ಕಾವ್ಯ ಸಂಗಾತಿ
ಎ.ಹೇಮಗಂಗಾ ಅವರ
ಗಜಲ್


ಬೇಕೆನಿಸಿದ ಕ್ಷಣಗಳಲಿ ನೀ ತೊರೆದು ಹೋದೆ
ವಿರಹದ ಕಾವ್ಯಕೆ ಮುನ್ನುಡಿ ಬರೆದು ಹೋದೆ
ನಡೆವ ಹಾದಿಗೆ ಸುರಿದ ಪ್ರೀತಿ ಸುಮಗಳೆಷ್ಟೋ
ಕೊಂಚವೂ ದಯೆಯಿರದೇ ತುಳಿದು ಹೋದೆ
ನಿನ್ನ ಕೈಯಲಿ ಕೀಲುಗೊಂಬೆ ನಾನಾಗಿ ಕುಣಿದೆ
ಕಟು ಮಾತಿನ ಕೂರಂಬುಗಳಲಿ ಇರಿದು ಹೋದೆ
ನಂಬಿ ಬಂದ ಈ ಜೀವಕೆ ಅದೆಷ್ಟು ಆಘಾತಗಳು !
ತೋರಿದ ಅಸೀಮ ಒಲವನು ಜರೆದು ಹೋದೆ
ನನಸಾಗದ ಕನಸುಗಳ ನೀ ಕಾಣದಿರು *ಹೇಮ*
ನಿನಗಾಗಿ ಮಿಡಿದ ಹೃದಯವ ಮುರಿದು ಹೋದೆ
ಎ. ಹೇಮಗಂಗಾ




ಚಂದದ ಗಝಲ್