ಕಾರ್ಮಿಕ ದಿನದ ವಿಶೇಷ -ಲೇಖನ
ಲೇಖನ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಚಂದ್ರು ಪಿ ಹಾಸನ್ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಕಾಯಕವೇ ಕೈಲಾಸವೆಂಬ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ರ ಸನ್ನುಡಿ ಗಳಂತೆ ಭೂಮಿಯ ಪ್ರತಿಯೊಂದು ಜೀವಿಯು ಜನಿಸಿದ ಮೇಲೆ ತನ್ನದೇ ಆದ ನಿತ್ಯಕರ್ಮ ಗಳಿಂದ ಜೀವನ ನಡೆಸಬೇಕಾಗುತ್ತದೆ ಕಾರ್ಮಿಕ ಜೀವನಶೈಲಿಯು ಅತ್ಯಂತ ಸುಂದರ ಹಾಗೂ ಸಮಾಧಾನಕರವಾಗಿದೆ . ಕರ್ಮಯೋಗಿ ಕಾರ್ಮಿಕ ಅವನು ಎಲ್ಲ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಕೊಂಡು ತನಗಾಗಿ, ತನ್ನವರಿಗೆ, […]
ಪುಸ್ತಕ ಸಂಗಾತಿ
ಅಪರೂಪದ ಕತೆಗಳು ಕೆ.ವಿ. ತಿರುಮಲೇಶ್ ಅಪರೂಪದ ಕತೆಗಳು ಕಥಾಸಂಕಲನ ಕೆ.ವಿ. ತಿರುಮಲೇಶ್ ಅಭಿನವ ಪ್ರಕಾಶನ. ಇದು ಒಂದು ಅಪೂರ್ವವಾದ ಕಥೆಗಳ ಸಂಕಲನ ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲಿ ಒಟ್ಟು ಹದಿನಾರು ಕತೆಗಳಿವೆ. ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ತಿರುಮಲೇಶರು ಈ ಕತೆಗಳನ್ನು ಹೇಳಿದ್ದಾರೆ. ಅವರ ಕವನ ಸಂಕಲನಗಳು – ಅಕ್ಷಯ ಕಾವ್ಯ,ಅರಬ್ಬಿ, ಅವಧ, ಏನೇನ್ ತುಂಬಿ,ಪಾಪಿಯೂ, ಮಹಾಪ್ರಸ್ಥಾನ, ಮುಖವಾಡಗಳು,ಮುಖಾಮುಖಿ,ವಠಾರ. ಕಥಾಸಂಕಲನಗಳು- ನಾಯಕ ಮತ್ತು ಇತರರು, ಕೆಲವು ಕಥಾನಕಗಳು,ಕಳ್ಳಿ ಗಿಡದ ಹೂ,ಅಪರೂಪದ ಕತೆಗಳು. ಕಾದಂಬರಿಗಳು- ಆರೋಪ, ಮುಸುಗು, ಅನೇಕ. […]
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-1 ಆಯ್ಕೆ ಬೆಳೆಗಾರರ ಕೈಯಲ್ಲಿಯೇ ಇದೆ ಮೈಸೂರಿನ ನೈಸರ್ಗಿಕ ಕೃಷಿಕ ಕೈಲಾಸಮೂರ್ತಿಯವರು ನಿಸರ್ಗದೊಂದಿಗೆ ಒಡನಾಡುತ್ತ ತಮ್ಮ ಬಾಳ ಇಳಿಸಂಜೆಯನ್ನು ಅರ್ಥಪೂರ್ಣವಾಗಿ ಕಳೆಯುತ್ತಿರುವವರು. ಮನಸೊಬಾ ಪುಕುವೋಕಾ ಅವರ ಪ್ರಭಾವಕ್ಕೊಳಗಾದವರು.. ಬೆಳೆಗಿಂತ ಹೆಚ್ಚು ಕಳೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುತ್ತೇನೆ ಎಂದು ತಮ್ಮ ಬಗ್ಗೆ ತಾವೇ ತಮಾಷೆ ಮಾಡಿಕೊಳ್ಳುವ ಕೈಲಾಸಮೂರ್ತಿಯವರ ಬಿತ್ತನೆಯಿಂದ ಬೆಳೆದ ಭತ್ತದ ಕೃಷಿ ನೋಡಲು ಕೆಲ ಕಾಲದ ಹಿಂದೆ ಅವರ ಗದ್ದೆಗೆ ಹೋಗಿದ್ದೆ. ‘ಮುಂಗಾರಿನಲ್ಲಿ ಬೆಳೆದ ಭತ್ತದ […]
ಕಾರ್ಮಿಕ ದಿನದ ವಿಶೇಷ-ಕವಿತೆ
ಕವಿತೆ ಕಾಯಕದ ದಿನ ನಗರ ಸತ್ತು ಹೋಗಿದೆ ನಾಗರಾಜ ಹರಪನಹಳ್ಳಿ ಕಾಯಕದ ದಿನ ನಗರ ಸತ್ತು ಹೋಗಿದೆ ಕಾಯಕ ಜೀವಿಗಳ ದಿನ ನಗರ ಸತ್ತು ಹೋಗಿದೆ ಬೆವರು ಸುರಿಸಿ ಬದುಕುವ ಜನರ ಹೊರದಬ್ಬಿದೆ ಮಹಲುಗಳ ಕಟ್ಟಿ ಗುಡಿಸಲಲಿ ಬದುಕಿದ ಜನ ಗುಳೆಬಂದ ನಾಡಿಗೆ ಹಸಿವು ಹೊತ್ತು ಮರಳಿದ್ದಾರೆ ಮಡಲಲ್ಲಿ ಕಣ್ಣೀರು ನಿಟ್ಟುಸಿರು ತುಂಬಿಕೊಂಡು ಭೂಮಿ ಬಿಟ್ಟು ಬಂದದ್ದಕ್ಕೆ ಪರಿತಪಿಸಿದ್ದಾರೆ ಈ ಬಿಸಿಲಿಗೂ ಕರುಣೆಯಿಲ್ಲ ಕಾಯಕದ ಮಂತ್ರ ಕೊಟ್ಟ ಬಸವಣ್ಣ, ದುಡಿಮೆಯಲ್ಲಿ ಪಾಲು ಕೇಳಿದ ಕಾರ್ಲಮಾರ್ಕ್ಸ ಮಣ್ಣಲ್ಲಿ ಮಣ್ಣಾಗಿ […]