ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಅವಳಿರಬೇಕಿತ್ತು ಅಲ್ಲಿ
ಅವನ ಜೊತೆಯಲ್ಲಿ
ಅವನ ಬದುಕಲ್ಲಿ
ಅವನ ಬಾಳಿನಲ್ಲಿ

 ಆಗಬೇಕಿತ್ತು ಅವಳಿಗೆ
ಅವನ ಮಗನ ತಾಯಿಯಾಗಿ
ಅವನ ಬಾಳ ಸಂಗಾತಿಯಾಗಿ
ಅವನ ಹೃದಯದ ಬಡಿತವಾಗಿ

ಬಯಕೆಯಿತ್ತು ಅವಳಿಗೆ
ಬಾಹುಗಳಲ್ಲಿ ಬಂಧಿಯಾಗಲು
ಸುಖ ದುಃಖಗಳಲಿ ಜೊತೆಯಾಗಲು
ಅವನ ತುಟಿಗಳ ನಗುವಾಗಲು

ಕನಸಿತ್ತು ಅವಳಿಗೆ
ಅವನ ಕನಸಿಗೆ ಜೀವ ತುಂಬಲು
ಅವನ ಕವಿತೆಗೆ ಪದವಾಗಲು
ಮಧುಮಂಚದ ವದುವಾಗಲು

ಅಂತರಂಗದ ಭಾವನೆಗಳು
ಹೊರಬರಲಾರದ ಕನಸುಗಳು
ಬಲಿಪಶುವಾದ ಹೂಗಳು
ಅವಲೊಳಗಿನ ಅವಶೇಷಗಳು


About The Author

Leave a Reply

You cannot copy content of this page

Scroll to Top