ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ತಾ ಪಾಲಿಸದೇ ಇತರರಿಗೆ ಉಪದೇಶ ನೀಡುವುದು ವ್ಯರ್ಥ
ಇತರರಿಗೆ ಹೋಲಿಸಿಕೊಂಡು ಬಾಳ್ವೆ ಮಾಡುವುದು ವ್ಯರ್ಥ

ಆಕಾಶದಲ್ಲಿ ಹಕ್ಕಿ ನೀರಲ್ಲಿ ಮೀನು ಬದಲಾಗಬಾರದು ಸ್ಥಾನ
ಅವರು ಇವರಂತೆ ನಾನಾಗುವೆನೆಂದು ಆಡುವುದು ವ್ಯರ್ಥ

ಯಾರ ಮೆಚ್ಚುಗೆಗೋ ಇಚ್ಛೆಗೋ ಬಲಿಯಾಗದಿರಲಿ ಬಾಳು
ಇಂದು ಗೈಯುವ ಕಾಯಕವ ನಾಳೆಗೆ ದೂಡುವುದು ವ್ಯರ್ಥ

ಕುಣಿಯೋವಾಗ ಜೊತೆಗಿದ್ದವರು ಕೊನೆತನಕ ಬರಲಾರರು
ಅವರಿವರನ್ನು ನಂಬಿಕೊಂಡು ಹೆಜ್ಜೆಯ ಇಡುವುದು ವ್ಯರ್ಥ

ಕುಂಬಾರ ಕಂಡಿದ್ದು ಸಾಸಿವೆ ಕಾಣಬೇಕಿರುವುದು ಸಾಗರವೇ
ಮರೀಚಿಕೆಯ ಬೆನ್ನತ್ತಿ ಸುಮ್ಮನೆ ಕಾಲ ದೂಡುವುದು ವ್ಯರ್ಥ


About The Author

Leave a Reply

You cannot copy content of this page

Scroll to Top