ನಿವೇಧನ

ಬಿ ಅರುಣ್ ಕುಮಾರ್
ಮಧುರ ಭಾವಗಳ ಸಂಕ್ರಮಣ
ಪ್ರೇಮಾಮೃತದ ಹೊಂಗಿರಣ
ಬಂಧು ಬಾಂಧವರ ತೋರಣ
ಸಪ್ತಪದಿ ಮಾಂಗಲ್ಯಧಾರಣ
ಓಲಗ ಅಕ್ಷತೆಯ ಸಂಗಮ
ಭಾವ ಭಾವಮೈದುನ ಬಾಂಧವ್ಯ
ಕುಟುಂಬಗಳೆರಡರ ಕಲ್ಯಾಣ
ಗಟ್ಟಿಮೇಳದ ಪರಿಣಯ
ರತಿ ಪತಿ ದಾಂಪತ್ಯ ಸ್ಫೂರ್ತಿ
ಮಂದ ಪ್ರಕಾಶ ಅರುಂಧತಿ
ದೇಹವೆರಡು ಸೀತಾರಾಮ
ದಾರಿಯೊಂದು ಅರ್ಧನಾರೀಶ್ವರ
ಅನುರಾಗದ ಮಧು ಚಂದ್ರ
ಮಿಥುನ ಹಕ್ಕಿಗಳ ಸಮ್ಮಿಲನ
ಹಸಿರುಮಲೆಗೆ ಗರ್ಭಧಾರಣ
ಶುಭ ಕಾಮನೆಯ ಹೂರಣ
ಸರಸ ವಿರಸಗಳ ಆಲಿಂಗನ
ಸಹಬಾಳ್ವೆಯಲಿ ಸಂತಾನ
ರಂಗಿನ ರಂಗೋಲಿ ಅಂಗಳ
ಮನ ಮನೆಯೇ ಮಂದಿರ.
ಅವಳಿಲ್ಲದ ಕ್ಷಣ ಕಳಾಹೀನ
ತುಡಿತ ಮಿಡಿತಗಳ ರಿಂಗಣ
ಕೋಪ ತಾಪಕೆ ಗಂಡಸುತನ
ತಾಳ್ಮೆ ಹೊಂದಿಕೆ ನಿವೇದನ.
********
Very nice ಬಿ ಅರುಣ್ ಕುಮಾರ್ sir
ತುಂಬಾ ಚೆನ್ನಾಗಿದೆ ಸರ