ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲ
ಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ

ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲ
ಮನ ಮನ ಬೆಸೆಯುವ ಮಮತೆಯ ಮಹಾಲಯ

ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲ
ಭರವಸೆ ಮೂಡಿಸುವ ಮುಕ್ತ ದೇವಾಲಯ

ಮನೆಯೆಂದರೆ ಭವ್ಯ ಬಂಗಲೆಯಲ್ಲ
ನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ

ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲ
ತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ

ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲ
ಸಹೃದಯತೆ ಶಾಂತಿ ಸಮಾಧಾನದ ಸಾಗರ

ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲ
ದಯೆ ಕರುಣೆ ಮನುಜಮತದ ವಿಶ್ವವಿದ್ಯಾಲಯ



ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲ
ಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ

ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲ
ಮನ ಮನ ಬೆಸೆಯುವ ಮಮತೆಯ ಮಹಾಲಯ

ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲ
ಭರವಸೆ ಮೂಡಿಸುವ ಮುಕ್ತ ದೇವಾಲಯ

ಮನೆಯೆಂದರೆ ಭವ್ಯ ಬಂಗಲೆಯಲ್ಲ
ನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ

ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲ
ತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ

ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲ
ಸಹೃದಯತೆ ಶಾಂತಿ ಸಮಾಧಾನದ ಸಾಗರ

ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲ
ದಯೆ ಕರುಣೆ ಮನುಜಮತದ ವಿಶ್ವವಿದ್ಯಾಲಯ


About The Author

1 thought on “ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮನೆಯೆಂದರೆ””

Leave a Reply

You cannot copy content of this page

Scroll to Top