ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಕುಳಿತು ಮಾತನಾಡಿಸಿ ಎದ್ದು ಹೋದ ಜಾಗವೀಗ ಖಾಲಿ
ಖಾಲಿ ಅನಿಸುತಿದೆ
ನಕ್ಕು ನಗಿಸಿ ಮನವನು ಗೆದ್ದು ಹೋದ ಜಾಗವೀಗ ಖಾಲಿ
ಖಾಲಿ ಅನಿಸುತಿದೆ

ಹೋದರೆ ಹೋಗಿ ನಿಮಗೂ ಏನೊ ಅನಿವಾರ್ಯತೆಗಳು
ಇರಬಹುದು
ಭಾವ ಬಸಿದ ಕವಿತೆಗಳನು ಕದ್ದು ಹೋದ ಜಾಗವೀಗ ಖಾಲಿ
ಖಾಲಿ ಅನಿಸುತಿದೆ

ನೊಂದು ಬೆಂದು ನರಳಿದ ಗಾಯಗಳ ಗುರುತು ಸಿಗದಂತೆ
ಅಳಿಸಿ ಹಾಕಿದಿರಿ
ಕಲಕಿದ ಕೊಳ ತಿಳಿಯಾಗಿಸಿ ಇದ್ದು ಹೋದ ಜಾಗವೀಗ ಖಾಲಿ
ಖಾಲಿ ಅನಿಸುತಿದೆ

ಬೇಸರಗೊಂಡ  ಜೀವಗಳಿಗೆ ಎಡೆಯ ತುಂಬ ಸಂತಸವನು
ಮನದಿ ಬಡಿಸಿದಿರಿ
ಹಾಲುಣಿಸಿ ಹಾಲಾಹಲ ಮೆದ್ದು ಹೋದ ಜಾಗವೀಗ ಖಾಲಿ
ಖಾಲಿ ಅನಿಸುತಿದೆ

ಹೃದಯ ಹೃದಯಗಳನು ಬೆಸೆದು ಹಂದರವನು ಹಾಕಿ ಕರೆದು
ಕೂರಿಸಿದಿರಿ
ಜ್ಯೋತಿ ಬೆಳಕಿನಲಿ ತಮವು ಬಿದ್ದು ಹೋದ ಜಾಗವೀಗ ಖಾಲಿ
ಖಾಲಿ ಅನಿಸುತಿದೆ


About The Author

Leave a Reply

You cannot copy content of this page

Scroll to Top