ಕಾವ್ಯ ಸಂಗಾತಿ
ಸುಕನಸು
ಗಜಲ್


ಬಾ ಅಪರಿಚಿತರಾಗೊಣ ಮತ್ತೊಮ್ಮೆ ಗೆಳೆಯ
ನೀ ಮರೆತು ಸಹ ಸಿಗದಿರು ಇನ್ನೊಮ್ಮೆ ಗೆಳೆಯ
ಸದಾ ನಿನ್ಹೆಸರ ಜಪಿಸುವ ಮನಕೇನು ಸಂತೈಸಲಿ
ನೆನಪುಗಳ ಕೊಂದ್ಹೋಗೂ ಬಂದೊಮ್ಮೆ ಗೆಳೆಯ
ಜೊತೆ ಇಟ್ಟ ಹೆಜ್ಜೆಗಳ ಲೆಕ್ಕ ಎಲ್ಲಿದೆ ಸಂತೃಪ್ತಿಯಷ್ಟೆ
ಮುಂದೆಂದೂ ಸಿಗದಂತೆ ಶಪಥ ಮಾಡೊಮ್ಮೆ ಗೆಳೆಯ
ಮನ ತಬ್ಬಿಬಾಗಿದೆ ತಳ್ಳಿ ಹೋದ ಕಾರಣ ತಿಳಿಯದೆ
ತೊರೆದು ಹೋದ ನೆಪ ಹೇಳಿ ಹೋಗೊಮ್ಮೆ ಗೆಳೆಯ
ಸುಮದ ಪರಿಮಳವೆ ಅಪಾರವಾಯಿತು ನವಿರಲ್ಲವ
ಒಲವಿಲ್ಲ ಲಾಲಶೆಯಷ್ಟೆಯೆಂದು ಹೇಳೊಮ್ಮೆ ಗೆಳೆಯ
ಸುಕನಸು




ಚೆಂದ ಭಾವ ಡಾ. ಶ್ರೀಶೈಲ ಮಾದಣ್ಣವರ
Thanks alot sir
✍ಸುಕನಸು
ಸುಂದರ ಬಹುಅಲಾಮತ್ ಕವಾಫಿ, ಸೊಗಸಾದ ಗಜಲ್