ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಬರಡು ಬಿರುಕು ನೆಲಕೆ   ,
ನೀ ತಂದೆ ಪ್ರೀತಿಯ
ಸ್ನೇಹ ಸಿಂಚನ.
ಕತ್ತಲೆಯ ಹಾದಿಯಲಿ
 ಕೈಹಿಡಿದು,
ಬೆಳಗಿಸಿದೆ ಒಲವಿನ
ಶುಭ್ರ ಹಗಲನು.

ಸೋತು ಕುಳಿತಾಗ ಸನಿಹ
 ಬಂದು,
ನೀನಾದೆ ಒಲವಿನಾಸರೆ.
ನಿನ್ನ ನಗುವಿನ ಮುಗ್ಧ
 ನೋಟಕೆ,
ಕರಗುವುದು ಮನದ  ಬೇಸರ.

ಮಾತುಗಳೇ ಇಲ್ಲದ
 ಮೌನದಲ್ಲೂ,
ಭಾವನೆಗಳ ಅರಿತ
 ಜೀವ ನೀನು.
ಕೋಟಿ ಜನ್ಮದ
ಪುಣ್ಯದಂತೆ ಸಿಕ್ಕ,
ನನ್ನ ಬಾಳಿನ ಬೆಳಕು ನೀನು.

 ಇದ್ದು ಬಿಡು   ಜೊತೆಯಾಗಿ,
ಕೊನೆಯವರೆಗೆ
ಇರಲಿ ಈ ಪ್ರೀತಿಯ  
ಭಾವ ಬಂಧನ.
ನಿನ್ನೊಲವಿನ ಆಸರೆಯ
 ನೆರಳಲ್ಲೇ,
ಸಾಗಲಿ ನನ್ನೀ ಜೀವನ.


About The Author

Leave a Reply

You cannot copy content of this page

Scroll to Top