದಲ್ಲಿಯೇ ಅನ್ನಾಹಾರ ನೀಡಲು ಹಲವು ಕ್ರಮ ಕೈಗೊಂಡಿದೆ. ಇಸ್ಕಾನ್, ಅದಮ್ಯಚೇತನ, ಇಂಪೋಸಿಸ್, ರಾಷ್ಟ್ರೀಯ ಸ್ವಯಂಸೇವಕ ಸಂಘ( ನನ್ನ ಅರಿವಿಗೆ ಬಂದಷ್ಟನ್ನೇ ಉಲ್ಲೇಖಿಸಿದ್ದೇನೆ)… ಅನೇಕ ಸಹೃದಯಿಗಳು ಸರಕಾರದ ಕೆಲಸಕ್ಕೆ ಪೂರಕವಾಗಿ ಕಾರ್ಮಿಕರ, ನಿರ್ಗತಿಕರ ನೆರವಿಗೆ ಶ್ರಮಿಸುತ್ತಿವೆ. ಇಂತಹ ಸೇವಾಕಾರ್ಯದಲ್ಲಿ ತೊಡಗಿರುವ ಮೈಸೂರಿನ […]
ಕಾವ್ಯಯಾನ
ತವರಿನ ಮುತ್ತು ರೇಮಾಸಂ ಡಾ.ರೇಣುಕಾತಾಯಿ.ಸಂತಬಾ ಮರೀಯಲಿ ಹ್ಯಾಂಗ ಮರೀ ಅಂದರ ಅವ್ವನ ಅರಮನೆಯ ಅಂತಃಪುರವ ತವರಿನ ಗಂಜಿಯು ಅಮೃತದ ಕಲಶವು ಅಕ್ಕರೆಯು ಅಚ್ಚಿನ ಬೆಲ್ಲವ ಮೆಲ್ಲದಂಗ// ತವರಿನ ಉಡುಗೊರೆ ಆಗೇನಿ ನಾನು ಅತ್ತೆಯ ಮನೆಗೆ ಮುತ್ತಾಗಿ ಬಂದೇನಿ ಕಟ್ಟ್ಯಾರ ಕಂಕಣವ ಕೂಡು ಬಾಳ್ವೆಗೆ ಹಾದಿಗೆ ಹರವ್ಯಾರ ಹವಳದ ಹೂವ// ತಾಯಂಗ ತಡದೇನ ಕಂಟಕದ ಕದನವ ಅಪ್ಪನಂಗ ತಪ್ಪಿಲ್ಲದ ಹೆಜ್ಜೆನ ಇಟ್ಟೇನಿ ನುಡಿದಂಗ ನೇರ ನಡೆ ನಡದೇನಿ ಮಾತನ್ಯಾಗ ಮಂದ್ಯಾಗೆಲ್ಲ ಹೌದಾಗೇನಿ// ಬಂಗಾರದಂತ ನನ್ನ ಅಣ್ಣರ ತಮ್ಮರ ಬಳುವಳಿಯಾಗಿ […]
ಕಾವ್ಯಯಾನ
ಗಝಲ್ ಎ.ಹೇಮಗಂಗಾ ಅವನಿಗಾಗಿ ಕಾದ ಕಣ್ಣ ನೋಟ ಮಬ್ಬಾಗಿದೆ ಸಖಿ ಅವನಿಲ್ಲದೇ ಯಾವ ಹಬ್ಬವೂ ಬೇಡವಾಗಿದೆ ಸಖಿ ವಚನ ಮೀರದವ ಇಂದು ವಚನ ಮೀರಿದನೇಕೋ ಮಿಲನವಿಲ್ಲದ ಯಮುನೆ ತಟ ಭಣಗುಡುತಿದೆ ಸಖಿ ಒಮ್ಮೆಗೇ ಬಂದು ಪರಿಪರಿಯಾಗಿ ಕಾಡುವ ಅವನು ರಾಸಲೀಲೆಯಿಲ್ಲದ ಬಾಳು ನೀರಸಗೊಂಡಿದೆ ಸಖಿ ಸುತ್ತಲಿನ ಗಾಳಿಯೂ ಅವನ ಬರುವಿಕೆ ಸೂಚಿಸುತ್ತಿಲ್ಲ ಸೊಲ್ಲಿಲ್ಲದೇ ನಗುವಿಲ್ಲದೇ ಮನ ಮಸಣವಾಗಿದೆ ಸಖಿ ತೊರೆದು ಹೋದ ಶ್ಯಾಮ ಮತ್ತೆ ಬರುವನೇ ಹೇಳು ಅವನಿರದೇ ಸಾವೇ ಹಿತವಾಗಿ ಹತ್ತಿರ ಸೆಳೆದಿದೆ ಸಖಿ ********