Day: April 28, 2020

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-10 ಅನ್ನದಾತಾ ಸುಖಿಭವ.. ಮನೆಯ ಬಾಗಿಲು ಕಿಟಕಿಗಳನ್ನು ಸದಾ ಮುಚ್ಚಿಟ್ಟರೂ ಅಡುಗೆ ಮನೆಯಲ್ಲಿ ತುಂಬಿಟ್ಟ ಡಬ್ಬಿಗಳು ಖಾಲಿಯಾದಾಗ ಬಾಗಿಲು ತೆಗೆದು ಕಿರಾಣಿ ಅಂಗಡಿಗೆ ಧಾವಿಸುತ್ತೇವೆ. ಸೊಪ್ಪು ತರಕಾರಿ ಎಂಬ ವ್ಯಾಪಾರಿಗಳ ಕೂಗು ಕೇಳುದಾಗ ಕಿಟಕಿ ಬಾಗಿಲನ್ನು ಕೊಂಚ ತೆಗೆದು ಅವರು ತಂದಿರುವ ತರಕಾರಿಯಲ್ಲಿ ನಮಗೆ ಬೇಕಾದದ್ದೇನಾದರೂ ಇದೆಯೇ ನೋಡುತ್ತೇವೆ. ಬೇಕಾದ್ದನ್ನೆಲ್ಲ ಖರೀದಿಸಿ ರುಚಿಕಟ್ಟಾಗಿ ಅಡುಗೆ ಮಾಡಿ ಉಣ್ಣುವಾಗ ನಾವು ಇವುಗಳನ್ನೆಲ್ಲ ಬೆಳೆದ ರೈತರ ಬಾಳು ತಣ್ಣಗಿರಲೆಂದು […]

ಕಾವ್ಯಯಾನ

ಗಝಲ್ ಎ.ಹೇಮಗಂಗಾ ನಡುರಾತ್ರಿ ಎದ್ದು ಹೋಗುವ ಮುನ್ನ ಒಮ್ಮೆ ಹಿಂತಿರುಗಿ ನೋಡಬೇಕಿತ್ತು ಯಶೋಧರೆಯ ಅಳಲ ಕೊನೆಯ ಬಾರಿಗಾದರೂ ಕೇಳಬೇಕಿತ್ತು ನೀನೇನೋ ಕಷ್ಟ, ಕೋಟಲೆಯ ಸಂಕಟ ಕಳೆಯಲು ಹೊರಟವನು ಸಂಗಾತಿಯಿರದ ಒಂಟಿ ಜೀವದ ನೋವಿಗೆ ಮಿಡಿಯಬೇಕಿತ್ತು ಸಿರಿ ಸಂಕೋಲೆ ಕಳಚಿ ಯಾರ ಗೊಡವೆಯಿರದೇ ನಡೆದುಹೋದೆ ನೀನೇ ಎಲ್ಲವೂ ಎಂದುಕೊಂಡವಳ ಬಾಳು ಬರಡು ಮಾಡಬಾರದಿತ್ತು ಧ್ಯಾನ,. ಚಿಂತನೆಗಳಲ್ಲಿ ತೊಡಗಿದವನಿಗೆ ಸಂಸಾರದ ಬಂಧವೆಲ್ಲಿ ? ನಿನ್ನನೇ ನಂಬಿದ ಜೀವವ ಧಿಕ್ಕರಿಸಿದ ಯಾತನೆ ಅರಿವಾಗಬೇಕಿತ್ತು ಗೌತಮ ಬುದ್ಧನಾಗಿ ಅರಿವಿನ ಗುರುವಾಗಿ ನಂಬಿದವರ ಉದ್ಧರಿಸಿದೆ […]

ಕಾವ್ಯಯಾನ

ಇಷ್ಟೇ ಸಾಕು! ಮಮತ ಕೆಂಕೆರೆ ಮನೆಯಲ್ಲಿ ಇಲ್ಲದಿದ್ದರೂ ಮನಸಲ್ಲಿ ಇದ್ದರೆ ಸಾಕು ನನಸಲ್ಲಿ ಸಿಗದಿದ್ದರೂ ಕನಸಲ್ಲಿ ಬಂದರೆ ಸಾಕು ಹೆಸರಲ್ಲಿ ಸೇರದಿದ್ದರೂ ಉಸಿರು ಮಿಡಿದರೆ ಸಾಕು ಗಳಿಸಿ ಗೌರವ ತರದಿದ್ದರೂ ಗೆಳೆಯನಾಗಿದ್ದರೆ ಸಾಕು ಇಷ್ಟವೆ ಇಲ್ಲವೆಂದಾದರೂ ಕಷ್ಟ ಕೊಡದಿದ್ದರೆ ಸಾಕು ಅಪ್ಪಿ ಮುದ್ದಾಡದಿದ್ದರೂ ಬೆಪ್ಪಳನ್ನಾಗಿಸದಿದ್ದರೆ ಸಾಕು ಜೊತೆಜೊತೆ ಸಾಗದಿದ್ದರೂ ಹಿತವ ಬಯಸಿದರೆ ಸಾಕು ಹೂನಗೆಯ ತುಳುಕಿಸದಿದ್ದರೂ ಹಗೆಯಾಗದಿದ್ದರೆ ಸಾಕು ದೇಹ-ಮೋಹ ಬೆಸೆಯದಿದ್ದರೂ ಜೀವ-ಭಾವ ಬೆಸೆದರೆ ಸಾಕು ದೂರದಲ್ಲಿ ಎಲ್ಲೋ ನೆಲೆಸಿದರೂ ಎದುರಾದಾಗ ವಾರೆನೋಟ ಸಾಕು ********

ಕಾವ್ಯಯಾನ

ಗಝಲ್ ತೇಜಾವತಿ.ಹೆಚ್.ಡಿ ಗರ್ಭದ ಕೊರಳ ಹಿಂಡಿ ಬಸಿದ ದ್ರವದಲ್ಲಿ ತೇಲುತ್ತಾ ಬಂದೆಯಲ್ಲ ನವಮಾಸದ ನೋವ ಒಂದೇ ಅಳುವಲ್ಲಿ ಮಾಯ ಮಾಡಿದೆಯಲ್ಲ ತಾಯ್ತನದ ಸುಖವ ಕ್ಷಣಕ್ಷಣವೂ ಸವಿದು ಪುಳಕಿತಗೊಂಡಿದ್ದೆ ಬಯಸಿದವಳು ಬಗಲಿಗೆ ಬಂದೊಡನೆ ಅಮ್ಮನ ಮಡಿಲು ಮರೆತೆಯಲ್ಲ ವೃದ್ಧಾಪ್ಯದಲಿ ನೆರಳಾಗುವೆಯೆಂದು ನೂರಾರು ಭವಿಷ್ಯದಕನಸು ಕಂಡಿದ್ದೆ ರೆಕ್ಕೆ ಬಲಿತೊಡನೆ ಗುಟುಕುಕೊಟ್ಟ ಗೂಡುತೊರೆದು ಹಾರಿಹೋದೆಯಲ್ಲ ತಾಯ ಹಾಲುಂಡ ಕೂಸಿದು ವಾತ್ಸಲ್ಯದ ಪರ್ವತವೆಂದುಕೊಂಡಿದ್ದೆ ಕರುಳಬಳ್ಳಿ ಹರಿದು ಕಿಂಚಿತ್ತು ಕರುಣೆಯೂ ಇಲ್ಲದಾಯಿತಲ್ಲ ನಿನ್ನ ಪಡೆದ ಈ ಜೀವ ಏಳೇಳು ಜನ್ಮದ ಪುಣ್ಯವೆಂದುಕೊಂಡಿದ್ದೆ ನಿತ್ಯವೂ ಮಾತೃಹೃದಯ […]

ಕಥಾಯಾನ

ಈಗೊಂದು ಉತ್ತರ ಸಿಗದಾ ಪ್ರಶ್ನೆ ಸುಮಂತ್ ಎಸ್ ಅದೊಂದು ಸಂಜೆ, ನನ್ನ ಕೈಯಲ್ಲಿ ಆಕೆಯ ಕೈ ಇತ್ತು. ಕಣ್ ಮಿಟುಕಿಸದೆ, ಚಂದ್ರ ನಕ್ಷತ್ರಗಳನು ಎಣಿಸುವ ಹಾಗೆ ಆಕೆ ನನ್ನನ್ನೇ ನೋಡುತ್ತಿದ್ದಳು, ನಾನು ಆಕೆಯನ್ನು.ಸೂರ್ಯಾಸ್ತಮಾನದ  ಮೋಡಗಳಂತಾಗಿದ್ದ ಕಣ್ಣುಗಳು ನನಗೆ ಏನನ್ನೊ ಹೆಳಬೇಕೆಂದು ಚಟಪಡಿಸುತಿದ್ದನ್ನು ಕಂಡೆ. ಇದೇನು ಮೊದಲಬಾರಿಯಲ್ಲ, ಅದೆಷ್ಟೋ ಬಾರಿ ಹೀಗೆ ಏನನ್ನೊ ಹೇಳಬೇಕೆಂದು ಪ್ರಯತ್ನಿಸಿ ಸೂತಿದ್ದು ಗೂತ್ತಿದೆ ನನಗೆ,  ಅದೇ, ಅನಿಶ್ಚಿತತೆ, ನಾಚಿಕೆ,ಭಯ,ಗೂಂದಲ ಇಂದಿಗೂ ಅವಳ ಕಣ್ಣಾ ಪರದೆ ಹಿಂದಿನಿಂದ ಇಣುಕುತ್ತಲೇಯಿತ್ತು. ಎಲ್ಲಾ ನದಿಗಳು ಸೇರಿದರೂ ಒಂದೇತರನಾಗಿರುವ […]

Back To Top