Day: April 2, 2020

ಕಾವ್ಯಯಾನ

ಮಾರ್ಕೆಟ್ಟು, ಮಾತು ಮತ್ತು ಶಬರಿ ಅಂಜನಾ ಹೆಗಡೆ ಬ್ರ್ಯಾಂಡೆಡ್ ಶರ್ಟು ತೊಟ್ಟು ಸರ್ವಾಲಂಕೃತನಾದ ರಾಮ ಮಾರ್ಕೆಟ್ಟಿನಲ್ಲಿ… ಇದೇ ಮೊದಲಭೇಟಿ!! ಕಣ್ಣಗಲಿಸಿ “ಹೌ ಆರ್ ಯೂ” ಎಂದು ಕೈ ಕುಲುಕಿದೆ ಥಟ್ಟನೆ ಪ್ರತ್ಯಕ್ಷನಾಗಿದ್ದಕ್ಕೆ ಒಂದು ಪ್ರೀತಿಯ ಆಲಿಂಗನ… ಬಿಲ್ಲು ಬಾಣಗಳೆಲ್ಲಿ ಎಂದೆ… ಉತ್ತರವಿಲ್ಲ ಕಣ್ಣು ಮಿಟಕಿಸಿದ ಥೇಟು ಕಮರ್ಷಿಯಲ್ ಸಿನೆಮಾವೊಂದರ ನಾಯಕನಂತೆ… ಕಣ್ತಪ್ಪಿಸಿಕೊಂಡಿದ್ದ ಟೀನೇಜಿನ ಕನಸೊಂದು ವನವಾಸದಿಂದ ಮಾರ್ಕೆಟ್ಟಿಗೆ… ಮಿಟಕಿಸಿದ್ದು ಎಡಗಣ್ಣೋ ಬಲಗಡೆಯದೋ ಗೊಂದಲ… ಕೌಸಲ್ಯೆ ಸುಮಿತ್ರೆ ಅಹಲ್ಯೆ ಸೀತೆ…. ಎಲ್ಲರ ಪ್ರೀತಿಯ ರಾಮ ಅದ್ಯಾರ ಹಂಬಲಗಳ ಉತ್ಸವಮೂರ್ತಿ […]

ಗಝಲ್

ಗಝಲ್ ವಿನಿ ಬೆಂಗಳೂರು ಒಲವ ಬಂಧದಲಿ ಮನವು ಉಲ್ಲಾಸದಿ ತೇಲುತಿದೆಯಲ್ಲ ಗೆಳತಿ ಬಾಳ ಪಯಣದಲಿ ಸಂತಸವೆ ತುಂಬುತಿದೆಲ್ಲ ಗೆಳತಿ ಪ್ರಕೃತಿಗೆ ಮತ್ತೆ ಚೈತ್ರ ಮೂಡಿಸಿ ವಸಂತ ನಗುತಿದೆಯಲ್ಲ ನೋಡು ಕವಿ ಮನದಲಿ ಶೃಂಗಾರ ಕಾವ್ಯಕೆ ಮುನ್ನುಡಿ ಬರೆದಿದೆಯಲ್ಲ ಗೆಳತಿ ಮೊದಲ ಮಳೆಗೆ ಹೂಗಳರಲಿ ಸುಗಂಧವನು ಬಿರುತಿದೆಯಲ್ಲ ಇಲ್ಲಿ ಭೃಂಗವದು ಮಕರಂದ ಬಯಸಿ ಹೂಗಳಲಿ ಮಧುವ ಹೀರುತಿದೆಯಲ್ಲ ಗೆಳತಿ ಬೀಸುವ ಗಾಳಿಯಲಿ ಮಾಧುರ್ಯ ತುಂಬಿ ಸೆಳೆಯುತಿದೆಯಲ್ಲ ತಂಪಾದ ಮನದಲಿ ಹೊಸ ಕನಸುಗಳು ಮೂಡುತಿದೆಯಲ್ಲ ಗೆಳತಿ ಕಣ್ಗಳು ತುಂಬಿ ಬಯಕೆಗಳನು […]

ಕಾವ್ಯಯಾನ

ಬರಿಗಾಲಿನ ಭಾರತ ಶಿವಶಂಕರ ಸೀಗೆಹಟ್ಟಿ. ಹಸಿವು ಇವರ ಹೊಟ್ಟೆಗಿದೆ ಬಟ್ಟೆ ಜೋಳಿಗೆಗಳು ಇವರ ಹೆಗಲಿಗಿವೆ ಅರಸಿ ಹೊರಟಿದ್ದಾರೆ ಊರ ಹಾದಿ ದಾರಿ ಸಾಗುತ್ತಿಲ್ಲ ದಿನವೂ ಮೂರು ಮೈಲಿ ಕಾಲಿಗೂ ಕಾಲಕ್ಕು ಹೊಂದಾಣಿಕೆ ತಪ್ಪಿ ಹೋಗಿದೆ ನಡೆಯುವವರ ಕಾಲುಗಳು ಬಿಗಿಯುತ ರಕ್ತ ಸುರಿಸುತ್ತಿವೆ ಅಲ್ಲಲ್ಲಿ ಕಂಡು ಕೇಳುವ ಬೂಟುಗಾಲಿನ ಸದ್ದುಗಳು ಗಾಬರಿ ಹುಟ್ಟಿಸುತ್ತಿವೆ ಹಸಿವು ಕಾಣದವರು ಆಹಾರದ ಉಸ್ತುವಾರಿಗಳಾಗಿದ್ದಾರೆ ದೂರದೂರಿಗೆ ಹೊಟ್ಟೆ ಹೊರೆಯಲು ಬಂದವರು ಒಟ್ಟಿಗೆ ನಡೆಯುತ್ತಿದ್ದಾರೆ ಹೊತ್ತು ಹೊತ್ತಿಗೂ ಇಲ್ಲಿ ಹೊಟ್ಟೆ ಸಾಕದವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ […]

ಇತರೆ

ಸಂಸ್ಕೃತಿ ಉಳಿಸಿ  ಶೈಲಜಾ ಹಾಸನ ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ        ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ  ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು  ಇಂದು ಅಗತ್ಯ ವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿ ಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ.ಆದರೆ ಅದು ಹೇಗೆ  ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಉದ್ಭವವಾಗುವುದು  ಸಹಜ.       ಮಕ್ಕಳು ತೋಟದಲ್ಲಿ ಅರಳಿ […]

ಕಾವ್ಯಯಾನ

ನನ್ನ ದನಿ ವೀಣಾ ನಿರಂಜನ ‘ನಿನ್ನನ್ನು ಬಂಧಿಸಲು ಆಜ್ಞೆಯಾಗಿದೆ. ನೀನು ಯಾರು?’ ಕೇಳಿದರವರು ‘ನಾನು ಕವಿತೆ’ ಎಂದೆ. ಅವರೆಂದರು – ‘ಹಾಗಾದರೆ ನಿನ್ನ ನಾಲಿಗೆ ಸೀಳಬೇಕು.’ ನಾನು ತಣ್ಣಗೆ ‘ಉಸಿರು’ ಎಂದೆ. ಅವರು ಮತ್ತೆ ನಿನ್ನ ಕತ್ತು ಹಿಸುಕಬೇಕು’ ಎಂದರು ನನ್ನುಸಿರು ಗಾಳಿಯಲ್ಲಿ ಬೆರೆತು ಹೋಗಿದೆ’ ಎಂದೆ! ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ !! ಎಲ್ಲೋ ದೂರದಲ್ಲಿ ಯಾರೋ ಅಳುವ ದನಿ ನಾನು ತಟ್ಟಿ ಮಲಗಿಸುತ್ತಿದ್ದೇನೆ ನನ್ನ ಮಗುವನ್ನು ಎದೆಯ ಬೇಗುದಿಗೆ ಸಾಂತ್ವನ ಹೇಳಬೇಕಿತ್ತಲ್ಲ! ** ನಾನು […]

ಗಝಲ್ ಲೋಕ

‘ಗಝಲ್ ಲೋಕ’ ಬಸವರಾಜ್ ಕಾಸೆಯವರ ಹೊಸ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಮೊದಲ ಅದ್ಯಾಯ ಒಲವಿನ ಅಧಿವೇಶನವೇ ಈ ಗಜಲ್ ಗಜಲ್ ಎನ್ನುವ ಪದ ಕೇಳಿದರೆ ಸಾಕು ಇದರಲ್ಲಿ ಏನೋ ಇದೆ ಎಂದು ತನ್ನಷ್ಟಕ್ಕೇ ತಾ ಹಿಡಿದಿಟ್ಟು ಕಾಡುವ ಒಂದು ಭಾವ ಕಣ್ಣು ಮುಂದೆ ಬರುತ್ತದೆ. ಹೌದು ಗಜಲ್ ಎಂದರೆ ಹಾಗೆ ಮನಸ್ಸಿಗೆ ಮುಟ್ಟಿ ಬಿಟ್ಟ ನಂತರವೂ ಸಹ ಆವರಿಸುವ ಒಂದು ಬೆಚ್ಚನೆ […]

ಸ್ವಾತ್ಮಗತ

ನಾಳೆ ಬಪ್ಪುದು ಕೆ.ಶಿವುಲಕ್ಕಣ್ಣವರ ಹಲವಾರು ಪಲ್ಲಟಗಳನ್ನು ಹೊಂದಿರುವ ‘ನಾಳೆ ಬಪ್ಪುದು’ ಎಂಬ ಹನುಮಂತ ಹಾಲಿಗೇರಿಯವರ ನಾಟಕವೂ..! ಸಾಹಿತಿ ಹನುಮಂತ ಹಾಲಿಗೇರಿಯವರು ತಮ್ಮ ‘ಏಪ್ರಿಲ್ ಫೂಲ್’ ಕಥೆಗಳ‌ ಸಂಕಲನದ ‘ಏಪ್ರಿಲ್ ಪೂಲ್’ ಕಥೆಯನ್ನು ಆಧರಿಸಿ ‘ನಾಳೆ ಬಪ್ಪುದು’ ಎಂಬ ನಾಟಕವನ್ನು ಬರೆದಿದ್ದಾರೆ… ಈ ನಾಟಕವನ್ನು ಓದುತ್ತಿದ್ದಂತೆ, ಇದು ಮುಖ್ಯವಾಗಿ ನಾಟಕಕಾರ ಹನುಮಂತ ಹಾಲಿಗೇರಿಯವರ ಫ್ಯಾಂಟಸಿ ನಾಟಕದಂತೆ ನನಗೆ‌ ಭಾಸಾವಾಯಿತು… ಯಾರಿಗೆ ಗೊತ್ತು ಇದು ಮುಂದೆ ವಾಸ್ತವವಾಗಲೂಬಹುದು. ಇರಲಿ. ಮುಂದೆ ಈ ನಾಟಕದ ಹಂದರ ನೋಡೋಣ… ಇಲ್ಲಿ ಮುಖ್ಯವಾಗಿ ನನಗೆ […]

ನಾನು ಓದಿದ ಪುಸ್ತಕ

ಹಾಣಾದಿ ಕಪಿಲ ಪಿ.ಹುಮನಾಬಾದ ಕೆಚ್ಚೆದೆಯ ಹೋರಾಟ “ಹಣಾದಿ”. ಹೌದು ಕೆಲವು ದಿನಗಳ ಹಿಂದೆ ಅಬ್ದುಲ್ ಹೈ (ಹೈ.ತೋ) ರವರ ಕಾವ್ಯಮನೆ  ಪ್ರಕಾಶನದಲ್ಲಿ ಮುದ್ರಿತವಾಗಿ ಲೇಖಕರು ಮಿತ್ರರಾದ “ಕಪಿಲ್ ಹುಮನಾಬಾದಿ” ರವರ “ಹಣಾದಿ” ಕಿರು ಕಾದಂಬರಿ ಲೋಕಾರ್ಪಣೆ ಗೊಂಡು ಓದುಗರನ್ನು ತನ್ನತ್ತ ಸೆಳೆದಿದೆ ಅದರಲ್ಲಿ ನಾನು ಒಬ್ಬ. ಅತಿ ಚಿಕ್ಕ ವಯಸ್ಸಿನಲ್ಲಿ ಅನುಭವಿ ಲೇಖಕನಂತೆ ಅದ್ಭುತವಾಗಿ ಹೆಣೆದಿದ್ದಾರೆ. ಬಾದಾಮು ಗಿಡದ  ಸುತ್ತ ಕತೆ ಹೆಣೆದ ರೀತಿ ವಿಶೇಷ ಎನ್ನವಂತಿದೆ. ಅಪ್ಪನನ್ನು ನೋಡಲು ಹಳ್ಳಿಗೆ ಮರಳಿದ ಮಗನಿಗೆ ಕಂಡಿದ್ದು ವಿಚಿತ್ರವಾದ […]

ಲಹರಿ

ನಿನಗಾಗಿ ಶಾಲಿನಿ ಆರ್. ಹೌದು, ಬೆಳಗ್ಗೆ ಬೆಳಗ್ಗೆ ಆ ಪ್ರಾಥಃ ಸ್ಪರ್ಶ ಇರತ್ತಲ್ಲ ಅದನ್ನ ಆಸ್ವಾದಿಸೋದೆ ಒಂದು ಹಬ್ಬ ನನಗೆ.ಇದನ್ನ ಬರಿವಾಗ ಕೋಗಿಲೆ ಹಾಡ್ತಿದೆ. ಜಸ್ಟ ವಾಕಿಂಗ್ ಮುಗ್ಸಿ ಬಂದೆ. ಬಂದ್ ಕೂಡ್ಲೆ ಮನದಲ್ಲಿ ಒಂದು ಆಲಾಪನೆ ಶುರುವಾಯಿತು. ಅದಕ್ಕೆ ಈ ನೂರಾರು ಪದಗಳ ಹರವನ್ನ ,ಬದುಕಿನ‌ ಹದಗಳನ್ನ ಹರಡಿಕೊಂಡು ಕುಳಿತೆ.    ಐದುವರಿಯಿಂದ ಆರು ಇಪ್ಪತ್ತು ರವರೆಗೆ  ವಾಕಿಂಗ್  ಹೋಗಿದ್ದೆ.ದಾರಿಲಿ, ಪಾರಿಜಾತದ ಪರಿಮಳ ,ಮಲ್ಲಿಗೆ ಸುವಾಸನೆ, ದೂರದಲ್ಲಿ ಕೂಗೋ ನವಿಲು, ಕೋಗಿಲೆಯ ಆ ಪಂಚಮಸ್ವರ ಜೊತೆಗೆ […]

ಕಾವ್ಯಯಾನ

ಶಬರಿ ಡಾ.ಗೋವಿಂದ ಹೆಗಡೆ ಯಾವುದೋ ಬೇಡರ ಹುಡುಗಿ ಹೆಸರಿಲ್ಲದೇ ಮರೆಗೆ ಸಲ್ಲುವ ಬದಲು ‘ಶಬರಿ’ ಎನಿಸಿ ತಪಕೆ ಹೆಸರಾಗಿ ನಿಂತಿದ್ದು ರಾಮನ ಮಹಿಮೆಯೇ ಶಬರಿಯದೇ ಕನಸ ಕಂಡಿರಬಹುದೇ ಹುಡುಗಿ ಕುದುರೆಯೇರಿ ಬರುವ ಯಾವುದೋ ಉತ್ತರದ ರಾಜಕುವರನದು ಹುಡುಗಿ ಹೆಣ್ಣಾಗಿ ಹಣ್ಣಾಗಿ ಹಪ್ಪು ಮುದುಕಿಯಾಗುವವರೆಗೂ ಕಾದು ಕಾದು ಪಾತ್ರ ಬದಲಿಸಿ ಹರಿದಿರಬೇಕು ನದಿ ಕಾದ ಕಾಯುವ ಕಾವಿನಲ್ಲಿ ಕಾಮನೆಗಳು ಕರಗಿ ನೋಡುವ ಊಡುವ ಬಯಲ ಬಯಕೆ ಉಳಿದು ಕಣ್ಣು ಮುಚ್ಚುವ ಮೊದಲು ಕಂಡೇನೇ ಎಂದು ಕಣ್ಣ ಕೊನೆಯಲ್ಲೆ ಜೀವವನಿರಿಸಿ […]

Back To Top