ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮತಿ ಭ್ರಾಂತಿಯ ಮುದ್ದಿನ ಸುದ್ದಿಯ ಮನೆಯಲ್ಲಿ
ಕದನ ಕೋಲಾಹಲಕ್ಕೆಲ್ಲಿದೆ ಕೊನೆ?

ಮತ ಭ್ರಾಂತಿಯ ಆಣೆಕಟ್ಟಿನ ಮೇಲೆ ಮಿಂಚುತ್ತಿದೆ
ಮಿಂಚುಳ್ಳಿಯ ಕುತೂಹಲದ ಮೊನೆ

ಗಂಭೀರ ಪ್ರಕೃತಿಯ ಗರ್ಭದೊಳಗೆ
ಘನತೆಯ ಒಡಲಿಗೆ ಅಗೌರವದ ಸಿಡಿಲು

ಜನಜಂಗುಳಿಯ ಮಾರುಕಟ್ಟೆಯಲ್ಲಿ
ನಿರುತ್ಸಾಹದ ಭೀಷಣ ಮೌನ…

ಕಲ್ಲಿನ ತಳದಲ್ಲಿ ಬೆಳೆಯುವ
ಹುಲ್ಲಿನ ಬೀಜದ ಎದೆಯೊಳಗೆ
ಉದ್ವೇಗಜನ್ಯ ಕೋಪ,ತಾಪ, ಸಂತಾಪ

ಪುಡಿಗಳ ತಾಳ್ಮೆಯ ಪೊಟ್ಟಣದಲ್ಲಿ
ಸದ್ದಿಲ್ಲದೇ ಸಿಡಿಯುತ್ತಿದೆ
ಸಿಡಿಮದ್ದಿನ ಜಿದ್ದು

ಅಂತರ, ಅಭ್ಯಂತರದ
ಬಿಸಿಲಿನ ಬಿರುಸು ನೆತ್ತಿಗೇರಿ
ಅಡಿಯಿಂದ ಮುಡಿಯ ನೆರಳು ಕುಬ್ಜ

ಮಾಲಿನ್ಯದಿ ಲೀನ
ನಡೆ-ನುಡಿಯ ಹಾಸಿಗೆ
ಎಗ್ಗಿಲ್ಲದೆ ಮಾರಾಟವಾಗುತ್ತಿದೆ
ನಮ್ಮತನ; ತಾಸಿಗೆ, ಕಾಸಿಗೆ

ತಲೆಯ ಹುತ್ತದೊಳಗಿನ ಸರ್ಪ
ಮೊದಲು ಬಾಲ ತೂರಿಸಿ ನಂತರ ಹೆಡೆ ಎತ್ತಿ ಬುಸುಗುಡುತ್ತಿದೆ

ಮತಿ ಭ್ರಾಂತಿಗೆ ಓಗೊಟ್ಟು
ಕತ್ತಲಾರಣ್ಯದ ಕಡುಗಪ್ಪಿಗೆ ದೃಷ್ಟಿ ಹಾಯಿಸೆ
ಶಬ್ದ ಶುದ್ಧತೆ ನಿಶ್ಯಬ್ದದಿ ನಿದ್ರಾಮುದ್ರಿತ.

———-

About The Author

Leave a Reply

You cannot copy content of this page

Scroll to Top