Month: April 2020

ಅಪ್ಪಟ ಕನ್ನಡದ ವಿನಯ

ಅಪ್ಪಟ ಕನ್ನಡದ ವಿನಯ ಮಲ್ಲಿಕಾರ್ಜುನ ಕಡಕೋಳ . ನಿನ್ನೆ ವರನಟ ಡಾ. ರಾಜಕುಮಾರ ಜನುಮದಿನ (೨೪.೦೪.೧೯೨೯). ಅಕ್ಷರಶಃ ಅವರು ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರು. ಅದರಲ್ಲೂ ಕನ್ನಡ ವೃತ್ತಿರಂಗಭೂಮಿಯ ಅನನ್ಯ ಕಾಣ್ಕೆ. ಕನ್ನಡ ಹೇಗೆ ಮಾತಾಡಬೇಕು, ಪದ – ಅಕ್ಷರ ಹೇಗೆ ಉಚ್ಛರಿಸಬೇಕು, ಮಾತೆಂಬುದು ಜೋತಿರ್ಲಿಂಗ, ಮುತ್ತಿನಹಾರ, ಎಂಬ ಕಸ್ತೂರಿಕನ್ನಡ ಬಾಳಿದವರು. ಅಷ್ಟುಮಾತ್ರವಲ್ಲ ಅಭಿನಯವೆಂದರೆ, ನಟನಾಗುವುದೆಂದರೆ ವಿನಯಶೀಲ ನಾಗುವುದೆಂಬುದನ್ನು ಬದುಕಿ ತೋರಿದವರು. ತೋರಿಕೆಯ ಬದುಕಲ್ಲ. ಓದಿದ್ದು ನಾಲ್ಕನೇ ಈಯತ್ತೆ. ರಂಗಬದುಕಿನ ಓದು ಸಾಗರೋಪಾದಿ. ಬಾಲ್ಯದಲ್ಲಿ ಉಂಡುಡಲು ಅವರಿಗೆ ಯಥೇಚ್ಛವಾಗಿದ್ದುದು […]

ಕಾವ್ಯಯಾನ

ಶಂಕಿತರು-ಸೊಂಕಿತರು ನಾಗರಾಜ ಮಸೂತಿ.. ಹೆಜ್ಜೆ ಗುರುತುಗಳು ಮಾಯವಾಗಿ ಕಂಗಾಲದ ರಸ್ತೆಗಳು, ಮೇಲ್ಮುಖವಾಗಿ ಮುಗಿಲನ್ನೆ ದಿಟ್ಟಿಸುವ ಗಿಡಮರಗಳು, ಗಿಜಗೂಡುವ ಸರಕಾರಿ ಕಛೇರಿಗಳ ಖಾಲಿ ಮನಸ್ಥಿತಿಯ ಗೋಡೆಗಳು, ಬೆಳಕು ಕಾಣದೆ ಕತ್ತಲಾವರಿಸಿದ ದವಾಖಾನ ಕೋಣಿಗಳು, ಫಿನಾಯಿಲ್ ವಾಸನೆ ಆವರಿಸಿಕೊಂಡು ತಳತಳ ಅನ್ನುತ್ತಿವೆ ಅಮವಾಸ್ಯೆ ಪೂಜೆಗೆ ಸಿದ್ಧವಾದಂತೆ, ಓಣಿಯ ಬೀದಿಗಳೆಲ್ಲ ಲೊಚುಗುಟ್ಟುತ್ತಿವೆ ಸಿಂಗಾರಗೊಂಡು, ಗಟಾರಗಳೆಲ್ಲ ಕಂದಮ್ಮಗಳಂತೆ ಪೌಡರ್ ಬಳಿದುಕೊಂಡು ವಧು ವರರ ವೇದಿಕೆಗೆ ಸಿದ್ಧವಾದಂತಿವೆ ಸಂಜೆ ಹೊತ್ತಿಗೆ ಕತ್ತಲೆ ಮೆತ್ತಿಕೊಂಡ ಆವರಣಕ್ಕೆಲ್ಲ ಬೀದಿ ದೀಪಗಳು ಬೆಳಕು ಹರಿಸಿ, ಕಛೇರಿ ಕಟ್ಟಡಗಳು, ಲೈಟ್ […]

ಕಾವ್ಯಯಾನ

ಯಾತ್ರಿಕ ವಿಭಾ ಪುರೋಹಿತ್ ಜಗದೆದೆಯ ತುಂಬ ಹತ್ತಿ ಉರಿಯುತ್ತಿದೆ ಬತ್ತಲಾರದ ಜ್ವಾಲೆ. ಹಾದಿ ಮುಗಿಯುವುದಿಲ್ಲ ಮುಗಿದರದು ಹಾದಿಯಲ್ಲ ! ಯಾತ್ರೆ ಮುಂದುವರೆದಿದೆ ಹೊಸ ಹೊಸ ದೇಶ ಪ್ರದೇಶವನು ತೆಕ್ಕೆಯೊಳಗೆ ನುಂಗಿದೆ. ನೂರು,ಸಾವಿರ,ಲಕ್ಷಗಳ ದಾಟುತ್ತಲಿದೆ ರಕ್ತಬೀಜಾಸುರನ ನೆತ್ತರಿನ ಹನಿಗಳಿಗಿಂತ ವಿಷಾಣು ಹರಡುತ್ತ,ಹಬ್ಬುತ್ತ ರಕ್ಕಸನಂತೆ ಮೀರಿ ಬೆಳೆಯುತ್ತಲಿದೆ ಮನುಕುಲವ ಕಂಗೆಡಿಸುತ್ತಿದೆ. ಹೊರಗಿಂದ ಬಂದವರು ಸುಮ್ಮನೆ ಬರಲಿಲ್ಲ ಇಂದಿಗೂ ಹಂಚುತ್ತಲೇ ಇರುವರು ಬೆನ್ನು ಹಿಂದೆ ನಿಂತು ಚೂರಿ ಹಾಕಿದರು ಕಾಡುಪಾಪದ ರುಚಿಗೆ ಸೋತವರು ಸಂಜೆ ಹಕ್ಕಿಯ ದನಿಗೆ ಕಿವುಡರಾದವರು ನೋವು ಕೇಕೆ […]

ನಾನು ಓದಿದ ಪುಸ್ತಕ

ದಿ ಲಾಸ್ಟ್ ಲೆಕ್ಚರ್ ಮೂಲ: Ryandy pash ಕನ್ನಡಕ್ಕೆ: ಎಸ್. ಉಮೇಶ್ “ಅದ್ಭುತಕನಸುಗಳನ್ನು ಕಾಣಲು ಪ್ರಯತ್ನಿಸಿ, ನಿಮ್ಮ ಮಕ್ಕಳಿಗೂ ಸಹ ಅಂತಹ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿ. ಮಕ್ಕಳು ಕತ್ತಲಿನ ಪ್ರಪಂಚದಿಂದ ಹೊರಬಂದು ಬೆಳಕಿನ ಸುಂದರ ಪ್ರಪಂಚವನ್ನು ನೋಡುವಂತೆ ಮಾಡಿ – Ryandy pash ಇದೊಂದು ಸಾವಿನ ಸಾಂಗತ್ಯದಲ್ಲಿ ಬದುಕಿನ ಸಾರ್ಥಕತೆ ಸಾರಿದ ಕಂಪ್ಯೂಟರ್ ವಿಜ್ಞಾನಿಯ ರೋಚಕ ಕಥೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂ. ಮ. ಸಾ. ಸಂ. ನೀಡುವ ಪ್ರತಿಷ್ಠಿತ *ಅರಳು ಸಾಹಿತ್ಯ ಪ್ರಶಸ್ತಿ” ಪಡೆದ […]

ಕಾವ್ಯಯಾನ

ಮಬ್ಯಾನ್ ಮಾತು! ರುದ್ರಸ್ವಾಮಿ ಹರ್ತಿಕೋಟೆ ಮಬ್ಯಾನ್ ಮಾತು! ೧) ಧ್ಯಾನಕ್ಕೆ ಕುಳಿತವರನ್ನು ಹೆಚ್ಚು ಕಾಡುವುದು ಅವಳು ಮತ್ತು ಅವಳು ಮಾತ್ರ! ೨) ಅವಳು ಪತಿವ್ರತೆ ಎಂದು ಮಾತಾನಾಡುವವರು ಅವಳ ಬೆತ್ತಲೆ ಕನಸ ಕಾಣದೆ ಇರರು! ೩) ಅವನು ಎಷ್ಟು ರಸಿಕನೆಂಬುದು ಅವನ ಹೆಂಡತಿಗಿಂತ ಅವನ ಸೆಕ್ರೆಟರಿಗೆ ಗೊತ್ತು! ೪) ಕವಿ ಬರೆದದ್ದನ್ನು ಕವಿಯೇ ಅರ್ಥೈಸಿದರೆ ರಸಭಂಗವಾಗುತ್ತದೆ! ೫) ಇಲ್ಲಿ ಹೆಚ್ಚು ಪ್ರೀತಿಸುವವರು ಹುಚ್ಚರಾಗುತ್ತಾರೆ ಇಲ್ಲವೇ ಹುತಾತ್ಮರಾಗುತ್ತಾರೆ! ೬) ಗಂಡಿಗಿಂತ ಹೆಣ್ಣು ಮೊದಲ ರಾತ್ರಿ ಏನೂ ಗೊತ್ತಿಲ್ಲದಂತೆ ನಟಿಸುತ್ತಾಳೆ! […]

ನಾನು ಓದಿದ ಪುಸ್ತಕ

ಮೌನ ಮಂದಾರ ಕವಿ: ವಾಣಿ ಮಹೇಶ್ ಕವಯಿತ್ರಿ ವಾಣಿ ಮಹೇಶ್ ರವರ “ಮೌನಮಂದಾರ” ಪುಸ್ತಕ *ಎಪ್ಪತ್ತು ಕವನಗಳ ಮುಪ್ಪುಬರುವವರೆಗೂ ಓದಬೇಕು ಬೆಪ್ಪ* ಎನ್ನುವ *ಮೌನ ಮಂದಾರ*         ಮನದಲ್ಲಿ ಮತ್ತೇರಿ ಮಿಡಿದ ಭಾವನಾತ್ಮಕತೆ ಗೆ ಕೊನೆಯಿಲ್ಲ, ಎತ್ತೆತ್ತ ಸುತ್ತಿದರು ಅಂತ್ಯವಿಲ್ಲ, ಹೊತ್ತು ಮುಳುಗಿದರೂ ಪತ್ತೆ ಮಾಡುವ ಅವಕಾಶವನ್ನು ಕೊಡುವುದಿಲ್ಲ, ಅತ್ತುಅತ್ತು ಉತ್ತರಗಳು ಕಣ್ಣೀರ ಹಾಕದಿದ್ದರೆ ಮತ್ತೇರಿದ ನುಡಿಗಳು ಮೌನಿಯಾಗಿಸಿ ಸುತ್ತುವರಿಯುತ್ತವೆ. ನುಡಿಯದೇ ಭಾವನಾಕ್ಷರಗಳ ಪೋಣಿಸಿ ಗೀಚುತ್ತಿದ್ದರೆ, ಆ “ಮೌನ ಮಂದಾರ ಪುಷ್ಪ ವಾಗಿ ತನ್ನ ಸಕಲ ಶ್ರೇಷ್ಠ […]

ಕಾವ್ಯಯಾನ

ನಿವೇಧನ ಬಿ ಅರುಣ್ ಕುಮಾರ್ ಮಧುರ ಭಾವಗಳ ಸಂಕ್ರಮಣ ಪ್ರೇಮಾಮೃತದ ಹೊಂಗಿರಣ ಬಂಧು ಬಾಂಧವರ ತೋರಣ ಸಪ್ತಪದಿ ಮಾಂಗಲ್ಯಧಾರಣ ಓಲಗ ಅಕ್ಷತೆಯ ಸಂಗಮ ಭಾವ ಭಾವಮೈದುನ ಬಾಂಧವ್ಯ ಕುಟುಂಬಗಳೆರಡರ ಕಲ್ಯಾಣ ಗಟ್ಟಿಮೇಳದ ಪರಿಣಯ ರತಿ ಪತಿ ದಾಂಪತ್ಯ ಸ್ಫೂರ್ತಿ ಮಂದ ಪ್ರಕಾಶ ಅರುಂಧತಿ ದೇಹವೆರಡು ಸೀತಾರಾಮ ದಾರಿಯೊಂದು ಅರ್ಧನಾರೀಶ್ವರ ಅನುರಾಗದ ಮಧು ಚಂದ್ರ ಮಿಥುನ ಹಕ್ಕಿಗಳ ಸಮ್ಮಿಲನ ಹಸಿರುಮಲೆಗೆ ಗರ್ಭಧಾರಣ ಶುಭ ಕಾಮನೆಯ ಹೂರಣ ಸರಸ ವಿರಸಗಳ ಆಲಿಂಗನ ಸಹಬಾಳ್ವೆಯಲಿ ಸಂತಾನ ರಂಗಿನ ರಂಗೋಲಿ ಅಂಗಳ ಮನ […]

ಕಾವ್ಯಯಾನ

ಬದುಕು ಎನ್. ಆರ್. ರೂಪಶ್ರೀ ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ********

ಪ್ರಸ್ತುತ

ಪ್ರಕೃತಿ ಹೇಳಿದ ಪಾಠ ಗಣೇಶ್ ಭಟ್ ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ವ್ಯಕ್ತಿ ಅಥವಾ ಸಮುದಾಯದ ಬದುಕಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕವಲ್ಲ. ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ; ಅದು ತಿಳಿಯದಾಗ ನಾವು ಆಕಸ್ಮಿಕ ಎಂದು ಹೇಳುತ್ತೇವೆ ಅಥವಾ ಹಾಗೆ ಭಾವಿಸುತ್ತೇವೆ. ಇಡೀ ಮಾನವ ಕುಲವನ್ನು ನಡುಗಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಪಿಡುಗೂ ಕೂಡಾ ಆಕಸ್ಮಿಕವಲ್ಲ. ಪ್ರಕೃತಿಯ ಮೇಲೆ ಮಾನವ ನಡೆಸಿದ, ನಡೆಸುತ್ತಿರುವ ದೌರ್ಜನ್ಯದ ಪ್ರತಿಕ್ರಿಯೆ ಅಷ್ಟೇ. ಕಳೆದ ಮೂರು ಶತಮಾನಗಳಿಂದ ಮಾನವ ನಿರ್ಮಿಸಿಕೊಂಡಿದ್ದ ಆರೋಗ್ಯ ಸೌಲಭ್ಯಗಳು, ಆಧುನಿಕ […]

ಕಾವ್ಯಯಾನ

ಬದುಕು ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ******

Back To Top