ಕಾವ್ಯಯಾನ

ಮಬ್ಯಾನ್ ಮಾತು!

Two Round Mirror With Beige Frames

ರುದ್ರಸ್ವಾಮಿ ಹರ್ತಿಕೋಟೆ

ಮಬ್ಯಾನ್ ಮಾತು!


೧) ಧ್ಯಾನಕ್ಕೆ ಕುಳಿತವರನ್ನು
ಹೆಚ್ಚು ಕಾಡುವುದು
ಅವಳು ಮತ್ತು ಅವಳು ಮಾತ್ರ!

    ****

೨) ಅವಳು ಪತಿವ್ರತೆ
ಎಂದು ಮಾತಾನಾಡುವವರು
ಅವಳ ಬೆತ್ತಲೆ ಕನಸ
ಕಾಣದೆ ಇರರು!

 *****

೩) ಅವನು ಎಷ್ಟು
ರಸಿಕನೆಂಬುದು
ಅವನ ಹೆಂಡತಿಗಿಂತ
ಅವನ ಸೆಕ್ರೆಟರಿಗೆ ಗೊತ್ತು!


೪) ಕವಿ ಬರೆದದ್ದನ್ನು
ಕವಿಯೇ ಅರ್ಥೈಸಿದರೆ
ರಸಭಂಗವಾಗುತ್ತದೆ!

 *****

೫) ಇಲ್ಲಿ ಹೆಚ್ಚು
ಪ್ರೀತಿಸುವವರು
ಹುಚ್ಚರಾಗುತ್ತಾರೆ
ಇಲ್ಲವೇ
ಹುತಾತ್ಮರಾಗುತ್ತಾರೆ!


೬) ಗಂಡಿಗಿಂತ ಹೆಣ್ಣು
ಮೊದಲ ರಾತ್ರಿ
ಏನೂ ಗೊತ್ತಿಲ್ಲದಂತೆ
ನಟಿಸುತ್ತಾಳೆ!


೭) ಅವ್ವನ ಹರಿದ
ಕುಪ್ಪಸ ನೋಡಿ
ನಗುತ್ತಿದ್ದವರ ಕಂಡು,
ಅಪ್ಪನ
ಅಂಗಿಯೊಳಗಿನ
ತೂತುಬಿದ್ದ ಬನಿಯನ್
ಅಳುತ್ತಿತ್ತು!

==========

One thought on “ಕಾವ್ಯಯಾನ

Leave a Reply

Back To Top