ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ವಿದಾಯ ಹೇಳಲೇ ಕವಲೊಡೆದ ದಾರಿಗೆ
ದೂರ ಸರಿಯಲೇ ಒಲವಿರದ ದಾರಿಗೆ

ಘಮವಿಲ್ಲದ ಪಾರಿಜಾತ ನೊಂದಿದೆ
ಕಳಚಿ ಹೋಗಲೇ ನಾಕವಿರದ ದಾರಿಗೆ

ಪಡೆದುದೆಲ್ಲ ನಶ್ವರವಾಗಿ ಮೌನವಾದೆ
ಮರೆತು ಬಿಡಲೇ ಸುಖವಿರದ ದಾರಿಗೆ

ಕಲ್ಪನೆಯ ಭಾವನೆಗಳ ಬಳ್ಳಿ ರೋಧಿಸಿದೆ
ಹರಿದು ತೊರೆಯಲೇ ನಲಿವಿರದ ದಾರಿಗೆ

ತಪ್ಪಿದೆ ಯಾನದ ಹರಿಗೋಲು ಮಾಜಾ
ಕಳೆದು ಕೂಡಲೇ ಕರುಣೆವಿರದ ದಾರಿಗೆ


About The Author

Leave a Reply

You cannot copy content of this page

Scroll to Top